ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, September 14, 2024

ದೇವಸ್ಥಾನದ ಹಣ ದುರ್ಭಳಕೆ ಆಗುತ್ತಿದೆಯೆ?

ದೇಗುಲಗಳ ಹಣ ದುರ್ಭಳಕೆ ಆಗುತ್ತಿದೆ ಎನ್ನುವುದು ವಾದ ವಿವಾದದ ಹಂತಕ್ಕೆ ಬಂದಿದೆ. ನಿಜವಾಗಿಯೂ ಇದು ಸತ್ಯವಾಗಿದ್ದರೆಬನ ದೇಗುಲಗಳ ಹುಂಡಿಗೆ ಹಾಕುವ ಹಣ ಯಾರ ಆಸ್ತಿಯಾಗಿದೆ? ದೇವರದ್ದೋ ಭಕ್ತರದ್ದೋ ಎನ್ನುವ ಪ್ರಶ್ನೆ ಬಂದಾಗ ದೇವಸ್ಥಾನಕ್ಕೆ ಭಕ್ತರು ಹೋಗಲು ಕಾರಣ ಸಮಸ್ಯೆ ಯಿಂದಮುಕ್ತಿ  ಪಡೆಯಲು. ಆದರೆ ಅದೇ  ದೊಡ್ಡ ಸಮಸ್ಯೆಗೆ  ಕಾರಣವಾಗುವುದಾದರೆ  ದೇವರ ಹಣ ದುರ್ಭಳಕೆ ಆಗುತ್ತಿದೆ ಎಂದರ್ಥ.
ಯಾರ ವಶದಲ್ಲಿದೆ ದೇವಸ್ಥಾನ ಎಂದರೆ ಹಲವು ಸರ್ಕಾರದ ವಶದಲ್ಲಿದ್ದರೆ ಉಳಿದವು  ಖಾಸಗಿಯವರ ವಶದಲ್ಲಿದೆ. ಎಲ್ಲಾ ಕಡೆ ದೇವರಿರುವುದು  ಸತ್ಯವಾಗಿದ್ದರೆ ಖಾಸಗಿ ದೇಗುಲಗಳ ಹಣ ಸದ್ಭಳಕೆ ಆಗಿದೆಯೆ ಎನ್ನುವ ಪ್ರಶ್ನೆಯೂ ಬರುತ್ತದೆ.
ಕೆಲವು ಸ್ವಚ್ಚವಾಗಿದ್ದರೆ ಹಲವು ಅಶುದ್ದಿಯಾಗಿದೆ.ಎಲ್ಲೆಂದರಲ್ಲಿ ಹಾಕುವ ಹೂ ಅರಿಶಿನ‌ಕುಂಕುಮ ಎಲೆ..ದೇವಸ್ಥಾನದ ಪವಿತ್ರತೆಯನ್ನು ಹಾಳು ಮಾಡುತ್ತಿವೆ.ಆದರೆ  ಅದಕ್ಕೆ ಸರಿಯಾದ ಜನ ಸಿಗುತ್ತಿಲ್ಲವೆನ್ನುವುದು ಉತ್ತರ. 
ನಿಜವಾದ ಭಕ್ತ ದೇವಸ್ಥಾನವನ್ನು ಸ್ವಚ್ಚಗೊಳಿಸುವವನಾಗಿರುವಾಗ ಅವನಿಗೆ ಸರಿಯಾದ ಹಣ ಕೊಡದ ಕಾರಣ  ಜನ ಸಿಗುತ್ತಿಲ್ಲ.ಇದು ಪ್ರತಿಯೊಂದು ಕ್ಷೇತ್ರದ ಕಥೆ.ಕೆಳಗಿದ್ದು ಸಹಕಾರ ನೀಡುವವರಿಗೆ ಮೇಲಿನವರಲ್ಲಿ ಗೌರವವಿಲ್ಲ ಹಣವೂ ಕೊಡೋದಿಲ್ಲ ಬದುಕೋದು ಕಷ್ಟ. 
ಎಲ್ಲಿನೋಡಿದರೂ ಅಶಾಂತಿ,ಅನ್ಯಾಯ ಅಧರ್ಮ ಎದ್ದು ನಿಂತಿದೆ ಎಂದರೆ ದೇವರಿರೋದು ಹಣದಲ್ಲಲ್ಲ ಧರ್ಮ ದಲ್ಲಿ ಸತ್ಯದಲ್ಲಿ ಎಂದರ್ಥ.
