ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, September 22, 2024

ಅದ್ವೈತ ದಿಂದ ದ್ವೈತ ಹೊರಬಂದರೆ ಎಲ್ಲಾ ದ್ವೈತ ವೆ

ಅದ್ವೈತ ದರ್ಶನವಾದಾಗ ದ್ವೈತ ಬೇರೆ ಎನಿಸುತ್ತದೆ. ಯಾವಾಗ ಬೇರೆಕಾಣುತ್ತದೋ ಅದೇ ದ್ವೈತವಾಗುತ್ತದೆ. ಹಾಗೆ ಆಕಾಶದೆತ್ತರ ಬೆಳೆದವನಿಗೆ ಭೂಮಿ ಬೇರೆಯಾದರೂ ಭೂಮಿ ಬಿಟ್ಟು ಜೀವವಿರದು ಎನ್ನುವ ಸತ್ಯ ತಿಳಿದರೆ ಎರಡೂ ಅರ್ಥ ವಾಗೋದು.
ಇದನ್ನು ಯಾವುದೇ ಪುರಾಣ ಇತಿಹಾಸದ ರಾಜಕೀಯದಿಂದ ತಿಳಿಯಲಾಗದು.ಸಂಸಾರದೊಳಗೆ ಪ್ರವೇಶ ಮಾಡಿದ ಜೀವಕ್ಕೆ ಭೂಮಿಯ ಆಸರೆಯಿಲ್ಲದೆ ಏನೂ ಮಾಡಲಾಗದು.
ಯಾವುದೇ ಸಂಶೋಧನೆಯಾಗಲಿ ಭೂಮಿ ಮೇಲಿದ್ದೇ ನಡೆಸಿರೋದು.ಇದಕ್ಕೆ  ಪರಮಾತ್ಮನ ಸಹಕಾರವೂ ಇದೆ.ಹಾಗಾದರೆ ಪರಮಾತ್ಮ ಬೇರೆಯಾಗಲು ಸಾಧ್ಯವೆ?
ಜೀವಾತ್ಮನ  ಒಳಗೆ ಹೊರಗೆ  ಆವರಿಸಿರುವ ಈ ಶಕ್ತಿಯನ್ನು ಅರಿತು ನಡೆಯುವುದೇ ಅಧ್ಯಾತ್ಮ ಸಂಶೋಧನೆ.
ಇದನ್ನು ದುರ್ಭಳಕೆ ಮಾಡಿಕೊಂಡಷ್ಟೂ ಆತ್ಮಹತ್ಯೆ ಎನ್ನಬಹುದು. 
ಏನೂ ಅರಿಯದ ಮಕ್ಕಳಿಗೆ ಕಲಿಸಬಹುದು
ಎಲ್ಲಾ ತಿಳಿದವರಿಗೆ ತಿಳಿಸೋ ಅಗತ್ಯವಿರದು
ಅರ್ಧ ತಿಳಿದು ತಿಳಿಸುವವರನ್ನು ತಡೆಯಲಾಗದು.

ಸತ್ಯವಿರದ ಧರ್ಮ ಕ್ಕೆ ವಿರುದ್ದವಿರುವ ಎಲ್ಲಾ ಕರ್ಮ  ಅಕರ್ಮ ವಾಗಿರುತ್ತದೆನ್ನುವರು ಮಹಾತ್ಮರುಗಳು.
ಅದ್ವೈತ ದೊಳಗೇ ದ್ವೈತ ವಿದ್ದಂತೆ ಪರಮಾತ್ಮನೊಳಗೇ ಜೀವಾತ್ಮನಿರೋದು. ಒಂದೇ ನಾಣ್ಯದ ಎರಡು ಮುಖವು ವ್ಯವಹಾರಕ್ಕೆ ಇಳಿದಾಗ ಹಣಸಂಪಾದನೆಯೇ ಗುರಿಯಾಗಿಸಿ ಜ್ಞಾನದ ನಷ್ಟವಾಗುತ್ತದೆ. ಧರ್ಮ ನಾವಂದುಕೊಂಡಂತಿಲ್ಲ  ಹೀಗಾಗಿ ಧರ್ಮ ಕುಸಿದಿದೆ. ಸತ್ಯ ನಾವು ಸರಿಯಾಗಿ ತಿಳಿದಿಲ್ಲ ಅದಕ್ಕೆ ಅಸತ್ಯ ಬೆಳೆದಿದೆ. ಹಾಗೆ ಭೂಮಿ ನಮ್ಮನ್ನೇನೂ ಕೇಳುತ್ತಿಲ್ಲವಾದರೂ ಭೂಮಿಯನ್ನು ಆಳುವುದೇ ಪ್ರಗತಿ ಎನ್ನುವ  ಅಜ್ಞಾನ ಮಿತಿಮೀರಿದೆ.ಆಳೋದಕ್ಕೆ ನಾವ್ಯಾರು? ಈ ಪ್ರಶ್ನೆಗೆ  ಒಂದೇ ಉತ್ತರ ನಾನೆಂಬುದಿಲ್ಲ ಇದು ಅದ್ವೈತ, ನಾನಿದ್ದೇನೆ ದ್ವೈತ ನಾನೇ ಎಲ್ಲರಲ್ಲೂ ಇರೋನು ವಿಶಿಷ್ಟಾದ್ವೈತ. ಎಲ್ಲವನ್ನೂ ತನ್ನೊಳಗೇ ಇಟ್ಟುಕೊಂಡು ಅವರವರ ಹಿಂದಿನ ಋಣ ಕರ್ಮಕ್ಕೆ ತಕ್ಕಂತೆ ನಡೆಸೋ ಶಕ್ತಿ ನಾನೇ ಎಂದರೆ ನಾನ್ಯಾರು? ದೇವರೆ? ಅಸುರರೆ? ಮಾನವರೆ? ನಿರಾಕಾರ ಬ್ರಹ್ಮನೇ ನಾನು. ಸೃಷ್ಟಿಯ ರಹಸ್ಯವರಿತು ಸ್ಥಿತಿಗೆ ಕಾರಣ ತಿಳಿದು ಲಯಕಾರಕನಿಗೆ ಶರಣಾಗೋದು ಜೀವಾತ್ಮವೇ ನಾನು. ನಾನು ಹೋದರೆ ಸ್ವರ್ಗ. ಇದ್ದರೆ ನರಕ ಎಂದರು ಮಹಾತ್ಮರು.

No comments:

Post a Comment