ಒಂದು ಕಲ್ಲು ಮೆಟ್ಟಿಲಾಗುವುದು ಸಹಜ ಆದರೆ ಮೂರ್ತಿಯಾಗೋದು ಕಷ್ಟ. ಮೂರ್ತಿ ದೇವರಾಗಲೂಬಹುದು ಆದರೆ ಮೆಟ್ಟಿಲು ಹತ್ತದೆ ಮೇಲಿರುವ ಮೂರ್ತಿಯನ್ನು ನೋಡುವುದು ಕಷ್ಟ.
ಇಲ್ಲಿ ಮೂರ್ತಿ ಮಾಡೋರಿಗೆ ಹಣ ಗೌರವ ಹೆಚ್ಚಾಗಿ ಸಿಗುತ್ತದೆ ಆದರೆಮೆಟ್ಟಿಲು ಮಾಡಿದವರು ಲೆಕ್ಕಕ್ಕಿಲ್ಲ.
ಆದರೆ ಇಂದು ಪರಮಾತ್ಮನಿರೋದುಮೆಟ್ಟಿಲುಗಳ ಮೇಲೇ ಮೇಲಿನ ಮೂರ್ತಿಯಲ್ಲಿ ಇದ್ದಾನೋ ಇಲ್ಲವೋ ಎನ್ನುವುದೇ ಸಂಶಯ.ಕಾರಣ ಮೂರ್ತಿ ನೋಡಲು ಸರದಿ ಸಾಲಿನಲ್ಲಿ ಮೆಟ್ಟಿಲುಗಳಲ್ಲಿ ಸಾಕಷ್ಟು ಭಕ್ತರಿರುವರು. ಅದೇ ಮೂರ್ತಿ ನೋಡಲು ಹಣವಂತರುಪ್ರತಿಷ್ಟಿತರು ಬೇರೆ ಮಾರ್ಗದಲ್ಲಿ ಮೇಲಕ್ಕೆ ಹೋದಾಗ ಮೆಟ್ಟಿಲಲ್ಲಿ ನಿಂತಿರುವ ಎಲ್ಲಾ ದೈವಭಕ್ತರ ದರ್ಶನವೇ ಆಗದು.
ಹೀಗೇ ನಾವು ಹಣವನ್ನು ಸಂಪಾದನೆ ಮಾಡುವಾಗಲೂ ಸ್ವಧರ್ಮ ಸತ್ಕರ್ಮ, ಸ್ವಾಭಿಮಾನ ಸ್ವಾವಲಂಬನೆ ಯ ಕಡೆಗೆ ಗಮನಹರಿಸಿದರೆ ಒಂದೊಂದು ಮೆಟ್ಟಿಲು ಹತ್ತಿ ಹೋಗೋದು ಕಷ್ಟವೆನಿಸಿದರೂ ಗುರಿ ತಲುಪಬಹುದು. ಆದರೆ ಅವಸರದಲ್ಲಿ ಅಡ್ಡದಾರಿಹಿಡಿದಷ್ಟೂ ಕೆಳಗಿಳಿಯೋದು ಸತ್ಯ.
ಎಷ್ಟು ಹಣ ಗಳಿಸಿದರೂ ಅದರ ಹಿಂದೆ ಯಾರಿದ್ದರು? ಯಾವ ಧರ್ಮ ವಿದೆ ಯಾವ ಸತ್ಯವಿದೆ ಎನ್ನುವ ಜ್ಞಾನ ಅಗತ್ಯವಿದೆ.
ಬಿಕ್ಷುಗಳಿಗೂ ಬಿಕ್ಷುಕರಿಗೂ ವ್ಯತ್ಯಾಸವಿದೆ. ಬಿಕ್ಷುಗಳಲ್ಲಿ ಜ್ಞಾನದ ಹಸಿವಿದ್ದು ನಿಧಾನವಾಗಿ ದೈವತ್ವದೆಡೆಗೆ ಜೀವನ ನಡೆಸುವರು.ಆದರೆ ಬಿಕ್ಷುಕರ ಹೊಟ್ಟೆಯ ಹಸಿವಿನಲ್ಲಿ ಅನ್ನ ಸಿಕ್ಕರೆ ಅದೇ ಸ್ವರ್ಗ ಅದೇ ದೇವರು. ಮೆಟ್ಟಿಲಕೆಳಗೇ ಇರುವರು.ಆದರೂ ಇಬ್ಬರಲ್ಲೂ ಅಹಂಕಾರ ವಿರದು .
ಹೊಟ್ಟೆ ತುಂಬಿದ್ದರೂ ಹಸಿದವರ ಪಾಲನ್ನೂ ಕಸಿಯುವ ಭ್ರಷ್ಟರಿಗೆ ಮೂರ್ತಿ ಮಾತ್ರ ಕಾಣೋದು ಅದರೊಳಗೆ ಅಡಗಿರುವ ದೈವಶಕ್ತಿ ಕಾಣೋದಿಲ್ಲ.ಹೀಗಾಗಿ ಅಡ್ಡದಾರಿ ಹಿಡಿದು ಮೇಲಕ್ಕೆ ಹೋಗೋರು ಹೆಚ್ಚಾಗಿ ದೇವರನ್ನು ಬೇಡೋದು ಅಧಿಕಾರ ಹಣವನ್ನೇ. ಇದರಿಂದಾಗಿ ಅಜ್ಞಾನ ಬೆಳೆದು ಅಹಂಕಾರ ಸ್ವಾರ್ಥ ಆವರಿಸಿ ಅಸುರಶಕ್ತಿಯ. ವಶವಾಗಿರುವುದು ಜೀವಾತ್ಮ.
ಇವರಿಗೆ ಸಹಕಾರ ಕೊಟ್ಟವರು ಅಸುರರ ಗುಲಾಮರು.
No comments:
Post a Comment