ಹಾಗಾಗಿ ನಮ್ಮ ನಮ್ಮ ‌ಮನೆಯ ಶಾಂತಿ ಸುರಕ್ಷೆ ಸಮಾಧಾನಕ್ಕೆ ನಮ್ಮೊಳಗೇ ಇರುವದೈವತ್ವ ಅರಿಯೋದು  ಅಗತ್ಯ. ನಂತರವೇ ಹೊರಗಿನ ದೇಗುಲಗಳು ಸ್ವಚ್ಚವಾಗಲು ಸಾಧ್ಯ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಆದಾಗ ಹಣದ ಮೂಲ ಭ್ರಷ್ಟರದ್ದಾಗಿದ್ದರೆ ಅಲ್ಲಿ ಯಲ್ಲಮ್ಮ ನ ಎಲ್ಲಿ ಎಂದು ಹುಡುಕಬೇಕಷ್ಟೆ.
ಹುಂಡಿಯ ಹಣ ದುರ್ಭಳಕೆ ಆಗುತ್ತದೆಂದು ತಟ್ಟೆಗೆ ಹಾಕಿದರೆ ಸದ್ಬಳಕೆ ಆಗೋದಾದರೆ ಹಾಕಿ.ಅಲ್ಲಿಯೂ ದೇವರು ಕೊಟ್ಟರೂ ಪೂಜಾರಿಬಿಡದಿದ್ದರೆ  ಹಣಸಂಪಾದನೆಯ ಮಾರ್ಗ ಬದಲಿಸಿ  ಶುದ್ದವಾಗಿಸಿಕೊಂಡರೆ ಇದ್ದಲ್ಲಿಯೇ ದೇವಸ್ಥಾನ. ದೇಹವೇ ದೇಗುಲ ಎಂದಂತೆ ಒಳಗಿರುವ ಎಲ್ಲಾ ಅಂಗಾಂಗಗಳ ಶಕ್ತಿ  ಸತ್ವಯುತವಾದರೆ  ದೈವತ್ವ ಒಳಗೆ ಇರುತ್ತದೆ. ಆಗ ದೇವಸ್ಥಾನದ ಸ್ವಚ್ಚತೆಗೆ  ಉತ್ತಮ ಜ್ಞಾನದ ದಾಸೋಹ  ಮಾಡುವ ಶಿಕ್ಷಣಕೇಂದ್ರವಾಗಿಸಬಹುದು.
ಮಕ್ಕಳ ಜ್ಞಾನವೂ ಬೆಳೆಯುವ ಜೊತೆಗೆ ಪೋಷಕರ ಹಣವೂ ಶಿಕ್ಷಣಕ್ಕೆ ಬಳಸಬಹುದಲ್ಲವೆ?
 ಎಷ್ಟು ಮಠ ಮಂದಿರಗಳು ಹಣವನ್ನು ಶಿಕ್ಷಣಕ್ಕೆ ಬಳಸಿದ್ದಾರೆ?
ತನ್ನ ತಾನರಿತು ಬಾಳುವ ಶಿಕ್ಷಣವೇ ನಿಜವಾದ ಯೋಗ ಶಿಕ್ಷಣ.ಯೋಗ ಮಾಡೋರೆಲ್ಲ  ಯೋಗಿಗಳಾಗಿಲ್ಲ ಆದರೂ ಉತ್ತಮ ಆರೋಗ್ಯವಂತರು.ಆರೋಗ್ಯವಂತರಲ್ಲಿ ದೇವರಿರುವರೆ  ಅಥವಾ ದೇವರೇ ಆಗಿರುವರೆ? ನಮ್ಮ ಆರು ಗುಣಗಳಾಗಿರುವ ಕಾಮಕ್ರೋಧ ಲೋಭ ಮೋಹ ಮಧ ಮತ್ಸರವೇ ಅತಿಯಾದರೆ ರೋಗ. ಇದು ಒಳಗೇ ಇದ್ದು ನಡೆಸುತ್ತದೆ. ದೇವರ ಹೆಸರಿನಲ್ಲಿ ಇದನ್ನು ಬಳಸಿದರೆ  ಮುಗಿಯಿತು ಕಥೆ. 
