ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, April 18, 2024

ಮುಗ್ದ ಮನಸ್ಸಿಗೆ ಪ್ರಭುದ್ದ ವಿಚಾರ ಅನಗತ್ಯ

ಸಾಮಾನ್ಯವಾಗಿ ಆತ್ಮಜ್ಞಾನ ಪಡೆದ ಮಹಾತ್ಮರನ್ನು ಗಮನಿಸಿದರೆ ಅವರಲ್ಲಿ ಮುಗ್ದತೆಯೇ ಪ್ರಾರಂಭದ ಶಿಕ್ಷಣವಾಗಿತ್ತು ಗುರು ಭಕ್ತಿ ಗುರುವಿನ ಮೇಲಿರುವ ಭಯದಿಂದ ಉತ್ತಮ ಜ್ಞಾನದ ಶಿಕ್ಷಣ ಪಡೆದ ಎಷ್ಟೋ ಮಹಾತ್ಮರನ್ನು ನಾವೀಗ ದೇವರ ಸ್ಥಾನದಲ್ಲಿ ಇಟ್ಟು ಆರಾಧಿಸುತ್ತೇವೆ.ಅವರನ್ನೇ ಗುರುವೆಂದು ಆರಾಧಿಸುತ್ತೇವೆಂದರೆ ಮಕ್ಕಳ ಮುಗ್ದ ಮನಸ್ಸಿಗೆ ಎಂತಹ ವಿಷಯ ತುಂಬಿದರೆ ಮಹಾತ್ಮರಾಗಬಹುದೆಂದು ತಿಳಿಯಬಹುದು.
ಇತ್ತೀಚಿನ ದಿನಗಳಲ್ಲಿ ಜ್ಞಾನ ವಿಜ್ಞಾನದ ವಿಷಯಗಳು ಪ್ರಭುದ್ದತೆಗೆ  ಹೆಚ್ಚಿನ ಬೆಲೆಕೊಟ್ಟು  ಮುಗ್ದ ಮನಸ್ಸನ್ನು ‌ದಾರಿ ತಪ್ಪಿಸಿ ಆಳುತ್ತಿವೆ. ಇದರ ಪರಿಣಾಮ ಯುವಜನಾಂಗವನ್ನು ರಾಜಕೀಯ ದಾಳವಾಗಿ‌ ಬಳಸಿರೋದು. ಮುಂದೆ ಇದೇ ಮನುಕುಲದ‌   ವಿನಾಶಕ್ಕೆ ಕಾರಣವಾದಾಗ ಹಿಂದಿರುಗಲು ಕಷ್ಟ ಮುಂದೆ ಹೋದರೂ ನಷ್ಟ.ಆದರೆ ಹೋಗದೆ ವಿಧಿಯಿಲ್ಲ
 ಭಾರತದಂತಹ ‌ಮಹಾದೇಶದ ಸ್ಥಿತಿಗೆ ಕಾರಣವೇ  ಭಾರತ ಮಾತೆಯ  ಜ್ಞಾನವನರಿಯದೆ ಮುಂದೆ ಓದುತ್ತಾ ಹೊರಗೆ ನಡೆದ ಭಾರತೀಯರು. ಇದನ್ನು  ವಿದೇಶಿಗಳು ಪ್ರಗತಿ ಎಂದು ತಮ್ಮ ದೇಶದ ಶಿಕ್ಷಣದ ಜೊತೆಗೆ ಧರ್ಮ ಸಂಸ್ಕೃತಿ ವಿಷಯಗಳನ್ನು  ಬೆಳೆಸಿದರು.ಇದರಿಂದ ಒಳಗಿದ್ದ ಆತ್ಮಕ್ಕೆ ತೃಪ್ತಿ ಸಿಗದೆ ಜೀವಹೋಗಿದೆ.ಜೀವ ಹುಟ್ಟಿ ಬಂದರೂ ಸರಿಯಾದ ಸಂಸ್ಕಾರದ ಶಿಕ್ಷಣ ಕೊಡದೆ  ಆಳಿದರೆ ಬದಲಾವಣೆ ಸಾಧ್ಯವಿಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ನಡೆದಿರುವ ವ್ಯವಹಾರಕ್ಕೆ  ರಾಜಕೀಯ ದುರುದ್ದೇಶ ಬೆರೆತರೆ ಆಗೋದು ಹೀಗೆ.
