ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, March 4, 2024

ನಾವ್ಯಾರು ನಮ್ಮೊಳಗಿರೋ ಶಕ್ತಿ ಯಾರು?

ಎಷ್ಟು ಕಷ್ಟ  ವಿದೇಶಕ್ಕೆ ಹೋಗಿ ನಮ್ಮ ದೇಶಕ್ಕೆ ಜೈಕಾರ ಹಾಕೋದು .ಇದೊಂದು ದೇಶದ್ರೋಹವಾಗುತ್ತದೆ. ಎಷ್ಟೋ  ಜನರಿಗೆ ಈ ವಿಷಯದ ಬಗ್ಗೆ ಜ್ಞಾನವಿಲ್ಲದೆ ಮನೆಯೊಳಗೆ ಕುಳಿತು ವಿದೇಶವನ್ನು ಹೊಗಳಿಕೊಂಡು ಸ್ವದೇಶದ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ.ಇದೂ‌ಕೂಡ ತಪ್ಪು ಆದರೆ ಇದನ್ನು  ಕಾನೂನು ಪರಿಗಣಿಸದಿರಬಹುದು  ಪರಮಾತ್ಮ ಪರಿಗಣಿಸುವನು. ತಪ್ಪು ಒಳಗೆ ಮಾಡಿದರೂ ತಪ್ಪು ಹೊರಗೆ ತೋರಿಸಿದರೂ ತಪ್ಪು. ಹೊರಗೆ ತೋರಿಸಿದಾಗ ಶಿಕ್ಷೆ ಆಗುತ್ತದೆ.ಒಳಗೇ ಬೆಳೆಸಿಕೊಂಡರೂ  ಬೇರೆ ರೀತಿಯಲ್ಲಿ ಶಿಕ್ಷೆ ಆಗುತ್ತದೆ. ಆದರೂ  ತಪ್ಪನ್ನು ತಿದ್ದಿ ‌ನಡೆಯುವುದಕ್ಕೆ ಶಿಕ್ಷೆ ಅಗತ್ಯವಿದೆ. 
ಕಳೆದು ಹೋದ ಒಂದು ಇದೇ ರೀತಿಯ ಘಟನೆಯ ಬಗ್ಗೆ ಒಂದು ಮಗು ಕೇಳಿದ ಪ್ರಶ್ನೆ ಏನೆಂದರೆ ಯಾಕೆ ಒಮ್ಮೆ ಒಬ್ಬ ಕೂಗಿದ್ದಕ್ಕೆ ಶಿಕ್ಷೆ ಆಗಿರುವಾಗ ಅದೇ ವಿಷಯ ಹಿಡಿದು ಮನೆ‌ ಮನೆಗೆ ಸುದ್ದಿ  ತಲುಪಿಸುವಾಗ ಎಷ್ಟೋ  ಮಾಧ್ಯಮದವರು ರಾಜಕಾರಣಿಗಳು ಜನರು ಅದೇ ರೀತಿ ಹೇಳಿದ್ದಕ್ಕೆ ಯಾಕೆ ಶಿಕ್ಷೆಯಾಗಿಲ್ಲ? 