   ಎಲ್ಲ ಇರೋದು ದೇಶದೊಳಗೇ,  ಹಣವೂ ದೇಶದ‌ಜನರದ್ದೆ ದೇವರೂ ದೇಶವಾಸಿಗಳೇ  ಶಿಕ್ಷಣ ಮಾತ್ರ ವಿದೇಶಿಗಳ ವಶ  ಹೀಗಾದರೆ ಅನ್ಯರನ್ನು ದ್ವೇಷ ಮಾಡಿ ಉಪಯೋಗವಿಲ್ಲ.
ಅವರು ಅವರ ಶಿಕ್ಷಣ ಬಿಟ್ಟು ಧರ್ಮ ಬಿಟ್ಟು ದೇವರನ್ನು ಬಿಟ್ಟು ನಡೆದಿಲ್ಲ.ಆದರೂ ಅವರು  ತಮ್ಮ ಧರ್ಮ  ಉಳಿಸಲು   ಹಿಂದೂ ಧರ್ಮ ದವರ ಸಹಕಾರ ಪಡೆದು ದೇಶದೊಳಗಿದ್ದು ಜನರ ದಾರಿತಪ್ಪಿಸಲು ಹಣ ದುರ್ಭಳಕೆ ಮಾಡಿಕೊಂಡು   ಶಿಕ್ಷಣವನ್ನು  ವಶಪಡಿಸಿಕೊಂಡು ದೇಶ ಆಳಿರೋದು  ದೇಶವಿರೋಧಿ ಕರ್ಮ. ಹೀಗಾಗಿ ಯಾರಿಗೂ ನೆಮ್ಮದಿತೃಪ್ತಿ ಸಿಗದೆ ಅತಂತ್ರಸ್ಥಿತಿಗೆ ಜೀವನ ತಲುಪಿದೆ. 
ಹಣವಿದ್ದರೆ ಯಶಸ್ಸು ಎನ್ನುವ ಭ್ರಮೆಯಲ್ಲಿರುವ ಮಾನವ ಜ್ಞಾನವಿಲ್ಲದೆ  ಹಣವನ್ನು ದುರ್ಭಳಕೆ ಮಾಡಿಕೊಂಡರೆ ಅದಕ್ಕೆ ತಕ್ಕಂತೆ  ಶಿಕ್ಷೆಯಿದೆ.
ಹಿಂದೂ ದೇವತೆಗಳ ಹಣವನ್ನು ಅನ್ಯಧರ್ಮ ದವರು ಬಳಸಿದರೆ ಅಧರ್ಮ ಹಾಗೆಯೇ ಅನ್ಯರ ಹಣವನ್ನು ಹಿಂದೂಗಳು  ಪಡೆದರೂ ಅಧರ್ಮ. ಮತಾಂತರಗಳಿಗೆ ಸಾಕಷ್ಟು ಹಣವನ್ನು ಬಳಸಲಾಗುತ್ತಿದೆ ಎನ್ನುವುದು ಸತ್ಯ ಹಾಗಾದರೆ ಆ ಹಣದ ಮೂಲ ನಮ್ಮದೇ ಅಥವಾ ಪರರದ್ದೆ? ಮತಾಂತರಕ್ಕೆ ಮಸೀದಿ ಚರ್ಚ್ ಗಳಿಗೆ ವಿದೇಶದಿಂದ ಸಾಕಷ್ಟು ಹಣಬರುತ್ತಿದೆ ಎಂದರೆ ವಿದೇಶದಲ್ಲಿರುವ ಹಿಂದೂಗಳ ಹಣವಂತೂ ಇರೋದಿಲ್ಲ. ಹಿಂದೂಗಳೇ ಅವರ ಕೈಕೆಳಗೆ ದುಡಿದಿರುವಾಗ ಅನ್ಯರ ಹಣವೇ ಬಳಕೆಯಾಗಿದೆ ಎಂದರ್ಥ. ಹೀಗಾಗಿ ದೈವಶಕ್ತಿಯ ಹೆಸರಿನಲ್ಲಿ ವ್ಯವಹಾರ ಮಿತಿಮೀರಿ  ಜನರನ್ನು ದಾರಿತಪ್ಪಿಸುವ‌ಕೆಲಸ ಜೋರಾಗಿದೆ.
