ನಾವು ಏನೇ ಸತ್ಯಾಸತ್ಯತೆಯನ್ನು ಪ್ರಚಾರ ಮಾಡಿ ಹೆಸರು,ಹಣ,ಅಧಿಕಾರ ಪಡೆದರೂ ಅದೊಂದು ರಾಜಕೀಯವಾಗಿ ಧಾರ್ಮಿಕ ಪ್ರಜ್ಞೆ ಹಿಂದುಳಿಯುತ್ತದೆ. ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಇದನ್ನು ತಿಳಿಸಿದ್ದಾನೆ. ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ನಿರಹಂಕಾರದ ಕರ್ಮದಿಂದ ಮಾತ್ರ ಧರ್ಮ ರಕ್ಷಣೆ. ಭಾರತದಲ್ಲಿ ಇದನ್ನು ಗಮನಿಸದೆ ರಾಜಾರೋಷವಾಗಿ ಪ್ರಚಾರ ನಡೆಯುತ್ತಿದೆ. ಆತ್ಮಾವಲೋಕನ ಅಗತ್ಯವಾಗಿದೆ. ಯಾವುದೇ ಸರ್ಕಾರ ಬಂದರೂ ಜನರಲ್ಲಿ ಸತ್ಯದ ಅರಿವಿಲ್ಲವಾದರೆ ವ್ಯರ್ಥ. ಹಿಂದಿನ ಸರ್ಕಾರ ಕ್ಕೆ ಬೆಂಬಲ ನೀಡಿದವರೆ ಇಂದಿನ ಸರ್ಕಾರದ ಪರವಿರೋದು.ಇಂದಿನ ಸರ್ಕಾರದ ವಿರೋಧಿಗಳೂ ಮುಂದೆ ತಿರುಗಿ ನಿಲ್ಲುವುದು.ಕಾರಣ ಸರ್ಕಾರ ಕೊಡುವ ಹಣ,ಸಾಲ,
ಸೌಲಭ್ಯಗಳ ಆಧಾರದ ಮೇಲೆ ಪ್ರಜೆಗಳ ಸಹಕಾರವಿದೆ.
ಸಮಾ'ವೇಷ ' ಮಾಡಿದರೆ ಮರುಳಾಗುವ ಅಜ್ಞಾನಿಗಳಿಗೆ ಜ್ಞಾನವೇ ಇಲ್ಲದೆ ಮುಕ್ತಿ ಸಿಗುವುದೆ? ಹಾಗಾದರೆ ಆ ಸಾಲ,ಸೌಲಭ್ಯಗಳನ್ನು ಪಡೆದವರ ಧಾರ್ಮಿಕ ಜ್ಞಾನ ಬೆಳೆದಿದೆಯೆ? ಆತ್ಮಜ್ಞಾನದ ಶಿಕ್ಷಣವನ್ನೇ ಕೊಡದೆ ಆಳಿದ ಸರ್ಕಾರದಿಂದ ದೇಶದ ಸಾಲದ ಜೊತೆಗೆ ಜ್ಞಾನದ ಬಡತನವೇ ಹೆಚ್ಚಾಗುತ್ತಿದ್ದರೆ ಇದರಿಂದಾಗಿ ಯಾರಿಗೆ ಮುಕ್ತಿ ಸಿಗುವುದು?ಹಿಂದಿನ ಭಾರತೀಯ ಶಿಕ್ಷಣದ ವಿಷಯಗಳಿಂದ ಅಮೃತಪುತ್ರರು ಹೆಚ್ಚಾಗಿ ಮಹಾತ್ಮರ ದೇಶ ಯೋಗಿಗಳ ದೇಶ ವಾಗಿತ್ತು. ಈಗಿನ ಶಿಕ್ಷಣದ ವಿಷಯದಲ್ಲಿಯೇ ವಿಷ ಇರುವ ರಾಜಕೀಯದಿಂದ ಆಂತರಿಕ ಶಕ್ತಿ ಕುಗ್ಗಿ ಪರಾವಲಂಬಿಗಳು ಪರಮಾತ್ಮನ ಮರೆತು ಪರಕೀಯರ ವಶದಲ್ಲಿದ್ದೂ ನಾನೇ ರಾಜ ಎಂದರೆ ಸತ್ಯವೆ? ಇದನ್ನು ಸಾಮಾನ್ಯಜ್ಞಾನವುಳ್ಳವರು ಅರ್ಥ ಮಾಡಿಕೊಂಡರೆ ನಮ್ಮ ಹತ್ತಿರವಿರುವ ಒಳಗಿನ ಸತ್ಯದಿಂದ ಹಿಂದಿರುಗಬಹುದು. ಯಾರ ಜೀವವೂ ಶಾಶ್ವತವಲ್ಲ.ಯಾರ ಅಧಿಕಾರವೂ ಶಾಶ್ವತವಲ್ಲ.ನಮ್ಮ ನಮ್ಮ ಆತ್ಮ ಶಾಶ್ವತ.
ದೇಶದ ಪ್ರಜೆಗಳು ಆತ್ಮಾವಲೋಕನ ಮಾಡಿಕೊಳ್ಳಲು ರಾಜಕೀಯ ಬಿಡದೆ ಅಸಾಧ್ಯ. ಇದನ್ನು ಸ್ವಾಮಿ ವಿವೇಕಾನಂದರು ಅಧ್ಯಾತ್ಮ ಶಿಕ್ಷಣದ ಮೂಲಕ ದೇಶ ಕಟ್ಟುವ ರಾಜಯೋಗದಲ್ಲಿ ತಿಳಿಸಿದ್ದರು.ಆದರೆ ಅವರ ಹೆಸರಲ್ಲಿ ರಾಜಕೀಯ ಬೆಳೆದು ಅಮೇರಿಕಾದಂತಹ ಮಹಾದೇಶ ಅವರ ವಿಚಾರವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟಿದೆ ಭಾರತವೇ ಹಿಂದುಳಿದು ಅಮೇರಿಕಾವನ್ನು ಬೆಳೆಸಲು ಹೊರಟಿದೆ ಎಂದರೆ ನಮ್ಮವರೆ ನಮಗೆ ಶತ್ರುಗಳೆ?
No comments:
Post a Comment