ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, September 22, 2024

ಹಿಂದೂ ಹಾಳಾಗಿರೋದೆ ಹಿಂದೂ ಧರ್ಮ ವೆ?

ಹಿಂದೂ ಧರ್ಮ ಹಾಳಾಗುತ್ತಿದೆ ಹಿಂದುಳಿಯುತ್ತಿದೆ ಇದಕ್ಕೆ ಕಾರಣ ಅನ್ಯಧರ್ಮದವರು ಎನ್ನುವವರೊಮ್ಮೆ‌ ಚಿಂತನೆ ನಡೆಸಿದರೆ  ಅನ್ಯರ ಮಾತಿಗೆ ಬೆಲೆಕೊಟ್ಟು ಅವರ ಶಿಕ್ಷಣ,ಧರ್ಮ ಕ್ಕೆ ಸಹಕರಿಸಿ ವಿದೇಶದವರೆಗೂ ನಡೆದವರು ಯಾರು? ವಿದೇಶಕ್ಕೆ ಹೋದವರನ್ನು ಎತ್ತಿ ಏಣಿಗೇರಿಸಿದ ಪೋಷಕರು ಯಾರು? ದೇಶದೊಳಗೇ ಇದ್ದು ದೇಶಕ್ಕೂ‌ನನಗೂ ಸಂಬಂಧ ವಿಲ್ಲವೆಂದಂತೆ  ಜೀವನ ನಡೆಸಿದವರು ಯಾರು? ನಮ್ಮನ್ನು ಆಳಿದವರ  ವ್ಯವಹಾರಿಕ ಶಿಕ್ಷಣವನ್ನು ಪಡೆದವರು ಯಾರು? ನಮ್ಮೊಳಗೇ ಅಡಗಿದ್ದ ಸತ್ಯ ಧರ್ಮ ಕ್ಕೆ ವಿರುದ್ದ‌ನಡೆದವರು ಯಾರು? ಸರ್ಕಾರದ ದಾರಿ ತಪ್ಪಿಸಿ  ಜನರಲ್ಲಿ ಭಯ ಹುಟ್ಟಿಸಿ ಇಲ್ಲಸಲ್ಲದ ವಿಚಾರಗಳನ್ನು ಚರ್ಚಿಸುತ್ತಾ ಮನರಂಜನೆಯಲ್ಲಿ ಮೈಮರೆತವರು ಯಾರು? ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರದಲ್ಲಿ  ತಮ್ಮವರೊಂದಿಗೆ  ಬೆರೆಯಲಾಗದೆ ದ್ವೇಷ ಬೆಳೆಸಿಕೊಂಡವರು ಯಾರು? ಪುಣ್ಯ ಭೂಮಿಯಲ್ಲಿ ಪಾಪಿಷ್ಟರು ಬೆಳೆದಿರುವುದು ಪಾಪ ಮಾಡಿದವರಿಗೆ ಸಹಾಯ ಮಾಡಿರುವುದು  ರಾಜಕೀಯಕ್ಕೆ ಸಹಕರಿಸಿ ರಾಜಯೋಗದಿಂದ ದೂರವಾಗಿರುವುದು ಕಲಿಕೆಯ ಪ್ರಭಾವ.ಶಿಕ್ಷಣ ಸರಿಯಿಲ್ಲವೆಂದು ತಿಳಿದರೂ ಅದೇ ಶಿಕ್ಷಣಕ್ಕೆ ಪ್ರಜೆಗಳು ದಾಸರಾಗಿ ಸಾಲ ಮಾಡಿ ಹೊರಗೆ ದುಡಿಯಲು ಹೊರಟರೆ ಮನೆಯೊಳಗೆ ಸೇರೋದು ಅನ್ಯರೆ ಆಗುವರು. ಭಾರತದ ಈ ಸ್ಥಿತಿಗೆ  ಕಾರಣ ಅಜ್ಞಾನ.