ನಾನ್ಯಾರೆಂದು ತಿಳಿಯುವವರೆಗೆ ಎಲ್ಲವೂ ವಿಶೇಷ
ವಾಗಿರುತ್ತದೆ ತಿಳಿದ ಮೇಲೆ ಸಶೇಷವಾಗುತ್ತದೆ.ಅಂದರೆ
ಎಲ್ಲದರಲ್ಲೂ ಇರೋನು ಒಬ್ಬನೇ ಎಂದಾಗ ನಾನು ಅದರಲ್ಲಿ ಒಬ್ಬ ಅಷ್ಟೆ ನನ್ನಲ್ಲಿ ವಿಶೇಷವೇನೂ ಇಲ್ಲ ನಾನೆಂಬುದಿಲ್ಲ ಇದೇ ಅಧ್ವೈತ
-ಭಗವತಿ-
ದಿನಕ್ಕೊಂದು ಸಾಮಾನ್ಯಜ್ಞಾನ.
ರಾಮ,ರಾವಣರು ಶಿವನನ್ನು ಪೂಜಿಸಿದ್ದರು. ಅಂದರೆ ಶಿವ ದೇವಾಸುರರಿಬ್ಬರಲ್ಲಿಯೂ ಇದ್ದು ತನ್ನ ಲಯದ ಕಾರ್ಯ ನಡೆಸುತ್ತಿರೋದು ಸತ್ಯ. ಸತ್ಯವೇ ದೇವರು ಅಸತ್ಯವೇ ಅಸುರರು. ಇವು ಮಾನವನೊಳಗಿದೆ. ಎಲ್ಲಾ ಒಮ್ಮೆ ಮರೆಯಾಗೋರೆ ಆದಾಗ ನಮ್ಮೊಳಗೆ ಸತ್ಯವಿದ್ದರೆ ದೇವರನ್ನು ಸೇರುತ್ತೇವೆ. ಅಸತ್ಯವಿದ್ದರೆ ಅಸುರರ ದಾಸರಾಗಿರುತ್ತೇವೆ. ಶಿವ ಮುಕ್ತಿ ನೀಡುವ ಮಹಾದೇವ ಹಾಗಾದರೆ ಮುಕ್ತಿ ಯಾವುದರಿಂದ? ಅಸತ್ಯದಿಂದಲೋ?ಸತ್ಯದಿಂದಲೋ?
ಮಹಾಶಿವರಾತ್ರಿಯಲ್ಲಿ ಮಾನವರು ರಾತ್ರಿಯಲ್ಲಿ ಶಿವನನ್ನು ಪೂಜಿಸುತ್ತಾರೆ. ರಾತ್ರಿವೇಳೆಯಲ್ಲಿ ಇತರ ದೇವತೆಗಳಿಗೆ ಪೂಜೆ ನಿಶಿದ್ದ.ಆದರೆ ಸರ್ವಾಂತರ್ಯಾಮಿ
ಶಿವನಿಗೆ ಯಾವುದೇ ನಿಶಿದ್ದವಿಲ್ಲ. ಎಲ್ಲಾ ಶಿವಮಯವೆ.
ಶಿವ ಶಕ್ತಿಯರ ಅರ್ಧನಾರೀಶ್ವರ ಸ್ತ್ರೀ ಪುರುಷರ ಸಮಾನತೆಯ ಸಂಕೇತವೆನ್ನಬಹುದು. ಶಿವನ ಅರ್ಧಶಕ್ತಿ
ಶಿವೆಯಲ್ಲಿದ್ದು ಭೂಮಿಯನ್ನು ನಡೆಸುತ್ತಿರುವ ಶಕ್ತಿಯನ್ನು ಪುರುಷರು ಆರಾಧಿಸುವಾಗ ಹತ್ತಿರವೇ ಇದ್ದು ಸಹಕರಿಸುವ ಸ್ತ್ರೀ ಯರನ್ನು ಗೌರವದಿಂದ ಕಾಣುವ ಜ್ಞಾನವಿದ್ದರೆ ಮುಕ್ತಿ. ಮುಕ್ಕಣ್ಣನೆಂದರೆ ಶಿವ.ಮೂರನೆಯ ಕಣ್ಣು ಜ್ಞಾನದ ಕಣ್ಣು.