ಇದರಲ್ಲಿ ಸತ್ಯವಿಲ್ಲವೆ? ಮಕ್ಕಳ ಮುಗ್ದ ಮನಸ್ಸು ದೇವರಂತಿರುತ್ತದೆ. ಪರೋಕ್ಷವಾಗಿ ಅಪರೋಕ್ಷವಾಗಿ  ನೋಡಿದಾಗ ನಮ್ಮ ಬಾಯಿಂದ ಬರುವ‌ಪ್ರತಿಯೊಂದು ಶಬ್ದದ ಹಿಂದೆ  ನಡೆಯೋ ಪ್ರತಿಕ್ರಿಯೆ ಒಂದೇ ಆಗಿರುತ್ತದೆ.ನಾವು ಏನನ್ನು  ಹೇಳುವೆವೋ ಅದೇ ಬೆಳೆಯುವುದು.ವಿದೇಶಕ್ಕೆ ಜೈಕಾರ ಹಾಕಿದರೆ ವಿದೇಶಕ್ಕೆ ಒಳ್ಳೆಯದಾಗುವುದು.ಅದು  ನಮ್ಮ ಮನಸ್ಸಿನಿಂದ ಹೇಳುವೆವೋ ಅಥವಾ ಯಾರೋ ಹೇಳಿಸುವೆವೋ  ಅಥವಾ ಯಾರೋ ಹೇಳಿದ್ದನ್ನು ತಿರುಗಿ ಹೇಳುವೆವೋ  ಅದು ತಿಳಿಯೋದಿಲ್ಲ. ವಾಲ್ಮೀಕಿ ಮಹರ್ಷಿ ಯಾಗೋದಕ್ಕೆ  ರಾಮ ಜಪ ಮಾಡಿದ್ದೇ ಕಾರಣವೆನ್ನುವರು. ಇಲ್ಲಿ ಮರ ಮರವೇ ರಾಮ ರಾಮವಾಗಿ ಆತ್ಮಜ್ಞಾನ ಸಿಕ್ಕಿದೆ ಎಂದಾಗ ಒಂದು ಹೆಸರನ್ನು ಪದೇ ಪದೇ ಹೇಳಿದಾಗ ಅದರ ಪ್ರತಿಫಲ ಒಳ್ಳೆಯದಾದರೆ ಉತ್ತಮ. ಇದಕ್ಕೆ ಬದಲಾಗಿ  ಕೆಟ್ಟ ಫಲ ಸಿಕ್ಕರೆ? ಅದಕ್ಕೆ ತಿಳಿಸೋದು ಒಳ್ಳೆಯ ಸುದ್ದಿಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತಾ ಜನರಲ್ಲಿ ಒಳ್ಳೆಯ ಜ್ಞಾನ ಬೆಳೆಯಲು  ಸಹಕರಿಸಿದರೆ ಒಳ್ಳೆಯ ಬದಲಾವಣೆ ಆಗುತ್ತದೆ.
ಆದರೆ ವಿಪರ್ಯಾಸವೆಂದರೆ ಇಂದಿನ ದಿನಗಳಲ್ಲಿ ಕೆಟ್ಟ ಸುದ್ದಿಗೆ ಹೆಚ್ಚು ಹಣ  ಜಾಹಿರಾತು ಜನಬಲ ಇರುವ‌ಕಾರಣ ವ್ಯವಹಾರವೇ ಮುಖ್ಯವಾಗುತ್ತಾ  ಅಸತ್ಯ ಅನ್ಯಾಯ ಅಧರ್ಮ ದ ಭ್ರಷ್ಟ ದುಷ್ಟರ ವಿಷಯಗಳನ್ನು ‌ಪದೇ  ಪದೇ‌ಹೇಳುತ್ತಾ ಕೇಳುತ್ತಾ  ನೋಡುತ್ತಾ ಮಾನವ ಮುಂದೆ ಹೋದಂತೆಲ್ಲಾ ಅದೇ ಶಕ್ತಿಗಳ ಕೈಕೆಳಗೇ  ಕೆಲಸಮಾಡುವ ಪರಿಸ್ಥಿತಿ  ಬಂದಿದೆ ಎಂದಾಗ ನಾವು ಯಾರನ್ನು ಬೆಳೆಸಿದ್ದೇವೆ?
