ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, September 22, 2024

ಸಂಸ್ಕಾರದ ಶಿಕ್ಷಣದಿಂದ ಮಹಾತ್ಮರಾಗಬಹುದು

ಸಾಮಾನ್ಯವಾಗಿ ನಾವು ಕಾಣುವ ಸತ್ಯದಲ್ಲಿ ಯಾರ ಮಕ್ಕಳು ಸಣ್ಣವರಿರುವಾಗಲೇ ಸಂಸ್ಕಾರಯುತ ಶಾಸ್ತ್ರೀಯ ವಿದ್ಯೆ ಕಲಿತಿರುವರೋ ಅವರು ನಿರಹಂಕಾರದಿಂದ  ವಿದ್ಯಾ ದಾನದ ಮಹತ್ವವರಿತು ಸಜ್ಜನರಾಗಿರುವರು. ಆದರೆ ಯಾವ ಮಕ್ಕಳು ಪೋಷಕರ ಹೆಸರು ಹಣ ಅಧಿಕಾರ ಸ್ಥಾನಮಾನದಿಂದ ಒಮ್ಮೆಲೆ ‌ಮೇಲೇರಿರುವರೋ ಅವರಿಗೆ ಅಹಂಕಾರ ಸ್ವಾರ್ಥ ಹೆಚ್ಚಾಗಿ ಜನರನ್ನು ತನ್ನ ವಶದಲ್ಲಿಟ್ಟುಕೊಳ್ಳುವ ಕೊಳ್ಳುಬಾಕ ಸಂಸ್ಕೃತಿಗೇ ಹೆಚ್ಚಿನ ಮಹತ್ವ ಕೊಟ್ಟಿರುವರು.
ಅದಕ್ಕೆ ಮಕ್ಕಳಿಗೆ ಸಂಸ್ಕಾರಯುತ ವಿದ್ಯೆ‌ನಿಧಾನವಾದರೂ ಸರಿ ಮನೆಯೊಳಗಿನಿಂದ ಯಾವುದೇ ಒತ್ತಡವಿಲ್ಲದೆ ಕಲಿಸಿದರೆ ಉತ್ತಮ ಭವಿಷ್ಯವಿದೆ.
ಆದರಿದು‌ಎಲ್ಲರಿಗೂ ಕಷ್ಟ.ವ್ಯವಹಾರದ ಜಗತ್ತಿನಲ್ಲಿ  ಹೆಚ್ಚು ಹೆಸರು ಮಾಡಿದವರಿಗೆ ಸಮಯವಿರದು. ಹೆಚ್ಚು ಸಮಯವಿದ್ದವರ ವಿದ್ಯೆಗೆ ಬೆಲೆಕೊಡೋರು ವಿರಳ.
ಕೆಲವು ಪೋಷಕರು  ವಿದ್ಯೆ ಕಲಿಸೋ‌ ಮೊದಲೇ ಕೇಳುವರು ನಮ್ಮ ಮಗುವಿಗೆ ಯಾವಾಗ  ಸ್ಟೇಜ್ ಕಾರ್ಯಕ್ರಮ ಕೊಡಿಸುವಿರಿ?.  ಕೆಲವರು  ಹಾಗಿಲ್ಲ.ಅಂದರೆ ವಿದ್ಯೆ ತೋರುಗಾಣಿಕೆಯಾದಷ್ಟೂ  ಜ್ಞಾನ ಕುಸಿಯುತ್ತದೆ ಜೊತೆಗೆ  ಅಹಂಕಾರ ಸ್ವಾರ್ಥ ‌ಬೆಳೆಯುತ್ತದೆ.
ಹಿಂದೆ ಎಷ್ಟೋ ಮಹಾರಾಜರುಗಳು  ಅತ್ಯುತ್ತಮ ಕಲಾವಿದರನ್ನು ಗೌರವಿಸಲು ಇದ್ದಲ್ಲಿಯೇ ಹೋಗಿ ಕಲೋಪಾಸಕರಾಗಿದ್ದರು.ಕಾರಣ ಕಲಾಸೇವೆ ಪರಮಾತ್ಮನಿಗೆ ಮೀಸಲಿಟ್ಟ ಮಹಾತ್ಮರುಗಳಿಗೆ ಹೆಸರು ಹಣ ಪ್ರತಿಷ್ಟೆ ಪದಕ ಸನ್ಮಾನದ ಹಂಗಿರಲಿಲ್ಲ. 
 ಈಗ ಕಾಲಬದಲಾಗಿದೆ. ಮಕ್ಕಳಿಗೆ ಆತ್ಮವಿಶ್ವಾಸ  ಹೆಚ್ಚಿಸುವ ಶಿಕ್ಷಣವಿರಲಿ ಅಹಂಕಾರ ದ ಶಿಕ್ಷಣದ ಅಗತ್ಯವಿಲ್ಲ..
ಸ್ಪರ್ಧೆ ನಡೆಸೋದಾದರೆ  ಅಧ್ಯಾತ್ಮ ದಲ್ಲಿ ರಲಿ. ನಾನು ಸತ್ಯ ಬಿಡೋದಿಲ್ಲ ಧರ್ಮ ಬಿಡೋದಿಲ್ಲ  ನ್ಯಾಯದಲ್ಲಿರುವೆ ಭ್ರಷ್ಟರಿಂದ ದೂರವಿರುವೆ, ರಾಜಕೀಯದಿಂದ ದೂರವಿರುವೆ..ಕಲಬೇಡ ಕೊಲಬೇಡ.......ಅಂತರಂಗ ಶುದ್ದಿಯ ನಂತರವೇ ಆತ್ಮಜ್ಞಾನದ ಆತ್ಮವಿಶ್ವಾಸ,.. ಅಲ್ಲಿಯವರೆಗೂ ಕೇವಲ ಶ್ವಾಸವಿರುತ್ತದೆನ್ನುವರು. ಶ್ವಾಸವನ್ನು ವಿಶೇಷವಾಗಿ ಹಿಡಿದುಕೊಂಡು  ನಡೆಯೋ ಮಾರ್ಗ ವೇ ಯೋಗ ಮಾರ್ಗ ವಾಗಿತ್ತು.ಈಗಂತೂ ಮಕ್ಕಳಿಗೆ ಉಸಿರಾಡೋದಕ್ಕೆ ಸಮಯವಿಲ್ಲ.ಅಷ್ಟು ಕಲಿಕೆ.ಆದರೆ ಕಲಿತಿರುವ ವಿಷಯದಲ್ಲಿ ಸಂಸ್ಕಾರವಿದೆಯೆ ಸಂಸ್ಕೃತಿಯಿದೆಯೆ ಗುರುತಿಸುವುದು ಗುರುಗಳ ಧರ್ಮವಾಗಿದೆ. ಮೊದಲ ಗುರು ತಾಯಿಂದ ಹಿಡಿದು ಹೊರಗಿರುವ ಎಲ್ಲರಿಗೂ ಒಂದೇ  ಜ್ಞಾನವಿರೋದಿಲ್ಲವಲ್ಲ.ಅದಕ್ಕೆ ಹೊರಗಿನ ವಿದ್ಯೆಗೂ ಒಳಗಿನ ಜ್ಞಾನಕ್ಕೂ  ಅಂತರ ಬೆಳೆದು ಅವಿದ್ಯೆ ಹೆಚ್ಚಾಗಿ ಅಹಂಕಾರ ಬೆಳೆದಿದೆ.

No comments:

Post a Comment