ಅದು ಯಾವಾಗ ತೆರೆಯುವುದೋ ಆಗಲೇ ಮುಕ್ತಿ. ಹೀಗಾಗಿ ಶಿವಭಕ್ತರುಸಾಮಾನ್ಯವಾಗಿ ವಿರಾಗಿಗಳಾಗಿರುತ್ತಾರೆ.
ಸರಳ ಜೀವನ. ಸ್ವಾವಲಂಬನೆ, ಸತ್ಯ,ಸ್ವಾಭಿಮಾನ,
ನಿಸ್ವಾರ್ಥ ಭಕ್ತಿ,ನಿಷ್ಕಾಮಪ್ರೀತಿ,ವಿಶ್ವಾಸವುಳ್ಳವರಾಗಿರುತ್ತಾರೆ.
ಈಎಲ್ಲಾ ಗುಣಗಳೂ ಮಾನವನೊಳಗಿದೆ.ಅದನ್ನು
ತಿಳಿದು ಬೆಳೆಸಿಕೊಳ್ಳುವುದಕ್ಕೆ ಜ್ಞಾನದ ಅಗತ್ಯವಿದೆ.
ಹಣ,ಅಧಿಕಾರ,ಸ್ಥಾನಮಾನದ ಹಿಂದೆ ನಡೆದ
ಮೇಲೆ ಇದರಿಂದ ದೂರವಾದ ಮನಸ್ಸಿಗೆ ಹೊರಗಿನ ಶಿವ
ಕಾಣಬಹುದಷ್ಟೆ. ಸಾಮಾನ್ಯವಾಗಿ ಲಿಂಗರೂಪದಲ್ಲಿ ಆರಾಧಿಸುವ ಶಿವನಿಗೆ ಲಿಂಗಬೇಧವಿಲ್ಲ. ಆದರೂ ಹೊರಗಿನ ಸಾಲ ತೀರಿಸಲು ಕಾಯಕವೇ ಕೈಲಾಸವಾದರೆ ಉತ್ತಮ.
ಕೈಲಾಸವನ್ನೇ ಕಾಯಕ ಮಾಡಿಕೊಂಡು ವ್ಯವಹಾರ
ನಡೆಸುವಾಗ ಎಚ್ಚರವಾಗಿರಬೇಕು. ಕಾರಣ ಹಣದ ಹಿಂದಿನ ಋಣ ತೀರಿಸಲು ಕಷ್ಟಪಡಲೇಬೇಕು.
"ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ" ಎಂದ ದಾಸರಿಗೂ ಶಿವಭಕ್ತರಿಗೂ, ಶರಣರಿಗೂ,ಮಹಾತ್ಮರಿಗೂ,ದೇವತೆಗಳಿಗೂ, ಪರಮಾತ್ಮನೆನಿಸಿಕೊಂಡ ಶಿವನೊಬ್ಬನೆ ನಾಮಹಲವು.
ಎಲ್ಲಾ ದೇವತೆಗಳ ಅವತಾರದಂತೆ ಶಿವನೂ ಎಷ್ಟೋ
ಅವತಾರಗಳಲ್ಲಿ ಭೂಮಿಗೆ ಬಂದಿರುವುದಾಗಿದೆ. ವಿಷ್ಣು
ಅವತಾರದಲ್ಲಿ ಹೆಚ್ಚು ರಾಜಕೀಯತೆ ಇದ್ದರೆ,ಶಿವನ ಅವತಾರಗಳಲ್ಲಿ ಸಂನ್ಯಾಸತ್ವವಿದೆ.ಹೀಗಾಗಿ ಮಾನವರು
ಶಿವನಲ್ಲಿ ಮುಕ್ತಿ ಬೇಡುವಾಗ ರಾಜಕೀಯ ಬಿಟ್ಟು ಮುಂದೆ ಬಂದರೆ ಶಿವನಕೃಪೆ ದೊರೆಯುತ್ತದೆ. ಒಟ್ಟಿನಲ್ಲಿ
ಇಲ್ಲಿ ಮುಕ್ತಿ ಸಿಗಲು ಸತ್ಯಜ್ಞಾನ ಬೇಕು. ಸತ್ಯವೇ ದೇವರಾಗಬೇಕು. "ಸತ್ಯಂ ಶಿವಂ ಸುಂದರಂ".
