ಯಾವಾಗ ನನ್ನೊಳಗೇ ಅಧ್ಯಾತ್ಮಿಕ ವಿಚಾರಗಳು ಬರತೊಡಗಿತೋ ಆಗಲೇ ಗೊತ್ತಾಗಿದ್ದು ಸತ್ಯ ಬನ ಒಳಗೇ ಇದೆ ಹೊರಗಿಲ್ಲವೆಂದು. ಇದನ್ನು ಹೊರಹಾಕಲು ಪ್ರಾರಂಭಿಸಿ್ ಮೇಲೇ ತಿಳಿದದ್ದು ಶತ್ರು ಒಳಗಿಲ್ಲ ಹೊರಗೇ ಇರೋದೆಂದು. ಹಾಗಂತ ನಮ್ಮ ಶತ್ರುವಾಗಿರುವ ಅಹಂಕಾರ ಸ್ವಾರ್ಥ ಬೆಳೆಸಿಕೊಂಡರೆ ಹೊರಗೆ ಗೆಲ್ಲಬಹುದು ಒಳಗೆ ಸೋಲುವುದು ಖಚಿತವಾದ್ದರಿಂದ ಒಳಗಿದ್ದೇ ಹೊರಗಿನ ಸತ್ಯಾಸತ್ಯತೆಯನ್ನು ತಿಳಿದು ನಡೆಯುವುದೇ ಉತ್ತಮ ಎನ್ನುವ ಹಂತಕ್ಕೆ ಬಂದಾಗ ಯಾವುದೇ ಸಹಕಾರ ಸಹಾಯ ಆಶೀರ್ವಾದ ಇಲ್ಲದೆ ಒಬ್ಬಂಟಿ ಆದರೂ ಪರಮಶಕ್ತಿಯ ಪ್ರೇರಣೆಯಿಂದ ದೂರವಿರುವುದಿಲ್ಲ. ಇದನ್ನು ಅದ್ವೈತ ಎನ್ನಬೇಕೋ ದ್ವೈತ ವೋ ವಿಶಿಷ್ಟಾದ್ವೈತ ವೋ ಒಟ್ಟಿನಲ್ಲಿ ನಮ್ಮಿಂದ ಆಗಬೇಕಾದ ಕೆಲಸ ಕಾರ್ಯ ನಡೆಯುತ್ತಲೇ ಇರುತ್ತದೆ.ಅದರಲ್ಲಿ ನಾನು ಬೆಳೆದರೆ ಜನಬಲ ಹಣಬಲ ಅಧಿಕಾರಬಲವೂ ಸೇರಿ ಆತ್ಮನಿರ್ಭರ ಭಾರತವಾಗಲೂಬಹುದು. ದುರ್ಭಲವೂ ಆಗಬಹುದು.
ಎಷ್ಟೇ ಸತ್ಯ ತಡೆದರೂ ಒಂದಲ್ಲ ಒಂದು ರೀತಿಯಲ್ಲಿ ಹೊರಬರೋದು ಸತ್ಯ ವೇ ಎನ್ನುವಂತೆ ಕಣ್ಣಿಗೆ ಕಾಣುತ್ತಿರುವ ಶಿಕ್ಷಣದ ಭ್ರಷ್ಟಾಚಾರ ಮಾತ್ರ ಜನಸಾಮಾನ್ಯರ ಅರಿವಿಗೆ ಬರದಂತೆ ತಡೆಯುತ್ತಿರುವ ತಂತ್ರಜ್ಞಾನದಿಂದ ಮಕ್ಕಳ ಭವಿಷ್ಯವನ್ನು ತಡೆಯಲಾಗದು. ಅತಿಯಾದರೆ ಗತಿಗೇಡು.
ತತ್ವ ಬಿಟ್ಟು ತಂತ್ರದ ದುರ್ಭಳಕೆ ಆದಷ್ಟೂ ಅತಂತ್ರ ಜೀವನ.
ಹಿಂದೆ ಯಾವುದೇ ತಂತ್ರಜ್ಞಾನವಿಲ್ಲದೆ ಸ್ವತಂತ್ರ ಜ್ಞಾನದಿಂದ ಜೀವನನಡೆಸಿದ್ದರು. ಈಗ ಮೊದಲೇ ತಂತ್ರಕ್ಕೆ ಸಿಲುಕಿ ಅತಂತ್ರಸ್ಥಿತಿಗೆ ಜೀವನ ತಲುಪಿದರೆ ಇದಕ್ಕೆ ಕಾರಣ ಶಿಕ್ಷಣವೆ ಆಗಿರುತ್ತದೆ.
ಶಿಕ್ಷಣದ ವಿಷಯಕ್ಕೆ ಬಂದಾಗ ಸಾಕಷ್ಟು ಬದಲಾವಣೆ ಆಗಬೇಕಿದೆ. ಆದರೂ ಬದಲಾವಣೆಗೆ ಪೋಷಕರ ಸಹಕಾರ ಗುರುಹಿರಿಯರ ಸಹಕಾರ ವಿಲ್ಲವಾದರೆ ಏನೂ ಮಾಡಲು ಕಷ್ಟ. ಪತ್ರಿಕೆ ನಡೆಸುವಾಗ ತಡೆಯಲು ಅಸಹಕಾರ ತೋರಿಸಿದವರು ಈಗ ಅದೇ ವಿಚಾರದಲ್ಲಿ ಚರ್ಚೆ ನಡೆಸುವರು.ಅಂದರೆ ಪೋಷಕರ ಸಮಸ್ಯೆ ಪೋಷಕರಾಗಿಯೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಮೇಲಾಧಿಕಾರಿಗಳಾಗಿ ನಿಂತು ಮಕ್ಕಳು ಪೋಷಕರು ಸರಿಯಿಲ್ಲವೆನ್ನುವ ಬದಲು ಕೆಳಗಿಳಿದು ವಾಸ್ತವತೆಯನ್ನು ಅರ್ಥ ಮಾಡಿಕೊಂಡರೆ ಭೂಮಿಯಲ್ಲಿ ಹೇಗೆ ಬದುಕಬಹುದೆನ್ನುವುದರ ಅರಿವಿರುತ್ತದೆ. ಒಟ್ಟಿನಲ್ಲಿ ಮೇಲೇರಿದವರಿಗೆ ಕೆಳಗಿನವರ ಸಹಕಾರ ಸಹಾಯ ಹೆಚ್ಚು.ಅದೇ ಕೆಳಗಿದ್ದವರಿಗೆ ಮೇಲಿನವರ ಸಹಾಯವಿದ್ದರೆ ಎರಡೂ ಕಡೆ ಸಮಾನತೆಯ ಶಾಂತಿ.ಶಾಂತಿ ಒಳಗಿದ್ದೇ ಪಡೆಯಲು ಹೊರಗಿನವರ ಸಹಕಾರದ ಅಗತ್ಯವಿಲ್ಲ. ಆದರೆ ಭೌತಿಕದಲ್ಲಿರುವಾಗ ಬದಲಾವಣೆಗೆ ಅಗತ್ಯವಿದೆ. ತಿಳಿದವರಿಗೆ ಹೇಳೋ ಅಧಿಕಾರವಿಲ್ಲ.ಹೇಳೋರಿಗೆ ಸತ್ಯದ ಅರಿವಿಲ್ಲವಾದರೆಮಧ್ಯದಲ್ಲಿರುವ ಮಕ್ಕಳ ಭವಿಷ್ಯ ಅತಂತ್ರ.
No comments:
Post a Comment