ಯಾಕಿಷ್ಟು ಹಿಂದೂಗಳು ಹಿಂದುಳಿದರೆನ್ನುವ ಪ್ರಶ್ನೆಗೆ ಉತ್ತರ ಒಗ್ಗಟ್ಟಿನಕೊರತೆ, ಮನೆಯೊಳಗಿನ ರಾಜಕೀಯ ಬುದ್ದಿವಂತಿಕೆ, ಹೊರಗಿನವರೊಂದಿಗೆ ವ್ಯವಹಾರ, ನಮ್ಮವರೆ ನಮಗೆ ಶತ್ರುವಾಗಿ ವಿರೋಧಿಯಾಗಿ ಆಳಲು ಹೊರಟಿರೋದು, ಅತಿಯಾದ ಭೌತಿಕ ಆಸ್ತಿ ಸಂಪಾದನೆಗಾಗಿ ಅಧ್ಯಾತ್ಮ ದಿಂದ ದೂರವಾಗಿರೋದು,ಪರರನ್ನು ದ್ವೇಷ ಮಾಡಿ ಅವರ ವ್ಯವಹಾರ ಬಿಡದಿರೋದು, ಅಸತ್ಯ ಅನ್ಯಾಯ ಅಧರ್ಮ ವನ್ನು ಹಣದಿಂದ ಅಳೆದಿರೋದು, ಲಿಂಗತಾರತಮ್ಯದಿಂದಾದ ಜೀವಹತ್ಯೆ, ಅಂತರಗಳಿಂದ ಸೃಷ್ಟಿ ಆಗಿರುವ ಅರ್ಧ ಸತ್ಯದ ಮಧ್ಯವರ್ತಿಗಳಿಗೆ ಕೊಟ್ಟಿರುವ ಸ್ಥಾನಮಾನ , ಇವೆಲ್ಲದರ ಮೂಲವೇ ನಮ್ಮದಲ್ಲದ ಶಿಕ್ಷಣ ಪದ್ದತಿಯನ್ನು ಪ್ರೀತಿಯಿಂದ ಸ್ವೀಕರಿಸಿ ನಮ್ಮ ಶಿಕ್ಷಣವನ್ನು ವಿರೋಧಿಸಿ ಹೊರಗೆ ನಡೆದಿರೋದಾಗಿದೆ. ಒಟ್ಟಿನಲ್ಲಿ ಪ್ರತಿಯೊಂದು ಸಮಸ್ಯೆಯ ಮೂಲವೇ ಅಜ್ಞಾನ. ಅಜ್ಞಾನಕ್ಕೆ ಕಾರಣವೇ ಶಿಕ್ಷಣ ಶಿಕ್ಷಣವನ್ನು ಕೊಡಬೇಕಾದವರೆ ಅವಿದ್ಯೆ ಗೆ ಶರಣಾಗಿ ದಾಸರಾಗಿದ್ದರೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ.
ಹಿಂದಿನ ಯುಗಗಳಿಂದಲೂ ಈ ತಾರತಮ್ಯವಿತ್ತು.ಈಗಲೂ ಇದೆ ಮುಂದೆಯೂ ಇರುತ್ತದೆ.ಕಾರಣ ಅಜ್ಞಾನ ಹೋಗದೆ ಜೀವನ್ಮುಕ್ತಿ ಸಿಗದು.ಜನ್ಮಜನ್ಮಗಳ ಪಾಪ ಪುಣ್ಯದ ಕರ್ಮ ಫಲ ಅನುಭವಿಸಲು ಜನ್ಮ ಪಡರಯಲೇಬೇಕೆನ್ನುತ್ತದೆ ಹಿಂದೂ ಸಮಾಜ. ಇದಕ್ಕೆ ವಿರುದ್ದವಿರುವ ಅನ್ಯಧರ್ಮದ ಪ್ರಕಾರ ಇದ್ದಾಗಲೇ ಸುಖ ಅನುಭವಿಸೋದೆ ಧರ್ಮ ಎನ್ನುತ್ತದೆ.
