ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, March 3, 2024

ಅತಿಯಾದ ಅಮೃತವೂ ವಿಷವಾಗಿರುತ್ತದೆ

ಇವತ್ತಿನ ವಿಶೇಷ ಲೇಖನದಲ್ಲಿ  ಎಲ್ಲಾ ವಿಷಯದ‌ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ

ಸಕ್ಕರೆಯಲ್ಲಿ ವಿಷವಿದೆ ಎನ್ನುವುದು ಎಲ್ಲರಿಗೂ  ತಿಳಿದ ವಿಚಾರವೆ ಆದರೂ ಸಕ್ಕರೆ ಸೇವಿಸೋದನ್ನು ಯಾರೂ ಬಿಡದಿರೋದಕ್ಕೆ ಕಾರಣಗಳಿವೆ. ಕೆಲವರಷ್ಟೆ ಅದಕ್ಕೆ ಪೂರಕವಾದ ಬೇರೆಯದನ್ನು ಬಳಸಿ ಸಿಹಿ ಪದಾರ್ಥ ತಿಂದರೆ ಹಲವರಿಗೆ ಇದು ವಿಷವೆಂದರಿತರೂ ತಿಂದು ಜೀರ್ಣಿಸಿಕೊಳ್ಳುವ ಶಕ್ತಿಯಿರೋದೆ ದೊಡ್ಡದು.ಹಾಗಾದರೆ ಇದಕ್ಕೆ ಪರಿಹಾರ  ತಿನ್ನೊದನ್ನು ಬಿಡೋದೇ ಅಥವಾ ವಿಷವನ್ನು ತೆಗೆಯೋದೇ. ವಿಷ ಬೆರೆಸೋ ವಿಷಜಂತುಗಳು ಈಗಂತೂ ತಿನ್ನುವ ಎಲ್ಲಾ ಆಹಾರ ಪದಾರ್ಥಗಳು,  ಹಾಲು ಹಣ್ಣು, ತರಕಾರಿ ದವಸಧಾನ್ಯಗಳು ಮಾಂಸಹಾರ.ಸಿದ್ದ ಆಹಾರಗಳಲಗಲಿಯೂ ಕಲಬೆರೆಸಿಕೊಂಡು ಮಾರಾಟವಾಗುತ್ತಿದ್ದರೂ ಅದನ್ನು ತಿಳಿದರೂ ಯಾವುದೇ ರೀತಿಯ ಕಾನೂನಿನ‌ಕ್ರಮ ತೆಗೆದುಕೊಳ್ಳಲಾಗದೆ ಇದನ್ನು ಜನಸಾಮಾನ್ಯರವರೆಗೆ ಪ್ರಚಾರ ಮಾಡಿಕೊಂಡಿದ್ದರೆ  ಉಪಯೋಗವಿಲ್ಲ.ಜನರ ಮನಸ್ಸಿನಲ್ಲಿ ವಿಷ ಬೆರೆಸಿದರೆ  ಇದ್ದೂ ಸತ್ತಂತೆ. ಅಮೃತದಂತಹ ವಿಚಾರವನ್ನು ಹೊರಹಾಕದೆ ಹೊಡಿದಿಟ್ಟುಕೊಂಡು ತಮ್ಮ ವ್ಯವಹಾರಕ್ಕೆ  ಏನು ಬೇಕೋ ಅದನ್ನು ಹೆಚ್ಚಾಗಿ ಹರಡೋದರಿಂದ ಅದೇ ಮುಂದೆ ನಮ್ಮ ಜೀವನಕ್ಕೂ ವಿಷವಾಗಿ ಕಾಡುವುದೆನ್ನುವ ಸತ್ಯ ತಿಳಿದಾಗಲೇ ಪ್ರಚಾರ ಮಾಡೋದಾದರೆ ಉತ್ತಮ ವಿಚಾರಗಳಿರಲಿ ಮನಸ್ಸಿಗೆ ಶಾಂತಿ ನೆಮ್ಮದಿ ಆತ್ಮತೃಪ್ತಿ ನೀಡುವಂತಿರಲಿ. ಇದು ಜನರ  ಜೀವನದಲ್ಲಿ ಬದಲಾವಣೆ ತರುವಂತಾದರೆ ಅದೇ ನಮ್ಮ ಸಮಾಜಸೇವೆಯಾಗಿರುತ್ತದೆ.ತನ್ನ ಸಂಸಾರಕ್ಕಾಗಿ ಸಮಾಜಕ್ಕೆ ಕೆಟ್ಟುಹೋದ ವಿಚಾರ ತಲುಪಿಸುವಾಗ  ಇದರಿಂದಾಗಿ ಸಮಾಜದಲ್ಲಿ  ಯಾವ ದುಷ್ಪರಿಣಾಮ ಬೀರುವುದೆನ್ನುವ ಬಗ್ಗೆ ಪ್ರಚಾರಕರಿಗೆ ಅರಿವಿದ್ದರೆ‌ ನಿಜವಾಗಿಯೂ ನಾವು  ನಡೆಯೋ ದಾರಿ ತಲುಪೋ ದಾರಿ ಸುಗಮವಾಗಿರುವುದು. ಇದರಲ್ಲಿಯೇ ಸ್ವಾರ್ಥ ಪೂರಿತ ವಿಷಯವಿದ್ದು ಯಾವುದೇ ಪರಿಹಾರ ಮಾರ್ಗ ವಿಲ್ಲದೆ ಜನರನ್ನು  ದಾರಿತಪ್ಪಿಸುವ ಅಥವಾ ಆರೋಗ್ಯ ಹಾಳಾಗುವಂತಾದರೆ ಇದಕ್ಕೆ ಭಗವಂತನಲ್ಲಿ ಕ್ಷಮೆಯಿರದು.
