ಕೆಲವು ಅಧ್ಯಾತ್ಮ ಸತ್ಯಗಳು ಅನುಭವದ ಮೂಲಕ ತಿಳಿಯುತ್ತಾ ಹೋದಂತೆ ಇಲ್ಲಿ ಆಗೋದನ್ನು ತಪ್ಪಿಸಲಾಗದು ಆಗೋದೆಲ್ಲಾ ಒಳ್ಳೆಯದಕ್ಕೆ, ಆದ ಮೇಲೆ ಸತ್ಯ ದರ್ಶನ ಎನ್ನುವ ನಂಬಿಕೆ ಹೆಚ್ಚುತ್ತದೆ.
ಪರಮಾತ್ಮನ ಇಚ್ಚೆಯಿಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡದು ಎನ್ನುವಾಗ ಎಲ್ಲಾ ನಡೆದಿರೋದು,ನಡೆಯುತ್ತಿರುವುದು,
ನಡೆಯಬೇಕಾದದ್ದೂ ಅವನ ಪ್ರೇರಣೆಯಿಂದಲೇ ಹೊರತು ನಾನೆಂಬುದಿಲ್ಲ .ಇಲ್ಲಿ ಅದ್ವೈತ ತತ್ವ ಸ್ಪಷ್ಟವಾಗಿ
ಅರ್ಥ ವಾಗುತ್ತದೆ.ಹಾಗಾದರೆ ನಾನ್ಯಾರು ಎಂದು ತಿಳಿಯಲು ಒಳಗೆ ನಡೆಯಬೇಕಲ್ಲವೆ?
ಸಂಶೋಧನೆ ಒಳಗೆ ಆಗಬೇಕಲ್ಲವೆ? ರಾಜಕೀಯತೆ ಇಂದು ಹೊರಗೆ ಬೆಳೆದು ಒಳಗೇ ಅಡಗಿದ್ದ ರಾಜಯೋಗವನ್ನು ಹಿಂದೆ
ತಳ್ಳುತ್ತಾ ಇಂದು ಮುಂದೆ ಬಂದವರು ಸಾಧಕರಾದರು.
ಆದರೆ, ಭಾರತೀಯರ ಸಾಧನೆ ಅಧ್ಯಾತ್ಮ ಕ್ಷೇತ್ರದಲ್ಲಿ ಹೇಗೆ ನಡೆಯಿತು? ಸತ್ಯವಿಲ್ಲದ ಧರ್ಮದಿಂದ ಸಮಾನತೆ ಹೇಗೆ ಬೆಳೆಯುತ್ತದೆ? ಸ್ಥಿತಿ ಯನ್ನರಿಯದೆ ಭೂತ ಭವಿಷ್ಯವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ?
ಸೃಷ್ಟಿಸಲು ಸಾಧ್ಯವಾಗದ ಮಾನವನಿಗೆ ಕೊಲ್ಲುವುದಕ್ಕೆ ಯಾರು ಅಧಿಕಾರ ಕೊಟ್ಟವರು? ಈ ಎಲ್ಲಾ ಪ್ರಶ್ನೆಗೆ ಉತ್ತರ
ನಮ್ಮ ಒಳಗಿನ ಸ್ವಚ್ಚತೆಯಲ್ಲಿದೆಯೇ ಹೊರತು ಹೊರಗಿನ
ರಾಜಕೀಯದಲ್ಲಿಲ್ಲ.
