ಒಂದು ಜನ್ಮದಲ್ಲಿ ಒಂದೇ ಹೆಸರಿದ್ದರೆ ಯಾರೂ ಏನೂ ಹೇಳೋದಿಲ್ಲ ಕೇಳೋದಿಲ್ಲ ಎರಡಿದ್ದರೆ ಯಾಕೆ ಕೇಳುವರು ಹಾಗೆ ಇನ್ನೂ ಹೆಚ್ಚಿನಹೆಸರು ಮಾಡಿಕೊಂಡಾಗ ಹೆಸರನ್ನು ಹೇಳೋರು ಕೇಳೋರ ಸಂಖ್ಯೆ ಬೆಳೆಯುತ್ತಾ ಕೊನೆಗೊಂದೆ ಹೆಸರು ಉಳಿಯೋದು ಅದೇ ದೇವರಾಗಿರೋದು. ಇಲ್ಲಿ ಅಸುರರಿಗೂ ಇದೇ ಕಥೆಯಿರುತ್ತದೆ ಆದರೆ ಉಸಿರು ನಿಂತ ಮೇಲೆ ಆ ಹೆಸರಿಗೆ ಬೆಲೆಕಟ್ಟುವವರೂ ಅಸುರರೆ. ಹೀಗಾಗಿ ಹೆಸರಿಗೆ ಬೆಲೆಕಟ್ಟಿ ವ್ಯವಹಾರ ನಡೆಸಿದರೆ ಹಣ ಬರುತ್ತದೆ ನಮ್ಮ ಹೆಸರು ಉಳಿಯಬಹುದು ಆದರೆ ಜ್ಞಾನಬರೋದಿಲ್ಲ. ಹೆಸರುಮಾಡೋ ಗೀಳಿಗಿಳಿದವರು ಉಸಿರಿರುವರೆಗೂ ಅದಕ್ಕಾಗಿ ಹೋರಾಟ ಹಾರಾಟ ಮಾರಾಟದಲ್ಲಿ ಕಷ್ಟಪಡಬೇಕು. ಅದೇ ಆ ಮೇಲಿನಪರಮಾತ್ಮನ ಹೆಸರಿನಲ್ಲಿ ನಡೆದ ಮಹಾತ್ಮರುಗಳು ಹೆಸರಿಗಾಗಿ ಜೀವನನಡೆಸದೆ ತನ್ನ ಉಸಿರಿನಲ್ಲಿಯೇ ಪರಮಾತ್ಮನ ಹೆಸರನ್ನು ಸೇರಿಸಿಕೊಂಡು ನೆಮ್ಮದಿಯಿಂದ ಉಸಿರುಬಿಟ್ಟರು. ಈಗ ನಾವೆಲ್ಲರೂ ಯಾರ ಹೆಸರಿನಲ್ಲಿ ಯಾರಿಗಾಗಿ ಯಾವಕಡೆಗೆ ನಡೆದಿರುವೆವು ಎನ್ನುವ ಸತ್ಯವರಿತರೆ ನಮ್ಮ ಉಸಿರೆ ನಮಗೆ ತಿಳಿಯದೆ ಯಾರೋ ಉಸಿರಾಡುತ್ತಿರುವ ಗಾಳಿಯಲ್ಲಿ ಬದುಕಿದಂತಿದೆ.
ಪ್ರಕೃತಿ ಉತ್ತಮವಾದ ಗಾಳಿ ನೀರು ಬೆಳಕು ಭೂಮಿ ಆಕಾಶವನ್ನು ಸ್ವಚ್ಚವಾಗಿ ಕೊಟ್ಟರೂ ನಮ್ಮ ಚಿಂತನೆಗಳು ಉಸಿರುಗಟ್ಟಿಸುವಂತಾಗಿರೋದಕ್ಕೆ ಕಾರಣಹೆಸರು ಮಾಡಿದವರ ಹಿಂದೆ ನಡೆದಿರೋದೆಂದರೆ ನಮ್ಮ ಹೆಸರನ್ನು ಹಿಂದೆ ತಳ್ಳುವರಷ್ಟೆ. ಇದರಿಂದ ಹೆಸರಿಗೇನೂ ಕಷ್ಟನಷ್ಟವಿಲ್ಲ ನಷ್ಟವಾಗೋದು ನಮ್ಮ ಉಸಿರಿಗೇ ಅಲ್ಲವೆ?
