ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, September 22, 2024

ಆಧ್ಯಾತ್ಮಿಕ ಚರ್ಚೆ ಭೌತಿಕ ವಾದ ಎರಡೂ ಒಂದೇ?

ಹಿಂದಿನ ಕಾಲದಲ್ಲಿ ಆಧ್ಯಾತ್ಮಿಕ ಚರ್ಚೆ ವಾದಗಳು  ಜ್ಞಾನಿಗಳ ನಡುವೆ ನೇರವಾಗಿ ನಡೆಯುತ್ತಿತ್ತು. ಇಂದು ಇದಕ್ಕೆ ಅವಕಾಶ ಕೇವಲ ಹೆಚ್ಚುಹಣ ಹೆಚ್ಚು ಓದಿದವರಿಗೆ ಹಾಗು ಅಧಿಕಾರ ಇದ್ದವರಿಗಷ್ಡೆ ಅವಕಾಶವಿರುವ‌ಕಾರಣ ಎಷ್ಟೋ ಸತ್ಯಗಳು ಸತ್ತು ಹೋಗುತ್ತಿದೆ. ಸತ್ಯ ಸಾಯೋದಿಲ್ಲವೆನ್ನುವುದೂ ಸತ್ಯ.
ಯಾವಾಗ ಅಸತ್ಯ ಮುಂದೆ ನೆಡೆಯುವುದೋ ಸತ್ಯ ಹಿಂದುಳಿಯುವುದು. ಹಿಂದುಳಿಯುವುದು ಎಂದರೆ ಒಳಗೇ ಇರುವುದೆಂದು. ಒಳಗೇ ಸತ್ಯ ಹಿಡಿದಿಟ್ಟುಕೊಂಡರೂ ಒಮ್ಮೆ ಸಾವು ಬಂದಾಗ  ಹೊರಬರಲೇಬೇಕಷ್ಟೆ.ಅದಕ್ಕೆ ಹೇಳೋದು ನಾನಿರುವಾಗ ದೇವರು ಕಾಣಲ್ಲವೆಂದು.ಸತ್ಯವೇ ದೇವರು. ಎಷ್ಟೋ ಮಹಾತ್ಮರುಗಳು ಭೂಮಿಯಲ್ಲಿದ್ದರೂ  ಸತ್ಯ ಕಾಣದು. ಸತ್ಯವೆನ್ನುವುದು ಒಂದೇ ಇರೋದರಿಂದ ಅದನ್ನು ಒಂದು  ಮಾಡೋದರ ಅಗತ್ಯವಿಲ್ಲ.ಎರಡು ಮೂರು.....ಇದ್ದರೆ ಜೋಡಿಸುವ‌ಕೆಲಸವಾಗುತ್ತದೆ.ಆದರೆ ಅದು ಒಂದೇ ಸತ್ಯದ ಕವಲುಗಳಷ್ಟೆ ಎನ್ನುವುದೆ ಸತ್ಯ.
ಒಂದು ತಾಯಿಗೆ ಅನೇಕ ಮಕ್ಕಳು ಇದ್ದರೂ ತಾಯಿ ಒಬ್ಬಳೆ ಹಾಗೆ ತಂದೆಯೂ ಒಬ್ಬನೆ. ಇವರಿಬ್ಬರೂ ದೇವಸ್ವರೂಪರು ಎಂದರೆ ಸತ್ಯ. ಇದನ್ನು  ಯಾರಾದರೂ ಅಸತ್ಯ ಎಂದರೆ ನಂಬುವ ಜನರಿದ್ದಾರೆ.ಕಾರಣ ಪರಮಾತ್ಮನು ಒಬ್ಬನೆ ಎನ್ನುವ ಮಹಾಸತ್ಯದ ಮುಂದೆ ಇದು‌ನಗಣ್ಯ. ಆದರೆ ಭೂಮಿಯಲ್ಲಿ ನಾನಿದ್ದೇನೆಂದರೆ ಇದರ‌ಮೂಲ ತಂದೆತಾಯಿಯಲ್ಲವೆ?
ಯಾರೋ ಪ್ರವಚನ ಮಾಡುವಾಗ ಕೇಳಿದ ಮಾತಿದು.ಪರಮಾತ್ಮ ನೊಬ್ಬನೆ ಸತ್ಯವೆಂದು ಆ ಪರಮಾತ್ಮನ ತಿಳಿಯಲು  ಜೀವಾತ್ಮರು  ಇಲ್ಲವೆ? ಲೋಕ ನಡೆದಿರೋದು ಜೀವಾತ್ಮರಿಂದಲೇ ಎನ್ನುವ ಸತ್ಯ ಕಣ್ಣಿಗೆ ಕಾಣುತ್ತದೆ. ಆದರೆ ಇದು ಅಸತ್ಯವೆಂದರೆ ನಾನಿಲ್ಲವೆ? ನಾನಿದ್ದರೆ‌ ನಾನ್ಯಾರು?
ಜಗತ್ ಮಿಥ್ಯ ಎಂದಿದ್ದಕ್ಕೆ  ಸಾಕಷ್ಟು ವಾದವಿವಾದಗಳಾಗುತ್ತದೆ. ಹಾಗಾದರೆ ಜಗತ್‌ಮಿಥ್ಯ ಎನ್ನುವ ಸತ್ಯವನ್ನು  ಪರಮಾತ್ಮನೊಬ್ಬನೆ  ಎನ್ನುವ ಅದ್ವೈತ ತಿಳಿಸಿದೆ.
ಏನೇ ಆದರೂ ಈ ವಾದ ವಿವಾದಗಳಿಗೆ‌ಮನುಕುಲಕ್ಕೆ ಆಸರೆ ಆಗಿರುವ ಭೂ ಲೋಕದಲ್ಲಿ ಚರ್ಚೆ ವಾದ ವಿವಾದವಿಲ್ಲದೆ‌ನಡೆದಿಲ್ಲ,ನಡೆಯೋದಿಲ್ಲ,ನಡೆಯಲಾಗದು.
ನಿರಂತರವಾಗಿ ಚಲನೆಯಲ್ಲಿರುವ ಸತ್ಯಾಸತ್ಯತೆಯನ್ನು ‌ಕೇವಲ ಕಣ್ಣಿನಿಂದ ಅಳೆಯಲಾಗದು .ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಆಗುವ ಪ್ರತಿಯೊಂದು  ಪೂರ್ಣ ಸತ್ಯವಿರದು. ಹಾಗಾಗಿ ಒಂದೇ ಸತ್ಯದೆಡೆಗೆ ಒಳಹೊಕ್ಕಿದವರಿಗೆ ಪರಮಾತ್ಮ ನ ದರ್ಶನ ವಾಗಿದೆ.  
ದೇವನೊಬ್ಬನೆ ನಾಮ‌ಹಲವು, ದೇಶ ಒಂದೇ ರಾಜ್ಯ ಹಲವು ಈ ಹಲವುಗಳ ನಡುವಿರುವ ಭಿನ್ನಾಭಿಪ್ರಾಯ ದಿಂದ ಸತ್ಯ‌ ಮರೆಯಾಗಿದೆ  ಸತ್ತಿಲ್ಲ.

No comments:

Post a Comment