ಅಜ್ಞಾನ ಎಂದರೆ ಸತ್ಯವಿಲ್ಲದ ವಿಷಯ ತಿಳಿಯುವುದು.ಹಾಗಾದರೆ ನಾವು ಕಲಿತ ವಿಷಯದಲ್ಲಿ ಸತ್ಯವಿರಲಿಲ್ಲವೆ? ಕಾಲಮಾನಕ್ಕೆ ತಕ್ಕಂತೆ ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.ಆದರೆ ಸತ್ಯ ಯಾವತ್ತೂ ಒಂದೇ ಇರುತ್ತದೆನ್ನುವುದು ಅಧ್ಯಾತ್ಮ. ಆ ಒಂದು ಸತ್ಯವರಿತು ಉಳಿದ ಸತ್ಯವನ್ನು ಅರ್ಥ ಮಾಡಿಕೊಂಡರೆ ವಾಸ್ತವದಲ್ಲಿ ಬದುಕಿ ಪುರಾಣ ಇತಿಹಾಸ ತಿಳಿದು ಭವಿಷ್ಯ ಅರ್ಥ ವಾಗುತ್ತದೆ. ಯಾವುದೂ ನಮ್ಮ ಕೈಯಲ್ಲಿ ಇಲ್ಲ ಇದು ಸತ್ಯ.ಆದರೆ ಎಲ್ಲಾ ನಮ್ಮ ಕೈಯಿಂದಲೇ ಆಗಬೇಕಿದೆ ಇದೂ ಸತ್ಯ.ಕೈ ಕೆಸರಾದರೆ ಬಾಯಿ ಮೊಸರು ಇದು ಸತ್ಯ .ಕೈಗೆ ಕೆಲಸವೇ ಕೊಡದೆ ತಿನ್ನಿಸಿದರೆ ?  
ನಮ್ಮ ಇಂದಿನ‌ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣದಲ್ಲಿ ಸತ್ಯಕ್ಕೆ ಸ್ಥಾನಮಾನವಿಲ್ಲ. ಕುಳಿತಲ್ಲಿಯೇ ಎಲ್ಲಾ  ಸೌಕರ್ಯ ಕೊಟ್ಟು ತಿನ್ನಿಸಿ ಬೆಳೆಸಿದ ಪೋಷಕರ ಸ್ಥಿತಿ ಕೊನೆಯಲ್ಲಿ ಕಾಣುತ್ತಿದೆ.
ಎಲ್ಲರೂ ಹಣದ ಶ್ರೀಮಂತ ರೆ ಆದರೆ ಅದರೊಂದಿಗೆ ಸಾಲವೂ  ಬೆರೆತಿದೆ. ದೇಶದ ತುಂಬಾ  ಸಂಪತ್ತಿದೆ ಆದರೆ ದೇಶ ಆಪತ್ತಿನಲ್ಲಿದೆ. ರಾಜಕೀಯಕ್ಕೂ ಧರ್ಮ ಕ್ಕೂ ಯಾವ ಸಂಬಂಧ ವಿಲ್ಲವೆಂದವರು ರಾಜಕೀಯದೆಡೆಗೆ ನಡೆಯೋ ಪರಿಸ್ಥಿತಿ ಬಂದಿದೆ. ಯಾವಾಗ ಹೊರಗಿನ ಸತ್ಯ ಪ್ರಚಾರ ಹೆಚ್ಚುವುದೋ ಒಳಗಿನ ಸತ್ಯ ಅರ್ಥ ವಾಗದೆ ಹಿಂದುಳಿಯುತ್ತದೆ.