ಪ್ರತಿಕ್ಷಣವೂ ಉಸಿರಿನಮೂಲಕ ನೀನು ಬದುಕಿದ್ದೀಯ ಎಂದು ಪರಮಾತ್ಮ ತಿಳಿಸೋದನ್ನು ಎಷ್ಟು ಮಂದಿಕೇಳಿಸಿಕೊಳ್ಳಲು ಸಾಧ್ಯವಿದೆ? ಅದು ಸಾಧ್ಯವಾಗೋದಕ್ಕೆ ಬೇಕಿದೆ ಉಸಿರಿನ ಯೋಗ ಜೀವನ.
ಯೋಗದಿಂದ ಹೆಸರು ಪಡೆಯುವುದಕ್ಕೂ ಭೋಗಕ್ಕಾಗಿ ಹೆಸರು ಮಾಡುವುದಕ್ಕೂ ವ್ಯತ್ಯಾಸವಿದೆ. ಯೋಗ ದೈವತ್ವ ದೆಡೆಗೆ ನಡೆಸಿದರೆ ಭೋಗ ಅಸುರತ್ವದೆಡೆಗೆ ನಡೆಸಿ ತನ್ನ ಹೆಸರಿಗಾಗಿ ಏನು ಬೇಕಾದರೂ ಮಾಡಲು ಜೀವಾತ್ಮ ನಡೆಯಬಹುದು.ಇದರಿಂದಾಗಿ ಯಾರ ಹೆಸರು ಹಾಳಾದರೂ ಸರಿ ಎನ್ನುವ ಹಠವಿರುತ್ತದೆ. ಧರ್ಮ ದ ಮಾರ್ಗ ವಿದ್ದರೆ ಸರಿ.ಅಧರ್ಮ ದೆಡೆಗೆ ನಡೆದಷ್ಟೂ ಹೆಸರಿಗೇ ಕಂಟಕ.
ಈ ವಿಚಾರ ಯಾಕೆ ತಿಳಿಸಬೇಕಾಯಿತೆಂದರೆ ಇತ್ತೀಚಿನ ದಿನದಲ್ಲಿ ಸನಾತನ ಧರ್ಮದ ವಿರುದ್ದ ಹೇಳಿಕೆಕೊಟ್ಟವರ ಹೆಸರು ಮುಂಚೂಣಿಯಲ್ಲಿರೋದನ್ನು ಕಾಣುತ್ತೇವೆ. ಇದಕ್ಕೆ ಕಾರಣ ಸನಾತನ ಧರ್ಮ ದವರೆ ಎನ್ನುವ ಸತ್ಯವೂ ಇದೆ.ಇಲ್ಲಿ ಯಾವುದೇ ತಾತ್ವಿಕವಿಚಾರ ಅರ್ಥ ಮಾಡಿಕೊಳ್ಳಲು ಸೋತವರು ತಂತ್ರದಿಂದ ಮುಂದೆ ಬಂದು ನಮ್ಮವರಹೆಸರಿಗೆ ಮಸಿಬಳಿಯುವ ಹೇಳಿಕೆ ವಾದ ವಿವಾದಗಳು ಜನಸಾಮಾನ್ಯರವರೆಗೆ ಹರಿದುಬರುತ್ತಿದೆ. ಇದರಿಂದಾಗಿ ಸನಾತನ ಧರ್ಮ ರಕ್ಷಣೆ ಆಗುವುದೆ? ಮೊದಲು ನಮ್ಮ ಕಾಲುಬುಡದ ಸತ್ಯವರಿತರೆ ಹೊರಗಿನ ಸತ್ಯ ಅರ್ಥ ವಾಗುತ್ತದೆ. ಮೊದಲೇ ಹೊರಗಿನ ಸತ್ಯದ ಹಿಂದೆ ನಡೆದು ಕಾಲುಬುಡವೇ ಇರುವ ಮಿಥ್ಯವನ್ನು ಸರಿಯೆಂದು ಹಿಂದಿನ ಸತ್ಯಕ್ಕೆ ಕೈ ಹಾಕಿದರೆ ಮುಗಿಯಿತು ಕಥೆ. ಕಣ್ಣಿಗೆ ಕಾಣೋದು ಸತ್ಯವಿದ್ದರೂ ಒಳಹೊಕ್ಕಿ ನೋಡಿದಾಗ ಅದರ ರೂಪ ಕಾಣುತ್ತದೆ.
