ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, March 13, 2024

ಸತ್ಯಕ್ಕೆ ಸಾವಿಲ್ಲ,ಸತ್ಯ ಯಾವುದು ಎಲ್ಲಿದೆ?

ಸತ್ಯ ತಿಳಿದು ತಿಳಿಸುವವರಿಗೆ ವೈರಿಗಳು ಹೆಚ್ಚು  ಹಾಗೆ  ಅಸತ್ಯದಿಂದ ಆಳುವವರಿಗೆ ಮಿತ್ರರು ಹೆಚ್ಚು. ಸತ್ಯ   ಕಹಿ ಅಸತ್ಯ  ಸಿಹಿ ಎನಿಸಿದರೆ ಅದೊಂದು ಅಜ್ಞಾನವಷ್ಟೆ ಅತಿಯಾಗಸಿಹಿಯೇ ರೋಗಕ್ಕೆ ಕಾರಣ ರೋಗ ಬಂದಾಗ ಹಂಚಿಕೊಳ್ಳಲು ಯಾರೂ ಹತ್ತಿರವಿರೋದಿಲ್ಲ ಎನ್ನುವುದೂ ಸತ್ಯ. ಆರೋಗ್ಯಕ್ಕೆ ಸತ್ಯಜ್ಞಾನ ಅನಾರೋಗ್ಯಕ್ಕೆ ಮಿಥ್ಯಜ್ಞಾನ.
ಮಾನವನೊಳಗೇ ಅಡಗಿರುವ ಈ ರೋಗಾರೋಗಗಳಿಗೆ ಜ್ಞಾನವೇ ಕಾರಣ.ಇದು ಸತ್ಯದೆಡೆಗೆ ನಡೆದರೆ  ಉತ್ತಮ ಆರೋಗ್ಯವಂತ ಜೀವನ. 
ಸನಾತನ ಕಾಲದಲ್ಲಿದ್ದ  ಸಾತ್ವಿಕ ಶಿಕ್ಷಣ ಇಂದಿಲ್ಲ ಅಂದಿನ ರಾಜಪ್ರಭುತ್ವವೂ ಇಲ್ಲ ಆದರೆ ಅಂದಿನಿಂದ ಇಂದಿನವರೆಗೂ ಒಳಗಿರುವ ಆತ್ಮ ಒಂದೇ ಎನ್ನುವಾಗ ಸತ್ಯ ಒಳಗೇ ಅಡಗಿದ್ದರೂ  ಗುರುತಿಸುವ ಶಿಕ್ಷಣವಿಲ್ಲದೆ ಗುರುವಿಲ್ಲದೆ ಹೊರಗಿನ ಮಿಥ್ಯದಲ್ಲಿ ಮಿಂದು  ಅಸತ್ಯ ಅನ್ಯಾಯ ಅಧರ್ಮಕ್ಕೆ ಸಹಕಾರ ಕೊಡುತ್ತಾ ತನಗೆ ತಾನೇ ಮೋಸಹೋಗಿದ್ದರೂ ಯಾರೋ ಮೋಸ ಮಾಡಿದ್ದಾರೆಂದು ಹೋರಾಟ ಹಾರಾಟ ಮಾರಾಟದಲ್ಲಿ  ಮಾನವರು ಜೀವನ ನಡೆಸಿರೋದು ಸತ್ಯವಲ್ಲವೆ? ಇದನ್ನು ವಿರೋಧಿಸಿ ದ್ವೇಷ ಮಾಡಿದರೆ  ಇನ್ನಷ್ಟು ಅಸತ್ಯವೇ ಹತ್ತಿರಬರೋದು.
ಶತ್ರುಗಳನ್ನು ಪ್ರೀತಿಸುವ ಶಕ್ತಿ ಹಿಂದಿನ ಸನಾತನಿಗಳ ಆತ್ಮಶಕ್ತಿಯಾಗಿತ್ತು. ಆದರೆ  ಇಂದು ಕಣ್ಣಿಗೆ ಕಾಣುವ ಹಿಂದಿನ ಗುರು ಹಿರಿಯರನ್ನೇ ದ್ವೇಷ ಮಾಡುವಷ್ಟು ವಿಜ್ಞಾನಬೆಳೆದು ನಿಂತಿರುವಾಗ  ಇದರಿಂದ ಯಾವ ಸಾಧನೆ ಮಾಡಿದಂತಾಯಿತು?
