ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, September 22, 2024

ಜ್ಞಾನ ಬೇರೆ ವಿದ್ಯೆ‌ಬೇರೆಯೆ?

ನಾವು ಈವರೆಗೆ ಕಲಿತಿರೋದು ಜ್ಞಾನವಲ್ಲ ವಿದ್ಯೆ ಎಂದರೆ ಅರ್ಥ ವಾಗದು.
ಇಲ್ಲಿ ಜ್ಞಾನ ಆಂತರಿಕ ವಾಗಿರುವ ಶಕ್ತಿ ವಿದ್ಯೆ ಹೊರಗಿನ ಶಕ್ತಿ. ಅದನ್ನು ಯಾರು ಸದ್ಬಳಕೆ ಮಾಡಿಕೊಂಡು ಜೀವನದ ಸತ್ಯ ತಿಳಿದು ನಡೆಯುವರೋ ಅವರು ಜ್ಞಾನಿಗಳು ಎಂದರ್ಥ.
  ಜ್ಞಾನ ಎಂದರೆ ತಿಳುವಳಿಕೆ ವಿಜ್ಞಾನ ವಿಶೇಷವಾದ ತಿಳುವಳಿಕೆ.ಇದರಲ್ಲಿ ಅಧ್ಯಾತ್ಮ ವಿಜ್ಞಾನ ಭೌತವಿಜ್ಞಾನ ಒಂದೇ ನಾಣ್ಯದ ಎರಡು ಮುಖ. ಮಾನವನಲ್ಲಿ ಸಾಮಾನ್ಯ ಜ್ಞಾನ ಅಡಗಿದೆ. ಇತಿಮಿತಿಯಲ್ಲಿ ಜ್ಞಾನ ವಿಜ್ಞಾನವನರಿತವರು ಜೀವನದಲ್ಲಿ ಸಾಧನೆ ಮಾಡಿರುವರು. ಅಂದರೆ ಎರಡೂ ಸಮಾನವಾಗಿ ಬಳಸುವಾಗ  ಸ್ಥಿತಪ್ರಜ್ಞಾವಂತರಾಗಿರಬೇಕು.
ಅತಿಯಾಗಿ ತಿಂದರೂ ಕಷ್ಟ ತಿನ್ನದೆ ಬಿಟ್ಟರೂ ಕಷ್ಟ. ಹಾಗೆ ಹಸಿದವನಿಗೆ ಅನ್ನದಾನ ಮಾಡಿದರೆ ಪುಣ್ಯ ಹೊಟ್ಟೆ ತುಂಬಿದವನಿಗೆ ಅತಿಥಿಸತ್ಕಾರವೂ  ಪಾಪವಾಗಬಹುದು.
ಅತಿಯಾದ ಬಡತನ ಅತಿಯಾದ ಸಿರಿತನ ಮಾನವನಿಗೆ ಶಾಪವಾಗುತ್ತದೆಂದರ್ಥ.
ವಾಸ್ತವದಲ್ಲಿ ನಾವೆಲ್ಲರೂ ಪುರಾಣ ಇತಿಹಾಸ ಶಾಸ್ತ್ರ ಕಥೆಗಳನ್ನು ತಿಳಿದು  ವಿದ್ಯಾವಂತರೆನಿಸಿದ್ದರೂ  ನಮ್ಮ ಈಸ್ಥಿತಿಗೇ  ಏನು ಕಾರಣವೆನ್ನುವ ಸತ್ಯದ ಅರಿವಿಲ್ಲವಾದರೆ ನಾವು ಜ್ಞಾನಿಗಳಲ್ಲ. ನಮ್ಮ ಸಮಸ್ಯೆಯ ಮೂಲವೇ ಅಜ್ಞಾನದ ನಡೆನುಡಿಯ  ಕರ್ಮ ವಾಗಿದೆ. ಆ ಕರ್ಮ ವೇ ಹಿಂದಿರುಗಿ ಬಂದು ಫಲ ನೀಡುತ್ತಿದೆ. ಹಣವಿದ್ದರೂ ಸಾಲದ ಹೊರೆ ಎಂದಾಗ ಯಾವುದಕ್ಕಾಗಿ ಸಾಲ ಮಾಡಿದ್ದೆವು? 
ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳ ಶಿಕ್ಷಣಕ್ಕೆ ಲಕ್ಷಾಂತರ. ರೂ ಕಟ್ಟುವರೆಂದರೆ ಆ ಶಿಕ್ಷಣದಲ್ಲಿ ಜ್ಞಾನವಿತ್ತೆ? ಅದೇ ಮುಂದೆ ಮಕ್ಕಳ ತಲೆಯ ಮೇಲಿನ ಸಾಲವಾಗಬಾರದೆಂದರೆ ಶಿಕ್ಷಣದವಿಷಯದಲ್ಲಿ ಸತ್ಯ ಜ್ಞಾನವಿರಲಿ. ಆಗ ಸಾಲದ ಅರ್ಥ ಋಣ ತೀರಿಸುವ ಜ್ಞಾನ ಬರುತ್ತದೆ.