ಶ್ರೀ ಶಂಕರ ಭಗವತ್ಪಾದರ ಹೆಸರು ಹೇಳೋದು ಸುಲಭ.ಆದರೆ ಅವರಂತೆ ಒಂದು ಹೆಜ್ಜೆ ನಡೆಯೋದುಇಂದು ಕಷ್ಟ.ಹಾಗೆ ಎಷ್ಟೋ ಸನಾತನ ಋಷಿಮುನಿಗಳು ಮಹಾತ್ಮರು ಸಾದು ಸಂತ ಸಂನ್ಯಾಸಿಗಳ ಹೆಸರಿನ ಒಳಗೆ ಪರಮಾತ್ಮನ ಉಸಿರಿತ್ತು. ಅವರನ್ನು ಸರಿಯಿರಲಿಲ್ಲ ಎನ್ನುವ ಮೂಲಕ ತಮ್ಮ ಹೆಸರನ್ನು ಬೆಳೆಸಿಕೊಳ್ಳುವವರೊಮ್ಮೆ ತಮ್ಮ ಜೀವನ ನಡೆದಿರೋದೆ ಅವರ ಹೆಸರಿನಿಂದ ಎನ್ನುವ ಸತ್ಯವರಿತರೆ ಮುಂದೆ ನಮ್ಮ ಸನಾತನ ಧರ್ಮ ಬೆಳೆಯಬಹುದು.ಇಷ್ಟಕ್ಕೂ ನಮ್ಮ ಹೆಸರಿನಿಂದ ಯಾವ ಧರ್ಮ ರಕ್ಷಣೆಯಾಗುತ್ತಿದೆ ಎನ್ನುವ ಪ್ರಶ್ನೆ ನಮ್ಮಂತಹ ಸಾಮಾನ್ಯಜ್ಞಾನಿಗಳುಹೆಸರುಮಾಡಿದವರಿಗೆ ಕೇಳಿದರೆ ಉತ್ತರ ಸಿಗುವುದೆ? ಈವರೆಗೆ ಕೇಳೋದಕ್ಕೆ ಬಿಟ್ಟಿಲ್ಲ.ಬಿಡೋದೂ ಇಲ್ಲ ಕಾರಣ ಇದೇ ಸತ್ಯ. ಸತ್ಯ ಕ್ಕೆ ಸಹಕಾರವಿಲ್ಲ ಹೀಗಾಗಿ ಮಿಥ್ಯದಲ್ಲಿ ಹೆಸರು ಮಾಡಿಕೊಂಡು ಮುಂದೆ ನಡೆದವರ ಹಿಂದೆ ಸುಲಭವಾಗಿ ನಡೆದು ಹೆಸರು ಹಣ ಅಧಿಕಾರ ಸ್ಥಾನಮಾನ ಬೆಳೆದಿರೋದಲ್ಲವೆ?
ಇಲ್ಲಿ ಯಾರ ಹೆಸರನ್ನು ತಿಳಿಸಿಲ್ಲ ಕಾರಣ ಎಲ್ಲರಿಗೂ ಹೆಸರು ಮುಖ್ಯ.ಒಂದೊಂದು ಪ್ರಾಣಿ ಪಕ್ಷಿ ಗಿಡಮರ ಚರಾಚರಕ್ಕೂ ಮಾನವ ಹೆಸರಿಟ್ಟಿದ್ದರೂ ಅವೆಲ್ಲವೂ ಪರಮಾತ್ಮನ ಹೆಸರೆ ಆದಾಗ ಅವುಗಳು ಹೆಸರಿಗಾಗಿ ಜೀವನನಡೆಸುತ್ತಿಲ್ಲ.ಆದರೆ ಮಾನವನಿಗೆ ಇದರ ಅಗತ್ಯವಿದೆ. ಯಾರ ಹೆಸರಿಗೂ ಕುಂದು ಬರದಂತೆ ಜೀವನನಡೆಸಿರುವ ಮಹಾತ್ಮರ ಹೆಸರನ್ನು ಕೆಡಿಸಿ ಹೆಸರು ಮಾಡಲು ಹೋದರೆ ಇದ್ದೂ ಸತ್ತಂತೆ ಕಾರಣ ಅವರನ್ನು ಪರಮಾತ್ಮನೇ ನೇರವಾಗಿ ನಡೆಸಿರುವಾಗ ಪರಮಾತ್ಮನ ವಿರುದ್ದ ನಿಂತು ಹೆಸರು ಮಾಡಿದರೆ ಅದನ್ನು ಜೀವನವೆನ್ನೋದಿಲ್ಲ. ಇದನ್ನು ಹಿಂದೂಗಳಾದವರುತಿಳಿದು ನಡೆದಾಗಲೇ ಪರಕೀಯರಿಗೆ ನಾವು ಉತ್ತರ ಕೊಡಲು ಸಾಧ್ಯ.