ಕೆಲವರು  ಸತ್ಯ ಕ್ಕೆ ಬೆಲೆಕೊಡದೆ ತಾನೇ ದೇವರು ಗುರು ರಾಜ ಎನ್ನುವ ಹಾಗೆ ಜನರನ್ನು  ಹಣದಿಂದ ಅಧಿಕಾರ ಸ್ಥಾನದಿಂದ  ದಾರಿತಪ್ಪಿಸಿದವರಿದ್ದರೂ  ಹಲವರು  ಉತ್ತಮವಾದ ಜೀವನ ಮಾರ್ಗ ದರ್ಶಕರಾಗಿರುವರು. ಆದರೆ ಇದೀಗ ಅವರನ್ನೂ ರಾಜಕೀಯಕ್ಕೆ ಎಳೆದುಕೊಂಡು  ಜನರನ್ನು ಆಳುತ್ತಿರೋದು ದುರಂತವಷ್ಟೆ.
ಸ್ವಾವಲಂಬನೆ ಸ್ವರ್ಗ ಪರಾವಲಂಬನೆನರಕ ಎಂದರು. ಪ್ರಜಾಪ್ರಭುತ್ವದಲ್ಲಿ  ಸ್ವಾವಲಂಬಿ ಪ್ರಜೆಗಳು ಯಾರು?ಸ್ವತಂತ್ರ ಜ್ಞಾನದಿಂದ ಸತ್ಯ ಧರ್ಮವನರಿತು ಜನರನ್ನು ನಡೆಸುವ ಮಹಾತ್ಮರು ಯೋಗಿಗಳು ಸಂನ್ಯಾಸಿಗಳು ಶಿಕ್ಷಕರು ಸೈನಿಕರು ರೈತರು ಬ್ರಾಹ್ಮಣರು ಎಂದರೆ ಸತ್ಯವಾಗಿರುವುದೆ?
ದೇಶದ ಮೂಲ ಶಿಕ್ಷಣವೇ ಪರಕೀಯರ ವಶದಲ್ಲಿ ಇರುವಾಗ ಸತ್ಯಜ್ಞಾನದ ಆಳ ಅಗಲ ಅರ್ಥ ವಾಗದು. ಸರ್ಕಾರದ ಹಣದಲ್ಲಿ ನಡೆಯುತ್ತಿರುವ ಸಂಘ ಸಂಸ್ಥೆ ಮಠ ಮಂದಿರ ಇನ್ನಿತರ ಸೇವಾಕೇಂದ್ರಗಳಾದ ಅನಾಥಾಶ್ರಮ ಅಬಲಾಶ್ರಮ ಸೇವಾಶ್ರಮ, ಬಿಕ್ಷುಕಾಶ್ರಮ... ಯಾರ ಹಣದಿಂದ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಅದು ಶ್ರೀಮಂತ ವರ್ಗ ಪರಧರ್ಮ ,ಪರದೇಶದವರ ಹಣವೇ ಆಗಿರೋದು ಸತ್ಯ. ಹೀಗಿರುವಾಗ ನಾವು ಯಾರನ್ನು ದ್ವೇಷ ಮಾಡಿ ದೇಶ ನಡೆಸಿರೋದು?
