ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, October 5, 2024

ಬ್ರಹ್ಮಚಾರಣಿ ದೇವಿ

ಬ್ರಹ್ಮ ಪುರಾಣ ವಿಷ್ಣುಪುರಾಣ ಶಿವಪುರಾಣ ಹೀಗೇ ಅನೇಕ ದೇವತೆಗಳ ಪುರಾಣಗಳಿವೆ ದೇವೀ ಪುರಾಣ ಮಾತ್ರ ನವರಾತ್ರಿ ಸಮಯದಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ.ಅಂದರೆ ದೇವಿ ಶಕ್ತಿಯಿಲ್ಲದೆ ಜೀವನವಿಲ್ಲ. ಹರಿಹರ ಬ್ರಹ್ಮಾದಿ ದೇವಾನುದೇವತೆಗಳೂ ದೇವಿಯ ಉಪಾಸಕರಾಗಿರುವುದನ್ನು ಪುರಾಣಗಳು ತಿಳಿಸಿವೆ.ಇಲ್ಲಿ  ಪರಮಾತ್ಮನೆಡೆಗೆ ಸಾಗಲು ಜ್ಞಾನಶಕ್ತಿ ಅಗತ್ಯವಿದೆ.ಜ್ಞಾನ ದೇವತೆಯ ಸಹಕಾರವಿಲ್ಲದೆ ಸೃಷ್ಟಿ ಯ ರಹಸ್ಯವರಿಯಲು ಅಸಾಧ್ಯ. ಇದನ್ನರಿಯದ ಹುಲುಮಾನವ ಸ್ತ್ರೀ ಶಕ್ತಿಯನ್ನು  ತಿರಸ್ಕರಿಸಿ ಅಥವಾ ದುರ್ಭಳಕೆ ಮಾಡಿಕೊಂಡು ಎಷ್ಟು ಹೊರಗೆ  ದೇವರಿಗೆ ಮಾಡಿದರೂ ಜ್ಞಾನ ಬರದು.

ನವಶಕ್ತಿಯರನ್ನು ಆರಾಧಿಸುವ‌ ನವರಾತ್ರಿಯ ವಿಶೇಷತೆಯನ್ನು  ಎಷ್ಟು ವರ್ಣಿಸಿದರೂ ಕಡಿಮೆಯೆ.ವರ್ಷ ವಿಡೀ ಕಾಯುವ ದೇವಿಗೆ ಎಷ್ಟು ಶಕ್ತಿಯಿರಬಹುದು? ಬಹಳ ಎತ್ತರಕ್ಕೆ ಹೋದವರ ವ್ಯವಹಾರದಲ್ಲಿ  ಲಕ್ಮಿ ಕೃಪೆ ಇರುತ್ತದೆ. ಅದರ ಮೂಲವೇ ಜ್ಞಾನ. ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು  ದಾನಧರ್ಮದೆಡೆಗೆ  ಮಾನವಹೋದರೆ ದಾನವಕುಲ ಹೆಚ್ಚುವುದಿಲ್ಲ.ಮಾನವನಿಗೆ  ಭೂಮಿಯಲ್ಲಿ ಎಲ್ಲಾ ಉಚಿತವೆ ಆದರೆ ವ್ಯವಹಾರಕ್ಕೆ ಇಳಿದಾಗ ಪಂಚಭೂತಗಳ ಬೆಲೆ ಅರ್ಥ ಆಗೋದಿಲ್ಲ. ಭೂಮಿ ಆಕಾಶ ,ವಾಯು,ಅಗ್ನಿ ನೀರು  ಸ್ವಚ್ಚಗೊಳಿಸುವುದಕ್ಕೆ  ಸಾಧ್ಯವೆ?
ಹೀಗಿರುವಾಗ  ಕಲ್ಮಶವಾಗಿಸುವ ಅಧಿಕಾರವೂ ಇರಲಿಲ್ಲ.
ಹಾಗೆ ತಾಯಿಯಿಲ್ಲದೆ ಜನ್ಮವಿಲ್ಲವಾದಾಗ ತಾಯಿಯನ್ನು ಹೇಗೆ ನೋಡಬೇಕೆಂಬ ಅರಿವೇ ಇಲ್ಲದಿದ್ದರೆ ಜೀವನವೇ ಅಲ್ಲ.

ಅಲ್ಲದರ ಹಿಂದೆ  ಹೋದವರಿಗೆ ಅಲ್ಲಾನೇ‌ ಕಾಣೋದು. ಅಂದರೆ ನಾನಲ್ಲ  ನೀನು ಎಂದ ಹಿಂದೂ ಧರ್ಮದ ಹಿಂದೆ ಶಕ್ತಿಯಿದೆ. ಅದನ್ನು ಹೊರಗೆ ಹುಡುಕಿದರೆ ಸಿಗದು.ಒಳಗೆ ಹುಡುಕಿಕೊಳ್ಳಲು ನಾನು ಹೋಗಬೇಕು. ಹೀಗಾಗಿ ಇನ್ನೂ ಹುಡುಕಾಟ ನಡೆದೇ ಇದೆ.
ಹುಡುಕಾಟವೇ ಜೀವನ. ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ  ಹೋರಾಟ ಹಾರಾಟ ಮಾರಾಟಕ್ಕೆ ಕೊನೆಯಿಲ್ಲ. 
ನವರಾತ್ರಿ ವಿಶೇಷ

2.. ದಿನದ ನವರಾತ್ರಿ ಆರಾಧನೆ  👏ಬ್ರಹ್ಮಚಾರಿಣೀ ದೇವಿ*👏

*ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ*
*ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ|*
*ನಮಸ್ತೇ ಜಗದ್ವಂದ್ಯ ಪಾದಾರವಿಂದೇ*
*ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ||*

ಹೇ ಶರಣಾಗತ ವತ್ಸಲೇ, ಕರುಣಾಮಯೀ, ಕಾರುಣ್ಯನಿಧಿ, ಈ ವಿಶ್ವದ ತುಂಬೆಲ್ಲಾ ವ್ಯಾಪಿಸಿರುವ ವಿಶ್ವರೂಪಿಣಿಯೇ, ನಿನಗೆ ನಮಸ್ಕರಿಸುತ್ತೇನೆ. ಜಗದ್ವಂದ್ಯಳಾದ ನೀನು ಶ್ರೇಷ್ಠಳಾಗಿರುವೆ. ಎಲ್ಲರಿಂದಲೂ ನಮಸ್ಕರಿಸಲ್ಪಡುವ ಪರಮಪವಿತ್ರವಾದ ಪಾದಕಮಲಗಳನ್ನು ಹೊಂದಿದವಳು. ಜಗತ್ತಿನ ರಕ್ಷಕಳು. ಬರುವ ಎಲ್ಲಾ ದುರಂತಗಳನ್ನು ದೂರಮಾಡಿ ರಕ್ಷಿಸು ಮಹಾತಾಯೇ.

ಸೃಷ್ಟಿ -ಸ್ಥಿತಿ -ಲಯಗಳನ್ನು ಮಾಡಬಲ್ಲ ಶಕ್ತಿ ಸ್ವರೂಪಳು, ಸನಾತಳು, ತ್ರಿಗುಣಗಳಿಗೆ ಆಶ್ರಯದಾತಳು, ತ್ರಿಗುಣಾಮಯಳು, ನಾರಾಯಿಣೀ ಮಾತೆಯೆ ನಿನಗೆ ನಮಸ್ಕರಿಸುವೆನು.

*ಸೃಷ್ಟಿ ಸ್ಥಿತಿ ವಿನಾಶಾನಾಂ ಶಕ್ತಿ ಭೂತೇ ಸನಾತಿನಿ|*
*ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಸ್ತುತೇ||*