ಪರಕೀಯರು ತಿಳಿಯದೆ ಮಾಡುವ ಅಪರಾಧಕ್ಕೆ ಪರಮಾತ್ಮ ಕ್ಷಮಿಸಬಹುದು. ನಮ್ಮವರೆ ತಿಳಿದೂ ಮಾಡುವ ಅಪರಾಧದಿಂದ ಧರ್ಮ ಭಕ್ಷಣೆ ಆಗುತ್ತದೆ.ಅದೂ ಕೇವಲ ತನ್ನ ಹೆಸರಿಗಾಗಿ ನಡೆಸೋ ಕರ್ಮಕ್ಕೆ ತಕ್ಕಂತೆ ಫಲ ಅನುಭವಿಸುವಾಗ ಯಾವ ಹೆಸರಿರುವುದೋ ಯಾರಿಗೂ ತಿಳಿಯೋದಿಲ್ಲ. ಒಟ್ಟಿನಲ್ಲಿ ಸ್ತ್ರೀ ಯಾಗಲಿ ಪುರುಷರಾಗಲಿ ಭೂಮಿ ಮೇಲಿರುವಾಗ ಮಾಡುವ ಹೆಸರಿನ ಹಿಂದೆ ಪರಮಾತ್ಮನ ಶಕ್ತಿಯನ್ನು ಗಮನಿಸುವುದು ಅಗತ್ಯವಿದೆ. ಮಹಾತ್ಮರುಗಳ ಬಗ್ಗೆ ವಾದ ವಿವಾದ ಮಾಡುವಾಗ ನಾನ್ಯಾರೆಂಬ ಪ್ರಶ್ನೆಗೆ ಉತ್ತರ ತಿಳಿಯುವುದು ಮುಖ್ಯ. ನಾನೇ ಯಾರೆಂದು ಗೊತ್ತಿಲ್ಲದೆ ಯಾರದ್ದೋ ಹೆಸರಿನಲ್ಲಿ ನನ್ನ ಹೆಸರನ್ನು ಬೆಳೆಸಿಕೊಂಡು ಎಷ್ಟು ವಾದ ಮಾಡಿದರೂ ವ್ಯರ್ಥ. ಹೀಗಾಗಿ ನಮ್ಮ ಸನಾತನ ಧರ್ಮ ಇಷ್ಟು ಹಿಂದುಳಿದಿರೋದು. ಹಾಗಂತ ಹಿಂದೆ ನಡೆಯುವುದಕ್ಕೆ ಕಷ್ಟವಿದೆ. ಹಿಂದೆ ನಡೆದು ಬರುವವರಿಗೆ ಸಹಕಾರ ಅವಕಾಶ ಕೊಟ್ಟರೆ ಸಾಕು ನಮ್ಮ ಹೆಸರಿಗೂ ಬೆಲೆಯಿರುತ್ತದೆ.
ಎಲ್ಲದರಲ್ಲೂ ರಾಜಕೀಯ ಬೆಳೆಸಿಕೊಂಡು ಹೆಸರು ಹಣ ಅಧಿಕಾರ ಪಡೆದು ಜನಸಾಮಾನ್ಯರ ಹೆಸರಿನೊಳಗಿರುವ ಆ ಪರಮಾತ್ಮನ ಆಳೋದು ಧರ್ಮ ವೆಂದರೆ ಅಸತ್ಯ ಅಧರ್ಮ.
