ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, March 1, 2024

ನಾನ್ಯಾರು ಅದ್ವೈತಿ,ದ್ವೈತಿ,ವಿಶಿಷ್ಟಾದ್ವೈತಿ?

ನಾನು ಅದ್ವೈತಿ ನಾನು ದ್ವೈತಿ ಎನ್ನುವವರಿಗೊಂದು ಪ್ರಶ್ನೆ ನಾವೆಲ್ಲರೂ ಒಂದೇ ಎನ್ನುವ ಅದ್ವೈತ ಕ್ಕೂ ನಾನೇ ಬೇರೆ ನೀನೇ ಬೇರೆ ಎನ್ನುವ ದ್ವೈತ ಕ್ಕೂ ನಡುವಿನ ದ್ವೇಷದಿಂದ ಬೆಳೆದ ಅಂತರದಲ್ಲಿ ಧರ್ಮ ರಕ್ಷಣೆ ಆಗಿದೆಯೆ? ಭಕ್ಷಣೆ ನಡೆದಿದೆಯೆ?  ಪುರಾಣ ಸತ್ಯ  ಭವಿಷ್ಯವನ್ನು ಉತ್ತಮಗೊಳಿಸಬೇಕಾದರೆ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ನಡೆಯೋದೇ ಧರ್ಮ. ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆ ಎಂದರೆ  ಕಾಲಬದಲಾಗಿದೆ ಆದರೆ ಮನುಕುಲವಿದೆ. ಇದರಲ್ಲಿ ಮಧ್ಯವರ್ತಿ ಮಾನವನೊಳಗೇ ದೇವಾಸುರರ ಗುಣಜ್ಞಾನ ಅಡಗಿದ್ದು ಯಾರು ಯಾವುದನ್ನು ಬೆಳೆಸುವರೋ ಅದೇ  ಎಲ್ಲಾ ಆಗು ಹೋಗುಗಳಿಗೆ ಕಾರಣ.
ಭೂಮಿ ಮೇಲಿದ್ದು ಭೂಮಿ ಬೇರೆ ನಾನೇ  ಬೇರೆ ಎಂದರೆ ಸರಿಯೆ? ಅಥವಾ ನಾನೇ ಭೂಮಿ ಎಂದರೆ ಸರಿಯೆ? ಇದರ ಒಂದು ಸಣ್ಣ ಕಣವಾಗಿರುವ ನನ್ನೊಳಗಿರುವ ಜೀವಾತ್ಮನಿಗೆ ಪರಮಾತ್ಮನ  ಅರ್ಥ ಆಗದಿದ್ದರೆ ತಪ್ಪು ಯಾರದ್ದು? ಇದಕ್ಕೆ ಎಷ್ಟು ಹೊರಗೆ ರಾಜಕೀಯ ನಡೆಸಿದರೂ ಒಳಗಿನ ಜಗತ್ತು ಬದಲಾಗದು. ಅದು ತನ್ನ ಪ್ರಕಾರ ನಡೆಯುತ್ತಲೇ ಇರುತ್ತದೆ. ನಮ್ಮ ಹೊರಗಿನ ಸೃಷ್ಟಿ ಸರಿಯಿದ್ದರೆ ಸ್ಥಿತಿ ಲಯವೂ ಉತ್ತಮವಾಗೇ ಕಾಣುತ್ತದೆ. ನಾವೇ ಸೃಷ್ಟಿಸಿದ  ಅರ್ಧ ಸತ್ಯ ನಮ್ಮನ್ನೇ ಅತಂತ್ರಸ್ಥಿತಿಗೆ  ತಲುಪಿಸಿ ಆಳುತ್ತಿರುವಾಗ ಮೇಲಿನ ಸತ್ಯ ಒಳಗಿನ ಸತ್ಯ ಒಂದಾಗಿ ಕಾಣೋದಿಲ್ಲ.  