ವರ್ಣದ ಪ್ರಕಾರ ಶೂದ್ರರನ್ನು ಸೇವಕರೆಂದು ಕರೆದರು. ಹಾಗೆ ನೋಡಿದರೆ ಬ್ರಾಹ್ಮಣ ಕ್ಷತ್ರಿಯ ವೈಶ್ಯ ರ ಕಾಯಕವೂ ಪರಮಾತ್ಮನ ಸೇವೆಯೇ ಆಗಿದ್ದರೂ ಶೂದ್ರರನ್ನು ಕೆಳಮಟ್ಟಕ್ಕೆ ನೋಡುವ ಅಗತ್ಯವಿರಲಿಲ್ಲ ಹಾಗೆ ಪರಮಾತ್ಮನೇ ಹೇಳಿರಲಿಲ್ಲ. ಕರ್ಮ ಯೋಗಿಯೇ ಕಲಿಗಾಲದಲ್ಲಿ ಶ್ರೇಷ್ಟ ಎನ್ನುತ್ತಾರೆ. ಯಾವನು ತನ್ನ ಕೆಲಸವನ್ನು ಪರಮಾತ್ಮನ ಸೇವೆ ಎನ್ನುವ ಮನಸ್ಸಿನಿಂದ ಮಾಡುವನೋ ಅವನು ಕರ್ಮ ಯೋಗಿಯಾಗಬಹುದು. ಇಲ್ಲಿ ನಾವೆಲ್ಲರೂ ಕರ್ಮ ಜೀವಿಗಳೇ ಹೊರತು ಕರ್ಮ ಯೋಗಿ ಜ್ಞಾನಯೋಗಿಗಳಾಗೇ ಇಲ್ಲ.
ಜ್ಞಾನ ಸ್ವಯಂ ಪ್ರಯತ್ನದಿಂದ ಸ್ವಯಂ ಪ್ರಕಾಶಮಾನವಾಗಿ ಸ್ವತಂತ್ರ ವಾಗಿದ್ದವರಿಗಷ್ಟೆ ಸಿಕ್ಕಿದೆ .ಶ್ರೀ ಶಂಕರಭಗವದ್ಪಾದರಂತಹ ಮಹಾಯತಿಗಳ ಜ್ಞಾನ ಅರ್ಥ ಮಾಡಿಕೊಂಡು ನಡೆಯೋದು ಬಹಳ ಕಷ್ಟ. ಇದರಲ್ಲಿ ಯಾವುದೇ ರೀತಿಯ ಸ್ವಾರ್ಥ ಅಹಂಕಾರಕ್ಕೆ ಸ್ಥಾನವಿಲ್ಲದ ಕಾರಣ ಸ್ವತಂತ್ರ ಜ್ಞಾನವೇ ಅಧ್ವೈತ. ಪರಮಾತ್ಮನೇಬೇರೆ ನಾನೇ ಬೇರೆ ಎಂದಾಗ ಜ್ಞಾನದಲ್ಲಿ ಅಂತರ ಬೆಳೆದು ನಾನು ಬೆಳೆಯುವುದು. ನಾನು ಹೋದರೆ ಅದ್ವೈತ ನಾನಿದ್ದರೆ ದ್ವೈತ.
ಭೂಮಿಯ ಮೇಲಿರುವಾಗ ನಾನು ಹೋಗೋದಕ್ಕೆ ನನ್ನ ಮಾಯೆ ಬಿಡದು .ಇದೇ ಅಹಂಕಾರ ಸ್ವಾರ್ಥ ದೆಡೆಗೆ ನಡೆಸಿ ಕರ್ಮ ಅಕರ್ಮ ವಾಗುವಂತೆಮಾಡೋದೆಂದರು.
ನಾನುಮಾಡುತ್ತಿದ್ದೇನೆಹೇಳುತ್ತಿದ್ದೇನೆ,ಕೇಳುತ್ತಿದ್ದೇನೆ ನಡೆಯುತ್ತಿದ್ದೇನೆ ಇದರ ಅರಿವು ಎಲ್ಲರಿಗೂ ಸಹಜವಾಗಿ ಇರುತ್ತದೆ. ಹೀಗಾಗಿ ನಾನು ಸೇವಕನಾಗಿಲ್ಲವೆಂದರ್ಥ.
ಪರಮಾತ್ಮನ ಸೇವೆ ನಿಸ್ವಾರ್ಥ ನಿರಹಂಕಾರ, ಪ್ರತಿಫಲಾಪೇಕ್ಷೆ ಇಲ್ಲದೆ ಮಾಡೋದೆಂದರೆ ಅದು ಮಹಾತ್ಮರಿಗಷ್ಟೆ ಸಾಧ್ಯ.
ಎಲ್ಲರ ಸೇವೆಯೂ ಶ್ರೇಷ್ಠ ಎಲ್ಲರಕಾಯಕದಿಂದಲೂ ಶಿವಸಾನಿದ್ಯವಿದೆ..ಆದರೆ ಎಲ್ಲರಲ್ಲೂ ಅಡಗಿರುವಪರಮಾತ್ಮನನ್ನು ಎಲ್ಲರೂ ಕಾಣಲಾಗದು ಇದೇ ನಿಜವಾದ ಜ್ಞಾನ.