ಒಂದು ಮಗು ಜನ್ಮ ಪಡೆಯಲು ಅವರ ಪೋಷಕರೆ ಕಾರಣವಾಗಿರುವರು.ಹಾಗೆ ಒಂದು ಸುದ್ದಿ ಜನ್ಮಪಡೆದು ಜನಸಾಮಾನ್ಯರಿಗೆ ತಲುಪಬೇಕಾದರೆ ಅದೂ ಮಾಧ್ಯಮಗಳಿಂದಲೇ ಸಾಧ್ಯ. ಇದರಲ್ಲಿ ವಿಷಯ ಸತ್ಯ ಧರ್ಮ ನ್ಯಾಯ ನೀತಿಯಿದ್ದರೂ ಅದರ ಹಿಂದೆ  ಸಾಕಷ್ಟು ರಾಜಕೀಯ ಕುತಂತ್ರದ ವ್ಯವಹಾರವೇ ಮುಖ್ಯವಾಗಿದ್ದರೆ ಅಲ್ಲಿ ಸತ್ಯವೂ ಇರದು ಧರ್ಮ ವೂ ನಿಲ್ಲದೆ  ಅಶಾಂತಿಗೆ ಕಾರಣವಾಗುತ್ತದೆ.ಹಾಗಂತ  ಎಲ್ಲರೂ ಒಂದೇ ರೀತಿಯಲ್ಲಿ ಇರೋದಿಲ್ಲ.ಕೆಲವರ ಉದ್ದೇಶ ಉತ್ತಮವಾಗಿದ್ದರೂ ಸುದ್ದಿಯ ಹಿಂದಿರುವ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ಕಷ್ಟದ ಜೊತೆಗೆ ನಷ್ಟವೂ ಹೆಚ್ಚುವುದು. ಒಟ್ಟಿನಲ್ಲಿ ನಾವೇನು ತಿಳಿಸಿದರೂ ಅದಕ್ಕೆ ಸೂಕ್ತವಾದ ಪರಿಹಾರವಿದ್ದರೆ ಉತ್ತಮ ಇಲ್ಲವಾದರೆ ತಿಳಿಸದಿರೋದೆ ಉತ್ತಮ. ಕಾರಣ ಮಾನವನ ಮನಸ್ಸಿನಲ್ಲಿ ಕುಳಿತು ಆಡಿಸುವ ವಿಚಾರಗಳೇ ಅವನ ಆರೋಗ್ಯಕ್ಕೆ ಹಾನಿಕರವಾಗಬಹುದು. ಕಲಬೆರಕೆಯ ಶಿಕ್ಷಣದಿಂದ ಹಿಡಿದು ಧರ್ಮ, ಜಾತಿ,ಪಕ್ಷ,ವಿಚಾರ
ವಿನಿಮಯವೇ ವಿಷಕಾರಿಯಾಗಿರೋವಾಗ ಹೊರಗಿನಿಂದ ಸೇವಿಸುವ ಆಹಾರದೊಳಗಿನ ವಿಷವೂ ಸೇರಿದರೆ  ಮುಗಿಯಿತು ಕಥೆ ಮಾನವನ ದೇಹವೇ ವಿಷಪೂರಿತವಾಗಿದ್ದು ಅದೇ ಮುಂದಿನ‌ ಪೀಳಿಗೆಗೂ ಹರಡಿಕೊಂಡು  ಬೆಳೆಯುತ್ತದೆ. ಇದಕ್ಕೆ ಪರಿಹಾರ ಅಮೃತದಂತಹ ವಿಷಯವನ್ನು ಶಿಕ್ಷಣದಲ್ಲಿಯೇ ಸೇರಿಸುತ್ತಾ ಸರಳ ಜೀವನ ಸ್ವಾವಲಂಬನೆ, ಸತ್ಯ ಧರ್ಮದ‌ ನಡೆ ನುಡಿ ಸ್ವತಂತ್ರ ಜ್ಞಾನದೆಡೆಗೆ  ನಡೆದ ಮಹಾತ್ಮರ ಆಹಾರ ವಿಹಾರದ ಬಗ್ಗೆ ಗಮನಹರಿಸಿದರೆ ಪ್ರಕೃತಿ ಶುದ್ದವಾಗೇ ಇದೆ ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳಲು ನಮ್ಮಲ್ಲಿ ಜ್ಞಾನವಿಲ್ಲ.