ಕೆಲವು ದಿನಗಳಿಂದ ದ್ವೈತಾದ್ವೈತದ ಒಳಜಗಳವು ಅಸಹ್ಯ ಕರ ಪದಗಳ ಮೂಲಕ ಫೇಸ್‌ಬುಕ್ ಮೂಲಕ ಹರಿದಾಡುತ್ತಿರುವುದನ್ನು ಗಮನಿಸಿದಾಗ ಈ ವಿಚಾರ ಹೊರಹಾಕಬೇಕಾಯಿತು. ಇಲ್ಲಿ ದೇಶ ಒಂದೇ ಧರ್ಮ ಒಂದೇ ಭೂಮಿ ಒಂದೇ ದೇವನೊಬ್ಬನೆ ಎನ್ನುವ ಸತ್ಯವನ್ನು ತಿಳಿಸಿದವರು ರಾಜಕೀಯಕ್ಕೆ ಇಳಿದಿರಲಿಲ್ಲ ಪರಮಾತ್ಮನ ಮಹಾಶಕ್ತಿಯಾಗಿ ಸತ್ಯ ಹೊರಹಾಕಿದ್ದರೆಂದು ಅರ್ಥ ವಾದರೆ ಅನಾವಶ್ಯಕವಾಗಿರುವ ವಾದ ವಿವಾದದಿಂದ ಹಿಂದೂಗಳಲ್ಲಿ ಒಡಕು ಮೂಡಿಸುವ ಕೆಲಸವಾಗದು.ಆದರೂ ಸತ್ಯ ತಿಳಿಯುವುದರಲ್ಲಿ ತಪ್ಪಿಲ್ಲ.ಅಸತ್ಯ ತಿಳಿಸುವುದರಲ್ಲಿ ತಪ್ಪಿದೆ.ಇದರಿಂದಾಗಿ ಇನ್ನಷ್ಟು ವಿಷಸರ್ಪಗಳು ಬೆಳೆದಾಗ ಕಚ್ಚಿಸಿಕೊಳ್ಳುವುದು ಯಾರು?
ಒಳಗೇ ಅಡಗಿರುವ ದ್ವೇಷಕ್ಕೆ ಹೊರಗಿನಿಂದ ಮತ್ತಷ್ಟು ದ್ವೇಷ ಬೆಳೆಸಿಕೊಂಡು ಹೆಸರು ಮಾಡಿಕೊಂಡರೆ ಉಒಯೋಗವಿಲ್ಲ.
ಇಷ್ಟು ಕಠೋರವಾಗಿ ಯಾಕೆ ಸತ್ಯವಿದೆ ಎಂದರೆ ಹೆಸರಿಗಾಗಿ ಅಸತ್ಯವನ್ನು ಬೆಳೆಸಿರೋದಾಗಿದೆ. ಕಲಿಯುಗದ ಕಲಿಕೆಯೇ ಅಸತ್ಯದೆಡೆಗೆ ನಡೆದಿರುವಾಗ ಒಳಗಿರುವ ಸತ್ಯಕ್ಕೆ ಚ್ಯುತಿ ಬರುತ್ತದೆ. ಸತ್ಯವೇ ದೇವರೆಂದಾಗ ಅಸತ್ಯದಿಂದದೈವತ್ವಕ್ಕೆ ಚ್ಯುತಿ ಬರುತ್ತದೆ. ಮಹಾತ್ಮರನ್ನು ಅರಿಯುವ ಅರಿವನ್ನು ಬೆಳೆಸಿಕೊಳ್ಳಲು ಹೆಸರಿನ ಅಗತ್ಯವಿದೆಯೆ?
ಅರಿವಿನಿಂದ ಬೆಳೆದ ಹೆಸರು ನನ್ನದಲ್ಲ. ಅಜ್ಞಾನದಿಂದ ಬೆಳೆದ ಹೆಸರು ನನ್ನದು.ಆದರೆ ಅದರಲ್ಲಿ ಸತ್ಯವಿರದು ಜೊತೆಗೆ ಸ್ಥಿರವಾಗಿರದು. ಇದು ಮಹಾತ್ಮರ ಸಂದೇಶವಾಗಿದೆ.
ಪೀಠಾಧಿಪತಿಗಳಿಗೆ ಎರಡು ಹೆಸರಿದ್ದರೂ ಜನ್ಮನಾಮಕ್ಕೆ ಬೆಲೆಯಿರದು. ಹಾಗೆ ಸಾಮಾನ್ಯರ ಜನ್ಮನಾಮಕ್ಕೆ ಬೆಲೆಕೊಟ್ಟು ಹೊರಗೆ ಹೆಸರು ಮಾಡಿದಷ್ಟೂ ಪರಮಾತ್ಮನ ಹೆಸರಿಗೆ ಬೆಲೆಯಿರದು. ಮಹಾತ್ಮರನ್ನು ಸಂಶೋಧನೆ ಮಾಡುವುದಕ್ಕೆ ಕಷ್ಟ.ನಮ್ಮ ಆತ್ಮ ಸಂಶೋಧನೆ ಮಾಡಿಕೊಂಡರೆ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.ಅದನ್ನು ಮಾಡದೆಯೇ ನಾನೇಮಹಾತ್ಮ ಎಂದರೆ ಏನರ್ಥ?