ಶಿವನ ಆರಾಧನೆಗೆ ವೈಭವದ ಅಗತ್ಯವಿಲ್ಲ. ಸರಳ ಸುಂದರ ಸತ್ಯಜ್ಞಾನದಿಂದಲೇ ಶಿವನನ್ನು ಒಲಿಸಿಕೊಳ್ಳಲು
ಸಾಧ್ಯವೆನ್ನುವುದೇ ಶಿವಶರಣರ ಸಂದೇಶವಾಗಿದೆ.ಅವರು ತಮ್ಮ ಜೀವನದಲ್ಲಿ ನಡೆದು ತೋರಿಸಿದ್ದಾರೆ.ಆದರೆ ಅವರ ಹೆಸರಲ್ಲಿ ಅಧರ್ಮದ ರಾಜಕೀಯ ನಡೆಸಿಕೊಂಡು ಸ್ವಾರ್ಥ ಪೂರಿತ ದೇವಸ್ಥಾನ ಕಟ್ಟಿಕೊಂಡು, ಆಡಂಬರ,ವೈಭವದ ಜೀವನನಡೆಸಿಕೊಂಡು ಮುಕ್ತಿ ಕೊಡು ಎಂದರೆ
ಶಿವ ಒಲಿಯುವನೆ?
ದ್ವೈತ ಅದ್ವೈತದ ಭಿನ್ನಾಭಿಪ್ರಾಯ ದಲ್ಲಿ ವಿಷ್ಣುವೇ ಶ್ರೇಷ್ಠ
ಶಿವನೇ ಶ್ರೇಷ್ಠ ಎನ್ನುವುದರಲ್ಲಿಯೇ ಮಾನವರು ಕಾಲ
ಕಳೆಯುತ್ತಿದ್ದರೆ ಬ್ರಹ್ಮಜ್ಞಾನಕ್ಕೆ ಬೆಲೆ ಇರುವುದಿಲ್ಲ.
ಸೃಷ್ಟಿ ಇಲ್ಲದೆ ಸ್ಥಿತಿ ಯಿಲ್ಲ ಸ್ಥಿತಿಗೆ ತಕ್ಕಂತೆ ಲಯವೂ ಇದೆ.
ತ್ರಿಮೂರ್ತಿ ಯರ ನಿತ್ಯ ನಿರಂತರ ಕಾರ್ಯಕ್ಕೆ ತಡೆಯಿಲ್ಲ
ಹುಲುಮಾನವರಾದ ನಮಗೆ ನಮ್ಮೊಳಗೇ ಅಡಗಿರುವ ಅಲ್ಪ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಸಮಯವಿಲ್ಲ.
ಕಾರಣ ಹೊರಗಿನ ರಾಜಕೀಯದಲ್ಲಿ ದೇವಾನುದೇವತೆಗಳನ್ನು ಬಳಸಿಕೊಂಡು ರಾಜಕೀಯಕ್ಕೆ
ಒತ್ತು ಕೊಟ್ಟು ಮನಸ್ಸನ್ನು ಹೊರಗಿಟ್ಟು ಕಷ್ಟ ನಷ್ಟವನ್ನು
ಒಳಗೆಳೆದುಕೊಂಡು ಬಿಡುಗಡೆಗಾಗಿ ದೇವರನ್ನು ಬೇಡುತ್ತೇವೆ. ಬೇಡೋದರಲ್ಲಿಯೇ ಅಜ್ಞಾನವಿರೋವಾಗ
ಮುಕ್ತಿ ಹೇಗೆ ಸಿಗಬೇಕು?
ಶಿವನಿಗೆ ಆಡಂಬರ,ವೈಭವದಿಂದ ಪೂಜಿಸುವವರಲ್ಲಿ ಹಣವಿರಬಹುದು.ಆ ಹಣದ ಮೂಲ ಯಾವುದೆನ್ನುವುದೂ ಮುಖ್ಯವಾಗಿರುತ್ತದೆ.ಭ್ರಷ್ಟಾಚಾರದ ಹಣವಾಗಿದ್ದರೆ ಶಕ್ತಿ
ಯಾರಿಗೆ ಸಿಗುತ್ತದೆ?