ಪ್ರತಿಯೊಂದು ರಾಜಕೀಯ ವ್ಯವಹಾರವಾದಾಗ ಕಾಣೋದು ಹಣ ಮಾತ್ರ.ಇದೇ ಮುಂದೆ  ಎಲ್ಲಾ ಸಮಸ್ಯೆಗಳಿಗೆ ದಾರಿಯಾಗುತ್ತಾ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಆಸೆಗೆ  ಮನಸ್ಸು ಬಲಿಯಾದಾಗ ತಿನ್ನುವುದಕ್ಕಾಗಿಯೇ ಜೀವನವಾಗುತ್ತದೆ. ಇದರಲ್ಲಿ ವಿಷವಿದ್ದರಂತೂ ರೋಗವೇ ಹೆಚ್ಚಾಗಿ  ಯೋಗಿಗಳ ದೇಶ ರೋಗಿಗಳ ದೇಶವಾಗುತ್ತಾ ಹೈಟೆಕ್ ಆಸ್ಪತ್ರೆ ಗಳಿಗೆ ಸರ್ಕಾರ ಸಾಕಷ್ಟು ಹಣ ಸುರಿದರೆ ಉಪಯೋಗವಿಲ್ಲ. ಕಾರಣ  ಸುಜ್ಞಾನವು ಯೋಗದಿಂದ ಸಿಗೋವಾಗ  ಆರೋಗ್ಯ ಉತ್ತಮವಾಗಿರಲು ಆರೋಗ್ಯಕರ ಶಿಕ್ಷಣವಿರಬೇಕಷ್ಟೆ.ಹಿಂದೆ ಮಹರ್ಷಿಗಳು ಯೋಗಿಗಳು ಪ್ರಕೃತಿಗೆ ತಕ್ಕಂತೆ ಜೀವನ ನಡೆಸಿ ಸಾವಿರಾರು ವರ್ಷ ಆರೋಗ್ಯವಾಗಿದ್ದರು ಎಂದರೆ ಪ್ರಕೃತಿ ವಿರುದ್ದದ ಮಾನವನ ನಡೆ ನುಡಿ ಆಹಾರ ವಿಹಾರ ಶಿಕ್ಷಣದ ಜ್ಞಾನವೇ ಎಲ್ಲಾ ಸಮಸ್ಯೆಗಳಿಗೆ ಕಾರಣ. ಒಟ್ಟಿನಲ್ಲಿ ಹೆಚ್ಚುವಿಚಾರ ತಿಳಿದಷ್ಟೂ ಬುದ್ದಿವಂತರಾಗಬಹುದು ಆದರೆ ಜ್ಞಾನಿಗಳಾಗೋದಿಲ್ಲ. ಜ್ಞಾನ ಯಾವತ್ತೂ ಒಳಗೆ ಶುದ್ದವಾಗಿಸುತ್ತದೆ. ಹೊರಗಿನ ವಿಷಯದಲ್ಲಿ ವಿಷವಿರೋವಾಗ ಅಶುದ್ದತೆಯ ದೇಹದಲ್ಲಿ ಸತ್ಯ ಧರ್ಮ ಕ್ಕೆ ಸ್ಥಾನವೇ ಇರದು. ದಯವಿಟ್ಟು ಪ್ರಚಾರಕರು ಎಚ್ಚರವಾಗಿದ್ದು ದೇಶದ ಭವಿಷ್ಯ ನಮ್ಮ ಸುದ್ದಿಗಳ ಮೇಲಿದೆ ಎಂದು ತಿಳಿದು ಯಾವುದನ್ನು ತಿಳಿಸಿದರೆ  ಉತ್ತಮ ಅಧಮ ಎನ್ನುವ ಬಗ್ಗೆ  ಆತ್ಮಾವಲೋಕನ ನಡೆಸಿಕೊಂಡರೆ  ನಾವು ಮಧ್ಯವರ್ತಿ ಯಾಗಿದ್ದರೂ‌ ಮುಂದೆ ನಡೆಯಬಹುದು. ಕಾರಣ ಮಧ್ಯವರ್ತಿ ಯಾವಾಗಲೂ ಅತಂತ್ರವೆ. ಹಾಗಾಗಿ ಮಾನವನಿಗೆ ಮೊದಲು ಮಾನವನಾಗಿ ನಂತರ ಮಹಾತ್ಮರಾಗಲು ತಿಳಿಸಿರೋದು. ಹಣಕ್ಕಾಗಿ ಸುದ್ದಿಯಾಗಬಾರದು.ಜ್ಞಾನಕ್ಕೆ ಸುದ್ದಿ ಹರಡಬೇಕಿದೆ. ಅದರಲ್ಲಿ ನನ್ನ ಜ್ಞಾನವೂ ಬೆಳೆದಾಗಲೇ ಪ್ರಸಿದ್ದರಾಗಬಹುದು.  ಹಲವು ಗುರುಹಿರಿಯರು  ಭೌತಿಕ ವಿಷಯಗಳನ್ನು ತಿಳಿಯಲು ಪ್ರಯತ್ನಪಡೋದೇ ಇಲ್ಲ ಹೀಗಾಗಿ ಅವರಲ್ಲಿ ಆಂತರಿಕ ಶಕ್ತಿ ಜಾಗೃತವಾಗಿದ್ದು ಭವಿಷ್ಯ ಅರ್ಥ ವಾಗಿ ವರ್ತ ಮಾನದ ವಾರ್ತೆ ಉತ್ತಮವಾಗಿರುತ್ತದೆ. ಜ್ಞಾನ ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖ.ಹಾಗೆ  ಅಮೃತ ಹೆಚ್ಚಾದರೂ ವಿಷವಾಗಿರುತ್ತದೆ. ವಿಷ ಅಧಿಕವಾದರೂ ಅಮೃತ ಹೊರಬರುತ್ತದೆ.ಅಂದರೆ ವಿಷತುಂಬಿದ ಮನಸ್ಸಿಗೆ ವಿಷವೇ ಅಮೃತ ಕುಡಿದಂತಿರುತ್ತದೆ.ಆದರೆ ಇದೇ ಅಸುರ ಗುಣ.ನಮಗೇ ತಿಳಿಯದೆ ಒಳಗೇ ಎಷ್ಟೋ ಅಸುರಿ ಶಕ್ತಿ ಬೆಳೆದಿರುವಾಗ ಅಸುರರಿಗೆ ವಿಷ  ಏನೂ ಮಾಡದಿದ್ದರೂ ಅದು ಇಡೀ ವಿಶ್ವ ವನ್ನೇ ದಾರಿತಪ್ಪಿಸಿ ಆಳೋದಂತೂ ಸತ್ಯವಾಗಿದೆ. ಸಾಧ್ಯವಾದವರು ಉತ್ತಮ ಸಾತ್ವಿಕ ವಿಷಯಗಳನ್ನು  ಪ್ರಸಾರ ಮಾಡಿದರೆ ಎಲ್ಲೋ ಕೆಲವರ ಜೀವನವೂ ಅಮೃತಮಯವಾಗಬಹುದು.ಅದೇ ನಾವೀಗ ಸಮಾಜಕ್ಕೆ ಮಾಡಬೇಕಾದ ಸಣ್ಣ ಸೇವೆ. ಮೇಲಿರುವ ಭಗವಂತ ಎಲ್ಲದ್ದಕ್ಕೂ ಸಾಕ್ಷಿಯಾಗಿರುವಾಗ  ಜೀವ ಶಾಶ್ವತವಲ್ಲ ಆತ್ಮ ಶಾಶ್ವತ.ಇದನ್ನು ಶುದ್ದವಾಗಿಡಲು ಉತ್ತಮ ವಿಚಾರಗಳನ್ನು ಹರಡಿದರೆ ಉತ್ತಮ ಬದಲಾವಣೆ ಸಾಧ್ಯ.
