ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, September 22, 2024

ಪಿತೃಋಣ ತೀರಿಸಲು ಪಿತೃಪಕ್ಷ

ವರ್ಷದಲ್ಲಿ ಬರುವ ಪಿತೃಪಕ್ಷದ ಬಗ್ಗೆ ಅರಿವಿದ್ದವರು ಭೂಮಿಗೆ  ಬರಲು ಕಾರಣರಾಗಿರುವ ಪಿತೃಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಹೋದ ಮೇಲೆ ಮಾಡುವ ಶ್ರಾದ್ಧ ಕರ್ಮ ಕ್ಕೂ ಇದ್ದಾಗಲೇ ನಡೆಸುವ ಶ್ರದ್ಧೆಯ ಧಾರ್ಮಿಕ ದೇವತಾರಾಧನೆಗೂ ಅಂತರವಿದ್ದರೂ  ಇದ್ದಾಗ ಮಾಡುವ ಕ್ರಿಯೆಯಿಂದ  ಜೀವಾತ್ಮನಿಗೆ ಮುಕ್ತಿ ತೃಪ್ತಿ ಸಿಕ್ಕಿರುವುದನ್ನು ಅನುಭವಿಸಬಹುದು. ಹೋದ ಮೇಲೆ ಯಾರೋ ಮಾಡುವ ಶ್ರಾಧ್ದ ಕರ್ಮ ದ ಫಲ ಪಿತೃಗಳ ತೃಪ್ತಿ ಹೊಂದಿದ್ದರೆ ಸಿಗುವುದು.ಆದರಿದು ತಿಳಿಯುವುದು ಕಷ್ಟ.
ಹೋದ ಜೀವ ಮರಳಿಬರದಿದ್ದರೂ  ಮರುಜನ್ಮ ದ ಬಗ್ಗೆ ಹಿಂದೂಗಳ ನಂಬಿಕೆಯಿದೆ. ಇದು ಪುರಾಣಗಳಲ್ಲಿಯೇ ತಿಳಿಸಿದ್ದಾರೆ.  ಅಷ್ಟೇ ಯಾಕೆ ಸ್ವಯಂ ಶ್ರೀ ಕೃಷ್ಣಪರಮಾತ್ಮನೇ ಭಗವದ್ಗೀತೆ ಯಲ್ಲಿ ತಿಳಿಸಿರುವಾಗ ಜನ್ಮವೇ ಇಲ್ಲ ಎನ್ನುವುದು ಅಸತ್ಯ.
ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಅಂತರವಿರಬಹುದಷ್ಟೆ.ಆ ಅಂತರದಲ್ಲಿ ಪಿತೃ ಲೋಕದಲ್ಲಿ  ಜೀವಾತ್ಮನಿಗೆ  ಸ್ಥಾನವೆಂದು ತಿಳಿಸುವ ವೈದೀಕರಿಗೆ  ಅಲ್ಲಿನ ಪಿತೃಗಳ ಆಶೀರ್ವಾದ ದೇವತೆಗಳಿಗಿಂತ ದೊಡ್ಡದು. ಕಾರಣ ಮಧ್ಯವರ್ತಿ ಯಾಗಿರುವವರ ಸಹಕಾರವಿಲ್ಲದೆ ಯಾವುದೇ ಕೆಲಸ ಕಾರ್ಯ  ನೇರವಾಗಿ ನಡೆಯದು. ಹೀಗಾಗಿ ಮಧ್ಯವರ್ತಿ ಗಳೇ ಅತಂತ್ರಸ್ಥಿತಿಗೆ ತಲುಪಿದ್ದರೆ  ಜೀವನ ಅತಂತ್ರವೆ.
ಅತಂತ್ರಸ್ಥಿತಿಗೆ ತಲುಪಲು ಕಾರಣವೇ ಅಧರ್ಮ ಅನ್ಯಾಯ ಅಸತ್ಯದ ನಡೆ ನುಡಿ.ಅದಕ್ಕೆ ಹೇಳೋದು ಸ್ವತಂತ್ರ ವಾಗಿ ಸತ್ಯದ ಕಡೆಗೆ ನಡೆದವರಿಗಷ್ಟೆ ಮುಕ್ತಿ ಮೋಕ್ಷವೆಂದು. 