ದೇಶದ ಒಳಗಿದ್ದು  ದೇಶ ಬೇರೆ  ನಾನೇ ಬೇರೆ ದೇವರು ಬೇರೆ ನಾನೇ ದೇವರು ಎಂದರೆ  ಸತ್ಯವಿರದು.
ನನ್ನೊಳಗೆ ದೇವಶಕ್ತಿ ಇದ್ದರೂ ದೈವೀಕ ಗುಣಜ್ಞಾನದಿಂದ ಬೆಳೆಯದಿದ್ದರೆ  ದೇವರನ್ನು ನಂಬಲಾಗದು. ಇದಕ್ಕಾಗಿ ನಮ್ಮ ಶಿಕ್ಷಣದಲ್ಲಿಯೇ  ಸತ್ವಯುತ ವಿಷಯ ಗಳನ್ನು ತಿಳಿಸಿದರೆ ಮಕ್ಕಳು ಮಹಾತ್ಮರಾಗಿ  ಋಣಮುಕ್ತರಾಗಬಹುದು.
ಕಷ್ಟ ವಿದೆ. ಹಾಗಂತ ಅಸಾಧ್ಯವಲ್ಲ.ನಮ್ಮ ಹಿಂದಿನ ಮಹಾತ್ಮರುಗಳೆ ಇದಕ್ಕೆ ಸಾಕ್ಷಿ.
ದೇವರಾಗದಿದ್ದರೂ ಸರಿ ಅಸುರರ ವಶವಾಗದಿದ್ದರೆ ಉತ್ತಮ.
ಎಲ್ಲಿ ಸತ್ವ ಸತ್ಯ ತತ್ವ ಜ್ಞಾನವಿರುವುದೋ ಅಲ್ಲಿ ದೇವರಿರುವರು.ಶಾಂತಿಯಿರುವುದು. ಶಾಂತಿಯಿಂದ ಆತ್ಮಜ್ಞಾನ ಪ್ರಾಪ್ತಿ. ಆತ್ಮಜ್ಞಾನದ ನಂತರವೆ ಆತ್ಮಕ್ಕೆ ತೃಪ್ತಿ ಮುಕ್ತಿ ಇದು ಅಧ್ಯಾತ್ಮ ಸತ್ಯ.
ಭೌತಿಕದಲ್ಲಿ ಇದನ್ನು ಕಾಣಲಾಗದು. ಹಾಗಂತ ಭೌತವಿಜ್ಞಾನದಿಂದ ಮಾನವ ದೂರವಾಗಿರೋದು ಕಷ್ಟ.
ಜ್ಞಾನವಿಜ್ಞಾನವು ಒಂದೇ ನಾಣ್ಯದ ಎರಡು ಮುಖ. ಒಂದು ಬಿಟ್ಟರೆ ಇನ್ನೊಂದು ಮುಂದೆ ನಡೆಯುತ್ತದೆ. ಎರಡನ್ನೂ ಸದ್ಬಳಕೆ ಮಾಡಿಕೊಂಡು ನಡೆದರೆ ಸ್ಥಿತಪ್ರಜ್ಞಾವಂತ
ಆಗಬಹುದು.ಅಂದರೆ ನಮ್ಮ ಸ್ಥಿತಿಗೆ ‌ನಾನೇ ಕಾರಣವೆನ್ನುವ ಸತ್ಯ ತಿಳಿದು ನನ್ನನ್ನು ನಾನರಿತು ನಡೆಯಬಹುದು. ಇದು ರಾಜಯೋಗದ ವಿಚಾರ.
ಇಂದು ಭೋಗದ ರಾಜಕೀಯವನ್ನು ಎತ್ತಿ ಹಿಡಿದು ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡಿರುವವರ ಹಿಂದೆ ನಡೆದವರು ಸಾಲದ ಸುಳಿಯಲ್ಲಿ ಸಿಲುಕಿ ಸಾಲ ತೀರಿಸಲು ಯಾವ ಕೆಲಸವಾದರೂ ಸರಿ ಯಾವ ದೇಶವಾದರೂ ಸರಿ ಎನ್ನುವ ಮಟ್ಟಿಗೆ ಪರಿಸ್ಥಿತಿ ಇದೆ. ಆದರೆ,ಒಳಜಗತ್ತಿನ ಸಾಲ ತೀರಿಸಲು ಸದ್ವಿದ್ಯೆಯಿಂದ ಸುಜ್ಞಾನದಿಂದ ಮಾತ್ರ ಸಾಧ್ಯ ಎನ್ನುವಾಗ ಅದನ್ನು ಶಿಕ್ಷಣದಿಂದಲೇ ಕೊಡುವುದು ಧರ್ಮ.
ಇದಕ್ಕೆ ವಿರೋಧಿಸುವ ಪೋಷಕರಿರುವವರೆಗೂ ವಿದ್ಯೆ ಅವಿದ್ಯೆಯಾಗೇ ಇರುತ್ತದೆ.

