ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, March 22, 2024

ಮುಕ್ತಿ ಮಾರ್ಗ ಯಾವುದು? ಎಲ್ಲಿದೆ?

ನನಗೆ ಈ ಭೂಮಿಯಿಂದ ಮುಕ್ತಿ ಬೇಕೆಂಬುದರಲ್ಲಿಯೇ ನಾನಿರುವಾಗ  ಮುಕ್ತಿ ಸಿಗುವುದೆ? ಹಿಂದಿನ ಯುಗಯುಗದಿಂದಲೂ ಇದೇ ಭೂಮಿಯಲ್ಲಿದ್ದು ತನ್ನ ಜೀವನ‌ನಡೆಸಿರುವ ಎಷ್ಟೋ ಆತ್ಮಗಳ ಕಥೆ ಇದೇ ಆಗಿದೆ.ಮುಕ್ತಿಗಾಗಿ‌ದೇವರನ್ನು ಪೂಜಿಸೋದು ಬೇಡೋದು ಮಾಡೋದು ನಡೆದೇ ಇದೆ ಆದರೂ ನನ್ನ ಜನ್ಮ ಆಗುತ್ತಿದೆ ಎಂದರೆ ಜನ್ಮಕ್ಕೆ ಕಾರಣವೇ ನಾನೆಂಬ ಭಾವ. ಈ ಭಾವನೆ ಜೀವವಿರೋವಾಗಲೇ ಅಳಿಸಿಹೋದವರಿಗಷ್ಟೆ ಮುಕ್ತಿ ಸಿಗುತ್ತದೆ ಎಂದರೆ  ಪರಮಾತ್ಮನೊಬ್ಬನೆ ಸತ್ಯ ಶುದ್ದವೆನ್ನುವ ಸತ್ಯದಲ್ಲಿರುವ‌ಜೀವಾತ್ಮನಲ್ಲಿ ನಾನಿರೋದಿಲ್ಲವೆಂದರ್ಥ.
ಇದೇ ಅದ್ವೈತ ತಿಳಿಸೋದು. ಎಲ್ಲಿಯವರೆಗೆ ನನ್ನ‌ಮುಕ್ತಿಗಾಗಿ‌ಕರ್ಮ ಧರ್ಮ  ಮಾಡುವೆವೋ ಅಲ್ಲಿಯವರೆಗೆ ಮುಕ್ತಿಸಿಗದು. ಹಾಗಾದರೆ ಧರ್ಮ ಕರ್ಮ ದ ಉದ್ದೇಶ ವೇನೆಂದರೆ  ಪರಮಾತ್ಮನಿಗೆ  ಅರ್ಪಣೆಯಾಗಲು  ಜೀವಾತ್ಮನು ದಾಸನಾಗಿರೋದಷ್ಟೆ. ತಾನೇ ದಾಸನಾದಾಗ ಇತರರನ್ನು ದಾಸನನ್ನಾಗಿ ಬಳಸಲಾಗದು.ಅಂದರೆ ತನ್ನ ಸ್ವಾರ್ಥ ಸುಖಕ್ಕಾಗಿ ಸ್ತ್ರೀ ಯನ್ನಾಗಲಿ ಭೂಮಿಯನ್ನಾಗಲಿ ಪ್ರಾಣಿಪಕ್ಷಿ.....ಇತರ ಜನರನ್ನಾಗಲಿ  ಎಷ್ಟು ಬಳಸಿದರೂ  ಅದರಲ್ಲಿ ತತ್ವವಿರದು ತಂತ್ರವಾಗಿರುತ್ತದೆ.