ಒಟ್ಟಿನಲ್ಲಿ ನೀನು  ಜೀವಾತ್ಮ ನಾನೇ ಪರಮಾತ್ಮ ಎಂದರೆ ಸರಿಯಲ್ಲ. ತತ್ವ ಒಂದು ಮಾಡುತ್ತದೆ ತಂತ್ರ ಬೇರೆ ಮಾಡಿ ಆಳುತ್ತದೆ.   ಭಾರತದೊಳಗಿದ್ದು  ಭಾರತೀಯ ತತ್ವಶಾಸ್ತ್ರ ತಿಳಿದು ನಡೆಯೋದನ್ನು  ಅಧ್ವೈತ ವೆಂದರೆ ಹೊರಗೆ ಹೋಗಿ ತಿಳಿಯುವುದನ್ನು ದ್ವೈತ ವೆನ್ನಬಹುದು.  ಹೊರಗೆ ಹೋದ ಮೇಲೆ ನಾನಿರೋದಿಲ್ಲವೆ? ಅಥವಾ ಒಳಗಿದ್ದಾಗ ನಾನಿರೋದಿಲ್ಲವೆ? ನಾನು ಹೋಗುವವರೆಗೂ ಅದ್ವೈತವಾಗದು ಎಂದಾಗ ಇಲ್ಲಿ ಎಲ್ಲರೂ ದ್ವೈತಿಗಳೆಂದಾಯಿತು. ಎಲ್ಲಿಯವರೆಗೆ ನಾನೆಂಬುದಿಲ್ಲವೆನ್ನುವ ದಾಸತ್ವ,ಶರಣಾಗತಿಭಾವ ಒಳಗಿನಿಂದ ಉದಯಿಸುವುದಿಲ್ಲವೋ ಅಲ್ಲಿಯವರೆಗೆ ನಾವೆಲ್ಲರೂ ದ್ವೈತಿಗಳೇ ಆಗಿರುವೆವು. ಎಲ್ಲಿಯವರೆಗೆ  ಭೂಮಿಯಿರುವುದೋ ಮನುಕುಲವಿರುವುದೋ ಅಲ್ಲಿಯವರೆಗೆ ಈ ವಾದ ವಿವಾದಗಳಿರುತ್ತದೆ.ಇದನ್ನು ತಡೆಯಲು ಹೋದರೆ ಅಧೋಗತಿಯಾಗುತ್ತದೆ. ತನ್ನ ಅಸ್ಥಿತ್ವಕ್ಕಾಗಿ ಆಸ್ತಿ ಮಾಡಲು  ಹೊರಜಗತ್ತು ನಡೆದಿದೆ.ಆದರೆ ಅದರಲ್ಲಿ ಸತ್ಯ ಧರ್ಮ ವಿರಲು ಜ್ಞಾನವೇ  ಬಂಡವಾಳವಾಗಿದೆ. ಅದೇ ಅಜ್ಞಾನವಾದರೆ  ಬಂಡವಾಳ ವ್ಯರ್ಥ ವಾಗುತ್ತದೆ.ಕಾರಣ ಅಜ್ಞಾನವೇ ನಮ್ಮ ಬಂಡವಾಳವಾಗಿ ಸಾಲವಾಗಿ ಬೆಳೆದಿದೆ. ಇದರ ಹಿಂದೆ ನಡೆದವರನ್ನು ದೇವರೆಂದರೆ ಸರಿಯೆ? ಹಣದ ಹಿಂದಿರುವ ಋಣದ ಲೆಕ್ಕಾಚಾರ ಮಾಡಿಕೊಳ್ಳುವ‌ಜ್ಞಾನ ಇಂದು ಅಗತ್ಯವಿದೆ. ಇದೇಬಂಡವಾಳ ಸತ್ಯ ಧರ್ಮಕ್ಕೆ ಬಳಸಿದರೆ ಸದ್ಗತಿ.