ಇದನ್ನು ತಡೆಯಲು ಇದ್ದ ಒಂದೇ ‌ಮಾರ್ಗ ವೆಂದರೆ ನಮ್ಮವರಿಗೆ ಸರಿಯಾದ ಸಂಸ್ಕಾರದ ಶಿಕ್ಷಣ ಕೊಟ್ಟು ಸತ್ಯ ಯಾವುದು ಮಿಥ್ಯ ಯಾವುದೆನ್ನುವ ಅರಿವುಮೂಡಿಸುವುದಾಗಿತ್ತು ಆಗಿದೆ. ಈಗಲೂ ಎಷ್ಟೋ ಮಠ ಮಂದಿರ  ಶ್ರೀಮಂತ ವಾಗಿದೆ. ಆದರೆ ಅದರ ಪಕ್ಕದಲ್ಲಿ ಇರುವ ಸಣ್ಣ ದೇವಸ್ಥಾನಕ್ಕೆ ಸಹಕಾರ ಕೊಡುತ್ತಿಲ್ಲ ಆ ಸಣ್ಣ ದೇವಸ್ಥಾನದವರು ನಡೆಸಲಾಗದೆ ಸರ್ಕಾರದ ವಶವಾಗಿ ಇದ್ದ ಅಲ್ಪ ಶಕ್ತಿಯನ್ನು ಕಳೆದುಕೊಂಡು  ತಮ್ಮ ‌ಬದುಕನ್ನು ನಡೆಸುವ ಸ್ಥಿತಿಗೆ ಬರುತ್ತಿದ್ದಾರೆಂದರೆ ನಮ್ಮಲ್ಲಿ ದೇವಸ್ಥಾನಕ್ಕೆ ಹಾಕಲು ಹಣವಿದೆ ನಮ್ಮವರ ಸಮಸ್ಯೆಗೆ ಪರಿಹಾರ ಕೊಡಲು ಜ್ಞಾನವಿಲ್ಲವಾಗಿದೆ. ಇಂದಿನ ಜೀವನ ಮುಂದಿನ ಜನ್ಮವನ್ನು ನಿರ್ಧಾರ ಮಾಡುತ್ತದೆ. ಅತಿಯಾದ ಶ್ರೀಮಂತ ‌ಬಡವನಾಗಬಹುದು ಅತಿಯಾದ ಬಡವ ಶ್ರೀಮಂತ ನಾಗಬಹುದು. ಇವೆರಡರ ನಡುವಿರುವ ಮಧ್ಯವರ್ತಿ ಬಿಕ್ಷುಕನಾಗಲೂಬಹುದು ಅಥವಾ ಜ್ಞಾನವುಳ್ಳ ಬಿಕ್ಷುವಾಗಬಹುದು. ನಮ್ಮ ಹಣ ಸ್ವಚ್ಚವಾಗಿದ್ದರೆ ಸುಜ್ಞಾನ.ಭ್ರಷ್ಟಚಾರದಲ್ಲಿದ್ದರೆ ಅಜ್ಞಾನ.