ದಯವಿಟ್ಟು ಹಿಂದೂಗಳಾದವರು ಧರ್ಮ ರಕ್ಷಣೆಗಾಗಿ ಸತ್ಯ ತಿಳಿದು ಸನಾತನ ಧರ್ಮದ ಬಗ್ಗೆ ಅನಾವಶ್ಯಕವಾಗಿರುವ ವಿಚಾರಗಳನ್ನು ಹೊರಗೆಳೆಯುವ ಬದಲು ತಮ್ಮ ಮನೆ ಮನಸ್ಸನ್ನು ಶುದ್ದವಾಗಿಟ್ಟುಕೊಳ್ಳುವ ಆತ್ಮಸಂಶೋಧನೆ ನಡೆಸಿಕೊಂಡರೆ ಉತ್ತಮ ಬದಲಾವಣೆ ಸಾಧ್ಯವಾಗಬಹುದು.
ಎಷ್ಟೋ ಕಡೆ ಹೆಸರಿದೆಯೆಂದು ಜನರನ್ನು ದಾರಿತಪ್ಪಿಸಿ ಆಳುವ ರಾಜಕೀಯತೆಯಿದೆ. ಇದರಿಂದಾಗಿ ಧರ್ಮಕ್ಕೆ ನಷ್ಟ.
ವಿದ್ಯಾವಂತ ಯುವಜನತೆ ಈಗ ಹಿಂದಿರುಗಿ ಬರುತ್ತಿರುವುದು ಸಂತೋಷವಾದರೂ ಯಾರೊಂದಿಗೆ ಬರುತ್ತಿದ್ದಾರೆನ್ನುವ ಬಗ್ಗೆ ಚಿಂತನೆ ನಡೆಸಿದರೆ ಹೆಸರಿಗಾಗಿ ಹೆಸರೊಂದಿಗೆ ಸೇರಿ ತಮ್ಮ ಹೆಸರಿನ ಒಳಗಿದ್ದ ಪರಮಾತ್ಮನಿಂದ ದೂರವಾಗಿ ರಾಜಕೀಯದಲ್ಲಿ ಹೆಸರು ಮಾಡಲು ಹೊರಟು ಹೊರದೇಶಕ್ಕೆ ಹೋಗಿ ಹೆಸರಿಲ್ಲದಂತಾಗುತ್ತಿದ್ದಾರೆ. ಕೆಲವರಿಗೆ ಉತ್ತಮ ಗುರುಗಳ ಮಾರ್ಗದರ್ಶನ ಸಿಕ್ಕಿದ್ದರೂ ಹಲವರಿಗೆ ಅರ್ಧ ಸತ್ಯದ ಅತಂತ್ರಸ್ಥಿತಿಯಲ್ಲಿ ಜೀವನ ನಡೆದಿದೆ. ಒಟ್ಟಿನಲ್ಲಿ ಮಾನವನಿಗೆ ಹೆಸರು ಮುಖ್ಯ. ಆ ಹೆಸರಿನ ಜೊತೆಗೆ ಕೆಸರಿದ್ದರೆ ಕಮಲವರಳುತ್ತದೆ. ಕಮಲವನ್ನು ನೇರವಾಗಿ ಕಿತ್ತು ಹೆಸರುಮಾಡಿದರೆ ಜ್ಞಾನಬರದು. ಕೈ ಕೆಸರಾದರೆ ಬಾಯಿ ಮೊಸರು ಎನ್ನುವಗಾದೆ ಮಾತಿನ ಹಿಂದೆ ಪರಮಾತ್ಮನಿದ್ದ ಈಗ ಪರಕೀಯರ ಹಿಂದೆ ನಡೆದು ಕೈ ಬಾಯಿ ಹೊಲಸು ಮಾಡಿಕೊಂಡು ಹೆಸರು ಮಾಡಿದವರ ಹಿಂದೆ ನಡೆದವರ ಗತಿ ಅಧೋಗತಿಯಾಗುತ್ತಿದೆ ಅನಿಸುತ್ತದೆ.
ಇದರಿಂದಾಗಿ ನಷ್ಟ ನಮಗೇ ಎನ್ನುವ ಸತ್ಯ ತಿಳಿಯುವುದು ಅಗತ್ಯವಾಗಿದೆ.