ಸನಾತನಧರ್ಮದ ಸುಖ ಅಧ್ಯಾತ್ಮ ದೆಡೆಗಿದ್ದರೆ ಅನ್ಯಧರ್ಮದ ಸುಖ ಹೊರಗಿದೆ. ಇವೆರಡರ ಮಧ್ಯೆ ನಿಂತ ಮನುಕುಲವನ್ನು ಎರಡೂ ಕಡೆಯಿಂದ ಎಳೆದು ಆಳುವ ಅರಸರೆ ಮಧ್ಯವರ್ತಿಗಳು. ತಾವೂ ಅತಂತ್ರ ತಮ್ಮವರೂ ಅತಂತ್ರ.ಹೀಗಾಗಿ ಅತೃಪ್ತ ಆತ್ಮಗಳ ಸಾಮ್ರಾಜ್ಯ ದಲ್ಲಿ ಸ್ವತಂತ್ರ ಎಲ್ಲಿರುವುದು? ಒಟ್ಟಿನಲ್ಲಿ ನಾವು ನಾವಾಗಿರೋದೆಂದರೆ ನಮ್ಮ ಒಳಗಿರುವ ಸ್ವತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ತಾವೂ ಬದುಕಿ ಇತರರನ್ನು ಬದುಕಲು ಬಿಡೋದಷ್ಟೆ.ಅವರವರ ಕರ್ಮಕ್ಕೆ ತಕ್ಕಂತೆ ಫಲ ಮೇಲಿನ ಶಕ್ತಿ ಕಾಲಕಾಲಕ್ಕೆ ನೀಡುವುದು ನಿರಂತರವಾಗಿ ನಡೆಯುತ್ತದೆ.
ಯಾರಾದರೂ ಸೃಷ್ಟಿ ಸ್ಥಿತಿ ಲಯವನ್ನು ತಡೆಯಬಹುದೆ?
ಬ್ರಹ್ಮ ವಿಷ್ಣು ,ಮಹೇಶ್ವರರನ್ನು ಕಂಡಿರುವರೆ? ಅವರೊಳಗೇ ಇರೋವಾಗ ಕಾಣಲಸಾಧ್ಯ.ಒಳಹೊಕ್ಕಿ ನೋಡಿದವರಿಗೆ ಅರ್ಥ ವಾಗಿದೆ ಎಂದರೆ ನಿರಾಕಾರ ಬ್ರಹ್ಮನ್ ಸತ್ಯ.ಸಾಕಾರ ಬ್ರಹ್ಮನ್‌ಮಿಥ್ಯ.
ವ್ಯಕ್ತಿ ಮಿಥ್ಯ ವ್ಯಕ್ತಿತ್ವ ಸತ್ಯ. ಹೀಗೇ ಹಿಂದೂಗಳಾದವರು ತಮ್ಮ ಒಳಗೆ ಸತ್ಯ ಹುಡುಕಿಕೊಂಡಿದ್ದರೆ ತತ್ವದ ಮೂಲಕ ಧರ್ಮ ರಕ್ಷಣೆ ಹೊರಗೆಳೆದಷ್ಟೂ ಮಿಥ್ಯವೇ ಆಳೋದು.ಆಳಿದವರು ಅಳುವ ಪರಿಸ್ಥಿತಿ ಬರಬಹುದು. ಇಲ್ಲಿ ಯಾರೂ ಆಳೂ ಇಲ್ಲ ಅರಸರೂ ಇಲ್ಲ.ಎಲ್ಲಾ ಪರಮಾತ್ಮನ ದಾಸರು ಶರಣರಷ್ಟೆ.
