ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, March 19, 2024

ದೇಶದ ಪರ ಯಾವ‌ ಪಕ್ಷವಿದೆ?

ಯಾವ  ಪಕ್ಷ   ದೇಶದ ಪರವಾಗಿದೆ?.
ಪ್ರಜಾಪ್ರಭುತ್ವ ದೇಶವೀಗ ಭ್ರಷ್ಟಾಚಾರದಸುಳಿಯಲ್ಲಿ ಸಿಲುಕಿ  ಹೊರಬರಲಾಗದ  ಪರಿಸ್ಥಿತಿ ಗೆ  ತಲುಪಿರೋದಕ್ಕೆ  
ಪಕ್ಷಗಳ  ಹಗ್ಗಜಗ್ಗಾಟ ಕಾರಣವೆ ಆದರೂ, ಈ ಪಕ್ಷಗಳನ್ನು
  ಬೆಳೆಸಿರೋ  ಪ್ರಜೆಗಳಜ್ಞಾನಕ್ಕೆ   ನಮ್ಮ  ಶಿಕ್ಷಣದೊಳಗಿನ  ರಾಜಕೀಯವೆಕಾರಣ. ಮೂಲ ಧರ್ಮ,ಕರ್ಮವನ್ನೇ  ಅರಿಯದೆಹೊರಗಿನ  ಧರ್ಮ ಕರ್ಮವನ್ನೇ  ಅನುಸರಿಸಿದ  ಜನತಮ್ಮಕಾಲ ಕೆಸರು  ಸ್ವಚ್ಚಗೊಳಿಸಿಕೊಳ್ಳದೆ, ಹೊರಗಿನ  ಕೆಸರಿಗೆ   ಕೈ ಹಾಕಿ ಬೆಳೆಸಿ, ಈಗಿದು ಪಕ್ಷಪಾತಕ್ಕೆ  ಹೆಸರಾಗಿದೆ. ಹಾಗಾದರೆ  ಪಕ್ಷಗಳು ಸೋತಿರೋದೆಲ್ಲಿ? ಗೆದ್ದವರು  ಯಾರು?
ದೊಡ್ಡ ಪಕ್ಷವಾಗೀ  ಬೆಳೆಸೋದಷ್ಟೆ ಮುಖ್ಯವಲ್ಲ.
ಜ್ಞಾನದಿಂದ ಸಹಕಾರ ನೀಡುವುದು ಮುಖ್ಯ.
ಸಂಸಾರದಲ್ಲಿ  ಹೇಗೆ  ಅತಿ ಸಂತಾನದಿಂದ ನರಕ
ಅನುಭವಿಸುವರೋ  ಹಾಗೆ  ದೇಶದ  ಅತಿಯಾದ
ಪಕ್ಷಗಳು,ಧರ್ಮ,ಪಂಗಡ,ಜಾತಿ, ಆಚರಣೆಗಳಿಂದ
ದೇಶದ ಮೂಲ ಧರ್ಮ, ಕರ್ಮಗಳು ಹಿಂದುಳಿದು
ರಾಜಕೀಯ ಬೆಳೆಯಿತೋ  ಹಾಗೆ, ಅತಿಯಾದ ತಮ್ಮ
ಸ್ವಾರ್ಥ ಚಿಂತನೆಯ  ರಾಜಕಾರಣ. ಈದೇಶದ ಮೂಲ ಶಿಕ್ಷಣಕ್ಕೆ  ಕೊಳ್ಳಿ ಇಟ್ಟು, ಇಂದಿನ ಸಾಮಾನ್ಯ
ಜನರಿಂದ  ಹಿಡಿದು  ಪ್ರತಿಷ್ಟಿತರವರೆಗೆ  ವಿದೇಶಿ ಆಂಗ್ಲ
ಮಾಧ್ಯಮ ಶಾಲೆ  ಬೇಕಾಗಿದೆ. ಇದಕ್ಕಾಗಿ ಸರ್ಕಾರ
ಆಂಗ್ಲ  ಮಾಧ್ಯಮ ಶಾಲೆಗಳನ್ನು   ತಾವೆ ಪ್ರಾರಂಭ
ಮಾಡಿ, ಮಾತೃಭಾಷೆ  ಹಿಂದುಳಿದಿದೆ. ರಾಜಕೀಯ
ನಡೆಸೋರಿಗೆ  ತನ್ನ  ಮಾತೆಗೆ  ಗೌರವ ತೋರಿಸಿದಂತೆ
ತನ್ನ ಭಾರತಮಾತೆ, ಕನ್ನಡಾಂಬೆ ಎನ್ನುವ. ಗೌರವ
ಇಲ್ಲವಾದರೆ  ಇವರು  ದೇಶವನ್ನಾಗಲಿ,ರಾಜ್ಯವನ್ನಾಗಲಿ  ಉಳಿಸಿ ಬೆಳೆಸಲು
ಸಾಧ್ಯವೆ?