ಆದರೂ ಕೆಲವು ಕಡೆ ಶಿಕ್ಷಣದಾಸೋಹ ಉತ್ತಮವಾಗಿದ್ದರೂ ಅದರೊಳಗೆ ಜಾತಿ ಎನ್ನುವ ವಿಷಬೀಜದ ಜೊತೆಗೆ ಧರ್ಮ ದ ದ್ವೇಷವೂ ಅಡಗಿರುವಾಗ ಮಕ್ಕಳ ಮುಗ್ದ ತೆ ಕಣ್ಮರೆಯಾಗಿ ಸಣ್ಣ ವಯಸ್ಸಿನಲ್ಲಿ  ಹೊರಗಿನ‌ಪ್ರಭುದ್ದ ವಿಚಾರದತ್ತ ನಡೆದು ಒಳಗಿದ್ದ   ಸ್ವತಂತ್ರಜ್ಞಾನ ಸಿಗದೆ  ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ.
ಮೊದಲು ಹಣಕ್ಕಾಗಿ ಜ್ಞಾನವನ್ನು ನಿರ್ಲಕ್ಷ್ಯ ಮಾಡಿ ಕೊನೆಗೆ ಜ್ಞಾಮವಿಲ್ಲದೆಯೇ  ಹಣವನ್ನು  ದುಂದುವೆಚ್ಚ ಮಾಡುತ್ತಾ ಹೋಗುವಜೀವಕ್ಕೆ  ತೃಪ್ತಿ ಸಿಗೋದು ಕಷ್ಟ.
ಹಿಂದಿನ ಗುರುಶಿಷ್ಯರ ಸಂಬಂಧ  ಈಗಿನ‌ಗುರುಶಿಷ್ಯರ ಸಂಬಂಧದ ಮಧ್ಯೆ ಅಂತರ ಬೆಳೆದು ಆ ಅಂತರವನ್ನು ಮಧ್ಯವರ್ತಿಗಳು  ಇನ್ನಷ್ಟು ಬೆಳೆಸಿಕೊಂಡು ವ್ಯವಹಾರಕ್ಕೆ ನಿಂತರೆ ಹಣ,ಅಧಿಕಾರ ಸ್ಥಾನವಿದ್ದರೂ ಸತ್ಯಜ್ಞಾನದ ಕೊರತೆ ಇರುತ್ತದೆ.ಹಾಗಾದರೆ ಸತ್ಯ ಯಾವುದು ? ಎಲ್ಲಿದೆ? ಎಷ್ಟಿದೆ?
ಇರೋದು ಒಂದೇ ಸತ್ಯ. ಅದು ನಮ್ಮೊಳಗೇ ಅಡಗಿದೆ.ಇದನ್ನು ಯಾರೋ ಹೊರಗಿನವರು ತಿಳಿಸಿದರೂ ಕಂಡುಕೊಳ್ಳಲು  ನಾವೇ ಆತ್ಮಸಾಕ್ಷಿ ಯ ಕಡೆಗೆ ನಡೆಯಬೇಕು.