ಆದರೆ ನಮ್ಮ ಹಿಂದಿನ ದಾಸ ಶರಣರ ಜ್ಞಾನ ನಮ್ಮಲ್ಲಿಲ್ಲ ಎಂದರೆ ಹಿಂದುಳಿಯಲು ಕಾರಣ ತತ್ವ ಬಿಟ್ಟು ತಂತ್ರ ಹಿಡಿದು ಮುಂದೆ ಹೊರಗೆ ಬಂದಿರೋದು.ಒಳಗೆ ಸೇರೋವರೆಗೂ ಆತ್ಮಕ್ಕೆ ತೃಪ್ತಿ ಸಿಗದು.ಅದಕ್ಕೆ ಜನಸಂಖ್ಯೆ ಬೆಳೆದರೂ ಅಧ್ಯಾತ್ಮ ಬೆಳೆದಿಲ್ಲ. ತನ್ನ ತಾನರಿತು ನಡೆಯಲು ಹೊರಗಿನ ರಾಜಕೀಯ ಬಿಡದು. ರಾಜಕೀಯ ವಿರಲಿ ಅದರಲ್ಲಿ ಧರ್ಮ ವಿರಲಿ.ಸತ್ಯವಿಲ್ಲದ ಧರ್ಮ ಕುಂಟುತ್ತಿದೆ.ಧರ್ಮ ವಿಲ್ಲದ ಸತ್ಯ ಕುರುಡುರನ್ನು ಸೃಷ್ಟಿ ಮಾಡುತ್ತಿದೆ.ಇದೇ ಕಲಿಯುಗ
ಕಲಿಯುವುದು ಬಹಳಷ್ಟಿದೆ ಕಲಿತದ್ದನ್ನು ಸದ್ಬಳಕೆ ಆಗಬೇಕಿದೆ ಕಲಿತಿರೋದೆ ಸರಿಯಿಲ್ಲವಾದಾಗಲೇ ಸಮಸ್ಯೆ ಒಳಗೇ ಬೆಳೆದಿರುತ್ತದೆ.ಒಳಗೆ ಶುದ್ದಿಯಾಗುವ ಸಂಸ್ಕಾರ ಇದ್ದರೆ ಅದೇ ಜೀವನವಾಗುತ್ತದೆ. ಸಂಸ್ಕಾರ ವೇ ಸರಿಯಿಲ್ಲವಾದರೆ ಹೊರಗಿನಿಂದ ತೇಪೆ ಹಾಕುವ ಕೆಲಸವಾಗುತ್ತದೆ. ಒಟ್ಟಿನಲ್ಲಿ ಎಲ್ಲರೂ ಹೊರಗಿನಿಂದ ತೇಪೆ ಹಾಕಿಕೊಂಡು ಮುಂದೆ ಮುಂದೆ ನಡೆದ ಹಿಂದೂಗಳೆ ಅದರಲ್ಲಿ ಹಿಂದೆ ಹಿಂದೆ ನಡೆದವರಿದ್ದರೆ ಮೂಲ ಸರಿಯಾಗಿರುತ್ತದೆ. ಮೂಲ ಸರಿಯಾಗದೆ ರೆಂಬೆಕೊಂಬೆಗಳು ಸರಿಯಾಗದು. ಆತ್ಮಕ್ಕೆ ಯಾವುದೇ ಬೇದವಿರಲಿಲ್ಲ ಶುದ್ದವಾಗೇ ಇರುತ್ತದೆ. ಮನಸ್ಸಿನ ಶುದ್ದತೆಗೆ ಬೇಕಿದೆ ಮನುಷ್ಯತ್ವ. ಮೊದಲು ಮಾನವನಾಗು ನಂತರಮಹಾತ್ಮನಾಗುವೆ ಎಂದಂತೆ ಇಂದುನಾವು ಮಕ್ಕಳನ್ನು ಮಾನವರಾಗಿಸಬೇಕಿದೆ. ಮಾನ ಉಳಿಸಿಕೊಳ್ಳಲು ತತ್ವಜ್ಞಾನ ಅರ್ಥ ವಾಗಬೇಕು. ತಂತ್ರದಿಂದ ಅತಂತ್ರ ಕುತಂತ್ರ ಬೆಳೆದರೆ ಸ್ವತಂತ್ರ ಜ್ಞಾನದ ಗತಿ ಅಧೋಗತಿ.