ಎಲ್ಲಾ  ಪಕ್ಷಗಳು ಬಯಸೋದು  ಪಕ್ಷದ. ಅಧಿಕಾರ
ಇಲ್ಲಿ  ಒಂದೇ ದೇಶದವರಾಗಿ  ಈ ರೀತಿಯ  ಸ್ಪರ್ಧೆ
ನಡೆಸುವಾಗ. ಗೆದ್ದವರಿಗೆ  ಸಹಕಾರ ನೀಡುವುದು
ಮಾನವೀಯ ಗುಣ, ಆದರೆ, ‌ಇಲ್ಲಿಯ ಅಸಂಖ್ಯಾತ
ಪಕ್ಷಗಳೆಲ್ಲವೂ  ದೇಶವನ್ನು  ನಡೆಸಲು  ಭ್ರಷ್ಟಾಚಾರ
ನಡೆಸಿದರೆ  ಇದರ ಪರಿಣಾಮ  ಮುಂದಿನ ಜನತೆ
ಅನುಭವಿಸಬೇಕಷ್ಟೆ. ಶಿಕ್ಷಣದಲ್ಲಿಯ  ಅತಿಯಾದ
ಭ್ರಷ್ಟಾಚಾರ ತೊಲಗಿಸೋ ಬದಲು ತಾವೇ ಅದರಲ್ಲಿ
ಇಳಿದರೆ  ಇದು  ಯಾರಿಗೆ ಲಾಭ? ನಷ್ಟ ಯಾರಿಗೆ?
ವಿದೇಶಿಗಳಿಗೆ ಲಾಭ .ಸ್ವದೇಶಕ್ಕೆ  ನಷ್ಟ.
ಈ  ಧಾರ್ಮಿಕ ನಷ್ಟ ತುಂಬಲು  ಧರ್ಮದ ಶಿಕ್ಷಣ
ಬೇಕು. ಇದನ್ನು ಧಾರ್ಮಿಕ ವರ್ಗ ನೀಡಬೇಕು.ಇಂದು
ಇವರೇ  ರಾಜಕಾರಣಿಗಳ ಹಿಂದೆ  ಬಿದ್ದು, ತಮ್ಮ. ಮಠ
ಮಂದಿರ,ಸಂಘ ಸಂಸ್ಥೆ ಗೆ   ಭ್ರಷ್ಟರ ಹಣವನ್ನು ಬಳಸಿ
ದೇವರು,ಧರ್ಮದ ಹೆಸರಲ್ಲಿ  ಜನರ ಸಾಮಾನ್ಯಜ್ಞಾನವನ್ನೂ  ಹಾಳುಮಾಡಿ ರಾಜಕೀಯನಡೆಸೋರಿಗೆ  ದೇಶಭಕ್ತಿ ಇದೆಯೆ?