ಆತ್ಮನಿರ್ಭರ ಭಾರತವನ್ನು ಆಧ್ಯಾತ್ಮ ದಿಂದ ಮಾತ್ರ ಬೆಳೆಸಬಹುದು.ಈ ಪುಸ್ತಕ ನನ್ನ ಬರವಣಿಗೆಯಾದರೂ ಇದು ಒಂದು ಪ್ರಜಾಧರ್ಮವನ್ನು ಎತ್ತಿ ಹಿಡಿದಿದೆ. ನಾವು ಹೊರಗೆ ಓದುತ್ತಿರುವ ವಿಜ್ಞಾನ ಹೊರಗಿನ ಸತ್ಯ, ವೈಜ್ಞಾನಿಕ ಸತ್ಯ,ವಿದೇಶಿ ಸತ್ಯ,ಧರ್ಮವನ್ನು ತಿಳಿಸಿ ವ್ಯವಹಾರಕ್ಕೆ ಸೀಮಿತ ಆಗಿದ್ದು ಮಾನವನಿಗೆ ಹಣ ಸಂಪಾದನೆ ಕಡೆಗೆ ನಡೆಸಿದೆ. ಮೂಲದ ಜ್ಞಾನವೇ ಹಿಂದುಳಿದಿರುವಾಗ ಹಣವನ್ನು ದುರ್ಭಳಕೆ ಮಾಡಿಕೊಂಡರೆ ಕಷ್ಟ ನಷ್ಟ ನಮ್ಮ ಜೀವವೆ ಅನುಭವಿಸಬೇಕೆನ್ನುವ ಅಧ್ಯಾತ್ಮ ವನ್ನು ನಾವೆಲ್ಲರೂ ಅರಿತರೆ
ನಮ್ಮ ಪಾಲಿಗೆ ಬಂದ ಪಂಚಾಮೃತವನ್ನು ದೇವರ ಪ್ರಸಾದವೆಂದರಿತು ಒಗ್ಗಟ್ಟಿನಿಂದ ಹಂಚಿ ತಿಂದು ನಮ್ಮ ಆತ್ಮ ರಕ್ಷಣೆ ಮಾಡಿಕೊಂಡರೆ ಮುಂದಿನ ಭಾರತ ಆತ್ಮನಿರ್ಭರ ಆಗುತ್ತದೆ. ಆದರೆ, ಮುಂದೆ ನಡೆದವರನ್ನು ತಡೆಯಬಾರದು.
ಹಿಂದೆ ಬರುತ್ತಿರುವವರಿಗೆ ಸರಿಯಾದ ಮಾರ್ಗ ತೋರಿಸಿ ನಾವು ಅವರ ಹಿಂದೆ ನಡೆದರೆ ನಮ್ಮ ಆತ್ಮರಕ್ಷಣೆ. ಭಾರತದ ಸ್ತ್ರೀ ಗೆ ಜ್ಞಾನ ಬಂದರೆ ಯಾವ ದುಷ್ಟಭ್ರಷ್ಟರೂ ಬೆಳೆಯೋದಿಲ್ಲ.ಆದರೂ ಭೂಮಿಯಲ್ಲಿ ದೇವಾಸುರರ ಶಕ್ತಿ
ಇದ್ದೇ ಇರುತ್ತದೆ.ಯಾವಾಗ ಮಾನವನಲ್ಲಿ ಅತಿಯಾದ ಅಜ್ಞಾನ,ಅಹಂಕಾರ, ಸ್ವಾರ್ಥ ಬೆಳೆಯುವುದೋ ಆಗಲೇ ಭೂಮಿಯ ದುರ್ಭಳಕೆ ಆಗುತ್ತದೆ.ಇದಕ್ಕೆ ಸ್ತ್ರೀ ಸಹಕಾರ ಸಿಕ್ಕಿದರೆ ಮುಗಿಯಿತು ಸ್ತ್ರೀ ಕಥೆ.ತನಗೆ ತಾನೇ ವೈರಿಯಾದರೆ
ಕಾಪಾಡೋದು ಯಾರು? ಹಾಗೆ ಭಾರತೀಯ ನಾರಿಯರು
ಒಗ್ಗಟ್ಟಿನಿಂದ ಸತ್ಯದ ಕಡೆಗೆ ಬರೋದಕ್ಕೆ ಭಾರತೀಯ ಜ್ಞಾನದ ಶಿಕ್ಷಣ ನೀಡುವುದು ಧರ್ಮ.ಇಂದು ಧಾರ್ಮಿಕ ಆಚರಣೆಗಳಿವೆ ಆದರೆ ಶಿಕ್ಷಣ ಸ್ತ್ರೀ ಗೆ ನೀಡದಿರೋದು ದೊಡ್ಡ
ದುರಂತ. ಇಲ್ಲಿ ಧಾರ್ಮಿಕ ಶಿಕ್ಷಣವೆಂದರೆ ವೇದ ಪುರಾಣ,
ಶಾಸ್ತ್ರ, ಸಂಪ್ರದಾಯಕ್ಕೆ ಮೊದಲು ನಾವ್ಯಾಕೆ ಭೂಮಿಗೆ ಬಂದಿದ್ದೇವೆನ್ನುವ ಅರಿವನ್ನು ಬೆಳೆಸಬೇಕಾದವರು
ಪೋಷಕರು. ಪ್ರಾರಂಬಿಕ ಶಿಕ್ಷಣವೇ ಮನೆಯೊಳಗೆ ಕೊಡದೆ
ಹೊರಗಿನಿಂದ ಪರರ ಶಿಕ್ಷಣ ತುಂಬಿದರೆ ನಮ್ಮತನ,ನಮ್ಮ ಜ್ಞಾನ ಯಾರು ಬೆಳೆಸಬಹುದು?