ಹೀಗಾಗಿ ಪರಮಾತ್ಮನ ಸತ್ಯ ಒಂದೇ  ಅದರಲ್ಲಿ ನನ್ನ ಸತ್ಯ ಸೇರಲು ಆ ಒಂದರ ತತ್ವದರ್ಶನ ಆಗಬೇಕೆನ್ನುವುದೇ ಅದ್ವೈತ. ಇದನ್ನು ರಾಜಕೀಯವಾಗಿ ಬಳಸಿದರೆ ದ್ವೈತ. ವಿಶೇಷವಾಗಿ ಎಲ್ಲರೊಳಗೂ ಅಡಗಿರುವ ಈ ಪರಮಸತ್ಯ ಶುದ್ದ ತತ್ವವನರಿತು ನಡೆದರೆ ವಿಶಿಷ್ಟಾದ್ವೈತ. ಇದನ್ನು ಓದಿ ಅರ್ಥ ಮಾಡಿಕೊಳ್ಳಲು ಕಷ್ಟ. ಆ ಭಗವತಿಯ ಕೃಪೆಯಿಂದಷ್ಟೆ ಅರಿವಿಗೆ ಬರಲು ಸಾಧ್ಯವಿದೆ. ಹೀಗಾಗಿ  ತಾಯಿಯ ಋಣ ತೀರಿಸಲು  ದಾಸರಾಗಬೇಕು ಶರಣರಾಗಬೇಕು ಮಹಾತ್ಮರಾಗಬೇಕೆನ್ನುತ್ತದೆ ಅಧ್ಯಾತ್ಮ. 
ಇಂದಿನ ಜಗತ್ತಿನಲ್ಲಿ ಒಳಗಿದ್ದ  ತಾಯಿಯನ್ನು ಹೊರಗೆಳೆದು ನೀನೇ ಸಂಸಾರ ನಡೆಸು ಎಂದು ಭೌತಿಕದಲ್ಲಿ ಜನಜೀವನ ಸಾಲ ತೀರಿಸಲಾಗದೆ ಹೋರಾಟ ಹಾರಾಟ ಮಾರಾಟದ ಮಧ್ಯೆ ರಾಜಕೀಯ ಬೆಳೆದು ನಿಂತಿದೆ ಎಂದರೆ ಅಜ್ಞಾನ ‌ಮಿತಿಮೀರಿದೆ. ಪರಿಹಾರ ಸತ್ಯಜ್ಞಾನದ ಶಿಕ್ಷಣ ಕೊಡಬೇಕಷ್ಟೆ.
ಸತ್ಯ ಎಲ್ಲಿದೆ? ಒಳಗೋ ಹೊರಗೋ? ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.ತಾಯಿಗಿಂತ ದೊಡ್ಡ ದೇವರಿಲ್ಲ.
ಹರಿಹರರಲ್ಲಿ ಬೇಧ, ಸ್ತ್ರೀ ಪುರುಷರಬೇಧ ಭೂಮಿ ಆಕಾಶದ ಬೇಧ ಜ್ಞಾನ ವಿಜ್ಞಾನದ ಬೇಧ ದೇಶವಿದೇಶದ ಬೇಧ ಸಂಸಾರ ಸಮಾಜದ ಬೇಧಭಾವ ಮಾನವ ಮಾನವನಲ್ಲಿ ದ್ವೇಷದ ವಿಷಬೀಜ ಹೆಚ್ಚಿಸಿ ಪರಮಾತ್ಮ ಜೀವಾತ್ಮನ‌ನಡುವೆ ಅಂತರ ಬೆಳೆದು ನಾನೇ ಬೇರೆ ನೀನೇ ಬೇರೆ ಎಂದಾಗ ತತ್ವ ಎಲ್ಲಿರುತ್ತದೆ? ಹೇಳಲು ನೋಡಲು ಎಲ್ಲಾ ಒಂದೇ. ಆದರೆ ಒಳಹೊಕ್ಕಿ ನೋಡಿದಾಗ ಎಲ್ಲಾ ಬೇರೆ ಎಂದರೆ ನಾಟಕದ ಜೀವನದಲ್ಲಿ ಎಲ್ಲಾ ಪಾತ್ರಧಾರಿಗಳೇ ಆದರೂ ಕೆಲವರಿಗೆ ಒಳ್ಳೆಯ ಪಾತ್ರ ಕೆಲವರಿಗೆ ಕೆಟ್ಟಪಾತ್ರ ಕೊಟ್ಟು ಆಡಿಸುವವ‌ಒಬ್ಬನೇ. ಆ ಒಬ್ಬನ ಕಡೆಗೆ ನಡೆಯೋದೇ ಜೀವನ.