ದೇಶಸೇವೆ ಮಾಡೋದಕ್ಕೆ ದೇಶಭಕ್ತಿ ಇರಬೇಕು. ಭಕ್ತಿ ಆಂತರಿಕ ಶುದ್ದಿಯಿಂದ ಬೆಳೆದಿರಬೇಕು. ಇದನ್ನು ಭಕ್ತಿ ಯೋಗ ಎಂದಿದ್ದಾರೆ.ದೇವರಿಗೂ ಯೋಗಿಗಳೇ ಶ್ರೇಷ್ಟವಾಗಿರುವಾಗ ಭೋಗದ ಭ್ರಷ್ಟಾಚಾರದ  ಹೊರಗಿನ  ಹಣಬಲ ಜನಬಲದಿಂದ  ಭೌತವಿಜ್ಞಾನ ಬೆಳೆದಿದೆ ಅಧ್ಯಾತ್ಮ ವಿಜ್ಞಾನವಲ್ಲ ಎನ್ನುವ ಸತ್ಯ ಅರ್ಥ ವಾದರೆ  ಪ್ರತಿಯೊಬ್ಬರೊಳಗೂ ಅಡಗಿರುವ ಆತ್ಮಸಾಕ್ಷಿ ಎಚ್ಚರವಾಗಿ
ತನ್ನ  ಆತ್ಮತೃಪ್ತಿ ಗೆ  ಸತ್ಯವೇ ಬಂಡವಾಳ ಧರ್ಮ ತನ್ನ ಜೀವನಕ್ಕೆ ಆಧಾರವಾಗಿರುತ್ತದೆ. ಜನನ ಮರಣವನ್ನು ಯಾರೂ ಹೇಳಿಕೇಳಿ ಪಡೆಯೋದಿಲ್ಲ.ಯಾವ ದೇಶ ಸ್ಥಳ ಧರ್ಮ  ,ಜಾತಿ, ಕುಟುಂಬ  ವರ್ಣ ದಡಿ ಜನನವಾಗಿದೆಯೋ ಅದರ ಬಗ್ಗೆ  ಸರಿಯಾದ ಜ್ಞಾನವಿದ್ದರೆ ಅಲ್ಲಿಯೇ ಸತ್ಯಧರ್ಮ ಉಳಿಸಿಬೆಳೆಸುವ ಯೋಗಿಗಳಾಗಬಹುದು. ಕಾರಣ ಪರಮಾತ್ಮನಿಗೆ  ಯಾವುದೇ ಬೇಧಭಾವವಿಲ್ಲ.ಹಿಂದಿನ ಜನ್ಮ ಋಣ ಕರ್ಮಕ್ಕೆ ತಕ್ಕಂತೆ ಪುನರ್ಜನ್ಮ ಪಡೆದಾಗ ಅದರೊಳಗೆ ಇದ್ದು ಅಧ್ಯಾತ್ಮ ಸಾಧನೆ ಮಾಡಿದವರು ನಮ್ಮ ಮಹಾತ್ಮರು.
ಅವರು ಇದ್ದಾಗ ಹೀನಾಯವಾಗಿ ಕಂಡವರೆ ಹೋದ ಮೇಲೆ ದೇವರೆನ್ನುವಾಗ  ನಾನಿದ್ದಾಗ ಸತ್ಯ ಕಾಣೋದಿಲ್ಲ ಹೋದ ಮೇಲೆ ಸತ್ಯ ಕಾಣುವುದೆ? ಇದರಲ್ಲಿಯೇ ನಾವು ಅಸತ್ಯವಂತರು ಮಧ್ಯವರ್ತಿಗಳಾಗಿ ಹೇಗೆ  ಬೆಳೆದಿದ್ದಾರೆಂದು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಒಟ್ಟಿನಲ್ಲಿ ಹಣವಿದ್ದರೆ ಸತ್ಯ ಗೆಲ್ಲುವುದು ಎನ್ನುವುದೇ ಅಸತ್ಯ.ಹಣವಿದ್ದವರಲ್ಲಿ ಸತ್ಯಕ್ಕೆ ಸ್ಥಾನಮಾನ ಇರೋದಿಲ್ಲ.ಭ್ರಷ್ಟರಲ್ಲಿ ಹಣವಿದೆ ಸತ್ಯವಿದೆಯೆ? ಆದರೆ ಜನಬಲ ಅಧಿಕಾರಬಲವಿದೆ ಹೀಗಾಗಿ ಅವರು ಗೆಲ್ಲುವರು.ಇದರಿಂದ ನಷ್ಟಯಾರಿಗೆ?
ಹಾಗಂತ ರಾಜಕೀಯಕ್ಕೆ ಇಳಿದಾಗ ಇದು ಸಹಜ.ಅದರಲ್ಲೂ ಪ್ರಜಾಪ್ರಭುತ್ವದ  ಇಂದಿನ ಪ್ರಜೆಗಳ ಬೇಡಿಕೆ ಈಡೇರಿಸಲು ಇದು ಅನಿವಾರ್ಯ ವಾಗಿದೆ. ಪ್ರಜೆಗಳಿಗೆ ಸತ್ಯದ ಶಿಕ್ಷಣ ನೀಡದೆ ಆಳುವುದರಿಂದ ದೇಶಕ್ಕೆ ನಷ್ಟ. ಧರ್ಮ ದ ಹೆಸರಿನಲ್ಲಿ ಅಸತ್ಯ ಹೆಚ್ಚಾದರೆ  ಅಜ್ಞಾನವಾಗುತ್ತದೆ. ಹೀಗಾಗಿ ಹಣವನ್ನು ಸದ್ಬಳಕೆ ಮಾಡಿಕೊಂಡು  ಜನರಿಗೆ ಸನ್ಮಾರ್ಗ ತೋರಿಸುವ  ಸತ್ಯಜ್ಞಾನದ ಶಿಕ್ಷಣ ಕೊಡಬೇಕಾಗಿದ್ದು ಧಾರ್ಮಿಕ ಗುರುಹಿರಿಯರ  ಧರ್ಮ ಕಾರ್ಯ ವಾಗಿತ್ತು.