ಮೂಲವನ್ನರಿಯದೆ ರೆಂಬೆಕೊಂಬೆಗಳನ್ನು ಬೆಳೆಸಿ ಈಗಿದು
ಟೊಳ್ಳಾಗಿದೆ. ಮೂಲದ ಕಡೆಗೆ ಕಷ್ಟಪಟ್ಟು ಹಿಂದಿರುಗಲು ಕಷ್ಟ
ಆದರೂ ನಡೆಯದೆ ವಿಧಿಯಿಲ್ಲ.ಮುಕ್ತಿ ಯಿಲ್ಲ. ಇದನ್ನು ಶರಣರು,ದಾಸರು ಹಿಂದೆಯೇ ತಿಳಿಸಿದ್ದಾರೆ.ಕರ್ಮಯೋಗದ
ಕಡೆಗೆ ನಡೆಯಲು ಸತ್ಯ ಧರ್ಮದ ಅಗತ್ಯವಿದೆ.ಅದು ನಮ್ಮ ಮೂಲದಲ್ಲಿಯೇ ಇದೆ.ತಂದೆತಾಯಿ,ಅಜ್ಜ ಅಜ್ಜಿಯರ ಧರ್ಮ ಕರ್ಮದ ಜೊತೆಗೆ ಈಗಿನ ವಾಸ್ತವ ಸ್ಥಿತಿಗೆ ನಾನೆಷ್ಟು ಕಾರಣ ಎನ್ನುವ ಬಗ್ಗೆ ಆತ್ಮಾವಲೋಕನ ನಡೆಸಿಕೊಂಡು ಮುಂದೆ ಜೀವನ ನಡೆಸುವುದರಿಂದ ನಮ್ಮಲ್ಲಿ ಜಾಗೃತಿ ಹೆಚ್ಚಾಗಿ ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಆತ್ಮಜ್ಞಾನದ ಕಡೆಗೆ
ನಡೆಯಬಹುದು.ಇದಕ್ಕೆ ತಕ್ಕಂತೆ ಶಿಕ್ಷಣವಿರಬೇಕು.ಸಹಕಾರ ಇರಬೇಕು, ಒಗ್ಗಟ್ಟು ಅತ್ಯಗತ್ಯ. ಕಲಿಗಾಲ ಇಲ್ಲಿ ಸತ್ಯಕ್ಕೆ ಬೆಲೆಯಿಲ್ಲ.ನಿಜ ಆದರೆ ಸತ್ಯವಿಲ್ಲದ ಜೀವನದಿಂದ ಸುಖವಿಲ್ಲ
ಭೌತಿಕ ದ ಕ್ಷಣಿಕ ಸುಖ ಮುಕ್ತಿ ಕೊಡೋದಿಲ್ಲ. ಇದನ್ನು ಪರರು
ಒಪ್ಪೋದಿಲ್ಲವಾದರೂ ಇದೇ ಅಧ್ಯಾತ್ಮ ಸತ್ಯವೆಂದಿದ್ದಾರೆ.