ಶ್ರೀ ರಾಮನ  ತತ್ವ. ಶ್ರೀ ರಾಮ ಭಕ್ತರಲ್ಲಿದ್ದರೆ ನಿಜವಾದ  ಶ್ರೀ ರಾಮರಾಜ್ಯಸ್ಥಾಪನೆ, ಹಾಗೆಯೇ ಶ್ರೀಕೃಷ್ಣ ನ  ಭಕ್ತರಲ್ಲಿಯೂ   ಧರ್ಮ ಸತ್ಯದ ಜ್ಞಾನವಿದ್ದುಧರ್ಮದ. ರಾಜಕೀಯ ನಡೆಸಲು  ದೇಶಭಕ್ತಿ ಬೆಳೆಸಿ,ನಡೆಯಬೇಕು. ಆದರೆ, ಇಲ್ಲಿ  ನಡೆಯುತ್ತಿರುವುದೆಬೇರೆ, ಎಲ್ಲರಿಗೂ  ಹೊರಗಿನ ಆಸ್ತಿ, ಅಂತಸ್ತು, ಅಧಿಕಾರ, ಹಣ,ಸ್ಥಾನ ಮಾನಸನ್ಮಾನ,ಒಡವೆ,ವಸ್ತ್ರ
ಮನೆ ಮಠದ್ದೇ ಚಿಂತೆ ಆದರೆ ಅವುಗಳನ್ನೆಲ್ಲ ತನ್ನಲ್ಲಿ
ಅಡಗಿಸಿಟ್ಟುಕೊಂಡು  ಭ್ರಷ್ಟಾಚಾರದಲ್ಲಿ  ಮುಳುಗಿರೋ ದೇಶದ. ಬಗ್ಗೆ  ಎಷ್ಟು  ಜ್ಞಾನಿಗಳು ಚಿಂತನೆ ನಡೆಸಿದ್ದಾರೆಂದು  ಅವರೆ ಆತ್ಮಾವಲೋಕನಮಾಡಿಕೊಂಡರೆ  ಉತ್ತಮ. ಮಾಧ್ಯಮದ  ಮೂಲಕತಾವು  ದೇವರೆಂಬಂತೆ  ಜನರನ್ನು 
 ಸೆಳೆಯುವವರಿಗೆದೇಶದಲ್ಲಿ  ನಮ್ಮೆದುರೆ ನಡೆಯೋ  ಭ್ರಷ್ಟಾಚಾರವನ್ನು ತಡೆಯಲಾಗುತ್ತಿಲ್ಲವೆಂದರೆ  ದೇವರು  ಎಲ್ಲಿರುವರು?
ಪುರಾಣದ. ರಾಜಕೀಯಕ್ಕೂ, ಪ್ರಜಾಪ್ರಭುತ್ವದ   ಕೆಟ್ಟ
ರಾಜಕೀಯಕ್ಕೂ  ಕಾರಣ ಅಜ್ಞಾನದ   ಅಧಿಕಾರದಲ್ಲಿ
ತಮ್ಮೊಳಗೆ  ಅಡಗಿದ್ದ. ಅತಿಯಾದ ಸ್ವಾರ್ಥ ಅಹಂಕಾರ. ಇದು  ಸಾಮಾನ್ಯಜನರಲ್ಲಿದೆಯೆ? ಇಲ್ಲಾ
ಪ್ರತಿಷ್ಟಿತರ  ರಾಜಕೀಯದಲ್ಲಿದೆಯೆ?
ದೇಶದ. ರಾಜಕೀಯ ‌ಪಕ್ಷಗಳಲ್ಲಿ  ಆಡಳಿತ ನಡೆಸೋ
ಮಹಾಪ್ರಜೆಗಳಿಗೆ  ಸ್ವದೇಶದ ಶಿಕ್ಷಣದ  ಮಹತ್ವ ತಿಳಿದಿಲ್ಲ. ಅಶಿಕ್ಷಿತ, ಅಜ್ಞಾನದ  ಇಂತಹವರಿಗೆ ದೇಶ
ಆಳೋ ಸ್ವಾತಂತ್ರ್ಯ ವಿದೆ. ಆಧರೆ, ದೇಶಭಕ್ತರಿಗಿಲ್ಲ.
ವಿದೇಶವನ್ನು  ಎತ್ತಿ ಹಿಡಿಯೋ  ಶ್ರೀಮಂತ ರಿಗಿದೆ.
ಪಕ್ಷಗಳನ್ನು  ಕಟ್ಟಲು ಸ್ವದೇಶದ  ಜನಸಹಾಯ,ಹಣ
ಸಹಾಯ ಪಡೆದು,ಅಧಿಕಾರ ಬಂದ ಮೇಲೆ ವಿದೇಶೀ
ರೀತಿ ನೀತಿ ಶಿಕ್ಷಣ,ವ್ಯವಹಾರ,ಬಂಡವಾಳ,ಸಾಲ
ಪಡೆದು  ದೇಶದ ಜನತೆಗೆ  ಅವರ  ಮೂಲ ಶಿಕ್ಷಣ
ನೀಡದೆ,  ಸ್ವಾವಲಂಬಿಗಳಾಗಿ ಎಂದರೆ ಅರ್ಥವೆಲ್ಲಿದೆ
ಎಲ್ಲವೂ   ಪ್ರಚಾರಕ್ಕಷ್ಟೇ  ಸೀಮಿತಮಾಡಿಕೊಂಡಿರೋ  ಮಾಧ್ಯಮಗಳೂ ಈಗ ಇಂತವರನ್ನೇ ಎತ್ತಿ ಏಣಿಗೇರಿಸಿ  ಮಧ್ಯದಲ್ಲಿ  ಹರಿದು ಬರುವ  ಸರ್ಕಾರದ  ಸಾಲ
 ಸೌಲಭ್ಯಗಳ ದುರುಪಯೋಗ ಪಡಿಸಿಕೊಂಡಿರೋ ಅನೇಕ ಮಧ್ಯವರ್ತಿಗಳಿಗೆ ಕೈ ಜೋಡಿಸಿ  ತಾವು ಮಾತ್ರ ನೆಮ್ಮದಿ ಜೀವನ. ನಡೆಸಲು  ಸಾಧ್ಯವಿಲ್ಲ. 
