"ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೊ" ಪುರಂಧರ ದಾಸರ ಈ ಗೀತೆಯೊಳಗಿನ ತತ್ವ ಇಂದಿಗೂ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿದೆ ವ್ಯತ್ಯಾಸವಿಷ್ಟೆ ಅಂದಿನಮಹಾತ್ಮರಲ್ಲಿ ಹರಿಸಮರ್ಪಣೆ ಭಾವವಿತ್ತುಇಂದು ಹರಿಯಿಲ್ಲದ ಸಮಾವೇಷ ಹೆಚ್ಚಾಗಿದೆ.ಅದಕ್ಕೆ ತತ್ವ ಹೋಗಿ ತಂತ್ರ ಬೆಳೆದಿದೆ.ಮಾನವನಜೀವನವೇ ಅತಂತ್ರಸ್ಥಿತಿಗೆ ತಲುಪುತ್ತಿದೆ..
ಇದರಲ್ಲಿ ಸ್ವತಂತ್ರವಾಗಿರುವವರನ್ನು ಹುಡುಕಲು ಕಷ್ಟ.ಕಾರಣ ಈ ಸಮಾವೇಷದ ಹಿಂದೆ ನಡೆದವರ ಸ್ವಾತಂತ್ರ್ಯ ಕ್ಕೆ ದಕ್ಕೆ ಬಂದಿರುವಾಗ ಅವರ ನಂಬಿ ನಡೆದ ಮಹಿಳೆ ಮಕ್ಕಳ ಗತಿ ಏನಾಗುತ್ತಿದೆ ? ಸ್ವಲ್ಪ ಈ ಮಾರ್ಗದಲ್ಲಿ ಗಮನಹರಿಸಿದರೆ ಸಾಕು ಭಾರತ ಆತ್ಮನಿರ್ಭರ ವಾಗುತ್ತಿದೆಯೆ? ಅಥವಾ ದುರ್ಭಲತೆಗೆ ಕಡೆಗೆ ನಡೆದಿದೆಯೆ ಅರ್ಥ ವಾಗಬಹುದು.
ಕೆಲವರು ಹರಿಸ್ಮರಣೆಯಲ್ಲಿರಬಹುದಷ್ಟೆ....
ಯೋಗದಿಂದ ಪರಮಾತ್ಮನ ಸೇರೋದಕ್ಕೂ ಭೋಗಕ್ಕಾಗಿ ಪರಮಾತ್ಮನ ಬೇಡೋದಕ್ಕೂ ಅಂತರ ಹೆಚ್ಚಾಗುತ್ತಾ ಅಂತರದಲ್ಲಿ ರಾಜಕೀಯ ಮಿತಿಮೀರಿದೆ. ಒಬ್ಬರನ್ನು ಆಳಲು ದೇವರ ಹೆಸರಿನಲ್ಲಿ ವ್ಯವಹಾರ ನಡೆಸಿ ಅಧರ್ಮ ಅಸತ್ಯ ಅನ್ಯಾಯಕ್ಕೆ ಸಹಕರಿಸಿದರೆ ತತ್ವ ಬೆಳೆಯದು ದಾಸರನ್ನು ಅರ್ಥ ಮಾಡಿಕೊಳ್ಳಲು ಅಸಾಧ್ಯ.ಆದರೆ ಭಕ್ತಿಯೋಗ ಬಹಳ ಆಂತರಿಕ ವಾಗಿರುವ ಶಕ್ತಿಯಾದಾಗ ಯಾರ ಕಣ್ಣಿಗೂ ತೋರಿಸಲಾಗದು. ನಡೆ ನುಡಿಯಲ್ಲಿ ಸೂಕ್ಷ್ಮ ವಾಗಿ ಗಮನಿಸಬಹುದು.
No comments:
Post a Comment