ವಿದ್ಯೆ ಹಾಗು ಜ್ಞಾನ ಒಂದೇ ನಾಣ್ಯದ ಎರಡು ಮುಖವಾಗಿದೆ. ವಿದ್ಯೆ ಕಲಿತೂ ಜ್ಞಾನವಿಲ್ಲವಾದರೆ ಅಥವಾ ಜ್ಞಾನವಿದ್ದೂ ವಿದ್ಯೆ ಇಲ್ಲವಾದರೆ ಜೀವನ ಅತಂತ್ರಸ್ಥಿತಿಗೆ ತಲುಪಬಹುದು.ಹಾಗಾದರೆ ವಿದ್ಯೆ ಯಾವುದು ಜ್ಞಾನ ಎಲ್ಲಿದೆ ಎಂದರೆ ವಿದ್ಯೆ ಹೊರಗಿನಿಂದ ಕಲಿಸೋದು ಜ್ಞಾನ ಒಳಗೇ ಇರುವ ಶಕ್ತಿ. ಮಕ್ಕಳ ಆಸಕ್ತಿ ಪ್ರತಿಭೆ ಜ್ಞಾನ ಗುರುತಿಸಿ ವಿದ್ಯೆ ಕಲಿಸೋದೇ ನಿಜವಾದ ಗುರು ಶಿಕ್ಷಕರ ಧರ್ಮ.
ಗುರುಪೂರ್ಣಿಮೆ ಬೇರೆ ಶಿಕ್ಷಕರ ದಿನಾಚರಣೆ ಬೇರೆ ಎಂದರೆ ಅರ್ಧ ಸತ್ಯವಷ್ಟೆ. ಗುರುವಿನ ಅಧ್ಯಾತ್ಮ ಶಕ್ತಿ ಶಿಕ್ಷಕರ ಭೌತಿಕ ಶಕ್ತಿಯ ನಡುವೆ ಅಂತರ ಬೆಳೆದರೆ ಸತ್ಯ ದೂರವಾಗುತ್ತಾ ಅಸತ್ಯ ಬೆಳೆಯುವುದು.
ಶಿಕ್ಷಣ ಜ್ಞಾನವನ್ನು ಹೆಚ್ಚಿಸುತ್ತದೆಂದರೆ ಅದೇ ಧರ್ಮ ಉಳಿಸುವ ಸಾಧನ. ಅಜ್ಞಾನವನ್ನು ದೂರಮಾಡುವುದೆ ಶಿಕ್ಷಣದ ಗುರಿ. ಗುರು ಅಜ್ಞಾನವನ್ನು ಹೋಗಲಾಡಿಸುವ ದೇವರು.
ಗುರು ಶಿಕ್ಷಕರ ದಿನಾಚರಣೆಯನ್ನು ವೈಭೋಗ ವೈಭವದಿಂದ ಆಚರಣೆ ಮಾಡುತ್ತಿರುವುದು ಶಿಷ್ಯರ ಧರ್ಮ ಕರ್ಮ.
ಆಚರಣೆ ಸತ್ವ ಸತ್ಯ ತತ್ವಯುತವಾಗಿದ್ದಷ್ಟೂ ಶಾಂತಿ ನೆಮ್ಮದಿಯಿಂದ ತೃಪ್ತಿ ಮುಕ್ತಿ ದೊರೆಯುವುದು.
ಎಲ್ಲಾ ಶಿಕ್ಷಕವೃಂದದವರಿಗೆ ಶಿಕ್ಷಕದಿನಾಚರಣೆಯ ಶುಭಾಶಯಗಳು. ಶಿಕ್ಷಕರಾಗೋದಕ್ಕೆ ಪುಣ್ಯ ಮಾಡಿರಬೇಕು.ಶಿಷ್ಯರನ್ನು ಸನ್ಮಾರ್ಗದಲ್ಲಿ ನಡೆಸೋವಷ್ಟು ಜ್ಞಾನ ಶಿಕ್ಷಕರಲ್ಲಿರಲು ದೈವಭಕ್ತಿ ಅಗತ್ಯವಿರಲೇಬೇಕು.
