ಒಂದು ಕಡೆ ಗೋ ಹತ್ಯೆನಿಷೇಧ ಕಾಯಿದೆ ಇನ್ನೊಂದು ಕಡೆ ಅದರ ವಿರುದ್ದವಿರುವವರಿಗೆ ಸಹಕಾರ ಕೊಡುವ ರಾಜಕೀಯ. ಇದರ ಜೊತೆಗೆ ಹಾಲಿನ ಬೆಲೆ ಏರಿಕೆ ಇದಕ್ಕೆ ಕಾರಣ ಬಡವರು ದೀನರು ರೈತರ ಉದ್ದಾರವಂತೆ ಹಾಗಾದರೆ ಮೂಲ ಗೋವಿನ ಕಥೆ ಕೇಳೋರಿಲ್ಲ.ಎಲ್ಲಾ ಕ್ಷೀರಭಾಗ್ಯ ಪಡೆದು ಗೋ ಪೂಜೆ ಮಾಡದೆಯೇ ಗೋವಿನ ಹೆಸರಿನಲ್ಲಿ ರಾಜಕೀಯ ನಡೆಸಿದರೆ ಹಾಲು ಹಾಲಾಹಲವೆ. ಸಾಲಮಾಡಿಯಾದರೂ ತುಪ್ಪ ತಿನ್ನು ಎನ್ನುವುದೇಅಜ್ಞಾನ ಹಾಗೆ ಕ್ಷೀರಭಾಗ್ಯವೂ ಗೋವಿನ ಮೇಲಿರುವ ಮಾನವನ ಸಾಲವೇ.ಇದಕ್ಕೆ ಪರಿಹಾರ ಒಂದೇ ಗೋ ಸೇವೆ.
ಹಣವಿದ್ದರೆ ಏನೂ ಮಾಡಬಹುದೆನ್ನುವುದರಲ್ಲಿ ಅರ್ಥ ವಿಲ್ಲ.
ರಾಜಕೀಯದ ಹಿಂದೆ ನಡೆದವರಿಗೆ ಸಾಲವೇ ಗತಿ.ಎಷ್ಟು ಕೊಟ್ಟರೂ ಸಾಲದು.ಸಾಲವೇ ಅದು. ಅಂದರೆ ಋಣಮುಕ್ತರಾಗೋದಕ್ಕೆ ಬಂದಿರುವ ಮಾನವನ ತಲೆಯ ತುಂಬಾ ಸಾಲ ಏರಿಸಿದರೆ ಆತ್ಮತೃಪ್ತಿ ಆತ್ಮವಿಶ್ವಾಸ ಅಧ್ಯಾತ್ಮ ಆತ್ಮನಿರ್ಭರ ಪದಕ್ಕೆ ಅರ್ಥ ವೇ ತಿಳಿಯದು ಇದನ್ನು ಅಜ್ಞಾನ ಎಂದರು.ಜ್ಞಾನವಿಲ್ಲವೆಂದರ್ಥ ವಲ್ಲ ಜ್ಞಾನದಲ್ಲಿ ಸತ್ಯ ಧರ್ಮ ವಿಲ್ಲ ಎಂದರ್ಥ. ಒಳಗೇ ಅಡಗಿರುವ ಜ್ಞಾನ ಬಿಟ್ಟು ಹೊರಗೆ ನಡೆದಷ್ಟೂ ಅಜ್ಞಾನವೇ ಬೆಳೆಯೋದು. ಇದಕ್ಕೆ ಸಹಕಾರ. ಕೊಡೋರೂ ಅಜ್ಞಾನಿಗಳೆ ಆಗೋದು.
ತಾಯಿಯ ಋಣ. ತಾಯಿಸೇವೆ ಮಾಡಿಯೇ ತೀರಿಸಬೇಕು.ಹಾಗೆ ಭೂಮಿ ಪ್ರಕೃತಿ, ದೇಶ ಸೇವೆ ನಿಸ್ವಾರ್ಥ ನಿರಹಂಕಾರ, ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದವರಿಗಷ್ಟೆ ಪರಮಾತ್ಮನ ದರ್ಶನ ವಾಗಿರೋದು. ಒಟ್ಟಿನಲ್ಲಿ ಕಲಿಗಾಲದ ಕಲಿಕೆಯ ಪ್ರಭಾವದಿಂದಾಗಿ ಅಜ್ಞಾನ ಮಿತಿಮೀರಿದೆ. ಇದನ್ನು ಸರಿಪಡಿಸಲು ಹೊರಗಿನ ಸಹಕಾರ ಕ್ಕಿಂತ ಒಳಗಿನ ಸಹಕಾರ ಅಗತ್ಯವಾಗಿತ್ತು. ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ.. ಎಲ್ಲಾ ಸಾಲಗಾರರೆ ಹೆಚ್ಚು ಕಡಿಮೆಯಷ್ಟೆ.
ಹೆಚ್ಚು ಶ್ರೀಮಂತರ ಸಾಲ ಹೆಚ್ಚು ಅದಕ್ಕೆ ಹೆಚ್ಚು ದಾನ ಧರ್ಮ ಮಾಡಬೇಕು.
No comments:
Post a Comment