ಹೊರಗಿನ  ರಾಜಕೀಯತೆ ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರುತ್ತಿದೆ ಎನ್ನುವ ಬಗ್ಗೆ ಪೋಷಕರಾಗಲಿ ಶಿಕ್ಷಣಕ್ಷೇತ್ರ ಧಾರ್ಮಿಕ ಕ್ಷೇತ್ರವಾಗಲಿ ಗಮನಿಸದಿರೋದೆ  ವಿಪರ್ಯಾಸ. ಕಾರಣ ಎಲ್ಲರ ದೃಷ್ಟಿ ರಾಜಕೀಯದ ಮೇಲೇ ಇರೋವಾಗ ಮಕ್ಕಳ ಮೇಲೆ ಹರಿಸಲಾಗೋದಿಲ್ಲವಲ್ಲ. ಇಲ್ಲಿ ತಪ್ಪು ಮಕ್ಕಳಲ್ಲಿಲ್ಲ ಪ್ರಚಾರಕರಲ್ಲಿದೆ ಪೋಷಕರಲ್ಲಿದೆ. ಈ ಒಂದೇ ವಿಷಯದ ಬಗ್ಗೆ ಇಲ್ಲಿ ತಿಳಿಸುವ‌ಪ್ರಯತ್ನವಾಗಿದೆಯಷ್ಟೆ.ಉಳಿದ ಇನ್ನಿತರ ಸುದ್ದಿಗಳ,ಧಾರಾವಾಹಿ, ಮನರಂಜನಾ ಕಾರ್ಯಕ್ರಮಗಳ ಹಿಂದೆ ‌ ಎಷ್ಟೋ ನಕಾರಾತ್ಮಕ  ಶಕ್ತಿಯನ್ನು  ತಿಳಿಯದೆಯೇ ನಾವು ಒಳಗೆ ಎಳೆದುಕೊಂಡು ಜೀವನವನ್ನು ನರಕಮಾಡಿಕೊಂಡು ಸರ್ಕಾರ ಕಾರಣವೆಂದರೆ  ತಪ್ಪು ಯಾರದ್ದು? ಕಣ್ಣಿಗೆ ಕಾಣೋದೇ ಬೇರೆ ಹಿಂದೆ ನಡೆಯೋದೇ ಬೇರೆ  ಹಾಗೆ ಅಧ್ಯಾತ್ಮ ವಿಜ್ಞಾನವೇ ಬೇರೆ ಭೌತ ಜಗತ್ತೇ ಬೇರೆಯಾಗಿ ತಮ್ಮದೇ  ಮಾರ್ಗದಲ್ಲಿ ವಿರುದ್ದ ದಿಕ್ಕಿನಲ್ಲಿ ನಡೆದಾಗ ಅಂತರದಲ್ಲಿ ನಿಂತು ಆಡಿಸೋ ಮಧ್ಯವರ್ತಿ  ಮಾನವನ ಸ್ಥಿತಿ  ಅಧೋಗತಿ. ಇದರ ಬಗ್ಗೆ ಜ್ಞಾನಿಗಳಾದವರು‌ ಮಾತನಾಡೋದಿಲ್ಲವಾದಾಗ  ದುಷ್ಟರಿಗೆ ಇನ್ನಷ್ಟು ಬಲ.
ಮಕ್ಕಳನ್ನು ರಾಜಕೀಯಕ್ಕೆ ಎಳೆಯದೆ ರಾಜಯೋಗದ ಕಡೆಗೆ ಎಳೆದಾಗಲೇ ವಿವೇಕಾನಂದರಂತಹ ದೇಶಭಕ್ತರಾಗೋದು.
ಮಕ್ಕಳಿಗೆ  ಕೊಡುವ ಶಿಕ್ಷಣದಲ್ಲಿಯೇ  ಎಡವಿರುವಾಗ ಎಲ್ಲಿಯ ಬದಲಾವಣೆ? ಪ್ರತಿಯೊಬ್ಬರೂ ದೇಶದ ಒಳಗಿನ ಸಾಮಾನ್ಯಪ್ರಜೆಗಳೆ. ಕೆಲವರಲ್ಲಿ ದೇಶದ ಸಾಲ ಹೆಚ್ಚಾಗಿದ್ದರೆ ಕೆಲವರಲ್ಲಿ ಕಡಿಮೆಯಿದೆ ಅಷ್ಟೆ. ಕಡಿಮೆಯಿದ್ದವರಲ್ಲಿ ಜ್ಞಾನವಿದ್ದು  ಸ್ವತಂತ್ರ ಜೀವನ ನಡೆಸೋ ಅವಕಾಶವಿದ್ದರೆ ದೇಶದ ಋಣ ತೀರಿಸಬಹುದು. ಹೆಚ್ಚಾದವರಲ್ಲಿ‌ ನಿಸ್ವಾರ್ಥ ನಿರಹಂಕಾರ ವಿದ್ದು ದೇಶ ಸೇವೆಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿದ್ದರೆ  ಋಣಮುಕ್ತರಾಗಬಹುದು.