ತಾಯಿತಂದೆಯರಬಿಟ್ಟುಜಪವ‌ಮಾಡಲುಬಹುದು,ದಾಯಾದಿ ಬಂಧುಗಳ ಬಿಡಲು ಬಹುದೂ ಆದರೆ ಹರಿಯನ್ನು ಬಿಟ್ಟು ಬಿಡಲಾಗದೆನ್ನುವುದು ಮಹಾಯೋಗಿಗಳ ಅನುಭವ.
ಸರ್ಕಾರದ ಹಿಂದೆ ನಡೆದಿರುವ ಇಂದಿನ ಪರಿಸ್ಥಿತಿ ಯಲ್ಲಿ  ಮನೆ ಮನೆಯ ಸಾಲ ತೀರಿಸಲು ಸರ್ಕಾರಕ್ಕೆ ಅಸಾಧ್ಯ. ಕಾರಣ ಇಲ್ಲಿ ಹೊರಗಿನಿಂದ ಸಾಲ ಬೆಳೆದಿದೆ. ಮೂಲ ಶಕ್ತಿ ಮರೆತು ದೂರ ಹೋದವರ ಹಿಂದೆ ನಡೆದವರ ಸಾಲ ತೀರಿಸಲು ಮೂಲದಲ್ಲಿಯೇ ಶಕ್ತಿಯಿಲ್ಲವಾದಾಗ ಹೊರಗೆ ಹೋಗಿ ಶಕ್ತಿಮೀರಿ ದುಡಿದು ಸಾಲ ತೀರಿಸುವುದು ಅಗತ್ಯ. ಹೀಗಾಗಿ ಎಷ್ಟು ಆಸ್ತಿಯಿದ್ದರೂ ಸಾಲ ಮಾಡೋದು ತಪ್ಪಿಲ್ಲ.
 ದಾಸ ಶರಣರು ಮಹಾತ್ಮರುಗಳು ತಮ್ಮೆಲ್ಲಾ ಭೌತಿಕ ಆಸ್ತಿ ಬಿಟ್ಟು ಪರಮಾತ್ಮನ ದಾಸರಾಗಿ  ಸಂಸಾರದಿಂದ ದೂರವಾದರು ಎಂದರೆ ಎಲ್ಲಾ ನಿನ್ನದೇ ನನ್ನದೇನಿಲ್ಲ ಎನ್ನುವ ಶರಣಾಗತಿ ಭಾವ ದಾಸ ಪ್ರಜ್ಞೆ ಮಹಾತ್ಮರಲ್ಲಿತ್ತು. ಈಗಿನ ಹೊರಗಿನ  ವ್ಯವಹಾರ  ಒಳಗಿನ ಧರ್ಮ ಬಿಟ್ಟು ನಡೆಸಿದೆ.

