ಎಷ್ಟು ಅಂತರವಿದೆನೋಡಿ. ಒಬ್ಬ ರೈತನಿಗೂ ಒಬ್ಬ ವೈಧ್ಯನ ಸೇವೆಗೂ ದೃಷ್ಟಿಯಲ್ಲಿ ಅಂತರವಿದೆ. ರೈತನೂ ವರ್ಣದ ಪ್ರಕಾರ ಶೂದ್ರನೆ ವೈಧ್ಯನೂ ಶೂದ್ರನೆ ಇಲ್ಲಿ ಶೂದ್ರನೆಂದರೆ ಸೇವೆ ಮಾಡುವವರಾಗಿದ್ದಾರೆ. ಪರಮಾತ್ಮನ ಸೇವೆಗೆ ಯಾವುದೇ ಬೇಧವಿಲ್ಲ.ಮಾನವನ ದೃಷ್ಟಿ ಯಲ್ಲಿಬೇಧವಿದೆ.ಹೀಗಾಗಿ ಭೂ ಸೇವಕರಿಗೆ ಬೆಲೆಯಿಲ್ಲವಾಗಿದೆ. ಒಬ್ಬ ರೈತನ ದುಡಿಮೆಯಿಂದ ಸಾಕಷ್ಟು ಜೀವ ಉಳಿಸಬಹುದು ಹಾಗೆ ಜೀವಕ್ಕೆ ರೋಗ ಬಂದಾಗ ಉಳಿಸುವ ವೈಧ್ಯನೂ ನಾರಾಯಣನ ರೂಪದವರೆ. ರೈತನ ದುಡಿಮೆಯಲ್ಲಿ ಲೋಪಧೋಷಗಳಾದರೆ ರೋಗ ಬರೋದು.
ರೈತನಿಗೆ ಸಿಗದ ಗೌರವ ವೈಧ್ಯರಿಗೆ ಸಿಕ್ಕರೆ ಓದಿ ವೈಧ್ಯರಾಗೋರೆ ಹೆಚ್ಚು.
ರೋಗ ಬರೋದಕ್ಕೆ ಮುಂಚೆಯೇ ಆರೋಗ್ಯದ ಕಡೆಗೆ ಗಮನವಿಡಲು ಯೋಗಿಯಾಗಬೇಕು. ರೈತರನ್ನು ಯೋಗಿ ಎಂದು ಕರೆಯುವರೆಂದರೆವಾಸ್ತವದಲ್ಲಿ ರೈತರ ಸ್ಥಿತಿಗೆ ಕಾರಣವೇನು? ಜನ್ಮ ಪಡೆದಾಗಲೇ ಭೂತಾಯಿಯ ಸೇವೆಗೆ ಅರ್ಹತೆ ಪಡೆದವರಿಗೆ ನಮ್ಮಲ್ಲಿ ಬೆಲೆ ಕೊಟ್ಟು ಸಾಲದ ಹೊರೆ ಹಾಕಿದರೆಬನ ಸಾಲ ತೀರಿಸಲು ಭೂಮಿ ಮಾರಿ ಹೋಗೋದು ಸಹಜ. ಕೆಲವರಷ್ಟೆ ಸೇವಕರಾಗಿದ್ದಾರೆ ಹಲವರು ಸರ್ಕಾರದ ಹಿಂದೆ ಹೋಗಿ ಸಾಲದ ಸುಳಿಯಲ್ಲಿರುವರು. ಹೊರಗೆ ಕಾಣುವ ಸೇವೆಗೂ ಒಳಗಿನ ಸೇವೆಗೂ ಅಂತರವಿದ್ದಂತೆ ರೈತನ ಸೇವೆಗೂ ವೈಧ್ಯನ ಸೇವೆಗೂ ಅಂತರಬೆಳೆದಿದೆ.ಯೋಗಿಗಳ ದೇಶವನ್ನು ರೋಗಿಗಳ ದೇಶವಾಗಿಸಿರೋದು ಅಧರ್ಮ ಅಜ್ಞಾನ. ಕಲಿಗಾಲದ ಕಲಿಕೆಯ ಪ್ರಭಾವ ಕಲಿಕೆ ಶುದ್ದವಾದರೆ ದೃಷ್ಟಿ ದೋಷ ನಿವಾರಣೆಯಾಗುತ್ತದೆ.
ರೈತ ಕರ್ಮ ಯೋಗಿಯಾದರೆ ಜೀವನ ಸಾರ್ಥಕ. ವೈದ್ಯನೂ ಯೋಗ್ಯ ಚಿಕಿತ್ಸೆ ನೀಡಿದರೆ ಜೀವ ಉಳಿಸಬಹುದು. ಆದರೆ ಇಲ್ಲಿ ವ್ಯವಹಾರಕ್ಕಿಂತ ಧರ್ಮ ವೇ ಮುಖ್ಯವಾಗಿದೆ. ಹಣದಿಂದ ಧರ್ಮ ಉಳಿಯದು ಸತ್ಯಜ್ಞಾನದಿಂದ ಉಳಿಯುವುದು.
ಭೂ ತಾಯಿ ಸೇವೆ ಮಾಡೋದರಿಂದ ಭೂಮಿಯ ಋಣ ತೀರುತ್ತದೆ.ಸೇವೆ ನಿಸ್ವಾರ್ಥ ನಿರಹಂಕಾರ ದ ಜೊತೆಗೆ ಪ್ರತಿಫಲಾಪೇಕ್ಷೆ ಇಲ್ಲದೆ ಇರಬೇಕೆಂದರೆ ಈಗ ಸಾಧ್ಯವೆ?
No comments:
Post a Comment