ಇದನ್ನು ಹಿಂದಿನ ಗುರುಹಿರಿಯರು ಮಕ್ಕಳಿಗೆ ತಿಳಿಸಿ ಬೆಳೆಸಿ ಶಿಕ್ಷಿಸಿ ನಡೆಸಿದ್ದರು. ಈಗಿದು ಮಕ್ಕಳೇ  ಪೋಷಕರಿಗೆ ತಿಳಿಸಿ ಬೆಳೆಸಿ ನಡೆಸುವ ಹಂತಕ್ಕೆ ತಲುಪಿದೆ ಆದರೆ ಇದರಲ್ಲಿ ಸತ್ಯವಿಲ್ಲ ಮಿಥ್ಯವೇ ಹೆಚ್ಚಾಗಿದೆ.ಇದರಿಂದಾಗಿ ಲೋಕಕಂಟಕರು ಬೆಳೆದರೂ  ಹೇಳೋ ಹಾಗಿಲ್ಲ. ಧಾರ್ಮಿಕ ಶಿಕ್ಷಣವೆಂದರೆ ವೇದ ಪುರಾಣ ಶಾಸ್ತ್ರ ಪಠಣವೆನ್ನುವುದು  ಇಂದಿನ  ಸತ್ಯ.ಆದರೆ , ಮಕ್ಕಳ ಮುಗ್ದ ಮನಸ್ಸಿಗೆ  ಅರ್ಥ ವಾಗದ ಪ್ರಭುದ್ದ ವಿಚಾರವನ್ನು ತುಂಬುವಾಗ  ಗುರುವಾದವರು  ವಾಸ್ತವತೆಯನ್ನು ಸರಿಯಾಗಿ ತಿಳಿಯುವುದೂ ಬಹಳ ಅಗತ್ಯವಿದೆ. ರಾಜಕೀಯದಿಂದ ದೂರವಿದ್ದೇವೆ ಎನ್ನಬಹುದಾದರೂ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಪ್ರಜೆಗಳೇ ರಾಜರು ಅಂದರೆ ದೇಶವನ್ನು ಪ್ರಜೆಗಳೆ ನಡೆಸುವಾಗ ದೇಶಭಕ್ತಿಯ ಪಾಠ ಮೊದಲು‌ಮಕ್ಕಳಲ್ಲಿ ತುಂಬಿ ನಂತರ ದೇವರ ಭಕ್ತರಾಗಬಹುದು. ದೈವತ್ವದ ಶಿಕ್ಷಣವೆಂದಾಗ  ಪ್ರತಿಯೊಬ್ಬರೂ ದೇವರ ಅಂಶವುಳ್ಳವರೆ ಆದರೆ ಆ ಸಣ್ಣ ಅಂಶ. ಗಮನಿಸದೆ ಅಸುರಿ ಶಕ್ತಿಯಾದ ಪ್ರಬುದ್ದ ತೆಯನ್ನು ತಲೆಗೆ ತುಂಬಿ  ಅಹಂಕಾರ ಸ್ವಾರ್ಥ ಬೆಳೆದಾಗ ಧರ್ಮ ನಿಲ್ಲದು.
ಸತ್ಯವಂತೂ ಅರ್ಥ ವಾಗದು.ಹೀಗಾಗಿ ಹೊರಗಿನ ವಿಜ್ಞಾನದ ಸಂಶೋಧನೆ  ಒಳಗಿನ ಅಧ್ಯಾತ್ಮ ಸಂಶೋದನೆ ಮಾಡಿದ  ಜ್ಞಾನಿಗಳು  ತಮ್ಮ ಸಂಶೋಧನೆಯಲ್ಲಿ ಪಟ್ಟ ಕಷ್ಟ ನಷ್ಟ ಅನುಭವಗಳನ್ನು ವಿವರಿಸಲಾಗದು. ಆದರೆ  ಆ ದಾರಿಯಲ್ಲಿ ‌ನಡೆಯಲು ಬಿಟ್ಟು ಸತ್ಯ ತಿಳಿಸಬಹುದು. ಕುಳಿತು ಓದಿದರೆ ಸತ್ಯ ತಲೆಗೆ ಹೋದರೂ ಅನುಭವಿಸದೆ ಅರ್ಥವಾಗದು.
ಹೀಗಾಗಿ ಸ್ವತಂತ್ರ ಜ್ಞಾನದಿಂದ  ಸತ್ಯ ಧರ್ಮ ದ ಕಡೆಗೆ ಕಷ್ಟಪಟ್ಟು ನಡೆದವರು ವಿಜ್ಞಾನಿಗಳಾಗಿರುವರು. ಕಷ್ಟಪಡದೆ ಓದಿ ಬುದ್ದಿವಂತರಾದವರು  ಇಂದಿಗೂ ಅರ್ಧ ಸತ್ಯದ ಅತಂತ್ರ ಸ್ಥಿತಿಗೆ ತಲುಪಿರುವರು. ಇದಕ್ಕೆ ಕಾರಣ ವಯಸ್ಸಿಗೆ‌ಮೀರಿದ ವಿಚಾರವನ್ನು ತಲೆಗೆ ತುಂಬಿದ ಶಿಕ್ಷಣ.