ದಿನವಿಡೀ ಯಾವುದೋ ಭ್ರಷ್ಟ ದುಷ್ಟ ಭಯೋತ್ಪಾದಕರ ವಿಷಯ ಹಿಡಿದು ಸಮಾಜಕ್ಕೆ ಸುದ್ದಿ ತಲುಪಿಸೋದೇ ನಮ್ಮ ಧರ್ಮ ಎಂದರೆ  ಅಸತ್ಯವಷ್ಟೆ.
ಇದೇ ಅಧರ್ಮಕ್ಕೆ ದಾರಿಯಾಗುತ್ತಿದೆ.ಎಷ್ಟೋ ಭ್ರಷ್ಟ ದುಷ್ಟ
 ಭಯೋತ್ಪಾದಕರ ಜನ್ಮವಾಗುತ್ತಿದೆ‌.ಬೀಜವೇ ವಿಷವಿದ್ದರೆ ಮರವಾಗೋದು.
ಸಾಮಾನ್ಯರ ಜೀವನ ನರಕವಾಗುತ್ತಿದೆ.ಜನರನ್ನು ದಾರಿತಪ್ಪಿಸಿ ಆಳುವವರು ಮಧ್ಯೆ ಬೆಳೆಯುತ್ತಿದ್ದಾರೆ.ಮನೆಯಲ್ಲಿ ನೆಮ್ಮದಿ ಶಾಂತಿ ಸುಖದಿಂದಿದ್ದ ಕುಟುಂಬಗಳು  ಮರೆಯಾಗುತ್ತಿದೆ.
ಕೆಲವರು ಮನೆ ಬಿಟ್ಟು ಹೊರಬಂದರೆ ಹಲವರಿಗೆ ಕುಟುಂಬ ಎಂದರೆ ಏನೆಂಬ ಅರಿವೇ ಇಲ್ಲ. ಒಟ್ಟಿನಲ್ಲಿ ಹಣಕ್ಕಾಗಿ ಏನನ್ನಾದರೂ ಮಾಡಬಹುದೆನ್ನುವ ಬುದ್ದಿವಂತಿಕೆ ಮಾನವನಲ್ಲಿ ಹೆಚ್ಚಾಗಿ ಒಳಗೇ ಅಡಗಿರುವ ಜ್ಞಾನವನ್ನು  ಬೆಳೆಸದ ಶಿಕ್ಷಣವೇ  ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದರೂ ಈವರೆಗೆ  ಎಷ್ಟೋ  ಮಾನವರು ಎಚ್ಚರವಾಗದಿರೋದಕ್ಕೆ ಕಾರಣ ಒಳಗೇ ಅಡಗಿರುವ ಭಯಪೂರಿತ ವಿಷಯ  ಅದೂ ಹೊರಗಿನಿಂದ ಬೆಳೆದಿದೆಯೋ ಅಥವಾ ಒಳಗಿದ್ದೇ ಸೇರಿದೆಯೋ ದೇವರಿಗಷ್ಟೆ ಗೊತ್ತು.