ರಾಜಕೀಯಕ್ಕೆ ದುರ್ಭಳಕೆ ಆದರೆ ದುರ್ಗತಿ. ಹೀಗಾಗಿ ನಮ್ಮ ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಸತ್ಯ ಸಾಕ್ಷಾತ್ಕಾರ ಮಾಡಿಕೊಂಡರು. ಈಗ ಸತ್ಯ ಯಾವುದು? ಎಲ್ಲಿದೆ? ಎಂದು ಹೊರಗೆ ಹುಡುಕಿದರೂ ಕಾಣೋದಿಲ್ಲ
ಆದ್ದರಿಂದ ಒಳಗೇ ಹಿಂದುಳಿದಿರುವ ಸತ್ಯವನ್ನು  ಆತ್ಮಾವಲೋಕನ ದಿಂದ ಮೇಲೆತ್ತಿದರೆ ಧರ್ಮ ಉಳಿದಂತೆ. ಇಬ್ಬರ ಜಗಳ ಮೂರನೆಯವರಿಗೆ ಲಾಭವಾದರೂ  ಆ ಲಾಭ ಕೇವಲ ವ್ಯವಹಾರಕ್ಕೆ ಸೀಮಿತವಾಗಿ ಕಷ್ಟ ನಷ್ಟ ತಪ್ಪಿದ್ದಲ್ಲ. ಕಷ್ಟಪಡದೆ ಸುಖ ಸಿಗೋದು  ಭ್ರಷ್ಟಾಚಾರ ದಿಂದ ಮಾತ್ರ. ಆದರೆ ಇದೇ ಅಧರ್ಮ ವಾಗಿರುವಾಗ  ಅದರ ಹಣದಲ್ಲಿ ಧರ್ಮ ಉಳಿಸಲು ಸಾಧ್ಯವೆ?  ಧರ್ಮ ರಕ್ಷಣೆ ಗುಣಜ್ಞಾನದ ಶಿಕ್ಷಣದಿಂದಾದಾಗಲೇ  ತತ್ವದರ್ಶನ. ಇಲ್ಲವಾದರೆ ತಂತ್ರವೇ ಬೆಳೆದು ಅತಂತ್ರಸ್ಥಿತಿಗೆ ತಲುಪಬಹುದು. ತಂತ್ರದಲ್ಲಿ  ಸ್ವಾರ್ಥ ವಿರುತ್ತದೆ.ಆದರೆ ಇದೇ ಅತಿಯಾದಾಗ  ಜೀವಾತ್ಮ ಅತಂತ್ರಸ್ಥಿತಿಗೆ ತಲುಪೋದು.
ಆತ್ಮವೇ ಇಲ್ಲ ನಾನೇ ಎಲ್ಲಾ ಎನ್ನುವವರಿಗೆ ಈ ದ್ವೇಷ ಭಿನ್ನಾಭಿಪ್ರಾಯ ಅಸೂಯೆ,ಸೇಡು,ವಾದ ವಿವಾದದ ಕ್ರಾಂತಿ ಹೆಚ್ಚು ಪ್ರಿಯವಾಗಿರುತ್ತದೆ. ಒಂದು ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಂಡು ಜನರನ್ನು ಹೊರಗೆಳೆದು ಆಳೋದೇ ಇದರ ಮುಖ್ಯ ಗುರಿಯಾಗಿರುತ್ತದೆ. ಅಧ್ಯಾತ್ಮ ಸಾಧನೆ ಒಳಗೇ ನಡೆಯೋದಕ್ಕೆ  ಇದರಿಂದ ಸಾಧ್ಯವೇ ಇಲ್ಲದ ಮೇಲೆ ಈಗ ಬೆಳೆದಿರೋದು ಕೇವಲ ಭೌತಿಕ ಸಾಧನೆ. ಹೊರಬಂದಷ್ಟೂ ಸಾಲ. ಒಳಗಿದ್ದಷ್ಟೂ ಸಾಲಮನ್ನಾ .