ನಿಸ್ವಾರ್ಥ, ನಿರಹಂಕಾರ, ನಿರಾಕಾರ,ನಿರಾವಲಂಬನೆ
ನಿರ್ಗುಣ ತತ್ವಜ್ಞಾನಕ್ಕೆ ವಿರುದ್ದವಾಗಿರುವ ತಂತ್ರಜ್ಞಾನದ
ಯುಗದಲ್ಲಿ ಮನುಕುಲ ದೇವರನ್ನು ಹೊರಗೆ ಹುಡುಕಿ
ಸೋಲುತ್ತಿರುವುದು ಕಾಲ ಪ್ರಭಾವವೆನ್ನಬಹುದಷ್ಟೆ.
ಶಿವನ ನಾಮಸ್ಮರಣೆಯಿಂದಲೇ ಮುಕ್ತಿ ಪಡೆದವರೆಷ್ಟೋ
ಮಾನವರು ಮಹಾತ್ಮರಾಗಿದ್ದಾರೆ. ಎಲ್ಲಾ ದೇವತೆಗಳು
ಭೂಮಿಯ ಮೇಲಿರುವ ಮಾನವರಿಗೆ ಕೇಳಿದ್ದೆಲ್ಲಾ ಕೊಟ್ಟು ಸಲಹಿದ್ದಾರೆ.ಆದರೆ,ಮುಕ್ತಿ ಕೊಡುವ ಶಿವನನ್ನು
ಅರ್ಥ ಮಾಡಿಕೊಂಡವರು ವಿರಳ. ಇದಕ್ಕೆ ವಿಶೇಷಜ್ಞಾನದ ಅಗತ್ಯವಿಲ್ಲ ಸಾಮಾನ್ಯಜ್ಞಾನದ ಅಗತ್ಯ
ಇದೆ ಎನ್ನಬಹುದೆ?
ಓಂ ನಮ; ಶಿವಾಯ.
ಯೋಗಿಯನ್ನು ಬೇಡುವುದಕ್ಕೂ ಯೋಗ ಬೇಕು.
ಯೋಗದಿಂದ ಆರೋಗ್ಯ.ಆರೋಗ್ಯವೆಂದರೆ ಆರು ಯೋಗ್ಯ ಎಂದರ್ಥ. ಕಾಮ,ಕ್ರೋಧ,ಲೋಭ,ಮೋಹ,ಮಧ,ಮತ್ಸರ.ಇವು
ಮಾನವನೊಳಗಿರುವ ಆರು ಗುಣಗಳು. ಇವುಗಳನ್ನು
ಸನ್ಮಾರ್ಗದಲ್ಲಿ ನಡೆಸಿಕೊಳ್ಳಲು ಮನಸ್ಸನ್ನು ತಡೆಹಿಡಿದು ಜೀವನ ನಡೆಸಬೇಕು. ಆತ್ಮಸಾಕ್ಷಿಗೆ ತಕ್ಕಂತೆ ನಡೆಯಬೇಕು.
ಆದರೆ, ಇದಕ್ಕೆ ಶಿಕ್ಷಣ ನೀಡುವ ಗುರು ಬೇಕು.
ಗುರುವಲ್ಲಿ ರಾಜಯೋಗದ ಜ್ಞಾನದ ಅನುಭವಬೇಕು. ಕಲಿಗಾಲಕೊನೆಯ ಯುಗವಾದ್ದರಿಂದ ಮಾನವರಲ್ಲಿ ಹೆಚ್ಚಾಗಿಅಜ್ಞಾನವೇ ಇರುವುದರಿಂದ ಅದನ್ನು ಸರಿಪಡಿಸಲು ಜ್ಞಾನದ ಶಿಕ್ಷಣದಿಂದ ಮಾತ್ರ ಸಾಧ್ಯವೆನ್ನ
ಬಹುದಷ್ಟೆ.
ದೇವರಾಗಲು ಕಷ್ಟ,ಅಸುರರಾಗೋದು ಸುಲಭ ಆದರೆ
ಭೂಮಿಯಲ್ಲಿ ಮಾನವರಿರಬೇಕಷ್ಟೆ. ಮನುಕುಲಕ್ಕಾಗಿ
No comments:
Post a Comment