ಆದರೆ, ವಿದೇಶದ ಸಾಲ ಬಂಡವಾಳ ವ್ಯವಹಾರದ ಜೊತೆಗೆ  ಅದರ ವ್ಯಾಮೋಹದಲ್ಲಿ  ಒಳಗೇ ಬೆಳೆಯುತ್ತಿದ್ದರೆ  ಅದೇ ದೇಶಕ್ಕೆ ಅಪಾಯ. ಇದು ಕಣ್ಣಿಗೆ ಕಾಣದಿದ್ದರೂ  ಬೆಳೆಯುತ್ತದೆ. ಇದಕ್ಕೆ  ಶಿಕ್ಷೆ  ಪರಮಾತ್ಮನೇ ಕೊಡಬೇಕಿದೆ.
ನೇರ ನಡೆ ನುಡಿಯೊಳಗಿರುವ ಸತ್ಯ ಎಲ್ಲರಿಗೂ ಅಪ್ರಿಯವಾದರೂ ಭಗವಂತನಿಗೆ ಪ್ರಿಯವಾಗಿರುತ್ತದೆ. ಅದಕ್ಕಾಗಿ ಮಹಾತ್ಮರುಗಳು ‌ ನೇರವಾಗಿ ನಡೆದಿದ್ದರು. ಈಗ ನೇರವಾಗಿ ಸತ್ಯ ತಿಳಿಸಿದರೂ ತಪ್ಪು ಎನ್ನುವವರೆ ಹೆಚ್ಚಾಗಿರುವಾಗ  ಸತ್ಯವೇ ದೇವರಾಗಿರದು. ಅಸತ್ಯವೇ ದೇವರಂತೆ ಕಾಣಬಹುದು.ಅಗತ್ಯವಿರುವಲ್ಲಿ ಅಧರ್ಮ ವೂ ಇರುತ್ತದೆ.ಅಧರ್ಮ ದ ಜೊತೆಗೆ ಅಸುರರೂ ಇರುವರು.ಅಸುರರ ಒಳಗೇ ಸುರರಿದ್ದರೂ  ಕಣ್ಣಿಗೆ ಕಂಡರೂ ಒಪ್ಪಿಕೊಳ್ಳರು.ಹಾಗಾದರೆ ನಾವ್ಯಾರು? ನಮ್ಮೊಳಗೇ ಇದ್ದು ನಡೆಸೋರು ಯಾರು? ಇದನ್ನು ಮಧ್ಯವರ್ತಿಗಳು ಕೇಳಿಕೊಂಡು ನಡೆದಾಗಲೇ  ಮಹಾತ್ಮರು  ಕಾಣುವರು. ಪರಮಸತ್ಯ, ಪರಮಾತ್ಮನ ಅರಿವು ಬೆಳೆಯುವುದು.
ದೇಹ ಶಾಶ್ವತವಲ್ಲ. ದೇಹವಿರೋವಾಗಲೇ ಒಳಗಿರುವ ಶಕ್ತಿಯ ಪರಿಚಯ ಮಾಡಿಕೊಂಡರೆ ಉತ್ತಮ ಜ್ಞಾನ. ಜೀವಾತ್ಮ ಪರಮಾತ್ಮನ  ಸೇರೋದೇ ಮಹಾಯೋಗ. 

No comments:

Post a Comment