ಅದ್ವೈತ ದೊಳಗೆ ದ್ವೈತ ವಿರೋದನ್ನು ಕಣ್ಣಾರೆ ಕಾಣುತ್ತಿರುವಾಗ ಅಂತರ ಬೆಳೆಸಿಕೊಂಡು ಹಿಂದೂ ಧರ್ಮ ಉಳಿಸಲಾಗದು. ಇತ್ತೀಚೆಗೆ ಫೇಸ್‌ಬುಕ್ ನಲ್ಲಿ ಎರಡೂ ಕಡೆಯವರ ವಾದ ವಿವಾದಕ್ಕಿಂತ ಜಗಳಮನಸ್ತಾಪ ರಗಳೆಗಳೇ ಹೆಚ್ಚಾಗುತ್ತಿದೆ ಎಂದಾಗ ತತ್ವಕ್ಕೆ ಅರ್ಥ ವಿರದು.
ಇಲ್ಲಿ ಎಲ್ಲರನ್ನೂ ಒಂದು ಮಾಡುವ ತತ್ವದ ವಿರುದ್ದ ತಂತ್ರ ಬೆಳೆಸಿದವರಿಗೆ ಹಿಂದೂ ಧರ್ಮದೊಳಗೆ ಅಡಗಿರುವ ಈ ದ್ವೇಷ ಅಸೂಯೆ,ಭಿನ್ನಾಭಿಪ್ರಾಯವು ಆತ್ಮತತ್ವಕ್ಕೆ ವಿರುದ್ದ ಎಂದು ಯಾರೋ ಬಂದು ತಿಳಿಸುವ ಅಗತ್ಯವಿಲ್ಲ. ಎಲ್ಲರಿಗೂ ಗೊತ್ತಿದೆ ನಮ್ಮಲ್ಲಿ ಒಗ್ಗಟ್ಟು ಇಲ್ಲವೆಂದು.ಹಾಗೆ ಎಲ್ಲರಿಗೂ ಗೌರವದಿಂದ ಕಾಣೋದಕ್ಕೂ ಸಾಧ್ಯವಾಗದಿರೋದಕ್ಕೆ ಈ ಮಧ್ಯವರ್ತಿಗಳ ಅರ್ಧ ಸತ್ಯದ ಪ್ರಚಾರವೆ ಕಾರಣವಾದಾಗ ಇದರಿಂದ ಹೊರಬಂದು ತಮ್ಮನ್ನು ತಾವರಿತು ನಡೆಯೋದಕ್ಕೆ ಸಾಧ್ಯವಾದವರು ಪ್ರಯತ್ನಪಟ್ಟರೆ ಪರಮಾತ್ಮನ ದರ್ಶನ ಒಳಗಿದ್ದೇ ಆಗಬಹುದು.ಇದನ್ನೇ ತತ್ವ ತಿಳಿಸಿರೋದು ನೀನು ನಾನು ಬೇರೆಯಲ್ಲ. ನೀನು ನಾನು ಬೇರೆಯಾದರೂ ಒಬ್ಬನೊಳಗೇ ಇರೋದು. ಆ ಒಬ್ಬನ ಅರ್ಥ ಮಾಡಿಕೊಳ್ಳಲು ಯೋಗಿಯಾಗಬೇಕೆಂದು ಜ್ಞಾನಿಗಳು ತಿಳಿಸಿರೋದು. ಯೋಗದ ಹೆಸರಿನಲ್ಲಿ ಭೋಗವೇ ಬೆಳೆದರೆ ತಂತ್ರವಷ್ಟೆ.ತಂತ್ರದಿಂದ ನಾನೇ ಬೆಳೆಯುವಾಗ ಪರಮಾತ್ಮನ ದರ್ಶನ ಸಾಧ್ಯವೆ? ಇಲ್ಲಿ ಜನಸಾಮಾನ್ಯರೊಳಗೇ ಇರುವ ಈ ಸಾಮಾನ್ಯ ಜ್ಞಾನವನ್ನು ಸಾಮಾನ್ಯರೆನ್ನುವ ಕಾರಣಕ್ಕಾಗಿ ಹಿಂದೆ ತಳ್ಳಿ ಹೊರಗಿನಿಂದ ವಿಶೇಷ ಜ್ಞಾನಪಡೆದು ನಾನೇ ರಾಜನಾನೇ ದೇವರು ನಾನೇ ಬ್ರಹ್ಮ,ವಿಷ್ಣು ಮಹೇಶ್ವರ ಎಂದರೆ ಈ ನಾನ್ಯಾರು ? ಪ್ರಶ್ನೆಗೆ ಉತ್ತರವಾಗೋದಿಲ್ಲ.