ಎಷ್ಟೋ ವರ್ಷ ಗಳಿಂದಲೂ ಆಳಿದ ಬ್ರಿಟಿಷ್ ರನ್ನು ದೇಶದಿಂದ ಓಡಿಸಿದ ಮಹಾತ್ಮರನ್ನೇ ದ್ವೇಷ ಮಾಡುವಷ್ಟು ಬೆಳೆದಿರುವ ಅಜ್ಞಾನದಿಂದ ದೇಶದ ಧರ್ಮ ಉಳಿಸಬಹುದೆ?
ಹೋರಾಟ ಹಾರಾಟ ಮಾರಾಟವೆಲ್ಲವೂ ಹೊರಗಿನ‌ಜಗತ್ತಿಗೆ ಮಾರಕವಾದಾಗ  ಒಳಗಿನ ಜಗತ್ತಿನ ಬಗ್ಗೆ ತಿಳಿಯುವ ಪ್ರಯತ್ನವಾಗುತ್ತದೆ.ಯಾರನ್ನು ಭಯೋತ್ಪಾದಕರು ಭ್ರಷ್ಟರು ದುಷ್ಟರು ಎನ್ನುವೆವೋ  ಅವರೊಳಗೇ ಅಡಗಿರುವ ಚೇತನಾಶಕ್ತಿಯೂ ಪರಮಾತ್ಮನ ಒಂದು ಕಿಡಿಯಾಗಿದೆ.ಆದರೆ  ಅದು ಆ ಮಾನವನಿಗೇ ಕಾಣದಾಗಿರೋದಕ್ಕೆ ಅವನಿಗೆ ಕೊಟ್ಟ ಶಿಕ್ಷಣವೇ ಕಾರಣ. ಅಂದರೆ ದುಷ್ಟರಿಗೆ  ಉತ್ತಮ ಜ್ಞಾನದ ಶಿಕ್ಷಣದ ಕೊರತೆಯಿದೆ. ಸಂಸ್ಕಾರ ಸಂಸ್ಕೃತಿ ಯ ವಿಚಾರದಲ್ಲಿ ಸಾಕಷ್ಟು ಗೊಂದಲ ಭಿನ್ನಾಭಿಪ್ರಾಯ ಹೆಚ್ಚಾಗಿ ಅದೇ ದ್ವೇಷದ ವಿಷಬೀಜ ಬಿತ್ತಿ ಬೆಳೆಸಿರುವಾಗ ಅದನ್ನು ಇಂದಿನ ಶಿಕ್ಷಣದಲ್ಲಿಯೇ ಸಂಶೋಧಿಸಿಕೊಳ್ಳಲು ಉತ್ತಮ ಗುರು ಹಿರಿಯರು ಶಿಕ್ಷಕರಾಗಬೇಕಲ್ಲವೆ?
ಹೆಚ್ಚು ಅಂಕ ಪಡೆದವರು ಬುದ್ದಿವಂತರು. ಕಡಿಮೆ ಅಂಕ ಪಡೆದವರು ಜ್ಞಾನಿಗಳು ಎಂದರೆ ತಪ್ಪೆ?