ನವದುರ್ಗೆಯ *ಎರಡನೇ ದಿನದ ರೂಪವೇ ‘ಬ್ರಹ್ಮಚಾರಿಣೀ ದೇವಿ’.* ದೈವಿಕ ಅಂಶವನ್ನು ಮೈಗೂಡಿಸಿಕೊಂಡು, ಶಕ್ತಿ ಸ್ವರೂಪಿಣಿಯಾಗಿ, ಶುದ್ಧಳಾಗಿ, ಶ್ವೇತವಸ್ತ್ರಧಾರಿಣಿಯಾಗಿ, ಗುಲಾಬಿ ಹೂವು, ಜಪಮಾಲೆ ಮತ್ತು ನೀರಿನಿಂದ ತುಂಬಿದ ಕಮಂಡಲವನ್ನು ಕರಗಳಲ್ಲಿ ಹಿಡಿದು ಶೋಭಿಸುತ್ತಿರುವಳು. ಶಾಂತಿ, ಸಮೃದ್ಧಿಯ ಅಧಿದೇವತೆಯಾಗಿ ಭಕುತವೃಂದವ ಸಲಹುವ ಮಾತೆ. ತನ್ನನ್ನೇ ನಂಬಿ ಬಂದವರಿಗೆ ಅಭಯವನ್ನು ನೀಡಿ ಹರಸುವಳು. ನಮ್ಮಲ್ಲಿ ಜ್ಞಾನವನ್ನು, ಆತ್ಮವಿಶ್ವಾಸವನ್ನು ಮೂಡಿಸಿ, ಮನಸ್ಸಿನ ಪ್ರಶಾಂತತೆಗೆ ದಾರಿಯನ್ನು ತೋರಿಸುವಳು ಮಾತೆ.

ಹಿಮವಂತನ ಪುತ್ರಿ ಕಠಿಣ ತಪಸ್ಸನ್ನು ಮಾಡಿದ ಕಾರಣ ‘ತಪಶ್ಚಾರಿಣೀ’- ಅರ್ಥಾತ್ ‘ಬ್ರಹ್ಮಚಾರಿಣೀ’ ಎಂದು ಕರೆಯಲ್ಪಟ್ಟಳು. *ಕೇವಲ ಪರ್ಣ ಎಲೆಗಳನ್ನು ಆಹಾರವಾಗಿ ಸ್ವೀಕರಿಸಿ ‘ಅಪರ್ಣಾ’ ,ಅಪರ್ಣೆ ಎಂದೂ ನಾಮಾಂಕಿತಗೊಂಡಳಂತೆ.*

ಕಾಠಿಣ್ಯತೆಯಪ್ರತಿರೂಪ ಈಕೆ.ಯಾವುದೇ ಕ್ಲಿಷ್ಟ ಕರವಾದ ಸಮಸ್ಯೆಗಳಿಗೆ ಮೋಕ್ಷವನ್ನು ಕಾಣಿಸುವ ತಾಯಿ.ತನ್ನ ಭಕ್ತ ಸಂಕುಲಕ್ಕೆ ಸಂತಸವನ್ನು ನೀಡುವವಳು ಮಹಾಮಾತೆ. ನೆಮ್ಮದಿ, ಶಾಂತಿ, ಕರುಣಿಸುವ ತಾಯಿ. ಜ್ಯೋತಿರ್ಮಯವಾದ ಮತ್ತು ಭವ್ಯವಾದ ರೂಪಗುಣ ಸಂಪನ್ನಳೀಕೆ. ತಾಯಿಯ ಕಠಿಣ, ಏಕಾಗ್ರತೆ, ವೈರಾಗ್ಯ, ಪಡೆದೇ ತೀರಬೇಕೆಂಬ ಹಠ, ಹಂಬಲ ಎಲ್ದಕ್ಕೂ ಒಲಿದವ ಆ ಪರಮೇಶ್ವರನಂತೆ. ಬ್ರಹ್ಮ ಜ್ಞಾನ ಸಿದ್ಧಿಸಲು ಕಾಠಿಣ್ಯತೆ ಬೇಕು. ಯೋಗಿಗಳು, ಋಷಿಮುನಿಗಳು ಬ್ರಹ್ಮಚಾರಿಣೀ ದೇವಿಯನ್ನು ಪೂಜಿಸುವಾಗ *ಸ್ವಾಧಿಷ್ಠಾನ ಚಕ್ರದಲ್ಲಿ ಮನಸ್ಸನ್ನು ಕೇಂದ್ರೀಕರಿಸುತ್ತಾರಂತೆ.*