ಇದರಲ್ಲಿ ನನ್ನದೂ ಒಂದು ಪಾತ್ರ ವಷ್ಟೆ. ಅದರಲ್ಲಿ ಸತ್ಯವಿದ್ದರೆ  ಧರ್ಮ ಬೆಳೆಯುತ್ತದೆ. ಅಸತ್ಯವಿದ್ದರೆ ಅಧರ್ಮ ಬೆಳೆಯುತ್ತದೆ.
ಧರ್ಮ ಕ್ಕೆ ಜಯವಾಗಬೇಕಾದರೆ ಸತ್ಯವೇ ದೇವರಾಗಬೇಕು. ಅಸತ್ಯವನ್ನು ಧರ್ಮ ವೆಂದುಕೊಂಡರೆ ಅಸುರರ ವಶದಲ್ಲಿ ಜೀವನ ನಡೆಸಬೇಕಾಗುತ್ತದೆ. ಅಸುರಿಗುಣಗಳಾದ ಅತಿಯಾದ ಸ್ವಾರ್ಥ ಅಹಂಕಾರ ಅಜ್ಞಾನದೆಡೆಗೆ ನಡೆಸುತ್ತಾ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಪ್ರಕೃತಿಯನ್ನು ವಿಕೃತವಾಗಿಸಿಕೊಂಡಾಗಲೇ ಪ್ರಕೃತಿ ವಿಕೋಪಗಳು ಯುದ್ದಗಳು ಬೆಳೆದು ಜೀವ ಹೋಗುತ್ತದೆ. ಹೋದ ಜೀವ ಮತ್ತೆ ಜನ್ಮ ಪಡೆದಾಗ ನಮ್ಮವರು ಯಾರೂ ಇರೋದಿಲ್ಲ ಪರಮಸತ್ಯ ಧರ್ಮ ವಷ್ಟೆ ಇರೋದು. ಹೀಗಾಗಿ ಇದ್ದಾಗಲೆ ಪರಮಸತ್ಯ ಧರ್ಮ ವನರಿತರೆ ಜೀವನ್ಮುಕ್ಕಿ ಎನ್ನುವುದನ್ನು ಅರಿತವರು ಕಷ್ಟಪಟ್ಟು  ಇಷ್ಟಪಟ್ಟು  ಪರಮಾತ್ಮನೆಡೆಗೆ‌ ನಡೆದರು. ಇಂತಹವರ ಹೆಸರಿನಲ್ಲಿ ವ್ಯವಹಾರ ನಡೆಸಿ ಹಣ ಅಧಿಕಾರ ಹೆಸರು ಸ್ಥಾನ ಪಡೆದರೆ ಭೌತಜಗತ್ತಿನಲ್ಲಿ ಸನ್ಮಾನ ಸ್ವಾಗತ ದ ಸಹಕಾರ ಸಹಾಯ ಸಿಗುವುದೆನ್ನುವ ಮಾನವನಿಗೆ ತನ್ನದೇ ಆದ ಅಸ್ತಿತ್ವ ವಿದೆಯೆ? ನಡೆಸೋ ಶಕ್ತಿ ಕಾಣೋದಿಲ್ಲ ಎಂದರೆ  ಸತ್ಯ ಒಳಗಿದೆ ಎಂದರ್ಥ.