ನನ್ನ ಅನುಭವದಿಂದ ತಿಳಿದ ಸತ್ಯ ಇದಾಗಿದೆ. ನಾನು ಸಣ್ಣ ವಯಸ್ಸಿನಿಂದಲೇ  ಆತ್ಮವಲೋಕನದಲ್ಲಿದ್ದೆ ಎನ್ನುವ ವಿಚಾರ ನನಗೆ ಅರಿವಿಗೆ ಬಂದದ್ದು 34 ನೇ ವಯಸ್ಸಿನಲ್ಲಿ. ಅಂದರೆ ನಾನು ನಾನಾಗಿರಲಿಲ್ಲ ಎಂದರ್ಥ. ನನ್ನಲ್ಲಿ ಏಳುತ್ತಿದ್ದ ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿದಷ್ಟೂ ಗೊಂದಲದ ಜೊತೆಗೆ ಬೇಸರವಾಗುತ್ತಿತ್ತು.ಕೊನೆಗೆ ಉತ್ತರ ಒಳಗೇ ಸಿಕ್ಕಿದಾಗಲೇ ಗೊತ್ತಾಗಿದ್ದು ಸತ್ಯ ಹೊರಗಿಲ್ಲ ಒಳಗೇ ಇತ್ತು ಎಂದು.ಇದನ್ನು ಹೊರಗಿನ ಎಷ್ಟೋ ಗುರುಹಿರಿಯರಿಗೆ ತಿಳಿಸುವ ಪ್ರಯತ್ನಕ್ಕೆ ತೊಡಗಿಸಿಕೊಂಡಾಗಲೇ ವೈರಿಗಳು ಕಾಣಿಸಿದ್ದು. ಸತ್ಯ ತಿಳಿಸಬಾರದು, ಈ ಕಾಲಕ್ಕೆ ನಡೆಯೋದಿಲ್ಲ, ನಿಮಗೇನು ಅಧಿಕಾರವಿದೆ? ನೀವ್ಯಾರು ಹೇಳೋದಕ್ಕೆ?ನಿಮ್ಮಲ್ಲಿ ಹಣವಿದೆಯೆ? ನಿಮಗ್ಯಾರು ಸಹಾಯ ಮಾಡುವರು? ನಿಮ್ಮ ಸಂಸಾರ ನೀವು ನೋಡಿಕೊಂಡು ಸುಮ್ಮನಿರಿ.. ಹೀಗೇ ಉತ್ತರಗಳು ಬಂದಾಗ  ಇದೂ ಕೂಡ ಭಗವಂತನ ನುಡಿಗಳೇ ಎನ್ನುವ ಸಮಾಧಾನವಾದರೂ  ಮುಗ್ದ ಜನರನ್ನು ಆಳುವಾಗ ಅವರೊಳಗೇ ಇರುವ ಜ್ಞಾನಕ್ಕೆ ಪೂರಕವಾದ ಶಿಕ್ಷಣಯಾಕೆ ಕೊಡಬಾರದು ಎನ್ನುವ ಪ್ರಶ್ನೆಗೆ ಉತ್ತರ ಹೊರಗೆ ಸಿಗಲಿಲ್ಲ.
ಇದಕ್ಕೆ ಉತ್ತರ ಅದೂ ಕೂಡ  ಅಜ್ಞಾನವೇ ಆಗಿತ್ತು. ಧರ್ಮ ಯಾವತ್ತೂ ಸ್ವತಂತ್ರ ವಾದಂತೆ ಸತ್ಯವೂ ಸ್ವತಂತ್ರ ವಾಗಿರುತ್ತದೆ ಆದರೆ ಅದು ಒಳಗೇ ಅಡಗಿರುವುದರಿಂದ  ಅದನ್ನು ಸರಿಯಾದ  ಗುರುಮೂಲಕ ಬೆಳೆಸುವ ಶಿಕ್ಷಣದ ಅಗತ್ಯ ಮನುಕುಲಕ್ಕೆ ಇದೆ. ಓದಿ ತಿಳಿದರೆ ವಿದ್ಯೆ ಮಾಡಿ ಕಲಿತರೆ ಜ್ಞಾನ. ನಡೆ ನುಡಿ,ನಲಿಕಲಿ, ಜ್ಞಾನವಿಜ್ಞಾನವಾದಾಗ  ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.