ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, March 1, 2024

ಅದ್ವೈತಾನುಭವ ಕಷ್ಟಕರವಾಗಿದೆ.

ಜೀವನದ ಗುರಿಯೇ ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕೋದೆನ್ನುತ್ತದೆ ಅಧ್ಯಾತ್ಮ. ಇದಕ್ಕೆ ಉತ್ತರ ಒಳಗೇ ಹುಡುಕಿದಾಗ ಮೊದಲು ನಾನ್ಯಾರೆಂಬ ಉತ್ತರ ಸಿಗುತ್ತದೆ ಇನ್ನೂ ಮುಂದೆ ಹೋದಾಗ ನಾನೆಂಬುದಿಲ್ಲವೆನ್ನುವ ಅರಿವಾಗುತ್ತದೆ ಇದೇ ಅದ್ವೈತ.
ಶ್ರೀ ಶಂಕರಭಗವತ್ಪಾದರಂತೆ‌ ಇಂದು ಯಾರೂ ನಡೆಯಲಾಗದು.‌ ಅದ್ವೈತ ವೆಂದರೆ ಎಲ್ಲರಲ್ಲಿಯೂ ಅಡಗಿರುವ‌ಆ ಪರಮಾತ್ಮನ ಅರ್ಥ ಮಾಡಿಕೊಂಡು ನಡೆಯೋದು ಎಂದಾಗ ನಡೆದವರಿಲ್ಲ ಕಾರಣ ನಮಗೆ ಪರಮಾತ್ಮ ‌ಕಂಡರೂ ಬೇರೆಯವರಿಗೆ ನಮ್ಮೊಳಗೇ ‌ನಿಂತು ನಡೆಸೋ ಪರಮಾತ್ಮನ ದರ್ಶನ ವಾಗದಿದ್ದರೆ ಘರ್ಷಣೆ ಆಗುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಇರುವ  ಒಂದೇ ಸತ್ಯ ಬಿಟ್ಟು ಹೊರಬರಬೇಕು. ಆದರೆ ಜಗತ್ತನ್ನು  ನಡೆಸಿರುವ  ದ್ವೈತ ಸಿದ್ದಾಂತ ವನ್ನು ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ  ಬದಲಾವಣೆ ಸಾಧ್ಯ.ಅಂದರೆ ನಾನೇ ಬ್ರಹ್ಮ ಎನ್ನುವ ಬದಲಾಗಿ ನಾನು ಬ್ರಹ್ಮನ ಒಂದಂಶ ಎಂದಾಗ ಬೇರೆಯವರಲ್ಲಿಯೂ  ಇರುವ ಒಂದಂಶ ಎಚ್ಚರವಾಗಬಹುದು.ಎರಡೂ ಬ್ರಹ್ಮನ ಅಂಶವಾದಾಗ ಅವರವರ ಜನ್ಮಕ್ಕೆ  ಸೃಷ್ಟಿ ಗೆ ಕಾರಣ ತಿಳಿಯಲು ಸ್ವತಂತ್ರ ಜ್ಞಾನದ ಬಳಕೆಯಾಗುತ್ತದೆ.ಇಲ್ಲವಾದರೆ ಒಬ್ಬರ ಜ್ಞಾನವೇ ಶ್ರೇಷ್ಠ ಎನ್ನುವ ಮಟ್ಟಿಗೆ  ಅದನ್ನು ಎಲ್ಲಾ ಹಿಡಿದು ಹೋಗಿ ಅನುಭವದ ಕೊರತೆಯಿಂದ ಅಲ್ಲಗೆಳೆಯುವ ವಾದ ವಿವಾದ ಹೆಚ್ಚಾಗುವುದು.
