ಮಿಶ್ರ ತುಪ್ಪದ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಎಲ್ಲಾ ವಿಚಾರದಲ್ಲಿ ತೆಗೆದುಕೊಂಡರೆ ಈ ಮಿಶ್ರ ಜಾತಿ,ವರ್ಣ, ಧರ್ಮ, ದೇಶ ಸಮ್ಮಿಶ್ರ ಸರ್ಕಾರವೇ ಇಲ್ಲದೆ ಸ್ವತಂತ್ರ ವಾಗಿ ತಮ್ಮನ್ನು ತಾವು ಆಳಿಕೊಳ್ಳುವ ಜ್ಞಾನವಿರುತ್ತಿತ್ತು ಮಾನವನಿಗೆ. ಎಲ್ಲಾ ಕಲಬೆರೆಕೆಯ ಜೀವನದಲ್ಲಿ ಶುದ್ದವಾಗಿರೋದು ಯಾರು?
ಹೊರಗೆ ತಳುಕುಬಳುಕು ಒಳಗೆ ಹುಳುಕು.
ಪರಮಾತ್ಮನೊಬ್ಬನೆ ಶುದ್ದ ಆದ್ದರಿಂದ ಶುದ್ದ ಸತ್ಯ ಧರ್ಮ ಆಚಾರ ವಿಚಾರ ಪ್ರಚಾರ ಶಿಕ್ಷಣದ ಕಡೆಗೆ ನಡೆಯೋದೆ ಯೋಗ ಮಾರ್ಗ. ಹೊರಗೆ ನಡೆದು ತಿಂದಷ್ಟೂ ರೋಗ.
ಏನೇ ತಿಂದರೂ ಪರಮಾತ್ಮನ ಪ್ರಸಾದ ಎನ್ನುವ ಭಕ್ತರು ಇದ್ದರೆ ಪರಮಾತ್ಮನ ರಕ್ಷಣೆ ಇರುವುದಂತೆ ಹಾಗಾಗಿ ಹೊರಗಿನ ಪ್ರಸಾದಕ್ಕಾಗಿ ಕಾದು ನಿಲ್ಲುವರು. ಪಾಪಕ್ಕೆ ತಕ್ಕಂತೆ ಫಲವಿರುತ್ತದೆ.ಪ್ರಸಾದವೇ ಭ್ರಷ್ಟರ ವಶವಾದರೆ ಗೋವಿಂದನೇ ಗತಿ.
ಸಾಕಾರದಿಂದ ನಿರಾಕಾರದೆಡೆಗೆ ನಡೆದ ಧರ್ಮ ಇಂದು ಸರ್ಕಾರದ ಹಿಂದೆ ನಡೆದಿದೆ ಎಂದರೆ ದಾರಿತಪ್ಪಿದೆಯೆ?
ಸ್ವಚ್ಚ ಭಾರತಕ್ಕೆ ಸ್ವಚ್ಚ ಜ್ಞಾನದ ಶಿಕ್ಷಣ ಕೊಡದೆ ಉಚಿತವಾಗಿ ತಿನ್ನಿಸಿದರೆ ದೇವರು ಕಾಣೋದಿಲ್ಲ. ಅತೃಪ್ತ ಆತ್ಮಗಳೇ ಕಾಣೋದು.
ಆಹಾರವಿಲ್ಲದೆ ತಪಶ್ಯಕ್ತಿಯಿಂದ ಸಾವಿರ ವರ್ಷ ಬದುಕಿದ ತಪಸ್ವಿಗಳ ದೇಶದಲ್ಲಿ ತಾಮಸಗುಣದವರು ಬೆಳೆಯಲು ಕಾರಣವೇ ಅಜ್ಞಾನ. ಪರಮಾತ್ಮನಿಗೆ ತಲುಪದ ಕರ್ಮ ವೇ ಅಕರ್ಮ, ವಿನಯವನ್ನು ಬೆಳೆಸದ ವಿದ್ಯೆಯೇ ಅವಿದ್ಯೆ.
ಸತ್ಯವನ್ನು ತಿಳಿಸದ ತಿಳುವಳಿಕೆಯೇ ಅಜ್ಞಾನ.
No comments:
Post a Comment