ಇದಕ್ಕೆ ಯೋಗ ಬೇಕು.ಯಾರಿಗೆ ಯಾವಾಗ ಈ ಶಕ್ತಿ ಜಾಗೃತವಾಗುವುದೋ ತಿಳಿಯಲಾಗದು.ಇದಕ್ಕೆ ಸಾಕ್ಷಿ ನಮ್ಮ ಹಿಂದಿನ ಮಹಾತ್ಮರುಗಳಾಗಿರುವರು.ವೈಜ್ಞಾನಿಕ ಪ್ರಗತಿ ಕಣ್ಣಿಗೆ ಕಾಣಬಹುದು ಅಧ್ಯಾತ್ಮಿಕ ಪ್ರಗತಿ ಅನುಭವಕ್ಕೆ ಬಂದ ಮೇಲೂ  ಸಂಪೂರ್ಣ ಅರ್ಥ ವಾಗೋದಕ್ಕೆ ಸ್ವತಂತ್ರ ಜ್ಞಾನವಿರಬೇಕು.  ಸ್ವತಂತ್ರ ಭಾರತದ ಪ್ರಜೆಗಳಿಗೆ ಸ್ವತಂತ್ರ ಬುದ್ದಿವಂತಿಕೆ ಇದ್ದರೂ ಜ್ಞಾನದ ಶಿಕ್ಷಣವಿಲ್ಲದೆ ಅತಂತ್ರಸ್ಥಿತಿಗೆ ಜೀವನ ತಲುಪಿದೆ  ಎಂದಾಗ ನಮ್ಮ ಕಲಿಕೆಯೇ ಸರಿದಾರಿಗೆ ನಡೆದಿಲ್ಲ.ಭೂಮಿಯ ಋಣ ತೀರಿಸುವ ಬಗ್ಗೆ ಅಧ್ಯಾತ್ಮ ಶಿಕ್ಷಣ ತಿಳಿಸಿದರೆ ಭೂಮಿಯನ್ನು ಆಳೋದಕ್ಕೆ ವಿಜ್ಞಾನ ನಡೆದಿದೆ. 
ಒಂದು ಸತ್ಯ ಅರ್ಥ ಮಾಡಿಕೊಳ್ಳಲು ಅಸಂಖ್ಯಾತ ಅಸತ್ಯದ ಸೃಷ್ಟಿ ಮಾಡಿ ಅಧರ್ಮ ಬೆಳೆದಿದೆ .ಅದಕ್ಕೆ ನಮ್ಮದೇ ಸಹಕಾರ ಸಹಾಯವಿದ್ದಾಗ ಅದರ ಫಲ ಜೀವವೇ ಅನುಭವಿಸೋದು.ಆತ್ಮದುರ್ಭಲ ವಾದಾಗ ಆತ್ಮಹತ್ಯೆ ಹೆಚ್ಚುವುದು. ಹಾಗಾದರೆ ಆತ್ಮಕ್ಕೆ ಸಾವಿದೆಯೆ? ಸತ್ತಿರೋದು ಸತ್ಯವೆ? ಜೀವಕ್ಕೆ ಸಾವಿದೆ ಅಸತ್ಯಕ್ಕೆ ಸಾವಿದೆ. ಪರಮಾತ್ಮನ ಕಡೆಗೆ ನಡೆಯುವ ಸತ್ಯ ಒಂದೇ ಆದರೂ  ಇದಕ್ಕೆ ವಿರುದ್ದ ನಿಲ್ಲುವ ಅಸತ್ಯ  ಲೆಕ್ಕವಿಲ್ಲದಷ್ಟು ಬೆಳೆದಾಗ ಹಿಂದಿರುಗಲು ಕಷ್ಟ. ಹಿಂದೂ ಧರ್ಮ  ಯಾವತ್ತೂ  ತನ್ನ ಅಸ್ತಿತ್ವಕ್ಕೆ ಹೋರಾಟ ಮಾಡುವಾಗ  ಅಧ್ಯಾತ್ಮಿಕ ಸತ್ಯಕ್ಕೆ ಬೆಲೆಕೊಡಬೇಕು ಭೌತಿಕ ಸತ್ಯಕ್ಕೆ ಕೊಟ್ಟಷ್ಟೂ ಹಿಂದುಳಿಯುವುದು  ಹಿಂದೂಗಳೇ ಆಗಿರುವರು. ಒಟ್ಟಿನಲ್ಲಿ ಹಿಂದೂ  ತತ್ವ ಎಲ್ಲರ ಒಳಗಿದ್ದರೂ ಒಂದಾಗದಿರೋದಕ್ಕೆ ಕಾರಣ ತಂತ್ರದ ರಾಜಕೀಯವಾಗಿದೆ. ಇದು ಯುಗಯುಗದಿಂದಲೂ ಬೆಳೆದುಬಂದಿರುವಾಗ ಕಲಿ ಯುಗದ ಕಲಿಕೆಯಲ್ಲಿ  ಬದಲಾವಣೆ ಅಗತ್ಯವಿದೆ. ಇದರಿಂದಾಗಿ ನಮ್ಮ ಆತ್ಮರಕ್ಷಣೆಯಾಗಬಹುದು. ಎಲ್ಲರಲ್ಲಿಯೂ ಅಡಗಿರುವ ಈ ಶಕ್ತಿಯ ಪ್ರೇರಣೆಯಿಂದ ಜಗತ್ತು ನಡೆದಿದೆ. ಸಂಸಾರ ಸಾಗರ ದಾಟಲು ಬೇಕಾಗಿರುವ  ಸತ್ಯ ಧರ್ಮ ಅವರವರ ಕರ್ಮಕ್ಕೆ ತಕ್ಕಂತೆ ಅರ್ಥ ವಾದರೂ ಯಾರೋ ಹೊರಗಿನವರ ಧರ್ಮ ಕರ್ಮಕ್ಕೆ ಅಂಟಿಕೊಂಡರೆ  ಅಧರ್ಮವೇ ಆಳೋದು. ಇದಕ್ಕೆ ಹೇಳಿರೋದು ಎಲ್ಲಾ ನಿನ್ನೊಳಗೆ ಇದೆ ಹುಡುಕಿಕೊಂಡು ನಡೆ ಎಂದು.ಪೋಷಕರೆ ಮಕ್ಕಳನ್ನು ಹೊರಗೆ ಹುಡುಕುವ ಶಿಕ್ಷಣಕ್ಕೆ ದಾಸರಾಗಿಸಿದರೆ ಅವರು ಒಳಗೆ ಬರಲು ಸಾಧ್ಯವಿಲ್ಲ.
ಮೂಲವರಿತು ರೆಂಬೆಕೊಂಬೆಗಳನ್ನು ಬೆಳೆಸುವ ಶಿಕ್ಷಣವೇ ಹಿಂದಿನ ಭಾರತೀಯ ಶಿಕ್ಷಣವಾಗಿತ್ತು. ದೂರ ಹೋದವರನ್ನು ತಡೆಯದೆ ಹಿಂದೆ ಬರುವವರಿಗೆ ಉತ್ತಮ ದಾರಿ ತೋರಿಸಿ ಸಹಕರಿಸಿದಾಗಲೇ‌ಬದಲಾವಣೆ ಸಾಧ್ಯವಿದೆ. ಆಗೋದೆಲ್ಲಾ ಒಳ್ಳೆಯದಕ್ಕೆ ಆಗಿದ್ದೆಲ್ಲಾ ಒಳ್ಳೆಯದೆ  ಒಳ್ಳೆಯದು ಸತ್ಯವಾಗಿರಬೇಕಷ್ಟೆ. ಅದೇ ಪರಮಸತ್ಯ ಆತ್ಮಜ್ಞಾನದ ಸತ್ಯ,ಮಹಾತ್ಮರ ಸತ್ಯ ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ ಆದರೆ  ಕಣ್ಣಿಗೆ ಕಾಣದ ಅಗೋಚರ ಶಕ್ತಿ ಆತ್ಮ ವೇ ದೇವರು.ನಿರಾಕಾರ ಬ್ರಹ್ಮನ ಅರಿವೇ ಬ್ರಹ್ಮಜ್ಞಾನ.ಸೃಷ್ಡಿಯ ರಹಸ್ಯ ಅರ್ಥ ವಾಗೋದಕ್ಕೆಭೂಮಿಯಲ್ಲಿ ಜನ್ಮ ತಾಳಿದ ಮಾನವನೊಳಗೇ ಇರುವ ದೇವಾಸುರರ ಗುಣಗಳಲ್ಲಿ ಹೊರಗೆ ಅಸುರಿ ಶಕ್ತಿ ಬೆಳೆದರೆ ಒಳಗೆ ದೈವೀ ಶಕ್ತಿಯಿರುತ್ತದೆ. ಹೀಗಾಗಿ ದೇವರನ್ನು ಕಾಣೋದಕ್ಕೆ ಹೊರಗೆ ಬರುವ ಅಗತ್ಯವಿಲ್ಲ ಎಂದರು.ಇದಕ್ಕೆ ಸಹಕಾರಿಯಾಗುವ ದ್ಯಾನ ಜಪ ತಪ ದಾನಧರ್ಮ ಕಾರ್ಯ  ಬೆಳೆದವು. ದಾನ ಧರ್ಮದ ವಿಚಾರದಲ್ಲಿ ಹಣವೇ ಮುಖ್ಯವಾಗುತ್ತಾ ಜಪತಪ ದ್ಯಾನ ಹಿಂದುಳಿದವು.  