ಭಾರತೀಯರ ಈ ಸ್ಥಿತಿಗೆ ಸತ್ಯ ಅರ್ಥ ವಾಗದೆ ಮನಸ್ಸನ್ನು ಹೊರಗೆಳೆದು ಆಳಿದ ಶಿಕ್ಷಣ ಕಾರಣ. ಆಗಿದ್ದನ್ನು ತಡೆಯಲಾಗದು.ಮುಂದೆ ಆಗದಂತೆ ತಡೆಯಬಹುದು.ಅದೂ  ಗುರುಹಿರಿಯರು  ದೇಶಭಕ್ತರು ದೇವರ ಭಕ್ತರು ಒಂದಾಗಿ  ಸತ್ಯ ತಿಳಿದಾಗಲೇ ಮುಂದೆ ಬರುವ ಸಂಕಷ್ಟದಿಂದ ಪಾರಾಗಬಹುದು. ಅಂದರೆ ಸಂಕಷ್ಟ ಹೊರಗಿನ ಶಕ್ತಿಯಿಂದ ಬರೋವಾಗ ಅದನ್ನು  ಬಿಟ್ಟು ನಡೆಯೋದೆ ಪರಿಹಾರ. ಬೆಳೆದು ನಿಂತಿರೋ ಮರ ಕಡಿದರೆ ಅದರ ಮೂಲ‌ ಮತ್ತೆ ಚಿಗುರುತ್ತದೆ. ಅದೇ ಮೂಲದಲ್ಲಿಯೇ ಸತ್ಯ ತಿಳಿಸಿ ಬೆಳೆಸಿದರೆ ಉತ್ತಮ ಫಲ ನೀಡುವ‌ಮರ ಬೆಳೆಯುತ್ತದೆ. 
ನಮ್ಮೊಳಗೇ  ಬೆಳೆದು ನಿಂತಿರುವ ಈ ಭಿನ್ನಾಭಿಪ್ರಾಯ ದಿಂದ ನಮ್ಮ ಆತ್ಮಶಕ್ತಿಯೇ ಕ್ಷೀಣವಾಗಿರುವಾಗ ಇದಕ್ಕೆ ಹೊರಗಿನ ಶಕ್ತಿಯನ್ನು ದ್ವೇಷ ಮಾಡಿದರೆ ಸರಿಯಾಗಬಹುದೆ?
ಮನೆಮನೆಯೊಳಗೆ  ಇಂತಹ ಕಲಹ ಮನಸ್ತಾಪ ಜಗಳ ಭಿನ್ನಾಭಿಪ್ರಾಯ ದ್ವೇಷ ಅಸೂಯೆಯ ವಿಷಯಗಳ ಒಳಗೇ ವಿಷವಿರೋವಾಗ ಅಮೃತತತ್ವ  ಬೆಳೆಯೋದು ಕಷ್ಟವಿದೆ.
ಕಷ್ಟಪಟ್ಟರೆ  ಹಿಂದಿರುಗಿ ಬರಲು ಸಾಧ್ಯವಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಕಷ್ಟದ ದುಡಿಮೆಯ ಹಣ ದುರ್ಭಳಕೆ ಆದರೆ ಧರ್ಮ ವಿರದು.
ಇದನ್ನು ಉತ್ತಮ ಶಿಕ್ಷಣಕ್ಕೆ ಬಳಸಿ ನೋಡಿಬದಲಾಗಬಹುದು. 
ಹಾಗಾದರೆ ಉತ್ತಮ ಶಿಕ್ಷಣ ಯಾವುದು?
ಮಕ್ಕಳ  ಜ್ಞಾನಾಭಿವೃದ್ದಿ  ಆಗೋದೇ ತತ್ವಜ್ಞಾನದಿಂದ. ಇದೇ ಎರಡು ಮೂರಾಗಿ ಬೇರೆ ಬೇರೆಯಾಗಿ ನಿಂತರೆ  ಒಂದೇ ದೇಶ ಕಾಣೋದಿಲ್ಲ,ಒಂದೇ ಧರ್ಮ ಬೆಳೆಯೋದೂ ಇಲ್ಲ.ಹಾಗೆ ಇರುವ ಒಂದೇ ದೇವರನ್ನು  ಕಾಣೋದು ಕೂಡೋದು ಕಷ್ಟ.
