ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, March 19, 2024

ಇನ್ನೆಷ್ಟು ದಿನ‌ಈ ಅಜ್ಞಾನ?

ಇನ್ನಷ್ಟು ದಿನ ಈ ಅಜ್ಞಾನ?
ಇಡೀ ವಿಶ್ವವ್ಯಾಪಿಸಿರುವ ಮೂರೂ ಮತಗಳು ಭಾರತದಲ್ಲಿ ಹೆಚ್ಚು ಹೋರಾಡುತ್ತವೆಂದರೆ ಭಾರತೀಯರಿಗೇ ತಮ್ಮ ಒಳಗಿರುವ ಧರ್ಮ ಕರ್ಮದ ಅರಿವಿಲ್ಲದೆ ಪರರಿಗೆ ಮಣೆ ಹಾಕಿಕೊಂಡು ತಲೆಬಾಗಿರೋದಷ್ಟೆ ಕಾರಣ.ಹಿಂದೂಗಳ ಈ ಬಾಗುವಿಕೆಗೆ ಕಾರಣ ವ್ಯವಹಾರ. ಹಣ ಬೇಕು ಜನ ಬೇಡ ಎಂದರೆ ಹೇಗೆ? ನಮ್ಮವರನ್ನೇ ದ್ವೇಷ ಮಾಡುತ್ತಾ ವಿದೇಶಿ ವ್ಯಾಮೋಹದಲ್ಲಿ ಪೋಷಕರೆ ಮಕ್ಕಳನ್ನು ದೂರ ಓಡಿಸಿಕೊಂಡು ಅನಾಥಾಶ್ರಮ ವೃದ್ದಾಶ್ರಮ ಸೇರಿದರೆ ತಪ್ಪು ಯಾರದ್ದು? ರಾಜಕೀಯ ದ್ವೇಷದಿಂದ ಯುದ್ದಗಳಾಗಿವೆ. ಇದಕ್ಕೆ ಪರಿಹಾರ ಜ್ಞಾನದಿಂದ ಕಂಡುಕೊಳ್ಳಲು ಆತ್ಮಾವಲೋಕನ ಬೇಕಷ್ಟೆ. ಬೇರೆಯವರಿಗೆ ಉಪದೇಶ ಕೊಡೋರಿಗೆ ತನ್ನ ಸಂಸಾರದ ಸಮಸ್ಯೆಗೇ ಪರಿಹಾರವಿರದು. ಸಂನ್ಯಾಸಿಗಳು ಸಂಸಾರಿಗಳ ಸಮಸ್ಯೆಗೆ ಪರಿಹಾರ ಕೊಡಬಹುದೆ? ಅನುಭವವಿಲ್ಲದ  ಪ್ರವಚನದಲ್ಲಿ  ಎಷ್ಟೋ ಮಂದಿ ದಾರಿತಪ್ಪಿ ಮನೆಯಿಂದ ಹೊರಬಂದಿರುವಾಗ ಅವರನ್ನು ಹೊರಗಿನವರೆ ಆಳೋದಲ್ಲವೆ?ಎಲ್ಲಾ ಕಾಲದ ಪ್ರಭಾವವೋ ಅಥವಾ ಕಲಿಕೆಯ ಪ್ರಭಾವವೋ.ಕಾಲ ನಿಲ್ಲದು ಕಲಿಕೆ ನಿಲ್ಲಬಹುದು. ಕಲಿಯುವುದನ್ನು ಸರಿಯಾಗಿ ಕಲಿತಾಗಲೇ ಕಾಲ ಬದಲಾಗೋದು. ಅದಕ್ಕೆ ಮಹಾತ್ಮರುಗಳು ತಿಳಿಸಿರೋದು ಎಲ್ಲಾ ಸತ್ಯ ನಿನ್ನೊಳಗೆ ಅಡಗಿರುವಾಗ ನಿನ್ನ ನೀ ಅರಿತು ನಡೆ ಎಂದು.ಎಲ್ಲಾ ರಾಜಕೀಯಕ್ಕೆ ಮುಖಮಾಡಿದರೆ ಅಸತ್ಯವೇ ಬೆಳೆಯೋದು.ಸತ್ತ ಮೇಲೆ ಸತ್ಯ ಕಾಣುವುದೆ? ಜೀವವಿರೋವಾಗಲೇ ಆತ್ಮದರ್ಶನ ಮಾಡಿಕೊಂಡವರೆ ಮಹಾತ್ಮರಾಗಿರೋದು.ಅವರಲ್ಲಿ ದ್ವಂದ್ವವಿರಲಿಲ್ಲ.