ಕೆಲವರಿಗೆ ಸತ್ಯ ತಿಳಿದೂ ಹೆಸರು ಮಾಡದ ಕಾರಣ ಹೇಳಲಾಗದು.ಹಲವರಿಗೆ ಸತ್ಯವೇ ತಿಳಿಯದೆ ಹೆಸರು ಹಣ ಅಧಿಕಾರ ಸ್ಥಾನಗಳಿಸಿ ಅಸತ್ಯವನ್ನು ಹೊರಹಾಕಿ ಹೆಸರು ಮಾಡುವ ಆಸೆ. ಆಸೆ ಇರಲಿ ಆದರೆ ದುರಾಸೆಯಾದರೆ ಕಷ್ಟ ಹೆಸರಿಗೇ ಅಲ್ಲವೆ?
ಈಗ ಈ ಲೇಖನ ಭಗವತಿಯ ಹೆಸರಿನಲ್ಲಿದೆ ಎಂದರೆ ಇದರ ಹಿಂದೆ ಇನ್ನೊಂದು ಕೈಯಿದೆ ಕಾಣೋದಿಲ್ಲ ಇನ್ನೊಂದು ಹೆಸರೂ ಇದೆ ಹಾಗಾದರೆ ಸತ್ಯ ಯಾವುದು?
ನನಗೆ ಅರಿವು ಬಂದಾಗಿನಿಂದ ಇದನ್ನೇ ಹೇಳಿಕೊಂಡು ಬಂದ ಪರಿಣಾಮ ಇಂದಿಗೂ ಜನರವರೆಗೆ ಹೋಗಿ ಹೆಸರು ಮಾಡುವ ಮನಸ್ಸಾಗಲಿಲ್ಲ. ಆದರೆ ಒಮ್ಮೊಮ್ಮೆ ಸತ್ಯ ತಿಳಿಸಿ ಇರುವ ಸತ್ಯಕ್ಕೂ ಚ್ಯುತಿ ಬರುವಂತಾದರೆ ಮುಂದಿನ ಪೀಳಿಗೆಗೆ ನಷ್ಟ.ಬರವಣಿಗೆಯ ಮೂಲಕ ಸತ್ಯ ಹೊರಹಾಕಿದಾಗ ಸಿಗುವ ಆತ್ಮತೃಪ್ತಿ ಹೊರಬಂದು ತಿಳಿಸಿದರೆ ಸಿಗೋದಿಲ್ಲ. ಆಸಕ್ತರು ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಆದರೆ ಅವರಿಗೂ ಅದೇ ಅನುಭವವಾಗಿದ್ದರೆ ಉತ್ತರದಿಂದ ತೃಪ್ತಿ ಸಿಗುತ್ತದೆ.ಒಟ್ಟಿನಲ್ಲಿ ಎಲ್ಲಾ ವಾಸ್ತವದಲ್ಲಿ ಬದುಕುತ್ತಿಲ್ಲದ ಕಾರಣ ಪುರಾಣ ಭವಿಷ್ಯದ ಕಥೆ ವ್ಯಥೆಯಾಗುತ್ತಿದೆ. ಇಂದಿನ ಹೆಸರು ನಾಳೆಯ ಉಸಿರಾಗಿರಬೇಕೆಂದಿಲ್ಲ.ಇಂದಿನ ಉಸಿರು ನಾಳೆಯ ಹೆಸರಾಗಬಹುದು. ಮಹಾತ್ಮರನ್ನುಹಿಂದಿನ ಹೆಸರಿನಿಂದ ಗುರುತಿಸಬಹುದು. ಆದರೆ ಅವರು ಉಸಿರಾಡಿರೋದು ಪರಮಾತ್ಮನ ಹೆಸರಿನಲ್ಲಿ ಎನ್ನುವುದನ್ನು ಮರೆಯಬಾರದು.
ಶ್ರೀ ಶಂಕರ ಭಗವತ್ಪಾದರ ಹೆಸರಿನಲ್ಲಿ ಸಾಕಷ್ಟು ಧರ್ಮ ಕಾರ್ಯ ನಡೆದಿದೆ ಎಷ್ಟೋ ಜೀವ ಉಸಿರಾಡುತ್ತಿದೆ ಎಂದರೆ ಅವರ ಉಸಿರಿನಲ್ಲಿ ಪರಮೇಶ್ವರನಿದ್ದ ಪರಮಾತ್ಮನಿದ್ದನು ಎಂದರ್ಥ. ಹಾಗೆ ಇನ್ನೂ ಅನೇಕ ಮಹಾತ್ಮರನ್ನು ನಾವು ನಮ್ಮ ಉಸಿರಿನಿಂದ ಗುರುತಿಸುವ ಜ್ಞಾನವಿದ್ದರೆ ಹೆಸರು ಕ್ಷಣಿಕವಾಗಿರುತ್ತದೆ.