ಅದನ್ನು  ಹಿಡಿದು ಜೀವನ ನಡೆಸಿದರೆ ಅಮೃತವೆಲ್ಲಿರುತ್ತದೆ? ವ್ಯವಹಾರವಿರಲಿ ಅದು ಧರ್ಮಮಾರ್ಗದಲ್ಲಿರಲಿ.ಧರ್ಮ ವು ಆತ್ಮಸಾಕ್ಷಿಯ ಕಡೆಗಿದ್ದರೆ ಉತ್ತಮ ಬದಲಾವಣೆ ಒಳಗೇ ನಡೆಯುತ್ತದೆ.ವಿಷ ತಿಂದರೂ ಪರಮಾತ್ಮನಿಗೇನೂ ಆಗೋದಿಲ್ಲವೆಂದಂತಿರುತ್ತದೆ.ಇಲ್ಲಿ ಎಲ್ಲರಿಗೂ ತಿಳಿದ ಭಕ್ತ ಪ್ರಹ್ಲಾದನ ಕಥೆ ನೆನಪಿಸಿಕೊಳ್ಳಬಹುದು.ತಂದೆಯೇ ವಿಷದ ಅಸುರ ರಕ್ತಗತವಾಗಿ ಬಂದಿದ್ದರೂ‌ ಮಗನಲ್ಲಿದ್ದ ಅಮೃತದಂತಹ ತತ್ವಜ್ಞಾನವು ದೇವತೆಗಳ ಕೊಡುಗೆಯಾದ ಕಾರಣ ಎಷ್ಟೇ ವಿಷ ಕೊಟ್ಟರೂ ಬದುಕಿ ಬಂದ ಎಂದರೆ  ನಮ್ಮೊಳಗೇ  ಅಮೃತವಿದ್ದರೆ ಹೊರಗಿನ ವಿಷದ ಪರಿಣಾಮ  ತಾತ್ಕಾಲಿಕ ವಾಗಿರುತ್ತದೆ.
ಹಾಗೆಯೇ ನಮ್ಮೊಳಗೇ ಒಳ್ಳೆಯ ಗುಣವಿಶೇಷವಿದ್ದಾಗ ಹೊರಗಿನ ವಿಷಯಗಳಲ್ಲಿ ಅಡಗಿರುವ. ವಿಷವೂ ಅರ್ಥ ವಾಗುತ್ತಾ ಅದರಿಂದ ಮನಸ್ಸು ದೂರವಾಗುತ್ತದೆ. ಮನಸ್ಸಿನ ವಿಷ ಬಹಳ ಅಪಾಯಕಾರಿ. ದೇಹವನ್ನಾದರೂ ಸ್ವಚ್ಚಗೊಳಿಸಬಹುದು.ಮನಸ್ಸನ್ನು ಸ್ವಚ್ಚಗೊಳಿಸೋದು ಕಷ್ಟವಿದೆ. ಇದಕ್ಕೆ ಸಾತ್ವಿಕ  ವಿಚಾರಗಳೇ ಆಹಾರವಾಗಿದೆ.  ಇನ್ನಾದರೂ ಭಾರತೀಯರು  ತಮ್ಮ ಮಕ್ಕಳಿಗೆ ಉಣಬಡಿಸುತ್ತಿರುವ ಶಿಕ್ಷಣದ ವಿಚಾರದ ಬಗ್ಗೆ ಪೋಷಕರಾಗಿ ಗಮನಹರಿಸಿದರೆ ಅಮೃತ ಪುತ್ರರಿಂದ ದೇಶೋದ್ದಾರ ಸಾಧ್ಯವಿದೆ.
ಪ್ರತಿಯೊಂದು ರಾಜಕೀಯ ವ್ಯವಹಾರಕ್ಕೆ ಸೀಮಿತವಾದರೆ ಅದೇ ವಿಷವಾಗಿರುತ್ತದೆ. ಯಾರನ್ನೋ ಯಾರೋ ಆಳೋದೇ ಅಧರ್ಮ. ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ರಾಜರು ಯಾರು? ಸಾಮಾನ್ಯ ಜ್ಞಾನದ ಕೊರತೆಯೇ ಎಲ್ಲದ್ದಕ್ಕೂ ಕಾರಣ. 
ಅತಿಯಾಗಿ ಒಳಗೂ ಹೋಗದೆ ಅತಿಯಾಗಿ ಹೊರಗೂ ನಡೆಯದೆ ಇತಿಮಿತಿಯಲ್ಲಿ ನಡೆ ನುಡಿ ಇದ್ದರೆ ಸಾಮಾನ್ಯಜ್ಞಾನವಿರುತ್ತದೆ.ನಾವು ನಾವಾಗಿರಬಹುದು. ಇಲ್ಲವಾದರೆ ಇನ್ನೊಬ್ಬರ ಆಳಾಗಿ ಹೋಗೋದು ಸತ್ಯ. ಎಲ್ಲಾ ಭಗವಂತನ ದಾಸರೆ ಭೂಮಿ ಪುತ್ರರೆ ಆದರೂ ಭಗವಂತ ಮತ್ತು ಭೂಮಿಯನ್ನೇ ದಾಸರಾಗಿಸಿಕೊಳ್ಳುವ ಅಸುರರವಶ
ದಲ್ಲಿ ಜೀವನವಿದ್ದರೆ ಯಾರೂ ಕಾಣೋದಿಲ್ಲ.ನಾನು ನಾನಾಗಿಯೂ ಇರೋದಿಲ್ಲ. ನಾನ್ಯಾರೆಂಬ ಪ್ರಶ್ನೆ ಒಳಗಿಂದ ಬರೋದೂ ಇಲ್ಲ.ಪ್ರಶ್ನೆ ಏಳದೆ ಉತ್ತರ ಸಿಗೋದೂ ಇಲ್ಲ. ಎಲ್ಲಾ ಹೊರಗಿನ ವಿಷವೇಸ್ಥಾನ ಪಡೆದು ಸನ್ಮಾನ ಗಳಿಸುತ್ತಾ   ದೇಹ ತುಂಬಿಕೊಳ್ಳುತ್ತದೆ. ಅದೇ ದೇಶ ವಿಶ್ವ ವನ್ನು ಆಳಲು ಹೊರಡುತ್ತದೆ.  ಇದಕ್ಕೆ ಸಹಕಾರ ಕೊಟ್ಟವರೆ ಮಾನವರು.