ಉದಾಹರಣೆಗೆ ಶೂದ್ರರು ಸೇವೆ ಮಾಡೋರು ಎಂದಾಗ ದೇಶ ಸೇವೆ,ದೇವರ ಸೇವೆ,ಭೂ ಸೇವೆ,ಜನಸೇವೆ, ಪಶುಪಕ್ಷಿ ಸೇವೆ,ಗೂಸೇವೆ,....ಎಲ್ಲಾ ಒಂದೇ ಆಗಿ ಕಾಣೋದಿಲ್ಲವೇಕೆ?
ಒಂದೊಂದು ಸೇವೆಗೆ ಒಂದೊಂದು ಬೆಲೆಕಟ್ಟಿರುವ ಮಾನವ ಯಾರು ಹೆಚ್ಚು ಹಣಗಳಿಸಿರುವರೋ ಅವರನ್ನು ಎತ್ತಿ ಹಿಡಿಯುತ್ತಾರೆ. ಹಾಗಾದರೆ ಸೇವೆ ಮಾಡಿ ಹಣಪಡೆದರೆ ಅದು ಸ್ವಾರ್ಥ ಪ್ರತಿಫಲಾಪೇಕ್ಷೆಯುಳ್ಳದ್ದಾಗಿರುವಾಗ ಪರಮಾತ್ಮನ ಸೇವೆ ಆಯಿತೆ?
ಕಲಿಗಾಲದಲ್ಲಿ ಶಿಕ್ಷಣವೇ ವ್ಯವಹಾರಕ್ಕೆ ಇಳಿದು ಹಣಕ್ಕಾಗಿ ಶಿಕ್ಷಣ ಎಂದಾಗ ನಿಸ್ವಾರ್ಥ ನಿರಹಂಕಾರ, ಪ್ರತಿಫಲಾಪೇಕ್ಷೆ ಯಿಲ್ಲದ ಸೇವಕರು ಬದುಕೋದೆ ಕಷ್ಟ. ಹೀಗಾಗಿ ತಾನುಬದುಕಿ ಇತರರನ್ನು ಬದುಕಲು ಬಿಡೋದೆ ಸೇವೆ ಎಂದರೆ ಸರಿಯಾಗಬಹುದು.
ಒಬ್ಬ ವೈಧ್ಯನಾಗೋದಕ್ಕೆ ಲಕ್ಷಾಂತರ ಹಣ ಸುರಿದು ಓದಬೇಕು
ಅದೇ ಒಬ್ಬ ರೈತನಾಗೋದಕ್ಕೆ ಲಕ್ಷಾಂತರ ಬೆಲೆಬಾಳುವ ಭೂ ಸೇವೆ ಮಾಡಬೇಕು. ಇಬ್ಬರೂ ಕಷ್ಟಪಡಲೇಬೇಕು.ವೈಧ್ಯನ ಬುದ್ದಿವಂತಿಕೆಗೆ ಬೆಲೆಕೊಟ್ಟರೆ ರೈತನ ಜ್ಞಾನಕ್ಕೆ ಬೆಲೆಕೊಡಬೇಕು.ಯಾವಾಗ ರೈತನಜ್ಞಾನಕ್ಕೆ ಬೆಲೆಕೊಡುವುದಿಲ್ಲವೋ ಸೇವೆ ಬಿಟ್ಟು ಭೂಮಿ ಮಾರಿ ವೈಧ್ಯನಾಗುವನು.
ವೈಧ್ಯ ರೋಗಕ್ಕೆ ಔಷಧ ಕೊಟ್ಟರೆ ರೈತ ರೋಗ ಬರದಿರುವಂತಹ ಅನ್ನ ಬೇಳೆ ಕಾಳು ...ಆಹಾರ ನೀಡಿ ಆರೋಗ್ಯ ಉಳಿಸುವನು.
ವಾಸ್ತವದಲ್ಲಿ ನಮ್ಮ ಪರಿಸ್ಥಿತಿ ಹೇಗಿದೆಯೆಂದು ನಾವೇ ಅರ್ಥ ಮಾಡಿಕೊಳ್ಳಲು ಸಾಧ್ಯ. ನಮ್ಮ ಮಕ್ಕಳನ್ನು ವೈಧ್ಯರನ್ನಾಗಿ ಮಾಡಲು ಭೂಮಿ ಮಾರೋದು ಧರ್ಮ ವೆ ಅಥವಾ ಭೂ ಸೇವಕರನ್ನಾಗಿಸಿ ಆರೋಗ್ಯವಂತ ಸಮಾಜಸೇವಕರನ್ನಾಗಿಸೋದು ಧರ್ಮ ವೆ?