ಇದು ಧಾರ್ಮಿಕ ಕ್ಷೇತ್ರದ ಜೊತೆಗೆ ಎಲ್ಲಾ ಕ್ಷೇತ್ರವೂ ನಡೆಸುತ್ತಿದೆ.ಇದಕ್ಕಾಗಿ ಸಾಕಷ್ಟು ಹಣ ಬಳಸಲಾಗಿದೆ.ದಾನಿಗಳಿದ್ದಾರೆ ಆದರೆ ಮಕ್ಕಳಲ್ಲಿ  ಸತ್ಯಜ್ಞಾನದ ಕೊರತೆಯಿದೆ ಎಂದರೆ ಹಣದಿಂದ ಜ್ಞಾನ ಬೆಳೆಯದು. ಹಣದ ಮೂಲವೇ ಭ್ರಷ್ಟಾಚಾರವಾಗಿದ್ದರೆ ಭ್ರಷ್ಟರ ವಶದಲ್ಲಿ ಜ್ಞಾನಿಗಳು ಇರಬೇಕಾಗುತ್ತದೆ.ಅಸುರರ ಒಳಗೇ ಸುರರು ಇದ್ದಂತೆ ,ಅಜ್ಞಾನಿಗಳ ವಶದಲ್ಲಿ ಜ್ಞಾನಿಗಳು, ವಿದೇಶದ ವಶದಲ್ಲಿ ದೇಶ,ಅಧರ್ಮಿಗಳ ಹಣದಲ್ಲಿ ಧರ್ಮ ಉಳಿಯುವುದೆ?
ರಾಜಯೋಗದಿಂದ  ಮಾಡಬೇಕಾದ ಕರ್ಮ ರಾಜಕೀಯಕ್ಕೆ ಇಳಿದಾಗ  ಈ ಅನಾಹುತಗಳಾಗುತ್ತವೆ. ಈಗಲೂ ಮನೆಯಿಂದ ಹೊರಬಂದು ದೇವರನ್ನು ಹುಡುಕುವ ಜನರನ್ನು ಮನೆಯೊಳಗೆ  ಸೇರಿಸಿ ತೋರಿಸುವವರಿಲ್ಲ. ಕಣ್ಣಿಗೆ ಕಾಣುವ ಸತ್ಯ ಕಾಣದ ಸತ್ಯವನ್ನು ಆಳಬಹುದೆ? 
ಕಲಿಗಾಲದ ಪ್ರಭುದ್ದ ಕಲಿಕೆ  ಮಕ್ಕಳು ಮಹಿಳೆಯರ ಮುಗ್ದ ಮನಸ್ಸನ್ನು ಹಾಳು ಮಾಡಿದರೆ  ಲಾಭ ಯಾರಿಗೆ ನಷ್ಟ ಯಾರಿಗೆ? 
ಇಷ್ಟಕ್ಕೂ ಭೂಮಿಗೆ ಬಂದದ್ದು  ಭೂಮಿ ಋಣ ತೀರಿಸಲು ಎನ್ನುವ ಸತ್ಯ  ಇಂದು  ಎಷ್ಟು ಜನರಿಗೆ ಅರಿವಿಗೆ ಬಂದಿದೆ? ಭೂಮಿಯನ್ನು ಅಗೆದು ಬಗೆದು ಆಳುವ ಅಸುರರಿಗೆ ಸಹಕಾರ ನೀಡಿದ ಪರಿಣಾಮ ಇದಾಗಿದೆ. ಎಷ್ಟು ಮಂತ್ರ ತಂತ್ರ ಯಂತ್ರ ಬಳಸಿದರೂ ಸ್ವತಂತ್ರ ಜ್ಞಾನ ಒಂದೇ ಇರುತ್ತದೆ.ಅದನ್ನು ಸದ್ಬಳಕೆ ಮಾಡಿಕೊಂಡು ಬದುಕಲು ಮುಗ್ದ ಜನರಿಗೆ ಸಾಧ್ಯವಿತ್ತು.ಸರ್ಕಾರ ಅವರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಆಳಿದರೆ ಅಧರ್ಮ ಕ್ಕೆ ತಕ್ಕಂತೆ ಫಲ.