ನಮ್ಮ ಭಾರತೀಯ ಶಿಕ್ಷಣದ ಪ್ರಕಾರ ವಿದ್ಯೆ ಅವಿದ್ಯೆಯಾಗಬಾರದು.ಅಂದರೆನಾವೇನು ಕಲಿತಿರುವೆವೋ ಅದು ಸದ್ಬಳಕೆ ಆಗಬೇಕು. ದುರ್ಭಳಕೆ ಆಗುತ್ತಿದೆ ಎಂದರೆ ಅವಿದ್ಯೆಯಾಗಿದೆ ಎಂದರ್ಥ.
ಓದೋದೊಂದು ಮಾಡೋದೊಂದು ಹೇಳೋದೊಂದು ನಡೆಯೋದೊಂದು ಹೀಗೇ ಒಂದೇ ದಾರಿಯಲ್ಲಿ ನಡೆಸಲಾಗದ ವಿದ್ಯೆಯಿಂದ ಸಾಕಷ್ಟು ಸಮಸ್ಯೆಗಳು ಜನ್ಮಪಡೆದು ಜೀವನ ಅತಂತ್ರಸ್ಥಿತಿಗೆ ತಲುಪುವ ಬದಲಾಗಿ ಮೊದಲೇ ಮಕ್ಕಳ ಒಳಗೇ ಅಡಗಿರುವ ಜ್ಞಾನ ಅಥವಾ ಅರಿವಿಗೆ ಪೂರಕವಾದ ವಿದ್ಯೆ ಕಲಿಸಿ ಬೆಳೆಸಿದರೆ ಇದ್ದಲ್ಲೇ ಜ್ಞಾನ ಹೆಚ್ಚಾಗುತ್ತಾ ಗುರುಹಿರಿಯರಿಗೆ ಗೌರವ ಪ್ರೀತಿ ವಿಶ್ವಾಸ ತೋರಿಸುವ. ಮಹಾತ್ಮರಾಗಬಹುದು. ಎಲ್ಲಾ ಮಹಾತ್ಮರೆ.ಎಲ್ಲರೊಳಗೂ ಮಹಾತ್ಮರಿದ್ದಾರೆ.ಆದರೆ ಅವರಂತೆನಡೆಯಲಾಗದು ಶಿಕ್ಷಣ ಪಡೆದು ಹೊರಬಂದಿರೋದು ಭಾರತದ ಈ ಸ್ಥಿತಿಗೆ ಕಾರಣವೆಂದರೂ ತಪ್ಪು ಎನ್ನುವವರಿದ್ದಾರೆ. ಕಾಲಮಾನಕ್ಕೆ ತಕ್ಕಂತೆ ಜೀವನನಡೆಸಲೇಬೇಕು.ಆದರೆ ಜೀವಾತ್ಮನಿಗೆ ಶಾಂತಿ ತೃಪ್ತಿ ಮುಕ್ತಿ ಸಿಗೋದಕ್ಕೆ ಸತ್ತ್ವ ಯುತ ಜ್ಞಾನವೇಬೇಕು.ಇದಕ್ಕೆ ಪೂರಕವಾದ ಶಿಕ್ಷಣದ ಜೊತೆಗೆ ಗುರುವೂ ಸಿಗಬೇಕು.
ಇದೇ ನಮ್ಮ ಪುಣ್ಯ.
ನಾನೇ ದೇವರಾಗಲು ಸತ್ಯ ಸತ್ವ ತತ್ವವನರಿತು ನಡೆಯಬೇಕು.
ದೇವರೇ ನಾನಾಗಲು ದೇವರನ್ನು ಬೇಡಬೇಕು.