ಇಲ್ಲಿ ವಿಶ್ವಗುರು  ಎನ್ನುವಾಗ ಇಡೀ ವಿಶ್ವದ  ಜ್ಞಾನ ಒಬ್ಬರಲ್ಲಿ ಇರದು.ಇದು ಪರಮಾತ್ಮನಿಗಷ್ಟೆ ಇರೋವಾಗ ಅವನೊಳಗಿರುವ ಜೀವಾತ್ಮರು ತನ್ನೊಳಗೆ ವಿಶೇಷವಾಗಿರುವ ಜ್ಞಾನವನ್ನು ಗುರುತಿಸಿಕೊಂಡು ಸನ್ಮಾರ್ಗದಲ್ಲಿ ನಡೆದಾಗ ಜೊತೆಗಿರುವವರೂ ಪ್ರಯತ್ನಪಡಬಹುದಷ್ಟೆ. ಎಲ್ಲರನ್ನೂ ನಾನೇ ನಡೆಸೋದೆಂದಾಗ ನನ್ನ ಅಭಿಪ್ರಾಯ, ಅನುಭವಕ್ಕೆ ವಿರುದ್ದ ನಡೆಯೋ  ಕಾಲಬರುವುದು.ಹೀಗಾಗಿ ಹಿಂದಿನ ಶಾಸ್ತ್ರ ಪುರಾಣಗಳಿಂದ ಜ್ಞಾನ‌ಪಡೆದರೂ ಅದರ ಮೂಲ ಸತ್ಯ ಸತ್ವ ತತ್ವವನರಿಯದೆ  ಓದಿ ಪ್ರಚಾರಮಾಡಿ  ಜ್ಞಾನಿಯಾಗಿ ಜನರನ್ನು ನಡೆಸೋದರಲ್ಲಿಯೂ ದ್ವೈತವೇ ಅಡಗಿದೆ.ಇಲ್ಲಿ  ಪ್ರಚಾರದಿಂದ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸಾಧನೆಗೆ ಜನರ ದಾರಿತಪ್ಪಿಸಿ ಆಳುವ ರಾಜಕೀಯ ಬೆಳೆದರೆ ಸಮಾಜಕ್ಕೆ ನಷ್ಟ. ಹೀಗಾಗಿ  ಸಂಸಾರದೊಳಗಿದ್ದು ಸಮಾಜದ ಆಗುಹೋಗುಗಳಿಗೆ ನನ್ನ ಧರ್ಮ ಕರ್ಮ ದಿಂದ  ಶಾಂತಿ ಸಿಗೋದಾದರೆ  ಉತ್ತಮ. ಧರ್ಮ ರಕ್ಷಣೆಗಾಗಿ ಈಗಾಗಲೇ ಸಾಕಷ್ಟು ಯುದ್ದಗಳಾಗಿವೆ.ಸಾವುನೋವುಗಳಿಂದ  ಜೀವಾತ್ಮ ಪರಮಾತ್ಮನ ಕಡೆಗೆ ಹೋಗಲಾಗದೆಯೇ ದ್ವೇಷ ಸೇಡು ಸ್ಪರ್ಧ ಪೈಪೋಟಿ ಹಗೆತನದಿಂದ ಇನ್ನಷ್ಟು ಅತೃಪ್ತ ಆತ್ಮಗಳು ಸುಳಿದಾಡುತ್ತಿರುವ ಈ ಸಮಯದಲ್ಲಿ ಕಣ್ಣಿಗೆ ಕಾಣೋದೇ ಒಂದು ಹಿಂದೆ ನಿಂತು ನಡೆಸೋ ಶಕ್ತಿಯೇ ಬೇರೊಂದು.ಇಲ್ಲಿ ದ್ವೈತ ವಿದೆ.ಭೂಮಿ ನಡೆದಿರೋದೇ ದ್ವೈತಿಗಳಿಂದ ಎಂದಾಗ ಅಧ್ವೈತ ದೊಳಗೇ ದ್ವೈತದ. ರಾಜಕೀಯ ಕಣ್ಣಿಗೆ ಕಂಡಾಗ ಅದಕ್ಕಿಂತ  ಇನ್ನೊಂದು ಸತ್ಯ ಒಳಗಿದೆ ಎನ್ನುವ ಬಗ್ಗೆ ಅಧ್ವೈತ ಸಂಶೋದನೆ‌‌ನಡೆದಿದೆ,ನಡೆಯುತ್ತಿದೆ,ನಡೆಯುತ್ತಲೇ ಇರುತ್ತದೆ. 

No comments:

Post a Comment