ನಮ್ಮನ್ನು ನಾವರಿತು ನಡೆಯಲು ಸರ್ಕಾರದ ಅಗತ್ಯವಿಲ್ಲ.
ಸತ್ಯದ ಅಗತ್ಯವಿದೆ.ಸ್ವಧರ್ಮ, ಸ್ವಕರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ವಾಗಿ ನಡೆದವರಿಗೆ ಮಾತ್ರ ಆತ್ಮನಿರ್ಭರ ಭಾರತ ಪದಕ್ಕೆ ಅರ್ಥ ತಿಳಿಯಬಹುದು
ಭಾರತಮಾತೆ ನಡೆದಿರೋದೆ ಸ್ತ್ರೀ ಯರ ಜ್ಞಾನಶಕ್ತಿಯಲ್ಲಿ.
ಇದನ್ನು ದುರ್ಭಳಕೆ ಮಾಡಿಕೊಂಡರೆ ನಾರಿ ಮಾರಿ
ಯಾಗುತ್ತಾಳೆ.
ಶಾಂತಿ ಬೇಕೆ? ಕ್ರಾಂತಿಯೇ? ಇದು ನಮಗೆ ಬಿಟ್ಟ ವಿಚಾರ. ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ. ಅವರವರ ಕರ್ಮಕ್ಕೆ ಅವರವರೆ ಹೊಣೆಗಾರರು ಎನ್ನಬಹುದಷ್ಟೆ. ಓದಿ ತಿಳಿಯೋ ಮೊದಲು ಮಾಡಿ ಕಲಿ.
ಅನುಭವವನ್ನು ಸತ್ಯದಿಂದ ತಿಳಿದರೆ ಶಾಂತಿ ಮುಕ್ತಿ. ಮಿಥ್ಯದ ಕಡೆಗೆ ಹೋದಷ್ಟೂ ಕ್ರಾಂತಿಯಿಂದ ಯುದ್ದ. ಜೀವ ಹೋಗೋದೆ ಆತ್ಮ ಶಾಶ್ವತ.
ಬರವಣಿಗೆಯನ್ನು ಅನುಭವದ ಮೂಲಕ ಹೊರಹಾಕುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರವೂ ಸಿಗಬಹುದು ಅಥವಾ ಸಮಸ್ಯೆ ಹೆಚ್ಚಾಗಲೂಬಹುದು.ಕಾರಣ
ನಮ್ಮ ಬರವಣಿಗೆಯ ವಿಷಯದ ಮೇಲೆ ಜಗತ್ತು ನಡೆದಿದೆ. ಇಂದು ಅಧ್ಯಾತ್ಮ ಸತ್ಯ ಹೊರಹಾಕಿದರೆ ಅರ್ಥವಾಗದವರು ವಿರೋಧಿಸುತ್ತಾರೆ.ಅರ್ಥವಾದವರು ಮಾತನಾಡೋದಿಲ್ಲ. ಇದೇ ಕಾರಣಕ್ಕಾಗಿ ಮಾನವನು ಅಜ್ಞಾನದಲ್ಲಿಯೇ ಜೀವನ ನಡೆಸಿ ಮರೆಯಾಗಿ ಜನ್ಮಪಡೆಯುವಂತಾಗಿದೆ. ಮತ್ತೆ ಜನ್ಮ ಪಡೆದಾಗ ಹಿಂದಿನ ನೆನಪಿರೋದಿಲ್ಲ ಹಿಂದಿನ ಸಂಬಂಧವೂ
ಇರೋದಿಲ್ಲ.ಅವರವರ ಪಾಪ ಪುಣ್ಯ ಕರ್ಮಕ್ಕೆ ತಕ್ಕಂತೆ ಜೀವಕ್ಕೆ ಸುಖ ದುಃಖ ವಿರುತ್ತದೆ.ಅದನ್ನು ಜ್ಞಾನದಿಂದ ತಿಳಿದು
ನಡೆಯಲು ಜ್ಞಾನದ ಶಿಕ್ಷಣವಿರಬೇಕು. ಅದನ್ನು ಕೊಡುವ ಗುರುಹಿರಿಯರಿರಬೇಕು.ಆಗಲೇ ಭೂಮಿಯಲ್ಲಿರುವಾಗಲೇ ಜೀವಕ್ಕೆ ಸತ್ಯದರ್ಶನ, ಪರಮಾತ್ಮನ ದರ್ಶನ. ಇದನ್ನು ಹೊರಕಣ್ಣಿನಿಂದ ತಿಳಿಯಲಾಗದು ಒಳಗಣ್ಣಿನಿಂದ ತಿಳಿಯುವ
ಅಧ್ಯಾತ್ಮ ದ ಅಗತ್ಯವಿದೆ.ಅಧ್ಯಾತ್ಮ ಎಂದರೆ ನಮ್ಮನ್ನು ನಾವು ಅರಿತು ನಡೆಯೋದು.