ಹುಟ್ಟುವಾಗ ಹೆಸರಿರದು ಉಸಿರುವುದು ಹೋಗುವಾಗ ಉಸಿರಿರದು ಹೆಸರಿರುವುದು.ಆ ಹೆಸರಿನಲ್ಲಿ ಪರಮಾತ್ಮನಿರಲಿ.
ದಯವಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ವಿಷಬೀಜ ಧರ್ಮದೊಂದಿಗೆ ಸೇರಿಸುವ ಕೆಲಸ ಮಾಡದಿದ್ದರೆ ಸನಾತನಧರ್ಮ ಉಳಿದಂತೆ. ಧರ್ಮ ಕ್ಕೆ ಅಪಾಯವಿಲ್ಲ ಅದನ್ನು ಅಪಾರ್ಥ ಮಾಡಿಕೊಂಡು ಹೆಸರು ಮಾಡಿದವರಿಂದ ಅಪಾಯವಿದೆ. ಎಷ್ಟು ಓದಿ ತಿಳಿದರೂ ನಮ್ಮ ನಡೆ ನುಡಿಯಲ್ಲಿ ಸತ್ಯ ಶುದ್ದವಿಲ್ಲವಾದರೆ ಅಧರ್ಮಕ್ಕೆ ಜಯ.
ಇದರ ಬಗ್ಗೆ ಚರ್ಚೆ ನಡೆಸುವ ಬದಲು ಸತ್ಯ ತಿಳಿದಾಗಲೆ ಭಾರತ ಯಾವ ಸ್ಥಿತಿಯಲ್ಲಿದೆ ಎಂದು ಅರ್ಥ ವಾಗಬಹುದು.
ಹೆಸರು ಮಾಡಿದವರಿಂದ ದೇಶ ಹಾಳಾಗಿದೆಯೋ ಹೆಸರು ಮಾಡದವರಿಂದಲೋ ?
ತಂದೆತಾಯಿಯರ ಹೆಸರನ್ನೇ ತಿಳಿಯದ ಮಕ್ಕಳಿರುವಾಗ ಪರಮಾತ್ಮನ ಹೆಸರು ತಿಳಿದು ನಡೆಯೋದು ಕಷ್ಟ. ಇದಕ್ಕೆ ಕಾರಣ ಪೋಷಕರು ಮಕ್ಕಳ ಹೆಸರಿಗಾಗಿ ತಮ್ಮಮೂಲದ ಧರ್ಮ ಕರ್ಮ ಹೆಸರನ್ನು ಬಿಟ್ಟು ನಡೆದಿರೋದು.
ಇದೊಂದು ರಂಗಭೂಮಿ ಇದರಲ್ಲಿ ಶ್ರೀ ರಂಗನ ಹೆಸರಿದೆಯೆ?
ರಾಜಕೀಯದಿಂದ ಹೆಸರು ಮಾಡೋದು ಬೇರೆ ರಾಜಯೋಗದಿಂದ ಹೆಸರು ಗಳಿಸುವುದು ಬೇರೆ.
ಎಷ್ಟೋ ಧಾರ್ಮಿಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲವೆಂದರೆ ಅದು ಅಸತ್ಯವೆಂದಲ್ಲ ಅಂದಿನಕಾಲಮಾನಪರಿಸ್ಥಿತಿ ಮನಸ್ಥಿತಿಗೆ ತಕ್ಕಂತೆ ಧರ್ಮ ರಕ್ಷಣೆಯಾಗಿದೆ. ಈಗ ಕಾಲಬದಲಾಗಿ ಹಣ ಹೆಸರು ಅಧಿಕಾರವೆಲ್ಲಾ ಇದ್ದರೂ ಧರ್ಮ ವಿಲ್ಲ ಸತ್ಯವಿಲ್ಲ ಎಂದಾಗ ಪರಮಾತ್ಮನಿಗೆ ನಷ್ಟವೆ? ಮನುಕುಲಕ್ಕೆ ನಷ್ಟವೆ?
No comments:
Post a Comment