ಸತ್ಯ ಕಣ್ಣಿಗೆ ಕಾಣದು ಹಾಗಾಗಿ  ಅಸತ್ಯ ಬೆಳೆದಿದೆ ಅದರೊಂದಿಗೆ ಅಧರ್ಮ ವೂ ಜೊತೆಗಿದೆ. ಒಟ್ಟಿನಲ್ಲಿ  ನಾನ್ಯಾರು ಪ್ರಶ್ನೆಗೆ ಉತ್ತರ ಹುಡುಕಲು ಮನಸ್ಸು ಒಳಗೆ ನಡೆದಷ್ಟೂ  ಸಮಸ್ಯೆಗಳೇ ಹೆಚ್ಚಾಗುತ್ತದೆ ಕಾರಣ ಒಳಗೇ ಇರುವ ಅಸತ್ಯಗಳನ್ನು ನಮ್ಮ ಮನಸ್ಸು ತಡೆದು ನಿಲ್ಲಿಸಿಕೊಳ್ಳುವುದೇ ಕಷ್ಟ.ಅದರಲ್ಲೂ ಸಂಸಾರಕ್ಕೆ ಬಂದವರಿಗೆ ಬಹಳ‌ಕಷ್ಟ.ಇದೇ ಕಾರಣಕ್ಕಾಗಿ ತಿಳಿದವರು ಸಂಸಾರ ಬಿಟ್ಟು ನಡೆದರು.ಆದರೆ ಸಂಸಾರದ ಗತಿ ಏನಾಯಿತೆನ್ನುವುದು ಪ್ರಶ್ನೆಗೆ ಉತ್ತರ ಇಂದಿನ ಪರಿಸ್ಥಿತಿ ತಿಳಿಸುತ್ತಿದೆ. ರಾಜಪ್ರಭುತ್ವದ ಸಂನ್ಯಾಸಿಗಳಿಗೆ ಸ್ವತಂತ್ರ ಜ್ಞಾನವಿತ್ತು  ಸಂಸಾರಿಗಳ ಸಮಸ್ಯೆಗೆ ಪರಿಹಾರ ಕೊಡುವ ಆತ್ಮಜ್ಞಾನವಿತ್ತು. ಪ್ರಜಾಪ್ರಭುತ್ವದ ಲ್ಲಿ ಸಾಕಷ್ಟು ಸಂನ್ಯಾಸಿಗಳಿಗೆ ಪ್ರಜೆಗಳೇ ದೇವರು.ಹಣವಿಲ್ಲದೆ ಧರ್ಮ ಪ್ರಚಾರಮಾಡೋಹಾಗಿಲ್ಲ.ಅಧಿಕಾರವಿಲ್ಲದೆ ಜನಬಲವಿಲ್ಲ ಹೀಗಿರುವಾಗ  ಯಾರ ಕೆಳಗೆ ಯಾರಿರೋದು? ಸ್ವತಂತ್ರ ಜೀವನಕ್ಕೆ ತತ್ವಜ್ಞಾನವಿರಬೇಕು. ತಂತ್ರವೇ ಧರ್ಮ ಎಂದಾಗ ತತ್ವ ಕುಸಿಯುತ್ತದೆ. ಕಲಿಗಾಲ.ಕಲಿಸುತ್ತದೆ. ಕಲಿಕೆಯಲ್ಲಿ ತತ್ವವಿದ್ದರೆ ಉತ್ತಮ‌ಕಾಲಜ್ಞಾನಿಯಾಗಬಹುದು.ಪ್ರತಿಯೊಂದು ಕಾಲವೂ ಪರಮಾತ್ಮನ ವಶದಲ್ಲಿದ್ದಂತೆ ಪರಮೇಶ್ವರಿಯ ಆದೇಶದಂತೆ ನಡೆಯುತ್ತದೆ.ಎಂದಾಗ ನಾವೆಲ್ಲರೂ ಪರಮೇಶ್ವರಿಯ ಸಂತಾನ.ಅವಳ ಋಣ ತೀರಿಸಲು  ಭೂಮಿಯಲ್ಲಿ ಸತ್ಯ ಧರ್ಮ ದ ಪ್ರಕಾರ ನಡೆಯಲೇಬೇಕಲ್ಲವೆ? 