ದೇವಾಸುರರ ನಡುವಿರುವ ಮಾನವ ಶಕ್ತಿಯ ಸಹಕಾರವಿಲ್ಲದೆ ಏನೂ ನಡೆಯದು,ನಡೆಯುತ್ತಿಲ್ಲ,
ನಡೆಯುತ್ತಿರುವುದು ನಡೆದಿದೆ.ನಮ್ಮ ಮನಸ್ಸು ಅಮೃತ ತತ್ವದೆಡೆಗೆ ನಡೆದಾಗಲೇ ವಿಷದ ಪ್ರಭಾವ ಕುಸಿಯುತ್ತದೆ.  ಇಲ್ಲಿ ಯಾರನ್ನೂ ತೆಗಳುವ  ಹಾಗಿಲ್ಲ  ಹೊಗಳುವಂತೆಯೂ ಇಲ್ಲ. ಅವರವರ ಸಂಸಾರಕ್ಕೆ ಮಾಡಿಕೊಂಡ ಆಸ್ತಿ  ಅವರಷ್ಟೆ ಅನುಭವಿಸುವಾಗ ಇದರಲ್ಲಿ ಯಾರಿಗೂ ಪಾಲಿಲ್ಲ. ಹಾಗೇನಾದರೂ ಕೊಟ್ಟರೆ ಅದರಲ್ಲಿ  ಧರ್ಮ ಸತ್ಯವಿದ್ದರೆ ಉತ್ತಮ.ಅಧರ್ಮ ಅಸತ್ಯವಿದ್ದರೆ ಪಡೆದವರಿಗೂ ಸಂಕಷ್ಟ. ಸರ್ಕಾರವೇ ಭ್ರಷ್ಟಾಚಾರ ದಲ್ಲಿರುವಾಗ ಅದರ ಹಿಂದೆ ನಡೆದವರಿಗೆ ಒಳ್ಳೆಯದಾಗುವುದೆ? ಅಥವಾ ಮನೆಯೊಡೆಯನೇ ಕಳ್ಳ ಸುಳ್ಳನಾಗಿದ್ದರೆ ಮಕ್ಕಳು  ಸತ್ಯವಂತರಾಗೋದು ಕಷ್ಟವಿದೆ. ಹಾಗೆ ನಾನೇ ವಿದೇಶಿಗರ ವಶದಲ್ಲಿರುವಾಗ ದೇಶದ ಆಸ್ತಿ ಹೇಗಾಗಬಹುದು? ಅವರಿಂದ ದೂರವಿದ್ದು ಉತ್ತಮ ಸಂಸ್ಕಾರದ ಶಿಕ್ಷಣದ ಜೊತೆಗೆ ಗುರುವಿನ ಅನುಗ್ರಹವಿದ್ದರೆ ಸಾಧ್ಯ.ಆದರೆ ಇಂದು ಇದಕ್ಕೆ  ಸಹಕರಿಸುವವರು  ಯಾರಿದ್ದಾರೆ? ಧಾರ್ಮಿಕ ಕ್ಷೇತ್ರದ ಹಿಂದೆ ರಾಜಕಾರಣಿಗಳಿದ್ದಾರೆ.ಹಾಗೆ ರಾಜಕಾರಣಿಗಳ ಹಿಂದೆ ಧಾರ್ಮಿಕ ಗುರುಗಳೂ ಹಲವರು  ನಡೆದಿದ್ದಾರೆಂದರೆ ಯಾರಿಂದ ಯಾರು ಬೆಳೆದಿರೋದು? ಪ್ರಜಾಪ್ರಭುತ್ವದ ಪ್ರಜೆಗಳೇ  ಎಚ್ಚರವಾಗಿದ್ದರೆ  ನಮ್ಮೊಳಗೇ ಇರುವ  ಸತ್ಯದ ಹಿಂದೆ ನಡೆದರೆ ಭಗವಂತನಿರುವನು,ಹೊರಗೆ ನಡೆದಷ್ಟೂ ಭಗವಂತನಿಂದ ದೂರವಾದಂತೆ.  ಇದನ್ನರಿತು  ನಮ್ಮ ಇಂದಿನ ಸ್ಥಿತಿಗೆ ಕಾರಣ ತಿಳಿದರೆ  ಪರಿಹಾರವೂ ಒಳಗೇ  ಸಿಗಬಹುದು. ಕಾಲದ ವಶದಲ್ಲಿರುವ ಕಲಿಗಾಲದಲ್ಲಿ  ಕಲಿಕೆಯೇ ಸರಿಯಿಲ್ಲವಾದರೆ  ಎಲ್ಲಾ ಪರರ ವಶ.
ಪರಮಾತ್ಮನ ವಶದಲ್ಲಿ ಅಲ್ಪಮಂದಿಯಿರಬಹುದು.