ದೇವರಿಗೆ ಗುಡಿಗೋಪುರ ಕಟ್ಟಲು ಹಣ ಬೇಕು.ಅದೇ ನಮ್ಮ ದೇಹವನ್ನೇ ದೇಗುಲವಾಗಿಸಿಕೊಳ್ಳಲು ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಗುಣಜ್ಞಾನವಿರಬೇಕೆನ್ನುವ ಮಹಾತ್ಮರನ್ನು ಅರ್ಥ ಮಾಡಿಕೊಂಡರೆ ಅವರು ದೇವರನ್ನು ದೇವಸ್ಥಾನದಲ್ಲಿ ‌ಮಾತ್ರ ಕಂಡಿರಲಿಲ್ಲ. ದೇವಸ್ಥಾನದ ಪವಿತ್ರತೆ ಉಳಿಯೋದು ಅಲ್ಲಿರುವ ಜ್ಞಾನದಿಂದ ಹೀಗಾಗಿ ಹಾಳಾಗಿರುವ ಶಿಕ್ಷಣವನ್ನು ಸರಿಪಡಿಸುವ ಶಿಕ್ಷಣ ಕೇಂದ್ರ ದೇವಸ್ಥಾನದ ಮುಖ್ಯಭಾಗವಾದರೆ  ಪೋಷಕರ ಹಣದ ಜೊತೆಗೆ ಮಕ್ಕಳೂ ಸಜ್ಜನರರಾಗಬಹುದಿತ್ತು. ಈ ವಿಚಾರ
ಮೊದಲಿನಿಂದಲೂ ಬರವಣಿಗೆಯ ಮೂಲಕ ಹೊರಹಾಕಿದ್ದರೂ ಈವರೆಗೆ   ಹಿಂದೂಗಳು ಎಚ್ಚರವಾಗದೆ ದೇವಸ್ಥಾನದ ಹಣದ ಬಗ್ಗೆ ಹೊರಗೆ ಹೋರಾಟ ನಡೆಸಿದರೆ ಅನ್ಯರಿಗೆ ಇನ್ನಷ್ಟು ಶಕ್ತಿ ಬರುತ್ತದೆ.  ಶಾಂತಿಯಿಂದ ಸತ್ಯ ತಿಳಿಯಬೇಕು ಕ್ರಾಂತಿ ಯ ಮನಸ್ಸಿಗೆ ಅರ್ಥ ವಾಗದು.

ಅಸುರರ ಸಂಹಾರಕ್ಕೆ ಕ್ರಾಂತಿ ಅಗತ್ಯವಿದೆ.   ಶಿಕ್ಷಣದಾಸೋಹಕ್ಕೆ ಹಣ ಬಳಕೆಯಾಗುವಾಗ ಶಿಕ್ಷಣದ ವಿಷಯ ಸತ್ವ ಸತ್ಯ ತತ್ವದಿಂದ ಕೂಡಿರಬೇಕು.ಅದೂ ಆಂಗ್ಲರ ವಶದಲ್ಲಿದ್ದರೆ  ತಡೆಯೋರಿಲ್ಲ.ತಲೆಗೆ ಹಾಕಿರುವ ವಿಷಯವೇ ನಮ್ಮದಲ್ಲದ ಮೇಲೆ ಆತ್ಮನಿರ್ಭರ ಆಗಲು ಸಾಧ್ಯವಿಲ್ಲ.
ರಾಜಕೀಯದ ವಶಕ್ಕೆ ದೇವರನ್ನು ಬಿಟ್ಟರೆ ಆಗೋದೇ ಹೀಗೆ.ಭಕ್ತಿ ಆಂತರಿಕ ಶಕ್ತಿ. ಇದನ್ನು ಯೋಗದಿಂದ ಬೆಳೆಸುವ ಯೋಗ್ಯ ಶಿಕ್ಷಣವೇ ದೈವಶಕ್ತಿಯಾಗಿದೆ. ಇದಕ್ಕೆ ಹಣವನ್ನು ಬಳಸುವುದೇ  ದೇವಸ್ಥಾನದ ಗುರಿಯಾಗಿದೆ. ಭಾರತೀಯ ಶಿಕ್ಷಣ ಯಾವತ್ತೂ ಸ್ವತಂತ್ರ ಜ್ಞಾನದ ಕಡೆಗಿತ್ತು.ಮಕ್ಕಳ ಜ್ಞಾನ ಪ್ರತಿಭೆ ಆಸಕ್ತಿ ಗುರುತಿಸಿ ಕಲಿಸುವ ಶಿಕ್ಷಣದಿಂದ ಶಿಷ್ಟರು ಬೆಳೆಯಬಹುದು. ಇದಕ್ಕೆ ವಿರುದ್ದ ಕಲಿಸಿದಷ್ಟೂ ಭ್ರಷ್ಟರೆ ಬೆಳೆಯೋದು.
ಕ್ಷಮಿಸಿ, ಸತ್ಯ ಕಠೋರವಾಗಲು ಕಾರಣ ಅದನ್ನು ತಡೆಹಿಡಿದ ರಾಜಕೀಯ ಬುದ್ದಿಯಾಗಿದೆ.ದೇವರು ರಾಜಕೀಯದಲ್ಲಿರುವರೆ? ದೇವಸ್ಥಾನಗಳು ರಾಜಕೀಯಕ್ಕೆ ಒಳಪಟ್ಟರೆ ಅರ್ಥ ವೇನು? ನಿಜವಾಗಿಯೂ ದೇವರು ಇರೋದೆಲ್ಲಿ?