ಭಗವದ್ಗೀತೆ ಯಲ್ಲಿ ನಾವು ಎಷ್ಟೋ ಬಾರಿ ಶ್ರೀ ಕೃಷ್ಣನನ್ನು ಅರ್ಜುನ ಪರಮಾತ್ಮ ಭಗವಾನ್..ಇನ್ನೂ ಹಲವು ಹೆಸರಿನಿಂದ ಕರೆಯುವಾಗ ಒಬ್ಬನಿಗೆ ಕೇಳಿರುವುದಾಗಿದೆ. ಹಾಗೆ ನಾವು ಹಲವುಮಹಾತ್ಮರಿಂದ ವಿಷಯ ಸಂಗ್ರಹ ಮಾಡಿ ತನ್ನೊಳಗೆ ಅಳವಡಿಸಿಕೊಂಡಾಗ ಅದು ನಮ್ಮ ಆತ್ಮತೃಪ್ತಿ ಗೆ ಕಾರಣವಾದರೆ ಅದೇ ಅಧ್ಯಾತ್ಮ ಸಾಧನೆ.ಇದರಿಂದ ಮನಸ್ತಾಪ ಭಿನ್ನಾಭಿಪ್ರಾಯ ಜಗಳ ದ್ವೇಷ ಹರಡಿದ್ದರೆ ಎಲ್ಲಿಯ ಅಧ್ಯಾತ್ಮ? ತನಗೆ ತನ್ನ ಅಸ್ತಿತ್ವಕ್ಕೆ ದಕ್ಕೆ ಬಂದಾಗ ಯಾವ ಪರಮಾತ್ಮನೂ ಕಾಣೋದಿಲ್ಲ ಎನ್ನುವ ಸತ್ಯವನ್ನು ಹಿಂದಿನಿಂದಲೂ ಕಂಡುಕೊಂಡು ಬಂದಿದೆ ಈ ಭೂಮಿ. ಒಂದೇ ಭೂಮಿಯಲ್ಲಿ ಹಲವು ಯುಗ ಕಳೆದ ಈ ಜೀವಾತ್ಮನಿಗೆ ಪರಮಾತ್ಮನನ್ನು ತೋರಿಸಲಾಗಿಲ್ಲ. ಹೀಗಾಗಿ ಪರಮಾತ್ಮನೇ ನನ್ನನ್ನು ಈ ರೀತಿಯಲ್ಲಿ ನಡೆಸಿರೋದು ಎಂದು ವಾದ ವಿವಾದ ಮಾಡಿಕೊಂಡು ನಾನೇ ಸರಿ ಎನ್ನುವ ಅತಿಯಾದ ವಿಶ್ವಾಸವೆ ಅಹಂಕಾರವಾದಾಗಲೇ ಅಸುರಿ ಶಕ್ತಿಯನ್ನು ನಿಯಂತ್ರಿಸಲು ಸ್ವಯಂ ಭಗವಂತನ ಅವತಾರವಾಗಿತ್ತು.ಅಲ್ಲಿಯವರೆಗೆ ಮಾನವ ನಾನೇ ದೇವರೆನ್ನುವಮಟ್ಟಿಗೆ ಅಸತ್ಯ ಅನ್ಯಾಯ ಅಧರ್ಮವಿದ್ದರೂ ತನ್ನ ತಾನು ತಿದ್ದಿ ನಡೆಯದ ಜಗತ್ತಿನಲ್ಲಿ ಹೆಚ್ಚಾಗಿ ವಾದ ವಿವಾದವೇ ಸೃಷ್ಟಿ ಯಾಗಿದ್ದರೂ ಸೃಷ್ಟಿ ಯ ರಹಸ್ಯಜ್ಞಾನದ ಅರಿವಿಲ್ಲದೆ ತತ್ವಬೆಳೆಯದು.