ಜೀವರಕ್ಷಣೆಗಾಗಿ  ಬಿಕ್ಷೆ ಬೇಡುವುದು ಅವರ ಧರ್ಮ
ಕರ್ಮ/.ಆದರೆ, ಇನ್ನೊಬ್ಬರ ಜೀವ ಹಿಂಡಿ  ಬಿಕ್ಷೆ ಬೇಡಿದರೆ
ಅಧರ್ಮ, ಭಗವಂತ. ಎಲ್ಲರಿಗೂ  ಬದುಕಲು ನೀಡಿ
ರೋ   ಜೀವಕ್ಕೆ  ಬೇಕಾದಷ್ಟು   ದುಡಿದು  ತಿನ್ನಲು
ಕೆಲಸಕೊಟ್ಟು  ಎಲ್ಲರನ್ನೂ  ಅವರವರ ಧರ್ಮದ
ಹಾದಿಯಲ್ಲಿ  ನಡೆಸಿದರೂ, ಮಧ್ಯವರ್ತಿಗಳು  ತಮ್ಮ
ಸ್ವಾರ್ಥ ಸಾಧನೆಗೆ  ಮಧ್ಯದಲ್ಲಿ  ನಿಂತು ರಾಜಕೀಯ
ನಡೆಸಿ, ದಾರಿ ತಪ್ಪಿಸಿತಮ್ಮ.ಅಡಿಯಾಳಾಗಿಸಿಕೊಂಡರೆ  ಇದೇ ಭ್ರಷ್ಟಾಚಾರ.ಇದು ಎಲ್ಲಾ  ಪಕ್ಷಗಳೂ  ಮುನ್ನಡೆಸಿದೆ.ಜಾತಿ ಯ ರಾಜಕೀಯದಲ್ಲಿ  ಧರ್ಮವೇ  ಮರೆಯಾಗಿದೆ.
ಧಾರ್ಮಿಕ  ಆಚರಣೆಗಳಲ್ಲಿಯೂ  ಇದೇ ಭ್ರಷ್ಟಾಚಾರ.
ಏನೇ ಇರಲಿ  ಇಲ್ಲಿ  ಎಲ್ಲರೂ  ಅವರವರ ಅನುಕೂಲಕ್ಕೆ ತಕ್ಕಂತೆ  ನಡೆಯೋದು  ಮಾನವನಿಗೆ ಸರಿ,ಆದರೆ,
 ಅಧರ್ಮದಲ್ಲಿ  ತನ್ನ ಅನುಕೂಲಕ್ಕೆ ತಕ್ಕಂತೆ  ದೇಶವನ್ನೇ  ವಿದೇಶ ಮಾಡೋದು  ಸರಿಯಲ್ಲ . ಬದುಕಿದ್ದಾಗಲೇ  ಆತ್ಮಹತ್ಯೆ ಮಾಡಿಕೊಂಡಂತೆ  ಎನ್ನುವುದು ಮಹಾತ್ಮರ 
 ನಡೆ ನುಡಿಯಹಿಂದಿನ   ಜ್ಞಾನ. ಇಂದಿನ ವಿಜ್ಞಾನ
 ಇದಕ್ಕೆ ವಿರುದ್ದ. ಇದಕ್ಕೆ  ರಾಜಕೀಯ ಸಹಕಾರ ಬೇರೆ  ಪ್ರಜೆಗಳಿಗೆ ತಕ್ಕಂತೆ  ನಡೆಯೋದು  ಪಕ್ಷಗಳ ಧರ್ಮವಾದರೂದೇಶದ ಧರ್ಮಕ್ಕೆ  ವಿರುದ್ದ ಪ್ರಜೆಗಳೇ 
 ನಡೆದರೆ  ಇದು  ಪ್ರಜೆಗಳ ಅಜ್ಞಾನವಷ್ಟೆ. ಅಜ್ಞಾನ ಶಿಕ್ಷಣದಲ್ಲಿಯೇ ಅಡಗಿದೆ.

No comments:

Post a Comment