ಯಾವ ಸರ್ಕಾರ ಬಂದರೂ ದೇವಸ್ಥಾನವನ್ನು ಬಿಡುಗಡೆ ಮಾಡಲಾಗಿಲ್ಲ.ಕಾರಣ ಅದರ ಸಂಪತ್ತು  ದೇಶದ ಸಂಪತ್ತು.
ಆದರೆ  ಅದನ್ನು ದುರ್ಭಳಕೆ ಮಾಡಿಕೊಂಡಷ್ಟೂ ದೇಶಕ್ಕೆ ಆಪತ್ತು. ಸತ್ಯ ನ್ಯಾಯ ಧರ್ಮ ನಿಷ್ಟೆ ಯಿಂದ ಹಣಗಳಿಸುವುದು ಕಷ್ಟ ಹೀಗಾಗಿ ಅಸತ್ಯ ಅನ್ಯಾಯ ಅಧರ್ಮ ಅನೀತಿಯ ಹಣವನ್ನು ದೇವರಿಗೆ ಅರ್ಪಿಸಿ ತಮ್ಮ ಪಾಪ ಕಳೆದುಕೊಳ್ಳುವವರಿಂದ  ದೇವಸ್ಥಾನದಲ್ಲಿ ದೇವರು ನೆಲೆಸುವರೆ ಅಸುರರೆ? ದಾಸಶರಣ ಸಂತ ಮಹಾತ್ಮರುಗಳ ತತ್ವಜ್ಞಾನ  ಏಕತೆ ಐಕ್ಯತೆ ಸಮಾನತೆಯ ಕಡೆಗಿತ್ತು. ಈಗ ತಂತ್ರವೇ ಮುಂದೆ ಹೋಗಿ  ಅನ್ಯರ ದಾಸರಾದವನ್ನು ಜನರೆ ಎತ್ತಿ ಏರಿಸಿದಾಗ  ಜನರೊಳಗಿದ್ದ ದೇವರು ಕಾಣೋದಿಲ್ಲ. 
ಒಟ್ಟಿನಲ್ಲಿ ದೇವರ ಹಣವನ್ನು  ದುರ್ಭಳಕೆ ಮಾಡಿಕೊಂಡರೆ ಮಾರಿಹಬ್ಬ. ಇಲ್ಲಿ ಪ್ರಜಾಪ್ರಭುತ್ವ ಇದೆಪ್ರಜೆಗಳೇ ದೇವರು ಎಂದಾಗ ಜನರ ಹಣ ದುರ್ಭಳಕೆ ಮಾಡಿಕೊಂಡರೆ  ಸಾಧನೆಯಲ್ಲ.
ಇದು ತಲೆತಲಾಂತರದವರೆಗೆ  ಹೋಗುವ ಪ್ರಾರಬ್ದಕರ್ಮ.
ಇದು ಎಲ್ಲಾ ಧರ್ಮ ದವರಿಗೂ ಅನ್ವಯಿಸುತ್ತದೆ. ವೈಭೋಗದ  ಆಚರಣೆಗೆ ಬದಲಾಗಿ ವೈಚಾರಿಕತೆಯಹಿಂದೆ ಇರುವ ವಿಜ್ಞಾನದ ಅರಿವಿದ್ದರೆ ಹಣವಿಲ್ಲದೆಯೂ ದೈವತ್ವ ಪಡೆಯಬಹುದು.
ದಾಸ ಶರಣ ಸಂತ ಮಹಾತ್ಮರು,ಭಕ್ತರು ಜ್ಞಾನಿಗಳ ಹೃದಯದಲ್ಲಿ  ಪರಮಾತ್ಮನಿದ್ದನು ಪರಮಾತ್ಮನ‌ಹೃದಯದಲ್ಲಿ ಲಕ್ಮಿ ಯಿರುವಳು ಅಂದರೆ ಮಹಾಲಕ್ಮಿ ಕೇವಲ ಹಣವಲ್ಲ ಜ್ಞಾನದೇವತೆಯಾಗಿ ಎಲ್ಲರ ಹೃದಯವಂತಿಕೆಯಲ್ಲಿರುವಾಗ
ಅವಳನ್ನು ಹೊರಗೆಳೆದು  ಆಳಲು ಹೋದರೆ  ಹೃದಯಹೀನ ಬಾಳಾಗುತ್ತದೆ.