ಸಾಮಾನ್ಯರ ಜ್ಞಾನಕ್ಕೆ ಬೆಲೆಯಿಲ್ಲ ವಿಶೇಷಜ್ಞಾನಕ್ಕೆ ನೆಲೆಯಿಲ್ಲ.
ಒಂದು ಕಡೆ ನಿಂತು ಚಿಂತನೆ ಮಾಡೋದಕ್ಕೆ ಸಮಯವೇ ಇಲ್ಲ.ಎಲ್ಲಾ ಎಲ್ಲರನ್ನೂ ನಡೆಸೋರೆ ಆದರೆ ಕುಳಿತು ಅರ್ಥ ಮಾಡಿಕೊಳ್ಳುವುದು ಕಷ್ಟ. ಒಟ್ಟಿನಲ್ಲಿ ಒಂದೆಡೆ ಕುಳಿತು ದ್ಯಾನ ಮಾಡೋದೆಂದರೆ ಮಹಾಸಾಧನೆ ಎನ್ನಬಹುದು.ಆದರೆ ಆ ಧ್ಯಾನದಿಂದ ಯಾರಿಗೆ ಸುಖ ಸಿಗುತ್ತದೆ ಎಂದಾಗ ನನಗೇ ಅಲ್ಲವೆ? ನನಗಾಗಿ ದ್ಯಾನ ಮಾಡೋದು ಸಾಧನೆಯಾದರೆ ಪರಮಾತ್ಮನ ದ್ಯಾನ ಮಾಡೋದು ಉನ್ನತ ಸಾಧನೆ.ಇದು ಪರರಿಗೆ ಒಳ್ಳೆಯದಾಗಲಿ ಎನ್ನುವುದಾಗಿದ್ದರೆ ಹಿಂದೂ ಧರ್ಮ ಉನ್ನತಮಟ್ಟಕ್ಕೆ ಬೆಳೆಯುತ್ತದೆ. ಪರರನ್ನು ಸೋಲಿಸಿ ಮುಂದೆ ನಡೆಯೋ ದ್ವೇಷ ಪೈಪೋಟಿಯೇ ಮುಖ್ಯವಾದರೆ ಅದೇ ಇನ್ನಷ್ಟು ಕೆಳಗಿಳಿಸುತ್ತದೆ.
ಆದರೆ, ಎದುರಿದ್ದವರ ಉದ್ದೇಶ ಏನಾಗಿದೆ ಎನ್ನುವ ಬಗ್ಗೆ ಅರಿವಿದ್ದರೆ ಯಾರನ್ನು ದ್ವೇಷ ಮಾಡಬೇಕು.ಪ್ರೀತಿ ಮಾಡಬೇಕು ಸಹಕಾರ ಕೊಡಬೇಕು ಎಂಬ ಸತ್ಯಜ್ಞಾನದಿಂದ ನಮ್ಮ ಧರ್ಮ ನಾವು ಅನುಸರಿಸಬೇಕಷ್ಟೆ. ಯಾರದ್ದೋ ಹಿಂದೆ ನಮ್ಮವರು ಹೋಗುತ್ತಿದ್ದರೂ ಇವರು ನಮ್ಮವರು ಎಂದು ಅವರ ಹಿಂದೆ ನಡೆದಷ್ಟೂ ದೂರವಾಗುತ್ತದೆ ಧರ್ಮ.