ಶಿಕ್ಷೆ ನೀಡುವ ಕ್ಷಣ ಶಿಕ್ಷಣವಾಗಿತ್ತು.ಅದು ಶಿಷ್ಯನ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿತ್ತು. ನಕಾರಾತ್ಮಕ ಶಕ್ತಿ ಎಂದರೆ ದುಷ್ಟಗುಣಗಳಾಗಿತ್ತು. ಇಂದು ವಿದ್ಯಾವಂತರ ಲ್ಲಿ ದುಷ್ಟಗುಣಗಳಿದ್ದರೂ ಶಿಕ್ಷಕರಾಗಬಹುದು. ಹಿಂದೆ ಇದಕ್ಕೆ ಅವಕಾಶವಿರಲಿಲ್ಲ.ಕಾರಣ ಸ್ವಯಂ ಪ್ರಕಾಶಕರಾದವರಷ್ಟೆ ಗುರುಗಳಾಗಿ ಗುರುಕುಲ ನಡೆಸಿದ್ದರು. ಕಾಲ ಬದಲಾದಂತೆ ಜ್ಞಾನವೂ ಬದಲಾಗುತ್ತದೆ.ಆದರೆ ಸತ್ಯ ಒಂದೇ ಇರುತ್ತದೆ.ಅದೇ ಜನನ ಮರಣದ ನಡುವಿರುವಜೀವನದ ಉದ್ದೇಶ ಜೀವನ್ಮುಕ್ತಿ ಪಡೆಯೋದು.ಇದು ಕಷ್ಟ ಹಾಗಾಗಿ ನಮಗಿಷ್ಟ ಬಂದಂತೆ ಶಿಕ್ಷಣ ಪಡೆದು ನಡೆಯುವ ಸ್ವಾತಂತ್ರ್ಯ ವಿದೆ. ಇದು ಸ್ವೇಚ್ಚಾಚಾರವಾಗದಂತೆ ನೋಡಿಕೊಂಡು ನಡೆಸೋದೆ ಶಿಕ್ಷಕರ ಧರ್ಮ ವಾಗಿದೆ.
ಸತ್ಯ ಕಠೋರವಾಗೋದಕ್ಕೆ ಕಾರಣವೇ ಸ್ವತಂತ್ರ ವನ್ನು ಸ್ವೇಚ್ಚಾಚಾರವಾಗಿ ಬಳಸೋದು. ಭಾರತೀಯರಿಗೆ ಇಂದು ಸ್ವತಂತ್ರ ಸಿಕ್ಕಿದೆ ಎಂದರೆ ಅದು ನಮ್ಮ ಹಿಂದಿನ ಮಹಾತ್ಮರ ಜ್ಞಾನದಿಂದ ದೊರೆತಿದೆಯೇ ಹೊರತು ವಿದ್ಯೆಯಿಂದಲ್ಲ.
ದೇಶವನ್ನು ವಿದೇಶ ಮಾಡೋದು ಸುಲಭ. ಆದರೆ ವಿದೇಶವನ್ನು ತಿರುಗಿ ಸ್ವದೇಶಗೊಳಿಸಿಕೊಳ್ಳುವುದು ಕಷ್ಟ.
ಪರಕೀಯರ ವಶದಿಂದ ಬಿಡುಗಡೆ ಗೊಳಿಸಿದ ದೇಶಭಕ್ತರೆ ಸರಿಯಿರಲಿಲ್ಲವೆನ್ನುವ ಮಟ್ಟಿಗೆ ವಿದೇಶಿ ಶಿಕ್ಷಣ ಬೆಳೆದಿದೆ ಎಂದರೆ ಹಣಕ್ಕಾಗಿ ಶಿಕ್ಷಣ ಪಡೆದರೂ ಹಣವನ್ನು ಸದ್ಬಳಕೆ ಮಾಡಿಕೊಂಡು ದೇಶದ ಋಣ ತೀರಿಸುವಜ್ಞಾನವಿಲ್ಲವಾದರೆ ಅವಿದ್ಯೆ ಎನ್ನುವರು.
ಬ್ರಹ್ಮಜ್ಞಾನ ಎಂದರೆ ಬ್ರಹ್ಮನ ಅರಿವಿನಲ್ಲಿರೋದು. ಸೃಷ್ಟಿ ಯ ರಹಸ್ಯವರಿತು ಜೀವನನಡೆಸೋದು. ಇಂದಿನ ಶಿಕ್ಷಣ ಯಾವ ದಿಕ್ಕಿನಲ್ಲಿದೆ?