ಎಷ್ಟು ಧನ ಸಂಪತ್ತು ಇದ್ದರೂ ನೆಮ್ಮದಿ ತೃಪ್ತಿ ಸಿಗದಿದ್ದರೆ ಅದು ಪರಮಾತ್ಮನಿಗೆ ಅರ್ಪಣೆ ಆಗಿಲ್ಲವೆಂದರ್ಥ.

ಹಾಗೆಯೇ ದೇಗುಲಗಳ ಹಣ ಸಂಪತ್ತು ದುರ್ಭಳಕೆ ಆಗುತ್ತಿದೆ ಎಂದರೆ ಅಲ್ಲಿ ಅಸುರ ಶಕ್ತಿ ಅಡಗಿದೆ ದೇವರಿಲ್ಲ ಎಂದರ್ಥ.
ಒಳಗೆ ಶುದ್ದಿ ಮಾಡದೆ ಹೊರಗೆ ಹೋರಾಡಿದರೆ ಉಪಯೋಗವಿಲ್ಲ .
ಮನೆಯೊಳಗಿನ ಸಂಬಂಧ ಕ್ಕೆ ಬೆಲೆಕೊಡದೆ ಹೊರಗಿನ ಸಂಬಂಧ ಬೆಳೆಸಿದರೆ  ಹಣಕ್ಕಾಗಿ  ಜ್ಞಾನ ಕಳೆದುಕೊಂಡಂತೆ.
ಪ್ರತಿಯೊಂದು ಕ್ಷೇತ್ರದ ಸಮಸ್ಯೆ ಇರೋದೇ ಹಣದಲ್ಲಿ. ಇದರ ಮೂಲವರಿಯದೆ ಬಳಸಿದರೆ ದುರ್ಭಲತೆ ಹೆಚ್ಚುವುದು.
ಕಾಯಕವೇ ಕೈಲಾಸವೆಂದ ಶರಣರನ್ನರಿಯದೆ ಅವರ ಹೆಸರಿನಲ್ಲಿ  ವ್ಯವಹಾರಕ್ಕೆ ಇಳಿದುಹಣಮಾಡಿದರೂ‌ಜ್ಞಾನ ಬರದು. ಮಹಾತ್ಮರ ನಡೆನುಡಿ ದೇವರ ಗುಣಜ್ಞಾನ ಅರ್ಥ ಆಗಲು ಉತ್ತಮ ಸಂಸ್ಕಾರದ ಶಿಕ್ಷಣವಿರಬೇಕಷ್ಟೆ.
ಅದೇ ದಾರಿತಪ್ಪಿ ಅಡ್ಡದಾರಿಹಿಡಿದು   ಮಕ್ಕಳ ಜ್ಞಾನ ದುರ್ಭಳಕೆ ಆದರೆ ಸಮಸ್ಯೆ ಒಳಗೇ ಬೆಳೆದು ಹಣವನ್ನು ಹೇಗೆ ಬಳಸಬೇಕೆಂಬ ಅರಿವಿಲ್ಲದೆ  ಹೋಗುತ್ತದೆ ಜೀವ. ಇದರಲ್ಲಿ ತಪ್ಪು ಹುಡುಕುವ‌ಬದಲು ನಮ್ಮಲ್ಲಿ  ತಪ್ಪು ಹುಡುಕಿಕೊಂಡು ಸಂಪಾದನೆಯ ಮೂಲ ಸ್ವಚ್ಚ. ಜ್ಞಾನದಿಂದ ಆದರೆ  ದೇಹವೇ ದೇಗುಲ. ದೇಗುಲಗಳಲ್ಲಿ ದೇವರಿರುವರು. ದೇಗುಲದ ಹಣವೂ  ಸದ್ಬಳಕೆ ಆಗುತ್ತದೆ.