ಕಲಿಯುಗದ ಧರ್ಮ ಕರ್ಮ ಸತ್ಯಯುಗದ ಧರ್ಮ ಕರ್ಮಕ್ಕೆ ವಿರುದ್ದ ಕಾಣಿಸುತ್ತದೆಂದರೆ ಇಲ್ಲಿ ಅಸತ್ಯವನ್ನು ಸತ್ಯವೆಂದು ವಾದ ಮಾಡುವವರು ಹೆಚ್ಚು. ತತ್ವಕ್ಕಿಂತ ತಂತ್ರವೇ ಮೇಲು ಎನ್ನುವ ಜನ ಹೆಚ್ಚು.ಆದರೂ ಬದುಕಬೇಕು ಬಾಳಬೇಕು ಈಸಬೇಕು ಇದ್ದು ಜೈಸಬೇಕು. ಅದರಲ್ಲಿ ಸತ್ಯ ಧರ್ಮ ವಿದ್ದರೆ ಜೀವನ್ಮುಕ್ತಿ.ಇಲ್ಲವಾದರೆ ಪುನರ್ಜನ್ಮ .ಇದನ್ನು ಯಾರಾದರೂ ತಪ್ಪು ಎನ್ನುವವರಿದ್ದರೆ ಯಾವುದೆಂದು ತಿಳಿಸಿದರೆ ಒಳ್ಳೆಯದು. ತಪ್ಪಿಲ್ಲವೆಂದರೆ ಹಿಂದೆ ನಡೆದು ಸತ್ಯ ತಿಳಿಯುವುದು ಧರ್ಮ. ಇಲ್ಲಿ ಯಾರನ್ನೂ ಯಾರೂ ನಡೆಸುತ್ತಿಲ್ಲ.ಒಬ್ಬ ಹೀರೋ ಮಗ ವಿಲನ್ ಆಗಬಹುದು.ವಿಲನ್ ಮಗ ಹೀರೋ ಆಗಿ ನಟಿಸಬಹುದು.ಆದರೆ ನಿಜವಾದ ಸತ್ಯ ಬಣ್ಣಕಳಚಿದಾಗ ಕಾಣೋದಷ್ಟೆ. ನಾವೆಲ್ಲರೂ ಬಣ್ಣಬಳಿದುಕೊಂಡಿರುವ ನಾಟಕದ ಪಾತ್ರಧಾರಿಗಳಷ್ಟೆ.ಪರಮಾತ್ಮನ ದೃಷ್ಟಿಯಲ್ಲಿ ಯಾರ ಪಾತ್ರ ಉತ್ತಮ ಅಧಮವೆಂದು ತಿಳಿಯುವುದು ಅಗತ್ಯವಿದೆ.
ವೈದೀಕ ಪರಂಪರೆಯನ್ನು ಹೀನಾಯವಾಗಿ ಕಾಣುವುದು ಅಜ್ಞಾನ. ಅದಕ್ಕೆ ಸರಿಯಾಗಿ ಸಹಕಾರ ನೀಡುವುದು ಅಧರ್ಮ. ಅಧರ್ಮಕ್ಕೆ ತಕ್ಕಂತೆ ಜನ್ಮ.ಹೀಗಾಗಿ ಹಿಂದೂಗಳ ಸಂಖ್ಯೆ ಕುಸಿದಿದೆ ಬಿಟ್ಟುಮುಂದೆ ಹೋದವರ ಜನ್ಮ ಹೆಚ್ಚಾಗಿದೆ. ಇದರಲ್ಲಿ ತಪ್ಪು ಯಾರದ್ದು? ನಮ್ಮದೇ ಸಹಕಾರದಿಂದ ಬೆಳೆದಿರುವಾಗ ಅದರ ಪ್ರತಿಫಲ ಹಿಂದಿರುಗಿ ಬರೋದು ಸಹಜ. ದೈವತ್ವ ಬೆಳೆಸುವ ಶಿಕ್ಷಣವಿಲ್ಲದೆ ದೇವರನ್ನು ಹೊರಗೆಳೆದು ವ್ಯವಹಾರ ನಡೆಸಿ ಜನರನ್ನು ಆಳೋದರಿಂದ ಜನರಲ್ಲಿ ಜ್ಞಾನ ಬರುವುದಾಗಿದ್ದರೆ ಭಾರತ ಈ ಸ್ಥಿತಿಗೆ ಬರುತ್ತಿರಲಿಲ್ಲ. ಸ್ಥಿತಿಗೆ ಕಾರಣ ಸೃಷ್ಟಿ. ಸೃಷ್ಟಿ ಚೆನ್ನಾಗಿ ಇದ್ದರೆ ಪರಿಸ್ಥಿತಿ ಚೆನ್ನಾಗಿರುತ್ತದೆ.