ಆತ್ಮಾವಲೋಕನ ಧಾರ್ಮಿಕ ವರ್ಗ ಮಾಡಿಕೊಳ್ಳುವುದು ಅಗತ್ಯವಿದೆ. ಇಂದು ನಿಜವಾದ ಸತ್ಯ ಧರ್ಮ ಕ್ಕೆ ಬೆಲೆಯಿಲ್ಲ ಎನ್ನುವ ಕಾರಣಕ್ಕಾಗಿ ಅಧರ್ಮ ಅಸತ್ಯಕ್ಕೆ ಸಹಕಾರ ಕೊಟ್ಟು ಅನ್ಯಾಯ ಬೆಳೆದರೂ ನಮಗೇನೂ ಸಂಬಂಧ ವಿಲ್ಲ ಎನ್ನುವ ಪ್ರಜೆಗಳಿಗೆ ಜ್ಞಾನದ ಶಿಕ್ಷಣ ಕೊಟ್ಟು ಧರ್ಮ ಉಳಿಸುವ ಕೆಲಸ ಮಾಡಬೇಕಾದವರೆ ಹಿಂದುಳಿದು ರಾಜಕೀಯ ನಡೆಸಿದರೆ ಬೇಲಿಯೇ ಎದ್ದು ಹೊಲಮೇಯ್ದಂತೆ.
ಕಲಿಗಾಲದ ಪ್ರಭಾವ ಕಲಿಕೆಯೇ ದಾರಿತಪ್ಪಿರುವಾಗ ಯಾರು ಏನು ಮಾಡಲಾಗದ ಪರಿಸ್ಥಿತಿ.ಬದಲಾವಣೆ ಒಳಗಿನಿಂದ ಆದರೆ ನಿಧಾನವಾಗಿಯಾದರೂ ಜ್ಞಾನೋದಯವಾಗುತ್ತದೆ.
ಜ್ಞಾನಿಗಳ ದೇಶ ಯೋಗಿಗಳದೇಶ. ಭೋಗಕ್ಕಾಗಿ ಹಣದ ಹಿಂದೆ ನಡೆದು ರೋಗಿಗಳ ದೇಶವಾಗಿದೆ ಎಂದರೆ ಇದರ ಮೂಲ ಕಾರಣವೇ ಶಿಕ್ಷಣದ ವಿಷಯ. ವಿಷಯದಲ್ಲೇ ವಿಷ ಇದ್ದರೆ ಅಮೃತಜ್ಞಾನ ಕಾಣೋದಿಲ್ಲ.
ಕ್ಷಮಿಸಿ ಶಿಕ್ಷಣದ ವಿಚಾರದಲ್ಲಿ ಸಣ್ಣ ವಯಸ್ಸಿನಿಂದಲೇ ನನ್ನ ಮನಸ್ಸಿನಲ್ಲಿ ಏಳುತ್ತಿದ್ದ ಪ್ರಶ್ನೆ ಇದರಲ್ಲೇನಿದೆ? ಸತ್ಯ ಎಲ್ಲಿದೆ? ಇದರಿಂದ ಸಂತೋಷ ಸಿಗುವುದೆ? ಹುಡುಕಿದರೂ ಅತೃಪ್ತಿ ಅಸಂತೋಷ ಹೆಚ್ಚಾದಂತೆಲ್ಲಾ ಎಲ್ಲಾ ಓದುವುದನ್ನು ನಾವೂ ಓದಲೇಬೇಕೆಂದು ಮುಂದೆ ಬಂದಾಗಲೇ ಒಳಗೇ ಇದ್ದ ಸತ್ಯದ ಅರಿವಾಗಿದ್ದು. ಅಂದರೆ ಒಳಗಿದ್ದ ಸತ್ಯದ ಜೊತೆಗೆ ಹೊರಗಿನ ವಿದ್ಯೆ ಕೂಡಿದಾಗಲೇ ಜ್ಞಾನಬರೋದೆಂದರ್ಥ.
