ದೇಶದ ತುಂಬಾ ಜನಸಂಖ್ಯೆ ಇದ್ದರೂ ಜನರಲ್ಲಿ ದೇಶಭಕ್ತಿಯೇ ಇಲ್ಲವಾದರೆ ವ್ಯರ್ಥ. ಹಾಗೆ ಮನೆತುಂಬ ಜನರಿದ್ದರೂ ಜನರೊಳಗೆ ಸತ್ಯಜ್ಞಾನವೇ ಇಲ್ಲವಾದರೆ ವ್ಯರ್ಥ. ಇದು ದೇವಸ್ಥಾನ ಮಠ ಮಂದಿರ ಚರ್ಚ್ ಮಸೀದಿಯವರೆಗೂ ಜನಸಂಖ್ಯೆ ಬೆಳೆಸುವತ್ತ ನಡೆದು ಒಳಗೇ ಇದ್ದ ದೈವತ್ವಕ್ಕೆ ಕೊರತೆಯಾದಾಗಲೇ ಅಸುರಿ ಶಕ್ತಿಜಾಗೃತವಾಗಿ ಆಳೋದು. ಇದನ್ನು ಪುರಾಣಗಳೇ ತಿಳಿಸಿವೆ.
ದೇವತೆಗಳು ಸ್ವರ್ಗದಲ್ಲಿ ಮೈಮರೆತಾಗ ಅಸುರರು ಆಕ್ರಮಣ ಮಾಡಿ ಸ್ವರ್ಗದಿಂದ ಓಡಿಸಿದರಂತೆ ಸುರರು ಬ್ರಹ್ಮಾದಿ ದೇವರುಗಳ ಮೊರೆ ಹೋಗಿ ಯುದ್ದ ಮಾಡಿ ಅಸುರರ ಸಂಹಾರವಾಯಿತಂತೆ, ಧರ್ಮ ಕ್ಕೆ ಜಯದೊರೆಯಿತಂತೆ... ಹೀಗೇ ಎಷ್ಟೋ ಪುರಾಣ ಕಥೆಗಳ ಹಿಂದೆ ಇರುವ ಸತ್ಯವನ್ನು ವಾಸ್ತವದಲ್ಲಿ ಅರ್ಥ ಮಾಡಿಕೊಳ್ಳಲು ಒಳಗಿರುವ ಆತ್ಮಸಾಕ್ಷಿ ಅಗತ್ಯವಿದೆ.
ನಾನೇ ಎಲ್ಲಾ ನನ್ನಿಂದಲೇಎಲ್ಲಾ ನನಗಾಗಿಯೇ ಎಲ್ಲಾ ಎನ್ನುವಾಗಲೇ ಅಲ್ಲ ಅಲ್ಲ ಎನ್ನುವವರು ಬೆಳೆಯೋದು. ಹಾಗಾದರೆ ನಾನಲ್ಲ ಎಂದರೆ ಸರಿಯೆ? ಪ್ರಶ್ನೆಗೆ ಉತ್ತರ ಒಂದೇ ನಾನೆಂಬುದಿಲ್ಲ. ನಾನೆಂಬ ಅಹಂಕಾರ ಹೋಗಿ ಆತ್ಮವಿಶ್ವಾಸ ದೆಡೆಗೆ ನಡೆದವರನ್ನು ಮಹಾತ್ಮರೆಂದರು.
ಮಹಾತ್ಮರ ಸಂಖ್ಯೆ ಬೆಳೆಯಲು ಅಂತಹ ಜ್ಞಾನದ ಶಿಕ್ಷಣ ಕೊಡಬೇಕು. ಮಕ್ಕಳೇ ಬೇಡ ಎನ್ನುವ ಸ್ಥಿತಿಗೆ ತಲುಪಿರುವಾಗ ,ಸಂಸಾರವನ್ನು ಬಿಟ್ಟು ಹೊರಬಂದವರು ಬೆಳೆದಿರುವಾಗ ಸತ್ಯ ಸತ್ವ ತತ್ವದ ಬಗ್ಗೆ ಸ್ತ್ರೀ ತಿಳಿಸಬಹುದೆ?
ತಿಳಿಸಿದರೂ ಸಮಾಜ ಒಪ್ಪುವುದೆ? ಹಿಂದಿನಿಂದಲೂ ಸ್ತ್ರೀ ಜ್ಞಾನ ದೇವತೆ ಎಂದವರೆ ಜ್ಞಾನದಿಂದ ದೂರವಿಟ್ಟವರು ಹೊರಗೆ ರಾಜಕೀಯದಲ್ಲಿ ಬೆಳೆದರು. ಆದರೆ ರಾಜಕೀಯದಲ್ಲಿ ಸತ್ಯವಿರದು. ಹೀಗಾಗಿ ಅಸತ್ಯ ಅನ್ಯಾಯ ಅಧರ್ಮ ವೂ ಜೊತೆಯಾಗಿ ಬೆಳೆಯಿತು. ಬೆಳೆದು ನಿಂತ ಮೇಲೆ ಸರಿಪಡಿಸಲಾಗದು. ಹಾಗಾಗಿ ಗಿಡವಾಗಿರುವಾಗಲೇ ಸತ್ವಯುತ ಆಹಾರ ಫೋಷಣೆ ಮಾಡಿದರೆ ಉತ್ತಮ ಫಲ ಕೊಡುತ್ತದೆ. ಈಗಲೂ ಮಕ್ಕಳಿಗೆ ಕೊಡಲೇಬೇಕಾದ ಸಂಸ್ಕಾರದ ಶಿಕ್ಷಣ ಮನೆಯೊಳಗೆ ಹೊರಗೆ ಕೊಟ್ಟರೆ ಮಕ್ಕಳು ಮಹಾತ್ಮರಾಗಬಹುದು. ಅತಿಯಾದ ಜ್ಞಾನವೂ ಅಹಂಕಾರ ಆಗಬಹುದು.ಅಜ್ಞಾನದಿಂದ ಜನ್ಮ ಪಡೆದ ಅಹಂಕಾರ ವನ್ನು ಸರಿಪಡಿಸಬಹುದು.ಆದರೆ ಅರ್ಧ ಸತ್ಯ ತಿಳಿದು ನಡೆದವರ ಅಹಂಕಾರ ವಿನಾಶಕ್ಕೆ ಕಾರಣವಾಗಬಹುದು.
ಎಲ್ಲಿಯವರೆಗೆ ಜ್ಞಾನಿಗಳ ಸಂಖ್ಯೆ ಬೆಳೆಯದೋ ಅಲ್ಲಿಯವರೆಗೆ ಅಜ್ಞಾನಿಗಳೇ ಭೂಮಿ ಆಳೋದು. ಭೂ ಭಾರ ಹೆಚ್ಚಾದಾಗ ಭೂಕಂಪ ಪ್ರಳಯ . ಯುದ್ದ ರೋಗ.ದಂತಹ ಪ್ರಕೃತಿ ವಿಕೋಪದಲ್ಲಿ ಜೀವಹೋಗೋದು.
ನಿರಂತರವಾಗಿ ನಡೆದು ಬಂದಿರುವ ಈ ಮನುಕುಲವನ್ನು ನಡೆಸಿರೋದೆ ಮಾನವನ ಧರ್ಮ ಕರ್ಮ ಫಲವಾಗಿದೆ.
No comments:
Post a Comment