ಮನೆಮನೆಯೊಳಗೆ ರಾಮಾಯಣ ಮಹಾಭಾರತ ಪ್ರಸಾರ ಆಗುತ್ತದೆ.ಅದರೊಳಗಿನ ಧರ್ಮ ಸೂಕ್ಷ್ಮ ಎಷ್ಟು ಜನರಿಗೆ ಅರ್ಥ ವಾಗಿರಬಹುದು? ವಿನಾಶಕಾಲೇ ವಿಪರೀತ ಬುದ್ದಿ.
ಬುದ್ದಿವಂತರ ಮುಂದೆ ಜ್ಞಾನ ಕುಸಿದಿದೆ. ಹಿಂದೂಗಳೇ ಹಿಂದಿನ ಸತ್ಯ ಅರ್ಥ ಮಾಡಿಕೊಳ್ಳಲು ಸೋತರೆ ಅನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಈ ಕೆಳಗಿನಪುಸ್ತಕದಲ್ಲಿ 18 ವರ್ಷದ ಸಂಶೋಧನೆಯ ಸತ್ಯ ಅಡಗಿದೆ. ಸತ್ಯ ಯಾವತ್ತೂ ಹಿಂದುಳಿಯುವುದರಿಂದ ಧರ್ಮ ವೂ ಹಿಂದೆಯೇ ಇರುತ್ತದೆ. ಇದನ್ನು ಖರೀದಿಸಿ ಓದುವ
ಮನಸ್ಸು ಕೆಲವರಿಗಷ್ಟೆ ಇರುತ್ತದೆ. ಅವರು ಮೇಲಿರುವ ದೇವರಿಗಷ್ಟೆ ಕಾಣುವರು.ಕೆಳಗಿರುವವರಿಗೆ ಕಾಣೋದಿಲ್ಲ.
ಜ್ಞಾನಯೋಗ,ರಾಜಯೋಗ,ಭಕ್ತಿ ಯೋಗ,ಕರ್ಮ ಯೋಗವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಳಗಿನ ಯೋಗ ಬೇಕು.ಯೋಗವೆಂದರೆ ಸೇರುವುದು.
ಒಂದು ಕುಟುಂಬದಲ್ಲಿ ಜನ್ಮ ಪಡೆದೆವೆಂದರೆ ಅದರ ಗುರುಹಿರಿಯರ ಜ್ಞಾನ ಧರ್ಮ ಕರ್ಮದೊಂದಿಗೆ ನಾವು ಸೇರಿದ್ದರೆ ಶಾಂತಿ.ವಿರುದ್ದವಿದ್ದರೆ ಅಧರ್ಮಕ್ಕೆ ಜಯ. ಇಲ್ಲಿ ನಮ್ಮ ತಪ್ಪನ್ನು ಸರ್ಕಾರದ ಮೇಲೆ ಹೋರಿಸಿಕೊಂಡು ಮುಂದೆ ಹೋದವರೆ ಹೆಚ್ಚಾದ ಕಾರಣ ಸರ್ಕಾರ ಸರಿಯಿಲ್ಲ ಎನ್ನಬಹುದು. ಅಂದರೆ ನಮ್ಮ ಸಹಕಾರವೇ ಸರಿಯಿರಲಿಲ್ಲ.