ಶಿಕ್ಷಕರಾಗಲಿ ಗುರುವಾಗಲಿ‌ ನಿಸ್ವಾರ್ಥ, ನಿರಹಂಕಾರ ,ಪ್ರತಿಫಲಾಪೇಕ್ಷೆ ಯಿಲ್ಲದ ಸೇವೆ ಮಾಡುವ‌ ಪರಮಾತ್ಮನ ದಾಸರು. ಹಾಗಾಗಿ ಗುರುವನ್ನು ದೇವರೆಂದರು.  ಇವರಲ್ಲಿ ಸ್ವಾರ್ಥ ಅಹಂಕಾರವಿರದಿರಲು ಕಾರಣವೇ ತತ್ವಜ್ಞಾನ. ಎಲ್ಲರಲ್ಲೂ ಆ ಪರಾಶಕ್ತಿ ಪರಮಾತ್ಮಶಕ್ತಿ  ಕಾಣೋದಕ್ಕೆ ಕಷ್ಟಪಟ್ಟು ಅಧ್ಯಾತ್ಮ ಸಾಧನೆ ಮಾಡಿದವರು ಗುರುವಾಗಬಹುದು. 
ಒಳಗಿರುವ ಅರಿವೇ ಗುರುವಾದಾಗ ದೇಹವೇ ದೇಗುಲ ಆಗುತ್ತದೆ. ಎಲ್ಲಿ ಹೋದರೂ  ದೇವರಿರುವರು. ನಿರಾಕಾರ ಬ್ರಹ್ಮನ್  ಕಡೆಗೆ ನಡೆಸೋ ಗುರುವೇ ನಿಜವಾದ ಜ್ಞಾನಿ ವಿಜ್ಞಾನಿ  ಎಂದಿರುವರು. ಯಾರಿಗೆ ಗೊತ್ತು ನಮ್ಮೊಳಗೆ  ದೇವರಿರುವರೋ ಅಸುರರೋ?
ಗುಣಜ್ಞಾನದಿಂದಲೇ ಜೀವನ ನಡೆದಿರೋದು. ವ್ಯಕ್ತಿಗಿಂತ ವ್ಯಕ್ತಿತ್ವ ಶ್ರೇಷ್ಠ. ಹಾಗೆ ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ ವೆನ್ನುವರು.
ಇತರರ ಒಳಿತಿಗಾಗಿ ಬದುಕೋದು ದೇವರು
ತನ್ನ ಜೊತೆಗೆ ತನ್ನವರ ಒಳಿತನ್ನು ಬಯಸೋದು ಮಾನವ
ಕೇವಲ ತನ್ನ ಸ್ವಾರ್ಥ ಅಹಂಕಾರಕ್ಕೆ ಇತರರನ್ನು ಬಲಿಕೊಡೋದೆ  ಅಸುರ ಬುದ್ದಿ..ಎಷ್ಟು ವರ್ಷ ಬದುಕಿದರೂ ಸೂಕ್ಮ.  ಜ್ಞಾನವಿಲ್ಲವಾದರೆ ಅತಂತ್ರಸ್ಥಿತಿಯೇ ಗತಿ.
ವಿದ್ಯಾವಂತರೆಲ್ಲ ಜ್ಞಾನಿಗಳಾಗಿಲ್ಲ.ಜ್ಞಾನಿಗಳಾದವರೆಲ್ಲರೂ ವಿದ್ಯೆ  ಕಲಿತಿರಲಿಲ್ಲ. ಆದರೆ ಈಗ  ಎಲ್ಲಾ ಮಿಶ್ರ.

No comments:

Post a Comment