ಪ್ರಕೃತಿಯ ಹತ್ತಿರವಿರುವ ರೈತನಿಗೆ ಹೊರಗಿನ ಸರ್ಕಾರ ಬಡ ರೈತ ಎಂದು ಎಷ್ಟು ಸಾಲ ಕೊಟ್ಟರೂ ಭೂಮಿಗೆ ಬೆಲೆ ಕಟ್ಟಲಾಗದಲ್ಲವೆ?
ಬುದ್ದಿಗಿಂತ ಜ್ಞಾನ ಮುಖ್ಯ.ವಿದ್ಯೆಗಿಂತ ಜ್ಞಾನವೇ ದೊಡ್ಡದು.
ನಿಜ ಜ್ಞಾನಯೋಗ ಕರ್ಮ ಯೋಗಕ್ಕಿಂತ ದೊಡ್ಡದಾದರೂ ಕರ್ಮ ಮಾಡದ ಜ್ಞಾನದಿಂದ ಆತ್ಮಕ್ಕೆ ಮುಕ್ತಿ ಸಿಗದು.
ಹಾಗಾಗಿ ಕಲಿಯುಗದಲ್ಲಿ ಕರ್ಮ ಯೋಗದ ಮೂಲಕವೇ ಅಧ್ಯಾತ್ಮ ಸಾಧನೆ ಅಗತ್ಯವಿದೆ.ಅದು ಸತ್ಯ ಸ್ವಧರ್ಮ ಸ್ವತಂತ್ರವನ್ನು ಉಳಿಸಿ ಬೆಳೆಸುತ್ತದೆ.
ಕಾಲು ಸರಿಯಾದ ಮಾರ್ಗದಲ್ಲಿ ನಡೆಯಲು ತಲೆಯಲ್ಲಿ ಜ್ಞಾನ ಇರಲೇಬೇಕು. ಆದರೆ ತಲೆಯಲ್ಲಿ ಜ್ಞಾನವಿದ್ದರೂ ತಾನೇ ನಡೆಯದೆ ಬೇರೆಯವರಿಗೆ ನಡೆಯಲು ತಿಳಿಸಿದರೂ ಪೂರ್ಣ ಸತ್ಯ ಅರ್ಥ ವಾಗದು.
ಒಟ್ಟಿನಲ್ಲಿ ನಮ್ಮ ತಲೆ ನಮ್ಮ ಕಾಲು ನಮ್ಮ ಜೀವನವನ್ನು ಇನ್ಯಾರೋ ನಡೆಸಿದರೆ ಸ್ವತಂತ್ರ ವಿರದು.ಹಾಗೆ ನಮ್ಮ ದೇಶದ ಸಾಲ ಇನ್ಯಾರೋ ಬಂದು ತೀರಿಸಲಾಗದು. ಸ್ವತಃ ನಾವೇ ಮಾಡಿಕೊಂಡ ಸಾಲಕ್ಕೆ ನಮ್ಮ ಜೀವವೇ ಹೊಣೆಯಾದಾಗ ಅದನ್ನು ಸತ್ಕರ್ಮ ಸ್ವಧರ್ಮ ಸ್ವಾಭಿಮಾನ ಸ್ವಾವಲಂಬನೆ ಮೂಲಕ ತೀರಿಸೋದಕ್ಕೆ ಸತ್ಯಜ್ಞಾನ ಅಗತ್ಯವಿದೆ.ಮಿಥ್ಯ ಜ್ಞಾನ ತಾತ್ಕಾಲಿಕ ಪರಿಹಾರವಷ್ಟೆ.ಹಾಗಾಗಿ ಜಗತ್ ಮಿಥ್ಯ ಎಂದಿದ್ದಾರೆ.ಅದ್ವೈತ ದೊಳಗೇ ಧ್ವೈತ ಸಂಶೋಧನೆಯಾದರೆ ಎಲ್ಲಾ ಒಂದೇ.
ನಾವೆಲ್ಲರೂ ಒಂದು ರೀತಿಯ ಶೂದ್ರರೆ. ಸೇವಕರೆ ಆದರೆ ಕೆಲವರು ಪರಮಾತ್ಮನ ಸೇವೆ ಮಾಡಿ ತೃಪ್ತಿ ಪಡೆದರೆ ಕೆಲವರು ಪರದೇಶದ ಸೇವೆ ಮಾಡೋದು ಅನಿವಾರ್ಯ ವಾಗುತ್ತಿದೆ.ಕಾರಣ ನಮ್ಮ ಪ್ರಾಥಮಿಕ ಶಿಕ್ಷಣವೇ ಅವರ ಕೊಡುಗೆ.ಅವರ ಜ್ಞಾನವೇ ಬಂಡವಾಳವಾದಾಗ ಎಲ್ಲಾದರೂ ಇರು ಹೇಗಾದರೂ ಇರು ಮಾನವನಾಗಿದ್ದು ಸೇವಕನಾಗಿರು.ಇದರಿಂದ ಇತರರಿಗೆ ಹಾನಿಯಾಗದಂತೆ ಜೋಪಾನವಾಗಿರೋದು ಧರ್ಮ.
No comments:
Post a Comment