ಅಸುರರೊಳಗೇ ಸುರರು, ವಿದೇಶದೊಳಗೇ ದೇಶ, ಅಧರ್ಮದೊಳಗೇ ಧರ್ಮ, ಅಜ್ಞಾನದೊಳಗೇ ಜ್ಞಾನ ಅವಿದ್ಯೆ ಒಳಗೆ ವಿದ್ಯೆ ಹುಡುಕುವುದು ಕಷ್ಟವಿದೆ. ಕಾರಣ ಇದು ಒಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗೋದಿಲ್ಲ. ಒಳಗಿನವರೆ ಸಹಕಾರ ಕೊಡದಿದ್ದರೆ  ಹೊರಗಿನವರು ಕೊಡುವರೆ? ಹೀಗಾಗಿ ಒಳಗಿನ ಸ್ವಚ್ಚತೆಗೆ ಒಳಗಿನ ಶಿಕ್ಷಣ ಕೊಟ್ಟು  ಹೊರಗೆ ಬರೋದೇ ಸರಿಯಾದ  ಪರಿಹಾರ.ಈಗ ಮನೆಯೊಳಗೆ ಕೂತರೆ ಸಂಸಾರ ನಡೆಸೋದೆ ಕಷ್ಟ ಎನ್ನುವ ಪರಿಸ್ಥಿತಿ ಇದೆ ಕಾರಣ ಅತಿಯಾದ ಸಾಲದ ಹೊರೆ. 
ಸರ್ಕಾರ ಕೊಡುವ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳದೆ  ಸಾಲಮನ್ನಾ ಮಾಡಿಸಿಕೊಂಡವರೂ ಮೇಲಿನ ಶಕ್ತಿಯ ಸಾಲಮನ್ನಾ ಆಗೋದಕ್ಕೆ ಸತ್ಕರ್ಮ, ಸ್ವಧರ್ಮ, ಸುಶಿಕ್ಷಣ,ಸುಜ್ಞಾನ,ಸತ್ಯವೇ ಬಂಡವಾಳವಾಗಿದೆ.
ಈಗಲೂ  ಕಾಲಮಿಂಚಿಲ್ಲ.ಯಾರನ್ನು ದ್ವೇಷ ಮಾಡಿದರೂ ಅದರಲ್ಲೂ ಪರಮಾತ್ಮನೇ ಇರೋವಾಗ  ದ್ವೇಷದಿಂದ ದೇಶ ಕಟ್ಟಲು ಕಷ್ಟ. ಹಾಗೆ ಸಂಸಾರದಲ್ಲಿ ಮುಳುಗಿರುವ ಎಷ್ಟೋ ಜೀವಾತ್ಮರಿಗೆ ಪರಮಾತ್ಮನ ತೋರಿಸುವ‌ಗುರುವಿನ ಅಗತ್ಯವಿದೆ. ಒಳಗೇ ಇರುವ ಗುರುವನ್ನು ತಿರಸ್ಕರಿಸಿ ಹೊರಗೆ ಹೊರಟವರ ಗತಿ ಅಧೋಗತಿ.ತಾಯಿಯ ಋಣ ತಂದೆಯ ಋಣ ತೀರಿಸಲು ಅವರ ಧರ್ಮ ಕರ್ಮ ಅರ್ಥ ವಾಗಬೇಕು.
ಅನ್ಯರ ಹಿಂದೆ ನಡೆದರೆ ಹಣ ಸಿಗಬಹುದು ಜ್ಞಾನದ ನಷ್ಟವನ್ನು ತುಂಬಲು ಅಧ್ಯಾತ್ಮ ಅಗತ್ಯ.ಇಲ್ಲಿ ಅಧ್ಯಾತ್ಮ ಎಂದರೆ ಪುರಾಣ ಇತಿಹಾಸವಲ್ಲ ತನ್ನ ತಾನರಿತು ಆತ್ಮರಕ್ಷಣೆಯ ಕಡೆಗೆ ನಡೆಯೋದು. ಇದು ಕಣ್ಣಿಗೆ ಕಾಣದ ಜಗತ್ತು.ಕತ್ತಲಿನಲ್ಲಿರುವ ಬೆಳಕನ್ನು ಕಾಣುವ ಜ್ಞಾನಸಂಪತ್ತು.