ಮಕ್ಕಳು ಮುಗ್ದರು ಪೋಷಕರು ಅರಿತವರು. ತಮ್ಮ ಅರಿವನ್ನು ಮಕ್ಕಳ ತಲೆಗೆ ತುಂಬುದ ಮೊದಲು ಅದರ ಅಗತ್ಯ ಸಣ್ಣ ವಯಸ್ಸಿಗೆ ಬೇಕೆ ಬೇಡವೆ ಅಥವಾ ಅವರಲ್ಲಿ ಅಡಗಿರುವ ಜ್ಞಾನಕ್ಕೂ ಇದಕ್ಕೂ ಹೊಂದಿಕೆಯಾಗುವುದೆ?ಇದರಿಂದಾಗಿ ಸ್ವತಂತ್ರ ಜ್ಞಾನ ಬರುವುದೆ ಇಲ್ಲವೆ? ಇನ್ನೂ ಅನೇಕ ವಿಚಾರದಬಗ್ಗೆ ಗಮನಹರಿಸಿದರೆ ನಾವು ತುಂಬುವ ಎಷ್ಟೋ ಹೊರಗಿನ ವಿಷಯಗಳು ಜೀವನಕ್ಕೆ ಮಾರಕವಾಗಿರುತ್ತದೆ. ಸದ್ಗುರುಗಳ ವಿಚಾರದಲ್ಲಿ ಸತ್ಯ ಧರ್ಮ ಇರುತ್ತದೆ.ಹಾಗಾಗಿ ಹಿಂದೆಮೂಲದ ಶಿಕ್ಷಣವು ಸದ್ಗುರುಗಳ ಹತ್ತಿರ ಕಲಿತುನಂತರದಲ್ಲಿ ಜೀವನ ನಡೆಸೋ ವಿದ್ಯೆ ಕಲಿಸುತ್ತಿದ್ದರು. ಈಗ ಹಿಂದಿರುಗಲಾಗದೆ ಮುಂದೆ ಹೋದವರನ್ನು ತೋರಿಸಿ ಮಕ್ಕಳನ್ನುಮನೆಯಿಂದ ಹೊರಗೆಳೆದು ಹಾಕಿ ಕೊನೆಯಲ್ಲಿ ಮಕ್ಕಳು ಸರಿಯಿಲ್ಲ ಎನ್ನುವ ಬದಲು ನಾವು ಕೊಟ್ಟಿರುವ ಶಿಕ್ಷಣದಲ್ಲಿ ಸಂಸ್ಕಾರವಿರಲಿಲ್ಲ ಎಂದರೆ ಸರಿಯಾಗಬಹುದು. ಈಗಲಾದರೂ ಇದರಬಗ್ಗೆ ಚರ್ಚೆ ಆದರೆ ಬದಲಾವಣೆ ಸಾಧ್ಯವಿದೆ.
ಕುಣಿಯಬಾರದವ ನೆಲಡೊಂಕು ಎಂದರೆ ಸರಿಯಲ್ಲ.
ಒಟ್ಟಿನಲ್ಲಿ ವಿದ್ಯೆ ಅಗತ್ಯವಿದೆ ಅದರ ಜೊತೆಗೆ ಸತ್ಯಜ್ಞಾನ ಅತ್ಯಗತ್ಯವಾಗಿದೆ.
ಎಲ್ಲರಿಗೂ ಶೇರ್ ಮಾಡಿ. ಇಲ್ಲಿ ಯಾರದ್ದೋ ತಪ್ಪು ಎಂದಿಲ್ಲ. ನಮ್ಮ ಒಳಗಿದ್ದ ಜ್ಞಾನವನ್ನು ಬೆಳೆಸದ ಹೊರಗಿನ ಶಿಕ್ಷಣದಿಂದ ಏನೇ ಸಾಧಿಸಿದರೂ ಅದು ಕ್ಷಣಿಕವಷ್ಟೆ ಎನ್ನುತ್ತದೆ ಅಧ್ಯಾತ್ಮ.
No comments:
Post a Comment