ಈ ದಿನದ ಪೂಜೆ, ನಿಷ್ಠೆಗಳು ತಪಸ್ಸಿಗೆ ಸಮ. ಮಾಂಗಲ್ಯ ಭಾಗ್ಯವನ್ನು ಕರುಣಿಸುವ ಮಾತೆ. ನಮಗಿರುವ ಎಲ್ಲಾ ಎಡರುತೊಡರುಗಳನ್ನು ದೂರೀಕರಿಸಿ ನೆಮ್ಮದಿ ನೀಡಲೆಂದು ಪ್ರಾರ್ಥಿಸೋಣ. ಲೋಕಕ್ಕೆ ಆವರಿಸಿದ ಎಲ್ಲಾ ಕಷ್ಟಗಳು ತೊಲಗಿ ಕ್ಷೇಮವುಂಟಾಗಲಿ.👏

*(ಆಕರಗ್ರಂಥ:ಪುರಾಣ ಮಾಲಾ ಗ್ರಂಥ))

      
*ಶಕ್ತಿ ದೇವತೆ ದುರ್ಗಾ ಮಾತೆಯ ೨ ನೇ ಅವತಾರ ಬ್ರಹ್ಮಚಾರಿಣೀ, ತಪಶ್ಚಾರಿಣೀ ದೇವಿ. ಕಠಿಣತೆ ಹಾಗೂ ಸೌಮ್ಯತೆ ಎರಡನ್ನೂ ಸಹಿಸುವ ಶಕ್ತಿ ದಯಪಾಲಿಸುವ ಮಾತೆ. ಬ್ರಹ್ಮಚಾರಿಣಿ ಎಂದರೆ ಸುಲಭದ ಮಾತಲ್ಲ, ಕಠಿಣ ತಪಸ್ಸಿನಂತೆ ಅದು. ತಪಸ್ಸಿನ ಹಿಂದೆ ಒಂದು ಯೋಚನೆಯಿರುತ್ತದೆ. ಯಾವುದನ್ನೋ ಸಾಧಿಸಲು ತಪಸ್ಸು ಮಾಡುವುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಹಾಗೆಯೇ ಶಕ್ತಿಸ್ವರೂಪಿಣಿ ತಾಯಿ ಇಲ್ಲಿ ಶಿವನನ್ನು ಒಲಿಸಿಕೊಳ್ಳಲು, ಲೋಕಕ್ಷೇಮಕ್ಕಾಗಿ ಮಹಾತಪಸ್ಸನ್ನು ಕೈಗೊಂಡಳಂತೆ. ಎದುರಾದ ಎಲ್ಲಾ ಅಡೆತಡೆಗಳನ್ನು ದಾಟಿ ಜಯ ಸಾಧಿಸಿದಳೆಂದು ಉಲ್ಲೇಖವಿದೆ. ಆಕೆ ಯುವತಿಯಾಗಿ, ಶ್ವೇತವಸ್ತ್ರಧಾರಿಣಿಯಾಗಿ ನಾರದರ ಉಪದೇಶದಂತೆ ತಪಸ್ಸು ಮಾಡಿದ ಕಾರಣ ತಪಶ್ಚಾರಿಣೀ ದೇವಿಯಾಗಿ, ಹೂವು ಎಲೆ ಮಾತ್ರ ಸೇವಿಸಿದ ಕಾರಣ ಅಪರ್ಣಾ ಎಂದೂ ಕರೆಯಲ್ಪಟ್ಟಳು. ದೇವಿಯ ಶಾಂತತೆ, ಅಪಾರ ಜ್ಞಾನ, ಅಖಂಡತೆ ಶಿವನನ್ನು ಒಲಿಯುವಂತೆ ಮಾಡಿತು. ನಮಗೂ ಸಹ ಬದುಕಿನ ಹಾದಿಯಲ್ಲಿ ಎದುರಾಗುವ ಕಾಠಿಣ್ಯವನ್ನು ಎದುರಿಸುವ ಶಕ್ತಿ ಮತ್ತು ಯುಕ್ತಿಯನ್ನು, ತಾಳ್ಮೆ, ಸಂಯಮವನ್ನು ಆ ಮಹಾಮಾತೆ ನೀಡಿ ಅನುಗ್ರಹಿಸಲಿ*.🤝🙏

No comments:

Post a Comment