ಆಧ್ಯಾತ್ಮ ಎಂದರೆ ಆದಿ ಆತ್ಮ,ಆದಿ ಪುರಾಣ,ಆದಿಶೇಷ,
ಆದಿನಾಥ,ಆದಿದೇವ,ಆದಿಗುರು,ಆದಿವಿದ್ಯೆ,ಆದಿಪುರುಷ,ಆದಿದೇವತೆ,... ಅಧ್ಯಾತ್ಮ ಎಂದರೆ ತನ್ನ ತಾನರಿತುನಡೆಯೋದು.
ನನ್ನೊಳಗೇ ಇರುವ ಆಧ್ಯಾತ್ಮವನ್ನು ತಿಳಿಯದಿದ್ದರೆ ಅರ್ಧ
ಸತ್ಯದ ರಾಜಕೀಯವಾಗುತ್ತದೆ.
ಈ ಹೊಸ ಪುಸ್ತಕ್ಕೆ ಮುನ್ನುಡಿ ಬರೆದ ಶ್ರೀ ಪ್ರಭಾಕರ ಕಾರಂತ ರವರಿಗೂ, ಬೆನ್ನುಡಿ ಬರೆದ ಡಾ. ಎಸ್ ವಿ ಪ್ರಭಾವತಿ ಮೇಡಂ
ರವರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಯಾರೂ ಸ್ವತಂತ್ರ ರಿಲ್ಲವೆನ್ನಬಹುದಷ್ಟೆ. ಯಾರೋ ಹೇಳಿದ್ದನ್ನು ಯಾರೋ ಹೇಳಿ,ಯಾರೋ ಕೇಳಿ,ಯಾರೋ ನಡೆಸಿದರೆ ನಾನ್ಯಾರೆಂಬ ಸತ್ಯ ಹಿಂದುಳಿದು ಹಿಂದೂಗಳು ಹಿಂದುಳಿಯುತ್ತಾರೆ. ಹಿಂದಿನವರು ನಮ್ಮ ಹಿಂದೆಯೇ ಇದ್ದರೂ ನಾವು ಅವರನ್ನುಬಿಟ್ಟು ನಡೆಯುತ್ತೇವೆಂದರೆ ಸುಮ್ಮನಿರುವರೆ? ಹಿಂದಿನವರು ಇದ್ದಾಗ ಮಾನವರು ಹೋದ ಮೇಲೆ ಪಿತೃಗಳು ದೇವತೆಗಳಾಗಬಹುದು.ಅವರ ಧರ್ಮ ಕರ್ಮದ ಮೇಲೇ ಎಲ್ಲಾ ಮೇಲಿನಪದವಿ ನಿರ್ಧಾರ ವಾಗಿರುತ್ತದೆ. ಹೊರಗಿನಪದವಿ ಪಟ್ಟಗಳನ್ನು ಮಾನವ ನಿರ್ಧಾರ ಮಾಡಿದರೂ ದೈವೇಚ್ಚೆಯಿಲ್ಲದೆ ಏನೂ ನಡೆಯದು. ಅದಕ್ಕಾಗಿ ಮಹಾತ್ಮರುಗಳು ತಿಳಿಸಿರೋದು ಮಾನವ ಕಾರಣಮಾತ್ರದವ ನಾನೆಂಬುದಿಲ್ಲ.
No comments:
Post a Comment