ತಂತ್ರವೇ ತತ್ವದಿಂದ ದೂರವಾದಂತೆಲ್ಲಾ ಅಧರ್ಮ ಹೆಚ್ಚುವುದು. ಇಲ್ಲಿ ಯಾರೂ ಶಾಶ್ವತವಾಗಿ ಉಳಿದಿಲ್ಲವಾದರೂ ಈವರೆಗೆ ವೇದ ಶಾಸ್ತ್ರ ಪುರಾಣಗಳಿಗೇನೂ ಕೊರತೆಯಿಲ್ಲ. ಆದರೆ ಅದನ್ನು ತತ್ವದೃಷ್ಟಿಯಿಂದ ನೋಡುವ ಜ್ಞಾನಿಗಳ ಕೊರತೆಯೇ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ.ಎಷ್ಟೋ ಮಹಾತ್ಮರುಗಳ ದೋಷ ಹುಡುಕಿ ತಾನು ಬುದ್ದಿವಂತಜ್ಞಾನಿ ಎನಿಸಿಕೊಂಡರೆ ಜಗತ್ತು ನೋಡುತ್ತದೆ.ಆದರೆ ಒಳಜಗತ್ತಿನೆಡೆಗೆ ನಡೆಯೋದಕ್ಕೆ ನಮ್ಮೊಳಗೇ ಇರುವ ತಪ್ಪು ಕಲ್ಪನೆಗಳು,ಭಿನ್ನಾಭಿಪ್ರಾಯ ದ್ವೇಷ ಜಗಳದಿಂದ ದೂರವಿರಬೇಕೆನ್ನುತ್ತದೆ ಅಧ್ಯಾತ್ಮ. ಇದನ್ನು ಶರಣರು ದಾಸರು ಸಂತರು ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಕಂಡುಕೊಂಡರು. ಈಗ ಮಹಾತ್ಮರ ಹೆಸರಿನಲ್ಲಿ ನಡೆದಿರುವಕೆಸರಾಟದಲ್ಲಿ ಯಾವ ಧರ್ಮ ರಕ್ಷಣೆಯಾಗಿದೆ ಆಗುತ್ತದೆ ಎನ್ನುವ ಬಗ್ಗೆ ಮಾನವರು ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವೆ? ತಮ್ಮ ಮನೆಯ ಶಾಂತಿಗಾಗಿ ಹೊರಗೆ ಕ್ರಾಂತಿ ಎಬ್ಬಿಸಿದರೆ ತತ್ವವಲ್ಲ ತಂತ್ರವಷ್ಟೆ. ಆದರೆ ಕೆಲವು ಸಂಧರ್ಭದಲ್ಲಿ ಈ ಕ್ರಾಂತಿಯಿಂದ ಇನ್ನಷ್ಟು ಅಧರ್ಮ ಅಸತ್ಯ ಅನ್ಯಾಯವೇ ಹೆಚ್ಚಾಗುತ್ತದೆ.