ಯಾರಿಗೆಷ್ಟು ಸಾಧ್ಯವೋ ಅಷ್ಟು ಸತ್ಯಕ್ಕೆ ಬೆಲೆಕೊಟ್ಟರೆ ಧರ್ಮ ವಿರುತ್ತದೆ. ಅಸತ್ಯಕ್ಕೆ ಹಣಸುರಿದರೆ ಅಧರ್ಮ ಬೆಳೆಯುತ್ತದೆ. ಸತ್ಯದಲ್ಲಿ ಮನರಂಜನೆಯಿರದು ಇದೇ ಕಾರಣದಿಂದ ಹೆಚ್ಚು ಜನರಿಗೆ ಸತ್ಯದ ಅರಿವಿಲ್ಲದೆ ಅಸತ್ಯ ಅನ್ಯಾಯ ಅಧರ್ಮದಲ್ಲಿಯೇ ಜೀವನ ಮುಗಿಯುತ್ತಿದೆ. ಎಲ್ಲಿಯವರೆಗೆ ಸತ್ಯಜ್ಞಾನವಿರದೋ ಅಲ್ಲಿಯವರೆಗೆ ಆತ್ಮಕ್ಕೆ ಮುಕ್ತಿ ಸಿಗದು. ಅಸುರರನ್ನೂ ದೇವರೆಂದು ಪೂಜಿಸಿದರೆ  ಬೆಳೆಯೋದು ಯಾರು?
ಅರಿಷಡ್ವರ್ಗ ಅತಿಯಾದರೆ ಗತಿಗೇಡು. ಇತಿಮಿತಿಯಲ್ಲಿದ್ದರೆ  ಉತ್ತಮ ಜೀವನ. ಅಹಂಕಾರ ಸ್ವಾರ್ಥ ವಿಲ್ಲದ ಮಾನವನಿಲ್ಲ.
ಮಹಾತ್ಮರಿದ್ದರು. ನಾವೆಲ್ಲರೂ ಮಾನವರಾಗಿ  ಮಹಾತ್ಮರ ಸತ್ಯದೆಡೆಗೆ ಹೋಗಬೇಕಾದರೆ  ಸತ್ಯವೇ ದೇವರಾಗಬೇಕು.
ಭೂಮಿ ಮೇಲಿರುವ‌ ಮನುಕುಲ ಭೂಮಿಯನ್ನು ಅಸತ್ಯದಲ್ಲಿ ಆಳಿದರೆ ಅಧರ್ಮ ತಾಂಡವವಾಡುತ್ತದಲ್ಲವೆ? ಭ್ರಷ್ಟರ ಹಣದಲ್ಲಿ ಧರ್ಮ ಕಾರ್ಯ ನಡೆಸಿದರೆ ಪರಮಾತ್ಮನ ಸತ್ಯ ಅರ್ಥ ವಾಗುವುದೆ?  ಯಾಕೆ ಹಿಂದಿನ ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಅಧ್ಯಾತ್ಮ ಸಾಧನೆ ಮಾಡಿದ್ದರು? ಪರಮಸತ್ಯ ತಿಳಿದು ಪರಮಾತ್ಮನ ದಾಸರಾದರು?  ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ. ಅತಿಯಾದ ವ್ಯಾಮೋಹ,ಪ್ರೀತಿ ವಿಶ್ವಾಸ ಅಮೃತವೂ ವಿಷವಾಗುತ್ತದೆ ಎನ್ನುವುದು ಸತ್ಯವಲ್ಲವೆ?
ಸತ್ಯ ಹಿಂದೆ ತಳ್ಳಿ ಅಸತ್ಯ ಹೊರಗೆ ಬೆಳೆದರೂ ಹಿಂದಿರುಗಿ ಬರೋವಾಗ ಅಸತ್ಯವನ್ನು ದಾಟಿ ಬರೋದು ಕಷ್ಟ.ಅದಕ್ಕೆ ಸತ್ಯ ತಿಳಿದು ಅದರೊಳಗೆ ಇದ್ದರೆ ಶಾಂತಿ ಸುಖ ಇದ್ದಲ್ಲೇ ಸಿಗುತ್ತದೆನ್ನುವರು.

No comments:

Post a Comment