ಪಾದಪೂಜೆಯೆಂದರೆ ಅರ್ಥ ವೆ ಗೊತ್ತಿಲ್ಲದ ಜಗತ್ತಿನಲ್ಲಿ ಜಗದೀಶ್ವರನ ಕಾಣಬಹುದೆ? ಮಹಾತ್ಮರುಗಳ ಪಾದಕ್ಕೆ ಪೂಜೆ ಮಾಡೋದರ ಅರ್ಥ ಅವರು ನಡೆದ ದಾರಿಯಲ್ಲಿ ನಮಗೂ ನಡೆಯುವಂತಾಗಲಿ ಎನ್ನುವುದಾಗಿದೆ. ಪರಮಾತ್ಮನ ಕಡೆಗೆ ಪರಮಸತ್ಯ ಧರ್ಮ ವನರಿತು ಬರಿಗಾಲಿನಲ್ಲಿ ಭೂಮಿಯಲ್ಲಿ ನಡೆದು ಲೋಕಕಲ್ಯಾಣಕ್ಕಾಗಿ ಜೀವನ ನಡೆಸಿದ ಯೋಗಿಗಳ ಪಾದ ಪರಮಪವಿತ್ರ. ಕೊನೆಪಕ್ಷ ಅವರ ಪಾದಕ್ಕೆ ನಮಸ್ಕರಿಸಿದರೆ ಉತ್ತಮ ಜ್ಞಾನ ಲಭಿಸಬಹುದೆನ್ನುವ ಕಾರಣಕ್ಕಾಗಿ ಮಹಾತ್ಮ ರ ಪಾದ ಪೂಜೆಯನ್ನು ಮಾಡುವರು. ಗುರುಹಿರಿಯರ ಪಾದಕ್ಕೆ ನಮಸ್ಕರಿಸುವರು.
ಮನೆಯೊಳಗೆ ವಿಷ್ಣುಪಾದವಿರುತ್ತದೆ. ಹಾಗಂತ ವಿಷ್ಣುವನ್ನು ಪೂಜಿಸಿದೆವೆನ್ನಲಾಗದು. ಶಿವಸಾನಿದ್ಯ ಪಡೆಯಲು ಮುಕ್ತಿ ಪಡೆಯಲು ಪಾದಪೂಜೆಯಿದೆ.ಅಂದರೆ ನಮ್ಮ ನಡೆ ನುಡಿ ಸಾತ್ವಿಕವಾಗಿದ್ದಷ್ಟೂ ಜೀವನ್ಮುಕ್ತಿ ಎಂದರ್ಥ ಎನ್ನಬಹುದೆ?
ಭೂಮಿ ಇರೋದು ಮಹಾವಿಷ್ಣುವಿನ ಸೊಂಟದ ಭಾಗದಲ್ಲಿ ಎಂದು ವಿಶ್ವ ರೂಪ ತಿಳಿಸುತ್ತದೆ. ಅಂದರೆ ಭೂಮಿಯ ಮೇಲೆ ಪಾದವಿಟ್ಟಿರುವ ಮಾನವನ ಪಾದ ಸ್ಪರ್ಷದಿಂದ ಭೂಮಿಯ ಸತ್ಯ ಸತ್ವ ತತ್ವ ಉಳಿಯಬೇಕಾದರೆ ಪಾದ ಎಷ್ಟು ಶುದ್ದವಿರಬೇಕು ಸತ್ವಯುತವಿರಬೇಕು .ಅಜ್ಞಾನದ ಅಮಲಿನಲ್ಲಿ ನಡೆದಷ್ಟೂ ಪಾದ ಮಲಿನವೇ. ಪರಿಸರ ಮಾಲಿನ್ಯಕ್ಕಿಂತಲೂ ಮಲಿನದ ಪಾದಕ್ಕೆ ಜನ ಬೆಂಬಲ ಹೆಚ್ಚು.
No comments:
Post a Comment