ಇದರಿಂದಾಗಿ ನಾವು ಶಾಂತಿಯಿಂದ ತತ್ವದೊಳಗಿರುವ ಒಂದೇ ಪರಮಾತ್ಮನ ಸತ್ಯವರಿತರೆ ಇಲ್ಲಿ ನಾನೆಂಬುದಿಲ್ಲ. ಭಗವಂತನೊಬ್ಬನೇ ಆದರೂ ಅವನೊಳಗಿರುವ ಅಸಂಖ್ಯಾತ ಜೀವಾತ್ಮನಿಗೆ ಮುಕ್ತಿ ಸಿಗಲು ಈ ಭೂಮಿಯ ಋಣ ತೀರಿಸಬೇಕು.ಭೂ ತಾಯಿಯಾಗಲಿಪ್ರಕೃತಿ ಮಾತೆಯಾಗಲಿ
ಎಲ್ಲಾ ಉಚಿತವಾಗಿ ಕೊಟ್ಟರೂ ತಾಯಿಯನ್ನೇ ನಿರ್ಲಕ್ಷ್ಯ ಮಾಡುವವರಿಗೆ ಅಜ್ಞಾನ ಆವರಿಸಿದೆ.ಅಜ್ಞಾನ ತೊಲಗಲು ಜ್ಞಾನದ ಶಿಕ್ಚಣ, ಗುರು ಹಿರಿಯರು ಒಳಗೇ ನಡೆಸೋ ಯೋಗಕಾರ್ಯ ವು.ಮುಂದಿನ ಪೀಳಿಗೆಗೆ ಇದರಲ್ಲಿ ತತ್ವದರ್ಶನ ವಾದರೆ ಅಧ್ಯಾತ್ಮ ಪ್ರಗತಿ ಆತ್ಮನಿರ್ಭರ. ಇಲ್ಲವಾದರೆ ಆತ್ಮದುರ್ಭಲ ಭಾರತ. ಇಷ್ಟು ವರ್ಷದ ಪ್ರಚಾರದಿಂದ ಏನಾದರೂ ಬದಲಾವಣೆ ಆಗಿದ್ದರೆ ಅದು ತಂತ್ರವಾಗಿದೆ. ತತ್ವವಾಗಿದ್ದರೆ ಇಷ್ಟು ಭ್ರಷ್ಟಾಚಾರ ಬೆಳೆಯುತ್ತಿರಲಿಲ್ಲ. ಶಿಕ್ಷಣವೇ ತಂತ್ರಮಯವಾದಾಗ ತತ್ವ ಎಲ್ಲಿರುವುದು. ಕಲಿಗಾಲದ ಶಿಕ್ಷಣ ತಂತ್ರದಿಂದ ಅತಂತ್ರ ಜೀವನ.ತತ್ವದಿಂದ ಸ್ವತಂತ್ರ ಜೀವನವಾಗಬೇಕಿತ್ತು. ಈಗಲೂ ಕಾಲಮಿಂಚಿಲ್ಲ.ಇಂದಿನ ಮಕ್ಕಳು ಮುಂದಿನಪ್ರಜೆಗಳು. ಇಂದಿನ ವೃದ್ದರು ಮುಂದಿನ ಜನ್ಮದ ಮಕ್ಕಳಾಗಬಾರದೆ?
ಎಲ್ಲಿಯವರೆಗೆ ತತ್ವದರ್ಶನದಿಂದ ಯೋಗಿಯಾಗುವುದಿಲ್ಲವೋ ಅಲ್ಲಿಯವರೆಗೆ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗೋದಿಲ್ಲವೆಂದರೆ ಈಗಿನ ಅಸಂಖ್ಯಾತ ಜನಸಂಖ್ಯೆಯ ಒಳಗಿರುವ ಅತೃಪ್ತ ಆತ್ಮಕ್ಕೆ ಮುಕ್ತಿ ಸಿಗುವ ಶಿಕ್ಷಣ ಕೊಡುವುದು ಗುರುಹಿರಿಯರ ಧರ್ಮ ಕರ್ಮ. ಎತ್ತ ಸಾಗಿದೆ ಭಾರತ? ಯಾವುದೇ ಆಗಲಿ ಅತಿಯಾದರೆ ಗತಿಗೇಡು.ಜ್ಞಾನ, ವಿಜ್ಞಾನ, ಅಜ್ಞಾನ, ಸಾಮಾನ್ಯಜ್ಞಾನ ಬಿಟ್ಟು ಮುಂದೆ ನಡೆದಿದೆ. ಯಾರ ಮೇಲೆ ನಿಂತು ಯಾರನ್ನು ತುಳಿದು ಆಳಿದರೂ ವ್ಯರ್ಥ ವೆ. ಸಾಲ ತೀರಿಸಲು ಮತ್ತೆ ಭೂಮಿಗೆ ಬರಲೇಬೇಕು.
No comments:
Post a Comment