ಅಲ್ಪಸಂಖ್ಯಾತರನ್ನು ಬಹುಸಂಖ್ಯಾತಗೊಳಿಸುವ ಅಜ್ಞಾನದ ಸಹಕಾರಕ್ಕಿಂತ ಅಲ್ಪಸಂಖ್ಯಾತರಲ್ಲಿರುವ  ಅಲ್ಪ ಬುದ್ದಿಗೆ  ಉತ್ತಮ ಸಂಸ್ಕಾರದ ಶಿಕ್ಷಣ‌ನೀಡಿ ಬೆಳೆಸಿದ್ದರೆ ಆತ್ಮನಿರ್ಭರ ಭಾರತವಾಗುತ್ತಿತ್ತು. ನಿಜವಾದ ಜ್ಞಾನಿಗಳನ್ನೇ ಅಲ್ಪಸಂಖ್ಯಾತರನ್ನು ಒಪ್ಪಿ ನಡೆಯುವಂತೆ ಮಾಡಿದರೆ ಆತ್ಮದುರ್ಭಲ ಭಾರತ. ಇಲ್ಲಿ ಯಾವ ಜನ್ಮದಲ್ಲಿ ಯಾವ ಧರ್ಮ,ಜಾತಿ, ದೇಶ,ಪಕ್ಷದ ಅಡಿಯಲ್ಲಿದ್ದರೂ ಅದರ ಋಣ ತೀರಿಸಲು ಅದರಡಿ ಜನಗಮಪಡೆದು ಬರಲೇಬೇಕೆನ್ನುತ್ತದೆ ಆಧ್ಯಾತ್ಮ ಸತ್ಯ.
ವಿಶ್ವ ವಿಡೀ ಹರಡಿರುವ ಹಿಂದೂ ಧರ್ಮ ದವರು ಹಿಂದೂಸ್ತಾನದಲ್ಲಿಯೇ ಕಡಿಮೆಯಾದರೆ ಹಿಂದೂ ದೇಶ ಆಗೋದಿಲ್ಲ.ಮೊದಲು ನಮ್ಮ ನಮ್ಮ ಹಿಂದಿನ ಗುರುಹಿರಿಯರ ಶಿಕ್ಷಣಜ್ಞಾನ ಧರ್ಮ ಕರ್ಮ ದ ಬಗ್ಗೆ ತಿಳಿದು ಮಕ್ಕಳಿಗೆ ಮನೆಯೊಳಗೆ ತಿಳಿಸಿ ಬೆಳೆಸುವತ್ತ ಹಿಂದೂಗಳಿರುವರೆ  ಎಂದರೆ ಇಲ್ಲವೆನ್ನಬಹುದು.ಕಾರಣ ನಮ್ಮ ಮೊದಲ ಶಿಕ್ಷಣವೇ ಹೊರಗಿನವರ ಕೊಡುಗೆ.
ಅವರನ್ನು ದ್ವೇಷ ಮಾಡಿದಷ್ಟೂ ಅಜ್ಞಾನವೇ ಸುತ್ತಿಕೊಂಡು ಆಳುತ್ತದೆ.ಹೀಗಾಗಿ ದ್ವೇಷ ಬಿಟ್ಟು ಹಿಂದಿನ ಸತ್ಯ ಅರ್ಥ ಮಾಡಿಕೊಂಡು ನಮ್ಮ ಜೀವನಕ್ಕೆ ಬೇಕಾದ  ವಿಚಾರವಷ್ಟೆ ತಿಳಿದು ಅಳವಡಿಸಿಕೊಳ್ಳಲು ಸರ್ಕಾರದ ಅಗತ್ಯವಿರಲಿಲ್ಲ. ಹೊರಗಿನಿಂದ ಪಡೆದದ್ದು ಸಾಲ ಒಳಗಿನಿಂದ ಸಾಲ ತೀರಿಸಿದ್ದು  ಧರ್ಮ.  ಆದರೆ ಒಳಗಿನ ಸಾಲ ತೀರಿಸಲು ಹೊರಗಿನಿಂದ ಸಾಲ ಪಡೆದದ್ದು ಧರ್ಮ ವಾಗದು.
ಎಷ್ಟೋ ಪ್ರಭುದ್ದ ಯುವಪೀಳಿಗೆ  ತಮ್ಮ ದುಡಿಮೆಯ ಹಣವನ್ನು  ದೇಶದ ಏಳಿಗೆಗಾಗಿ ಕೊಟ್ಟಿದ್ದರೂ  ಅದನ್ನು ದುರ್ಭಳಕೆ ಮಾಡಿಕೊಂಡು ಆಳುವವರೆ ಅರಸರಾದರೆ ಅಧೋಗತಿ. ಅದೇ ಹಣವನ್ನು  ನಮ್ಮ ಹತ್ತಿರವೇ ಇರುವ ಶ್ರಮ ಜೀವಿಗಳಿಗೆ  ಕೊಟ್ಟು ಅವರು ಸ್ವತಂತ್ರ ವಾಗಿ ಜೀವನ ನಡೆಸೋ ಕೆಲಸ ಕೊಟ್ಟಿದ್ದರೆ  ಆತ್ಮರಕ್ಷಣೆಯಾಗುತ್ತದೆ.
ಈ ಕಡೆ ಓದಿನಲ್ಲೂ  ನಮ್ಮಜ್ಞಾನವಿಲ್ಲ, ಕೆಲಸದಲ್ಲೂ ನಮ್ಮತನವಿಲ್ಲ, ಧರ್ಮ ವಂತೂ ಇಲ್ಲವೇ ಇಲ್ಲವೆಂದಾಗ ಸತ್ಯ ಎಲ್ಲಿರುವುದು? ಆಳವಾಗಿರುವ ಬೇರನ್ನು ಕೀಳಲಾಗದು. ರೆಂಬೆಕೊಂಬೆಗಳು ತಮ್ಮ ಇಷ್ಟದಂತೆ ಬೆಳೆದಾಗ ಕತ್ತರಿಸಬಹುದಲ್ಲವೆ? ಇದಕ್ಕಾಗಿ ಧರ್ಮ ಯುದ್ದಗಳಾಗಿದೆ.