ದ್ವೇಷವಿರಲಿಲ್ಲ ರಾಜಕೀಯವಂತೂ ದೂರದ ಮಾತಾಗಿತ್ತು.ಸಮಾಜದ ಮಧ್ಯೆ ಇದ್ದು ಯೋಗದೃಷ್ಟಿಯಿಂದ ಸತ್ಯವರಿತು ತಮ್ಮ ಆತ್ಮಸಂಶೋಧನೆಯಿಂದ  ಲೋಕಕಲ್ಯಾಣಕ್ಕಾಗಿ  ಸಮಾಜದ ಲೋಪದೋಷಗಳನ್ನು ಹೊರಹಾಕಿ ಜನರನ್ನು ಎಚ್ಚರಿಸಿದವರನ್ನು ಅಂದಿನ ಸಮಾಜ ತಿರಸ್ಕಾರದಿಂದ ಕಂಡಿತ್ತು ಅಂದರೆ ಮಹಾತ್ಮರುಗಳ ನಡೆ ನುಡಿ ನೇರವಾಗಿರುವುದರಿಂದ  ಅದನ್ನು ಅರ್ಥ ಮಾಡಿಕೊಳ್ಳಲು ಜನರಲ್ಲಿ ಸತ್ಯಜ್ಞಾನವಿರಬೇಕಷ್ಟೆ. ಈಗ ಅದನ್ನೇ ಪ್ರಚಾರ ಮಾಡುವ ಮಧ್ಯವರ್ತಿಗಳು ಬೆಳೆದಿರುವರು ಆದರೆ ಅವರಂತೆ ನಡೆಯಲಾಗದ ಕಾಲದಲ್ಲಿ  ಜನರಿದ್ದಾರೆ ಕಾರಣ ಶಿಕ್ಷಣದಲ್ಲಿಯೇ ಮಹಾತ್ಮರುಗಳ ಸತ್ಯವನ್ನು ತಿರುಚಲಾಗಿದೆ. ಇದನ್ನು  ಎಷ್ಟೋ ವರ್ಷಗಳಿಂದಲೂ ಮಕ್ಕಳ ತಲೆಗೆ ತುಂಬುತ್ತಿದ್ದರೂ ವಿರೋಧಿಸದವರು ಈಗ  ಎಚ್ಚರವಾಗಿ ಹೋರಾಟ ಹೊರಗೆ ನಡೆಸಿದರೆ ಒಳಗೇ ಹೋರಾಟ ನಡೆಸುವಷ್ಟು ಜ್ಞಾನವಿದ್ದರೆ ಉತ್ತಮ ಫಲ. ಒಟ್ಟಾಗಿ ಮಾಡೋರು ಆಡೋದಿಲ್ಲ.ಆಡಿದವರು ಮಾಡಲಿಲ್ಲ.
ನಡೆದಿದ್ದೇ ಬೇರೆ ಎಂದಾಗ ನಡೆಯುವ ದಾರಿ ಸರಿಯಿರಲಿಲ್ಲ.
ದಾರಿ ಬದಲಾಯಿಸಲು ಪೋಷಕರೆ ತಯಾರಿಲ್ಲವೆಂದರೆ ಮಕ್ಕಳ ಗತಿ ಅಧೋಗತಿ.ಕೆಲವರು ಉತ್ತಮ ದಾರಿ ಹಿಡಿದರೂ ಅವರೊಂದಿಗೆ ಹೋಗೋರಿಲ್ಲ ತಡೆಯೋರೆ ಹೆಚ್ಚು. ಅವರ  ಈ ಮಧ್ಯಸ್ಥಿಕೆ ಯೇ ಎಲ್ಲಾ ಅನಾಹುತಕ್ಕೆ ಕಾರಣವಾಗಿದೆ. ಹಾಗಾದರೆ  ಪರಿಹಾರ ಹೊರಗಿದೆಯೆ? ಒಳಗಿದೆಯೆ? ಮಹಿಳೆ ಮಕ್ಕಳೆನ್ನದೆ ಹೊರಬಂದು ಹಣಸಂಪಾದಿಸಿದರೂ  ಮುಗಿಯದ ಸಾಲ ತೀರಿಸಲು ಸತ್ಯ ತಿಳಿಯುವುದು ಅಗತ್ಯವಿದೆ.ಅಧ್ಯಾತ್ಮ ಸತ್ಯ ಅಧ್ಯಯನ ಮಾಡಿ ತಿಳಿಯುವುದಕ್ಕಿಂತ  ಅಭ್ಯಾಸ ಮಾಡಿ ಅನುಭವದಿಂದ ತಿಳಿದಾಗಲೇ ಮಹಾತ್ಮರು ಕಾಣಿಸೋದು.