ಈ ಲೇಖನ ಯಾರೋ ಪ್ರತಿಷ್ಠಿತ ರು ಜ್ಞಾನಿಗಳು ಶ್ರೀಮಂತ ರು ರಾಜಕಾರಣಿಗಳು  ಬರೆದಿದ್ದರೆ ದೊಡ್ಡ ಸುದ್ದಿಯಾಗುತ್ತಿತ್ತು.ಆದರೆ ಇದನ್ನು ಸಾಮಾನ್ಯರು ಬರೆದಿರುವಾಗ  ಇದರಲ್ಲಿ ತಪ್ಪು ಹುಡುಕಿ ತಳ್ಳಿದರೂ ಸತ್ಯ ಕ್ಕೆ ಚ್ಯುತಿ ಬರದು. ಇದಕ್ಕೆ ಬೆಲೆಕಟ್ಟಿ ಹಂಚಿದರೂ ಅರ್ಥ ವಾಗದವರಿಗೆ ಅರ್ಥ ವಾಗೋದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ವಿಶೇಷವಾಗಿರುವ  ಆತ್ಮಸಾಕ್ಷಿ ಯ ಕಡೆಗೆ ನಡೆದರೆ ಅದೇ ನಮಗೆ ನಾವು ಮಾಡಿಕೊಳ್ಳುವ‌ ಉಪಕಾರ.
ಪ್ರತಿಯೊಂದು ಚರಾಚರದೊಳಗಿರುವ  ಈ ಶಕ್ತಿಗೇನೂ ಕೊರತೆಯಿಲ್ಲ.ಮಾನವನೇ ಅದನ್ನು ತಿಳಿಯದೆ ಬಳಸಿ ತನ್ನ ಆತ್ಮಹತ್ಯೆಗೆ ತಾನೇ ಕಾರಣನಾಗಿರುವಾಗ ಅದನ್ನು ಹೊರಗಿನ ಹಣದಿಂದ ಸರಿಪಡಿಸಲಾಗದು. ಕರ್ಮಕ್ಕೆ ತಕ್ಕಂತೆ ಫಲ.ಇದು ಯಾವ‌ಜನ್ಮದ ಪುಣ್ಯ ಪಾಪವಾದರೂ ಅನುಭವಿಸೋದು ಜೀವಾತ್ಮನೇ  ಎಂದಾಗ ಪರಮಾತ್ಮ ಏನು ಮಾಡಲಾಗದು.ದೇಶದೊಳಗೆ ಇದ್ದು ವಿದೇಶವನ್ನು  ಬೆಳೆಸಿ ದೇಶ ಹಾಳಾಗಿದೆ ಎಂದಂತಾಗುತ್ತದೆ ಅಲ್ಲವೆ?
ಈ ಭೂಮಿಯಲ್ಲಿ ಎಷ್ಟು ಆಸ್ತಿ ಅಂತಸ್ತು ಹೆಸರು ಹಣ ಅಧಿಕಾರ ಪಡೆದೆ ಎನ್ನುವುದರ ಮೇಲೆ ಭಗವಂತ‌ಮುಕ್ತಿ ಕೊಡೋದಾಗಿದ್ದರೆ ಮಹಾತ್ಮರು ಅವುಗಳನ್ನು ಬಿಟ್ಟು ದೂರವಿರುತ್ತಿರಲಿಲ್ಲವಲ್ಲ.ಇಷ್ಟು ಸಾಮಾನ್ಯ ಜ್ಞಾನವಿದ್ದರೆ  ನಮ್ಮ ಕಾಲುಬುಡ ನಾವು ನೋಡಿಕೊಂಡು ನಡೆಯಬಹುದು.ಇಲ್ಲವಾದರೆ ಯಾರದ್ದೋ ಕಾಲಕಸವಾಗಿ ಜೀವನ ನಡೆಸಬೇಕಾಗುವುದು ಎನ್ನುವುದೆ ಅಧ್ಯಾತ್ಮ.

No comments:

Post a Comment