ಒಳಗಿನ ಜ್ಞಾನವನ್ನೇ ಬೆಳೆಸದೆ ಹೊರಗಿನ  ಜ್ಞಾನ ಬೆಳೆಸಿ ಸಾಲ ಮಾಡಿದರೆ  ಅಜ್ಞಾನವಷ್ಟೆ.ಸಾಲ ಪಡೆಯೋದೇ ಹೆಚ್ಚಾದರೆ ತೀರಿಸೋ ಧರ್ಮವಿರದು. ವ್ಯವಹಾರವೇ ಜೀವನವಾಗದೆ ಜೀವನದಲ್ಲಿ ಧಾರ್ಮಿಕ ವ್ಯವಹಾರವಿದ್ದರೆ‌ ಶಾಂತಿ.
ಎಲ್ಲಾ ಮಾಡೋದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎನ್ನುವುದನ್ನು ಈಗ ಎಲ್ಲರೂ ಮಾಡೋದು ಓಟಿಗಾಗಿ ನೋಟು ಸೀಟಿಗಾಗಿ ಎಂದಂತಾಗಿದೆ.  ಇದಕ್ಕೆ ಕಾರಣವೇ ವಿಷಪೂರಿತ ವಿಷಯಗಳನ್ನು ಹಿಡಿದು ದ್ವೇಷದ ವಿಷಬೀಜ ಬಿತ್ತುವ ಮಧ್ಯವರ್ತಿಗಳು. ಇದರಿಂದ ಲಾಭ ಯಾರಿಗೆ? ನಷ್ಟ ಯಾರಿಗೆ?
ದೈವತ್ವ ಬೆಳೆಸದೆ ಅಸುರತ್ವ ಬೆಳೆಸಿದರೆ ನಮ್ಮೊಳಗೇ ಅಸುರರಿರೋದನ್ನು ತೋರಿಸಿದಂತೆ ಅಲ್ಲವೆ?

ಹಿಂದೆ ಸಕ್ಕರೆ ಕಾಯಿಲೆ ಶ್ರೀಮಂತರ ಕಾಯಿಲೆ ಎನ್ನುತ್ತಿದ್ದರು.ಈಗಿದು ಸರ್ವರಿಗೂ ಸಾಧಾರಣವಾಗಿದೆ.
ಅಂದರೆ, ಅತಿಯಾದ ಸಿಹಿ  ರೋಗದ ಮೂಲ. ಹಾಗೆ ಅತಿಯಾದ ಕಹಿಯೂ ಸಿಹಿಯನ್ನು  ಆಶ್ರಯ ಪಡೆದರೆ ಸಿಹಿಯ ರೋಗವೂ ಅಂಟಿಕೊಳ್ಳುತ್ತದೆ.ಬಡವರು ಶ್ರೀಮಂತರ ಹಿಂದೆ ನಡೆದಷ್ಟೂ  ಬಡತನ ಹೋಗದು.
ಕಾರಣ‌ ಬಡತನ ಇರೋದೇ ಹೊರಗಿನ ವಿದ್ಯೆ ಜ್ಞಾನದಲ್ಲಿ.
ಹೊರಗಿನವರಿಗೆ ಇದು  ವಿದ್ಯೆ ಆಗಬಹುದು. ವಿಜ್ಞಾನವೂ ಬೆಳೆಯಬಹುದು.ನಮಗೆ ನಮ್ಮೊಳಗಿನ ವಿದ್ಯೆ ಜ್ಞಾನವೇ  ಶ್ರೀಮಂತಿಕೆಯ ಮೂಲವಾಗಿತ್ತು. ಇದು ಭಾರತೀಯತೆಯ ಪ್ರತೀಕ.ಭಾರತಾಂಬೆಯ ಪ್ರತಿಷ್ಟೆಯಾಗಿತ್ತು.  ಈಗ ಪ್ರತಿಷ್ಟಿತರೆ ವಿದೇಶಿ ವ್ಯಾಮೋಹದಲ್ಲಿ ತೇಲಾಡಿಕೊಂಡಿರೋದು ದುರಂತ.
ಒಳ್ಳೆಯದೂ ಪ್ರಚಾರವಾಗುತ್ತಿದೆಯಲ್ಲ ಎನ್ನಬಹುದು.ಆದರೆ ಸತ್ಯವಷ್ಟೆ ದಿನದ 24 ತಾಸಿನಲ್ಲಿ ಹೆಚ್ಚೆಂದರೆ1 ಅಥವಾ2 ತಾಸಿರಬಹುದು.ಉಳಿದ 22 ತಾಸಿನಲ್ಲೂ ನಕಾರಾತ್ಮಕ ಸುದ್ದಿಯಿದ್ದರೆ ತಲೆಗೆ ಹೋಗೋದು ಯಾವುದು? ಮಕ್ಕಳಲ್ಲಿ ಒಳ್ಳೆಯತನಕ್ಕಿಂತ ಕೆಟ್ಟದ್ದೇ ಇದ್ದರೆ  ಕೆಟ್ಟದ್ದನ್ನು ತೆಗೆದುಹಾಕುವ‌ ಪ್ರಯತ್ನವಾಗಬೇಕಾದರೆ ಒಳ್ಳೆಯದನ್ನು ತುಂಬಬೇಕು. 
 

No comments:

Post a Comment