ನಾನು ಇಷ್ಟೆಲ್ಲಾ ಇಷ್ಟು ವರ್ಷದಿಂದಲೂ ಬರೆದು ಹಾಕಿದ್ದರೂ ಈವರೆಗೆ ಯಾವುದೇ ಮಠಾಧೀಶರು,ಜ್ಞಾನಿಗಳು,ಸಾಹಿತಿಗಳು ದೇಶಭಕ್ತರು ಯಾಕೆ ಹೀಗೆ ಬರೆದಿರೋದೆಂದುಪ್ರಶ್ನೆ ಮಾಡಿಲ್ಲ.
ನನ್ನ ಉದ್ದೇಶ ತಪ್ಪಿದ್ದರೆ ತಿಳಿಸಲೆಂದಾಗಿತ್ತು. ಇದರಿಂದಾಗಿ ಸತ್ಯ ಇದೇ ಎಂದುಮುಂದೆ ಬಂದಂತೆಲ್ಲಾ ಅಸತ್ಯ ಎದುರಿಗೆ ಬರುತ್ತಿತ್ತು. ಅದರೊಂದಿಗೆ ವಾದ ಮಾಡಿದರೂ ಸತ್ಯದಿಂದ ಸಿಗುವ ತೃಪ್ತಿ ನೆಮ್ಮದಿಯನ್ನು ಹಿಡಿದು ಹಿಂದೆ ನಿಲ್ಲಬೇಕಾಯಿತು. ಅಂದರೆ ಹಿಂದಿನ ಎಷ್ಟೋ ಆಚಾರ ವಿಚಾರ ಪ್ರಚಾರದಲ್ಲಿ ಅಸತ್ಯವೂ ಇತ್ತು.ಆದರೆ ಅದರಿಂದ ಧರ್ಮ ರಕ್ಷಣೆಯಾಗಿತ್ತು. ಹೀಗಾಗಿ ಸತ್ಯಾಸತ್ಯತೆಯನ್ನು ಕಾಲಕ್ಕೆ ತಕ್ಕಂತೆ ಅನುಭವಿಸಿ ತಿಳಿಯುವುದು ಅಗತ್ಯವಿದೆ.
ಹೇಳಿದ ಮಾತ್ರಕೆ ನಂಬದಿರು ಸ್ವತಃ ಚಿಂತಿಸಿ ತಿಳಿದು ನಡೆ..
ಕಾಲಪ್ರಭಾವದಲ್ಲಿ ಹುಲುಮಾನವರಿಗೆ ಮನಸ್ಸು ಹಾಳಾಗಿದೆ.
ಮನಸ್ಸಿನ ರೋಗಕ್ಕೆ ದೇಹಕ್ಕೆ ಔಷಧ ಕೊಡುವವರು ಬೆಳೆದಿದ್ದಾರೆ. ದೇಹ ಔಷಧದಿಂದ ಶಕ್ತಿಹೀನವಾದಾಗ ಆತ್ಮಸಾಕ್ಷಿಯ ಕಡೆಗೆ ಹೋಗದು. ಇದರಿಂದಾಗಿ ಆತ್ಮವಿಶ್ವಾಸ ಕಳೆದುಹೋಗುತ್ತದೆ. ಒಂದಕ್ಕೊಂದು ಜೋಡಿಸಿಕೊಂಡಿರುವ ಕೊಂಡಿಯನ್ನು ಮಧ್ಯವರ್ತಿಗಳು ಮಧ್ಯೆ ಪ್ರವೇಶ ಮಾಡಿ ಕಳಚಿದರಂತೂ ಮುಗಿಯಿತು ಕಥೆ. ಅತಂತ್ರ ಜೀವನ.