ಅನ್ಯರನ್ನು ಶಿಕ್ಷಣದೊಳಗೇ ವ್ಯವಹಾರದೊಳಗೇ ಭಾಷೆ ಸಂಸ್ಕೃತಿ ,ದೇಶದೊಳಗೇ  ಅತಿಥಿಸತ್ಕಾರ ಮಾಡುವಾಗ ನಮ್ಮವರ ಸ್ಥಿತಿಗತಿಯ ಬಗ್ಗೆ ಎಚ್ಚರವಿರದು.ಯಾವಾಗ ಅವರು ನಮ್ಮ ತಿಥಿ ಮಾಡಲು ಮನೆಯೊಳಗೆ ಇರುವರೋ ಆಗ ಎಚ್ಚರವಾದರೆ  ಏನೂ ಉಪಯೋಗವಿಲ್ಲ. ಇದು ಇಂದಿನ ಭಾರತೀಯರ ಸ್ಥಿತಿ ಗೆ ಕಾರಣ.
ಭಾರತೀಯ ವಿಧ್ಯಾವಂತ ಬುದ್ದಿವಂತ ಜ್ಞಾನಿಗಳು ವಿದೇಶದಲ್ಲಿ ಬೆಳೆದಿದ್ದಾರೆ. ಅಲ್ಲಿದ್ದ ಅಜ್ಞಾನಿಗಳು ವ್ಯವಹಾರಕ್ಕೆ ನಮ್ಮಲ್ಲಿ ಬಂದು ನೆಲೆಸಿ ಹಣಕ್ಕಾಗಿ  ಜ್ಞಾನವನ್ನು ತಿರಸ್ಕರಿಸಿ ಧರ್ಮ ಭ್ರಷ್ಟರಾಗಿರುವರು.ಇದಕ್ಕೆ ಸಹಕಾರ ಕೊಟ್ಟ ಪ್ರಜಾಪ್ರಭುತ್ವ ದ ಜನರ ಗೋಳು ದೇವರಿಗೂ ಕೇಳದು.ದೈವತ್ವ ತತ್ವದಲ್ಲಿತ್ತು  ಆದರಿದು ತಂತ್ರದ ವಶವಾಗಿದೆ.ಸ್ವತಂತ್ರ ಭಾರತವನ್ನು ಸ್ವತಂತ್ರ ಜ್ಞಾನದಿಂದ  ಆತ್ಮನಿರ್ಭರ ಮಾಡಬೇಕಿದೆ. ಇದು ಸಾಧ್ಯವೆ? ಇದರ ಬಗ್ಗೆ ಚರ್ಚೆ ನಡೆಸಿದರೆ ನಮ್ಮ ಆತ್ಮಕ್ಕೆ ನಾವೇ ದ್ರೋಹವೆಸಗಿ ಯಾರದ್ದೋ ದೋಷ ಎತ್ತಿ ಹಿಡಿಯುವ ರಾಜಕೀಯ ದರ್ಶನ ಆಗುತ್ತದೆ.
ಒಟ್ಟಿನಲ್ಲಿ ರಾಜಕೀಯದಿಂದ  ರಾಜಯೋಗಿಯಾಗೋದಿಲ್ಲ.
ಅಧ್ಯಾತ್ಮ ದಿಂದ ಮಾತ್ರ ಯೋಗಿಯಾಗಿರೋದನ್ನು ಪುರಾಣ ತಿಳಿಸಿದೆ.ಪುರಾಣದ ರಾಜಕೀಯದಲ್ಲಿ ಧರ್ಮ ತತ್ವವಿತ್ತು ಗಮನಿಸಿ ತಮ್ಮ ಆತ್ಮರಕ್ಷಣೆಗಾಗಿ  ತಾವೇ ಎಚ್ಚರವಾಗೋದು ಅಗತ್ಯವಿದೆ. 
ಶ್ರೀ ಕೃಷ್ಣ ಪರಮಾತ್ಮ‌ಹೇಳಿದಂತೆ ಇಲ್ಲಿ ಎಲ್ಲರೂ ಸತ್ತಿರುವವರೆ
ಸತ್ಯವಿಲ್ಲದ ಜಗತ್ತಿನಲ್ಲಿ ಬದುಕಿರೋರು ವಿರಳ. ಸಾವು ನಿಶ್ಚಿತ ಆತ್ಮ ಅಮರ. ಶಿಕ್ಷಣ ಶಿಷ್ಟಾಚಾರದ ಕಡೆಗಿದ್ದರೆ ಜನ್ಮಸಾರ್ಥಕ.