ಆತ್ಮ ಒಳಗಿರುವಾಗ ಕಾಣದ್ದನ್ನು ಕಂಡೆ ಎನ್ನುವ ಹೊರಗಿನವರಲ್ಲಿ ಸತ್ಯವಿದೆಯೆ? ಇದ್ದರೂ ದೇವರನ್ನು  ತೋರಿಸಬಹುದೆ? ತೋರಿಸಿರುವರೆ? ದೈವತ್ವಕ್ಕೆ ತತ್ವಜ್ಞಾನ ಬೇಕು.ತಂತ್ರಜ್ಞಾನದಿಂದ ದೇವರನ್ನು ತೋರಿಸುವ ಪ್ರಯತ್ನ ಮಾಡಿದರೆ ಅತಂತ್ರಸ್ಥಿತಿಗೆ ತಲುಪಬಹುದು. ಸ್ವತಂತ್ರ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಭಾರತೀಯರಿಗೆ ನೀಡಿದರೆ ಸಾಧ್ಯ.ಗುರುತಿಸುವ ಗುರುವಿನ ಅಗತ್ಯವಿದೆ. ಪೋಷಕರು ಎಚ್ಚರವಾಗದಿದ್ದರೆ  ಮಕ್ಕಳು ಪರಕೀಯರ ವಶವಾಗುತ್ತಾರೆ. ಹಣ ಸಿಕ್ಕರೂ  ನಮ್ಮಜ್ಞಾನವಿರದು. ನಮ್ಮ ಜ್ಞಾನವೇ ಹಿಂದುಳಿದಾಗಲೇ ಹಿಂದೂ ಧರ್ಮ ಅರ್ಥ ವಾಗದೆ ಹಿಂದುಳಿದವರ ಸಂಖ್ಯೆ ಬೆಳೆಯೋದು.  ಜನಸಂಖ್ಯೆಯಿಂದ ಭೂಭಾರ ಹೆಚ್ಚಾಗಿ ಭೂಕಂಪಗಳಾಗೋದು. ಪ್ರಕೃತಿ ವಿಕೋಪಕ್ಕೆ  ಸರ್ಕಾರ ಕಾರಣವಾಗುವುದೆ? ಇಲ್ಲಿ ವಿಕೃತ ಮನಸ್ಸಿನವರಿಗೆ ನೀಡುವ ಸಹಕಾರವೇ ಎಲ್ಲಾ ಸಮಸ್ಯೆಗೆ ಕಾರಣವಾಗುತ್ತಿದೆ. ಪ್ರಕೃತಿಗೆ ತಲೆಬಾಗಿ ನಡೆಯೋದಕ್ಕೆ ಮಹಾತ್ಮರಿಗೆ ಸಾಧ್ಯ. ಜನನ ಮರಣದ ನಡುವಿನ ಎರಡು ದಿನದ ಜೀವನಕ್ಕೆ  ಇಷ್ಟು ಹೋರಾಟ ಹಾರಾಟ ಮಾರಾಟ ಬೇಕೆ?  ಮಾನವನಿಗೆ ಸಾಮಾನ್ಯಜ್ಞಾನದ ಕೊರತೆಯಿದೆ.
ಶಿಕ್ಷಣದಲ್ಲಿಯೇ ಮಕ್ಕಳ ಸಾಮಾನ್ಯ ಜ್ಞಾನವನ್ನು ತಿರಸ್ಕರಿಸಲಾಗಿದೆ ಏನಂತೀರಾ? ಯಾರು ಶಾಶ್ವತರು?
ಮೊದಲು ಮಾನವರಾಗಲು ಸಾಮಾನ್ಯರಲ್ಲಿ ಸಾಮಾನ್ಯರಂತಿರಬೇಕಿದೆ ಸಾಧ್ಯವೆ? ನಂತರ ಮಹಾತ್ಮರನ್ನು ಕಾಣಬಹುದು. ಈಗಲೂ ನಮ್ಮ ಸುತ್ತಮುತ್ತ ಮಹಾತ್ಮರಿದ್ದರೂ ನಮ್ಮ ಹೊರದೃಷ್ಟಿಗೆ ಕಾಣುತ್ತಿಲ್ಲವೆಂದರೆ ನಮ್ಮಲ್ಲಿ ದೃಷ್ಟಿ ದೋಷವಿದೆ. ನಾವು ಬದಲಾಗಬೇಕಷ್ಟೆ. ಅಸುರರೊಳಗೇ ಸಿಲುಕಿರುವ ಸುರರ ಪರಿಚಯವಾಗಬೇಕಿದೆ

No comments:

Post a Comment