ಇದಕ್ಕೆ ಒಗ್ಗಟ್ಟು ಏಕತೆ,ಐಕ್ಯತೆ,ಸಮಾನತೆಯ ಮಂತ್ರ ಬೆರೆಸಿ ಜಾತ್ಯಾಂತರ,ಮತಾಂತರ, ಧರ್ಮಾಂತರ,ಪಕ್ಷಾಂತರಗಳು ಬೆಳೆದು ಅವಾಂತರ ಸೃಷ್ಟಿ ಮಾಡಿ ಆಳೋದು. ಈಗಲೂ ಬದಲಾವಣೆಗೆ ಅವಕಾಶವಿದೆ,ಸ್ವತಂತ್ರ ವಿದೆ, ಜ್ಞಾನವಿದೆ.ಮನಸ್ಸು ನಾವೇ ಮಾಡಿಕೊಳ್ಳಬೇಕಷ್ಟೆ.ಇದು ನಮ್ಮ ಕರ್ಮಫಲವಷ್ಟೆ.
ಹಿಂದೂಗಳಾದವರು ಹಿಂದಿನವರ ಧರ್ಮ ಕರ್ಮದ ಮೇಲೆ ದೃಷ್ಟಿ ಹರಿಸದೆ ಮುಂದೆ ಹೋದವರ ಮೇಲೆ ದೃಷ್ಟಿ ಹರಿಸಿ ಸರಿಯಿಲ್ಲವೆಂದರೆ ಅದೇ ಒಳಗೆ ಸೇರುತ್ತದೆ. ಮೊದಲು ನಮ್ಮ ಮಕ್ಕಳ ದೃಷ್ಟಿ ದೋಷ ಸರಿಪಡಿಸುವ ಶಿಕ್ಷಣ ಕೊಟ್ಟರೆ ಧರ್ಮ. ನಿಧಾನವಾದರೂ ಸರಿ ಹೆಜ್ಜೆಯಿಟ್ಟರೆ ಜೀವನದಲ್ಲಿ ಬದಲಾವಣೆ ಇದ್ದಲ್ಲಿಯೇ ಆಗಬಹುದು.
ನಿಧಾನವೇ ಪ್ರಧಾನ. ಎಷ್ಟು ರೆಂಬೆಕೊಂಬೆ ಕಡಿದರೂ ಬೇರು ಗಟ್ಟಿಯಿದ್ದರೆ ಮರ ಸುರಕ್ಷಿತ. ಉದುರಿಹೋಗುವ ಎಲೆಗಳಿಗೆ ಆಯಸ್ಸು ಇರೋದಿಲ್ಲ.ಹಾಗೆ ನಾವೆಲ್ಲರೂ ಆ ಪರಮಾತ್ಮನ ಎಲೆಯಾಗಿದ್ದರೂ ಉತ್ತಮ ಬೇರಿನ ಒಂದು ಸಣ್ಣ ಭಾಗ.ಇದ್ದಾಗಲೇ ಸತ್ಯ ತಿಳಿಸಿ ಹೋದರೆ ಧರ್ಮ ಸುರಕ್ಷಿತ.
ಆದರೆ, ಪರಮಸತ್ಯ ಆಳವಾಗಿರುವಾಗ ಒಳಹೊಕ್ಕಿ ನೋಡಿದವರಿಗೆ ಅರ್ಥ ವಾಗಿದೆ. ಹೊರಗಿನ ಮಿಥ್ಯ ಜಗತ್ತಿನಲ್ಲಿ ಸತ್ಯ ಕಾಣುತ್ತಿಲ್ಲ. ಅಸತ್ಯದೊಳಗೆ ಅಡಗಿದೆ. ಅಧರ್ಮದೊಳಗೆ ಧರ್ಮ ಸಿಲುಕಿದೆ, ಅಜ್ಞಾನದೊಳಗೆ ಜ್ಞಾನ ಮರೆಯಾಗಿದೆ.ಕಣ್ಣಿನ ಪೊರೆ ಕಳಚಿದರೆ ಸ್ವಚ್ಚವಾಗುತ್ತದೆ.
No comments:
Post a Comment