ಕಷ್ಟಪಡುವವರನ್ನು  ಭ್ರಷ್ಟರ ಹಣದಲ್ಲಿ  ಖರೀದಿಸಿದರೆ ಅವರ ಕಷ್ಟ ಕಳೆಯೋದಿಲ್ಲ.ಅವರ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ಕೊಟ್ಟು ಕೆಲಸ ಮಾಡಲು ಬಿಟ್ಟರೆ ಆತ್ಮನಿರ್ಭರ ಭಾರತ ಸಾಧ್ಯ.
ಭಕ್ತರು ಕೊಡುವಹಣವನ್ನು ಅವರ ಮಕ್ಕಳಿಗೆ ಶಿಕ್ಷಣ ನೀಡಲು ಬಳಸಿದ್ದರೆ  ಇಷ್ಟು ಅಜ್ಞಾನ ಬೆಳೆಯುತ್ತಿರಲಿಲ್ಲ. ಆದರೆ ಪೋಷಕರಿಗೇ ಅರ್ಥ ವಾಗದ ಶಿಕ್ಷಣ ಮಕ್ಕಳಿಗೆ  ಕಲಿಸೋದೂ ಕಷ್ಟ.ಹಾಗಂತ ಇಂದಿನ ಆಂಗ್ಲಭಾಷೆ ಪೋಷಕರಿಗೂ ಅರ್ಥ ವಾಗದಿದ್ದರೂ ವಿಶ್ವ ದೆಲ್ಲೆಡೆ ಬೆಳೆದಿದೆ ಎಂದರೆ ಯಾರೋ ಹೊರಗಿನವರ ಭಾಷೆಗೆ ನಮ್ಮ ಸಹಕಾರವಿದೆ.ನಮ್ಮವರ ಭಾಷೆ ಅಥವಾ ಮಾತಿಗೆ ಬೆಲೆಯಿಲ್ಲ. ನಮ್ಮತನ ನಮ್ಮ ಜ್ಞಾನ ನಮ್ಮ ಒಗ್ಗಟ್ಟು  ನಮಗೆ ಶ್ರೀ ರಕ್ಷೆಯಾಗಿರುತ್ತದೆ.
ಭೂಮಿ ಮೇಲಿರುವಾಗಷ್ಟೆ ಈ ವಾದ ವಿವಾದ.ಮೇಲೇರಿ ಹೋದ ಮೇಲೆ ಸರಿಯಿಲ್ಲದಿದ್ದರೆ ಕೆಳಗಿಳಿಯಬೇಕು.ಕೆಳಗಿಳಿದ ಮೇಲೇ ಮತ್ತೆ‌ಮೇಲೇರಬೇಕು.
ಇವೆರಡರ ಮಧ್ಯೆ ಇರುವ ಅರ್ಧ ಸತ್ಯ ಮಾತ್ರ ಭೂಮಿ ಬಿಜಾಪುರ ಹೋಗದು ಮುಕ್ತಿಯೂ ಸಿಗದು. ಹೀಗಾಗಿ ಎಲ್ಲೇ ಇದ್ದರೂ ಭೂಮಿಯೇ ಇರೋವಾಗ ಅದರ ಋಣ ತೀರಿಸುವ ಸತ್ಕರ್ಮ ನಡೆಸುವ ಜ್ಞಾನವಿದ್ದರೆ ತತ್ವ ಸಿದ್ದಾಂತಗಳ ಮೂಲ ಉದ್ದೇಶ ಒಂದೇ ಆಗಿರುವುದು. 

No comments:

Post a Comment