ದೇವರು ನಮ್ಮನ್ನು ನಡೆಸಲು ಮುಗ್ದ ಮನಸ್ಸಿರಬೇಕು
ದೇವರನ್ನು ಮಾನವ ನಡೆಸಲು ಪ್ರಭುದ್ದರಾಗಬೇಕು. ಅಂದರೆ ಇಂದಿನ ಪ್ರಭುದ್ದ ಜನ ದೇವರಂತಹ ಮಕ್ಕಳನ್ನು  ದಾರಿ ತಪ್ಪಿಸಿ ನಡೆಸಿರುವರೆ?  ಇದು ಜ್ಞಾನವೇ ಅಜ್ಞಾನವೇ? 
ದೇವರು ಸರ್ವಾಂತರ್ಯಾಮಿ ಕೇಳಿದ್ದನ್ನು ಕೊಡಬಹುದು ಆದರೆ ಕೇಳುವವರಿಗೆ ಏನು ಕೇಳಬೇಕೆಂಬ ಅರಿವಿರಬೇಕು.
ಮಕ್ಕಳ ಅರಿವಿನ ಜೊತೆಗೆ ಆಟವಾಡಿದರೆ ಅದೇ ದೊಡ್ಡ ಕಾಟವಾಗಿ ಹಿಂದಿರುಗುತ್ತದೆ  ಇದನ್ನು ಪೋಷಕರು ಅರ್ಥ ಮಾಡಿಕೊಂಡರೆ ಉತ್ತಮ ಭವಿಷ್ಯವಿದೆ. ದೇಶದ ಭವಿಷ್ಯ ಪ್ರಜೆಗಳ ಜ್ಞಾನದಲ್ಲಿದೆ. ಪ್ರಜೆಗಳ ಜ್ಞಾನ ದೇಶೀಯ ಮೂಲ ಶಿಕ್ಷಣದೊಳಗಿತ್ತು. ಅದೀಗ ವ್ಯವಹಾರಕ್ಕೆ ಇಳಿಯುತ್ತಾ ಹಣವಿದ್ದವರಿಗೆ ಜ್ಞಾನದ‌ಕೊರತೆ,ಜ್ಞಾನಿಗಳಿಗೆ ಹಣದ ಕೊರತೆ.ಈ ಕೊರತೆಯನ್ನು  ದುರ್ಭಳಕೆ ಮಾಡಿಕೊಳ್ಳುವವರು ಅಸುರರು. ಅಸುರ ಎಂದರೆ ದುರ್ಗುಣವಷ್ಟೆ.ಅತಿಯಾದ ಸ್ವಾರ್ಥ ಅಹಂಕಾರ  ಮಾನವನನ್ನು ಅಸುರರನ್ನಾಗಿಸುತ್ತದೆ.
ಇದನ್ನು ಪುರಾಣವೇ ತಿಳಿಸುತ್ತದೆ. ಅವರನ್ನು ದ್ವೇಷ ಮಾಡಿದರೆ ಅದೇ ಗುಣ ಒಳಗೂ ಹೊರಗೂ ಬೆಳೆಯುತ್ತದೆ.
ಎಲ್ಲರೊಳಗೂ ಇರುವ ದೈವಗುಣ ಅಸುರ ಗುಣ ಜೀವಾತ್ಮನಿಗೆ‌ ಸತ್ಯಾಸತ್ಯತೆಯನ್ನು ಅರ್ಥ ಮಾಡಿಸುತ್ತಿದ್ದರೂ ಅರ್ಥ ವಾಗದಂತೆ ನಾಟಕ ಮಾಡಿಕೊಂಡಿದ್ದರೆ  ಪರಮಾತ್ಮ ಒಲಿಯೋದಿಲ್ಲ. ಸಾಕ್ಷಿಯಾಗಿ ನಿಂತಿರುವ ಆ ಮೇಲಿನ‌ಶಕ್ತಿಯ‌ಮುಂದೆ ಹುಲುಮಾನವನ‌ ನಾಟಕ ನಡೆಯದು. ಆದರೂ ನಾಟಕ ನಡೆದಿದೆ..ಪಾತ್ರ ಬದಲಾವಣೆ ಆಗುತ್ತಿರುತ್ತದೆ.‌ಉತ್ತಮ‌ಪಾತ್ರ ಸಿಕ್ಕಿದರೆ ಅದೃಷ್ಟ. 

No comments:

Post a Comment