 ಯಾವಾಗ ಸಾಮಾನ್ಯರಿಗೆ ಸಂಬಂಧ ಒಂದು ವ್ಯವಹಾರವಾಗಿ ,ಎಲ್ಲಿಯವರೆಗೆ ಹಣವಿರುವುದೋ ಹೆಣವಾದರೂ ಬೆಲೆ.ಆದರೆ ಜ್ಞಾನ ಮಾತ್ರ ಅಮರ.
ಜನ್ಮದ ಮೂಲಕವೇ ಪಿತೃಗಳ ಋಣವಿರೋವಾಗ ಅವರ ಧರ್ಮ ಕರ್ಮ ವೂ ಮಕ್ಕಳಿಗೆ ತಿಳಿಸಿ ಕಲಿಸುವುದು ಪೋಷಕರ ಧರ್ಮ. ಪಿತೃಗಳ ಭೌತಿಕ ಆಸ್ತಿ ಬೇಕು  ಅವರ ಋಣ ಬೇಡವೆಂದರೆ  ಅಜ್ಞಾನವಷ್ಟೆ. ಒಟ್ಟಿನಲ್ಲಿ ಯಾವುದೋ ರೂಪದಲ್ಲಿ ಋಣ ಸಂದಾಯವಾಗಲೇಬೇಕೆನ್ನುತ್ತದೆ ಸನಾತನ ಧರ್ಮ. ಇದು ಪರಮಾತ್ಮನದ್ದಾಗಿದೆಯೋ ಪರಕೀಯರದ್ದಾಗಿದೆಯೋ  ಎಲ್ಲಾ ಸತ್ಕರ್ಮ ಸ್ವಧರ್ಮ ಸುಜ್ಞಾನದ ಮೂಲಕವೇ ಕಳೆಯೋದು. ಹೀಗಾಗಿ ಎಷ್ಟು ಹಣಗಳಿಸಿದರೂ  ಅದರ ಹಿಂದಿನ  ಧರ್ಮ ಕರ್ಮ ದ ಮೇಲೇ ಋಣ ಅಥವಾ ಸಾಲದ ಲೆಕ್ಕಾಚಾರದಿಂದ ಮೇಲಿರುವ  ಜಗತ್ತನ್ನು  ಅರ್ಥ ಮಾಡಿಕೊಂಡರು ಮಹಾತ್ಮರುಗಳು.
ಆತ್ಮನಿರ್ಭರ ಭಾರತ ಅಧ್ಯಾತ್ಮ ಸಂಶೋಧನೆಯಿಂದ ಸಾಧ್ಯ.
"ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮವೊಂದಿದ್ದರೆ ಸಾಕೋ " ಎಂದಿದ್ದಾರೆ ದಾಸಶ್ರೇಷ್ಟರು.
ಮೂಲವನ್ನರಿತರೆ ಮೂಲ ತಲುಪಬಹುದು. ಮೂಲಾಧಾರದ ಶುದ್ದತೆಗೆ ಮೂಲಶಿಕ್ಷಣ ಶುದ್ದವಿರಬೇಕು. ಇದು ಭಾರತೀಯ ಶಿಕ್ಷಣದ ಮೂಲವಾಗಿದೆ. ಸಾತ್ವಿಕ ಶಿಕ್ಷಣ  ಗುರುವಾಗಿಸಿದರೆ ರಾಜಸಿಕ ಶಿಕ್ಷಣ ರಾಜಕೀಯಕ್ಕೆ ಇಳಿಸುತ್ತದೆ. ಆದರೆ ರಾಜಕಾರಣಿಗಳೇ ಗುರುವನ್ನು  ಆಳುತ್ತಿದ್ದರೆ ಅಧರ್ಮ ವಷ್ಟೆ.
ಹಾಗೆ ಪೋಷಕರನ್ನು ಶೋಷಣೆ ಮಾಡುವುದೂ ಅಧರ್ಮ.
ಇದಕ್ಕೆ  ಪೋಷಕರು ನೀಡಿದ  ಶಿಕ್ಷಣವೂ ಕಾರಣವಾಗಬಹುದು.  ಯಾರೂ  ವಯಸ್ಸಿನಿಂದ ಹಿರಿಯರಲ್ಲ ಕಿರಿಯರಲ್ಲ.ಅವರವರ ಜ್ಞಾನದ ಮೇಲೇ ಎಲ್ಲಾ ನಡೆದಿರೋದು. ಜ್ಞಾನ ಒಳಗಿದೆ ವಿಜ್ಞಾನ ಹೊರಗಿದೆ. ಸತ್ಯದ ವಿಜ್ಞಾನ ಒಳಜಗತ್ತನ್ನು ಆಳುತ್ತಿದೆ.ಮಿಥ್ಯದ ವಿಜ್ಞಾನ ಹೊರಜಗತ್ತನ್ನು ಆಳುತ್ತಿದೆ.ಇವೆರಡ ನಡುವಿನ ಮಾನವನಲ್ಲಿ ಸಾಮಾನ್ಯಜ್ಞಾನವಿದ್ದರೆ ಎರಡರ ಸದ್ಬಳಕೆ ಆಗಬಹುದು.

No comments:

Post a Comment