ಆಚಾರ ವಿಚಾರ ಪ್ರಚಾರವೆಲ್ಲವೂ ಹೊರಗಿದೆ ಆದರೆ ಒಳಗಿದ್ದ ಜ್ಞಾನದ ಸಂಸ್ಕಾರ ಮಾಡುವ ಶಿಕ್ಷಣವಿಲ್ಲದೆ ಭ್ರಷ್ಟಾಚಾರ ಬೆಳೆದಿದೆ. ಮೂಲ ಸ್ವಚ್ಚ ವಾದರೆ ಮೇಲಿನ ಹಂತಕ್ಕೆ ಏರಬಹುದು. ಎಲ್ಲಾ ಕಲಿಗಾಲದ ಮಹಿಮೆ. ಕಲಿಕೆಯ ಮಹಿಮೆ. ದೊಡ್ಡ ದೊಡ್ಡ ಬಂಗಲೆ ಕಟ್ಟಿದರೂ ಒಳಗಿರುವವರಲ್ಲಿ  ದೈವಜ್ಞಾನವಿಲ್ಲವಾದರೆ ಭೂತಬಂಗಲೆ. ಅದರೊಳಗೆ ಸೇರಿ ಕೆಲಸ ಮಾಡುವವರೂ ಹಾಗೇ  ಇರುವರು.ಇದು ದೇವಸ್ಥಾನ ದೇಗುಲ ಮಠ ಮಂದಿರಗಳಲ್ಲಿ ಆಗಬಾರದಷ್ಟೆ. ಸತ್ಯ ತತ್ವ ಸತ್ವ ಇರುವ ಕಡೆ  ದೇವರಿರುವರು.
ಹಾಗಾದರೆ ಇದು ಹೊರಗಿದೆಯೆ ಒಳಗೋ? ಸಂಶೋಧನೆ ಒಳಗಿನಿಂದ ನಡೆಸಲು ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸದ್ಬಳಕೆ ಮಾಡಲು ಸತ್ಯಜ್ಞಾನವಿರಬೇಕು.
ಸತ್ಯಜ್ಞಾನವು ಸತ್ಯದ ನಡೆ ನುಡಿಯೊಳಗಿರಬೇಕು, ಕಣ್ಣಿಗೆ ಕಾಣದ ಸತ್ಯ ಕಾಣುವ ಅಸತ್ಯದ ನಡುವೆ  ವ್ಯವಹಾರಿಕ ಸಂಬಂಧ ಹೆಚ್ಚಾದರೆ ಹಣವೇ ಸರ್ವಸ್ವ. ಹೀಗಾಗಿ ಜ್ಞಾನ ಕುಸಿದು ಹಣ ದುರ್ಭಳಕೆ ಆಗುತ್ತದೆ.
ಯಾವುದೇ ಧರ್ಮ ದವರಾದರೂ ಭೂಮಿಯ ಋಣತೀರಿಸಲು ಸತ್ಯ ಜ್ಞಾನ ಅಗತ್ಯವಿದೆ. ಎಲ್ಲಿಯವರೆಗೆ ಅಸತ್ಯ ಅನ್ಯಾಯ ಅಧರ್ಮ ದ ರಾಜಕೀಯಕ್ಕೆ ಸಹಕಾರ ಇರುವುದೋ ಅಲ್ಲಿಯವರೆಗೆ  ಸತ್ಯವಿದ್ದರೂ ಮರೆಯಾಗಿರುತ್ತದೆ.ಅಸತ್ಯ  ಒಮ್ಮೆ ಹೊರಬಂದಾಗಲೇ ಒಳಗಿದ್ದ ಸತ್ಯದರ್ಶನ. ಹೀಗಾಗಿ ಎಲ್ಲರ ಹೃದಯವಂತಿಕೆಯನ್ನು ಹಣದಿಂದ ಅಳೆಯಬಾರದು. ಹೃದಯದ ಕಸಿ ಮಾಡೋರು ಇದ್ದರೂ ಹೃದಯವಂತಿಕೆ ಬೆಳೆಸೋ ಶಿಕ್ಷಕರು  ಗುರುಗಳು  ಇಲ್ಲವಾದರೆ  ವ್ಯರ್ಥ.

No comments:

Post a Comment