ಶಿಷ್ಟಾಚಾರದ ಹೆಸರಿನಲ್ಲಿ ಭ್ರಷ್ಟಾಚಾರ ಬೆಳೆಯಬಾರದು.

ಎಷ್ಟೋ  ಪತ್ರಿಕೆಗಳಿಗೆ ಲೇಖನಗಳನ್ನು ಕಳಿಸುತ್ತಿದ್ದೆ ಅಧ್ಯಾತ್ಮ ವಿಚಾರ ಸತ್ಯದ ವಿಚಾರವೆಂದು ತಿರಸ್ಕರಿಸಿದ್ದರು.ಈಗ ಕೇಳಿದವರಿಗಷ್ಟೆ ನಮ್ಮ ಅರಿವಿಗೆ ಬರುವ ವಿಚಾರ ಕಳಿಸುತ್ತೇನೆ. ಕಾಲ ಒಂದೇ ಸಮನಾಗಿರದು ಸತ್ಯ ಮಾತ್ರ ಒಂದೇ ಇರುತ್ತದೆ.ಆ ಒಂದರ ಕಡೆ ನಡೆದವರ ಮನಸ್ಸು ಒಂದೇ ಇರುತ್ತದೆ.ಹೀಗಾಗಿ ಎಲ್ಲರಲ್ಲೂ ಅಡಗಿರುವ ಶಕ್ತಿ ಒಂದೇ ಆದರೂ ಅವರವರ ಪರಿಸ್ಥಿತಿ ಒಂದೇ ಇರದು. ಒಗ್ಗಟ್ಟು ತತ್ವಜ್ಞಾನ ದಿಂದ ಬೆಳೆಸಬಹುದು.ತಂತ್ರದಲ್ಲಿ ಕಷ್ಟ.
ಸಾಧ್ಯವಾದವರು ಮನೆಯೊಳಗಿದ್ದು ಸ್ವತಂತ್ರ ಜ್ಞಾನ ಪಡೆದರೆ ಆಗದವರು ಹೊರಗೆ ಬಂದು ಸ್ವತಂತ್ರ ಜೀವನನಡೆಸುವರು.
ಹೊರಗಿನ ಸ್ವಾತಂತ್ರ್ಯ ತಾತ್ಕಾಲಿಕ ತೃಪ್ತಿ ನೀಡಿದರೆ ಒಳಗಿನ ಸ್ವಾತಂತ್ರ್ಯ ಶಾಶ್ವತ ತೃಪ್ತಿಯ ಕಡೆಗೆ ನಡೆಸುವುದು.ಇದಕ್ಕೆ ದ್ಯಾನದಿಂದ ಮುಕ್ತಿ ಎಂದರು.

ಒಂದೊಂದು ಯುಗದ ದೃಷ್ಟಿ ಬೇರೆಯಾಗಿದ್ದರೂ ಧರ್ಮ ಒಂದೇ .ಜೀವನದ ಗುರಿ ಒಂದೇ ಅದೇ ಜೀವಾತ್ಮನ ಮುಕ್ತಿ.
ಮೇಲಿರುವ ಅಸಂಖ್ಯಾತ ನಕ್ಷತ್ರಗಳಂತೆ ಸೂರ್ಯ ನೂ ಒಂದು  ನಕ್ಷತ್ರ.ಆದರೆ ಅವನಿಲ್ಲದೆ ಭೂಮಿಯಲ್ಲಿ ಮನುಕುಲ ಬದುಕೋದೆ ಕಷ್ಟ.ಹಾಗಾದರೆ ನಮ್ಮ ಜೀವ ಇರೋದು ಎಲ್ಲಿ?
ಜೀವನದ ಗುರಿ ಯಾವುದು?

No comments:

Post a Comment