ಮಾನವನಿಗಷ್ಟೆ ಕೇಳುವ ನೋಡುವ ಹೇಳುವ ಮಾಡುವ ಪ್ರತಿಯೊಂದು ಕಾರ್ಯದ ಹಿಂದೆ ಒಂದು ಅಗೋಚರ ಶಕ್ತಿಯಿದೆ ಎನ್ನುವ ಅರಿವಿರೋದು .ಅದೇ ಶಕ್ತಿ ಎಲ್ಲಾ ಚರಾಚರದಲ್ಲಿಯೂ ಅಡಗಿರುವಂತೆ ಪ್ರಾಣಿಪಕ್ಷಿ ಜೀವ ಜಂತು .....ಗಳಲ್ಲಿ ಇದ್ದರೂ ಅದನ್ನು ತನ್ನ ವಶಕ್ಕೆ ಪಡೆದು ದುರ್ಭಳಕೆ ಮಾಡಿಕೊಂಡರೆ ಅದೇ ಅಸುರಿ ಶಕ್ತಿ. ಇದೂ ಮಾನವನೊಳಗೇ ಇರೋವಾಗ ಹೊರಗಿನಿಂದ ಕೇಳೋದು ನೋಡೋದು ಹೇಳೋದು ಮಾಡೋದರ ಹಿಂದೆ ಯಾವ ಶಕ್ತಿಯಿದೆ ಎನ್ನುವ ಆತ್ಮಜ್ಞಾನವಿದ್ದವರಿಗೆ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸುಲಭ ಸಾಧ್ಯ.
ನಾಟಕದಲ್ಲಿ ಪಾತ್ರವಹಿಸುವಾಗ ಯಾವ ಪಾತ್ರಕೊಟ್ಟರೂ ನಟನೆ ಮಾಡಬಹುದು.ಆದರೆ ಜೀವನದ ನಾಟಕದ ಪಾತ್ರ ಉತ್ತಮವಾಗಿದ್ದರಷ್ಟೆ ಮನುಷ್ಯತ್ವಕ್ಕೆ ಬೆಲೆ ಇರುತ್ತದೆ.ದೈವತ್ವದೆಡೆಗೆ ನಡೆಯುವುದಕ್ಕೆ ತತ್ವಜ್ಞಾನವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ ಅದೇ ತಂತ್ರದ ವಶದಲ್ಲಿ ದ್ದರೆ ಅತಂತ್ರಸ್ಥಿತಿಗೆ ಜೀವಾತ್ಮ ತಲುಪುವುದೆನ್ನುವುದು ಅಧ್ಯಾತ್ಮ ಸತ್ಯ.
ಕಣ್ಣಿಗೆ ಕಂಡಂತೆ ಅಧರ್ಮ ಭ್ರಷ್ಟಾಚಾರ ಅಸತ್ಯ ಅನ್ಯಾಯ ಬೆಳೆಯುತ್ತಿದ್ದರೂ ಅದಕ್ಕೆ ಸಹಕಾರ ಸಹಾಯ ಮಾಡಿಕೊಂಡಿದ್ದರೆ ಆತ್ಮಹತ್ಯೆ ಯಾಗುತ್ತದೆ. ಆತ್ಮಕ್ಕೆ ಸಾವಿಲ್ಲ ಆದರೂ ಆತ್ಮಹತ್ಯೆ ಹೇಗೆ ಎಂದರೆ ಈ ಭೂಮಿಯಲ್ಲಿರುವ ಎಲ್ಲವೂ ಸತ್ತಿರುವ ಜೀವಿಗಳೆ ಆತ್ಮ ಒಂದೇ .ಹೀಗಿರುವಾಗ ಸತ್ಯವರಿಯದೆ ನಡೆಯೋದೆಂದರೆ ಇದ್ದೂ ಸತ್ತಂತೆ ಎಂದು.ಇಲ್ಲಿ ಇದ್ದೂ ಇಲ್ಲದಂತಿರೋದನ್ನು ಒಂದೆಡೆ ಅಧ್ಯಾತ್ಮ ಸಾಧನೆ ಎನ್ನುವರು ಇವರಿಗೆ ಪರಮಾತ್ಮನ ಸತ್ಯದ ಅರಿವಿದ್ದಾಗ ಲೋಕದ ಡೊಂಕನ್ನು ತಿದ್ದಲು ಹೋಗೋದಿಲ್ಲ.
ಆದರೆ, ಇವರ ಹಿಂದೆ ಇನ್ನೂ ಅನೇಕರು ಅಮಾಯಕರು ಅಸಹಾಯಕರು, ಅಜ್ಞಾನಿಗಳಿದ್ದಾಗ ತನ್ನ ಜ್ಞಾನವನ್ನು ದಾರೆ ಎರೆದು ಲೋಕ ರಕ್ಷಣೆ ಮಾಡುವುದೇ ಮಹಾಗುರುಗಳ ಕರ್ತವ್ಯ. ಜಗತ್ತಿನಲ್ಲಿ ಎಲ್ಲಾ ಒಂದೇ ಎನ್ನುವ ಬದಲು ಎಲ್ಲರಲ್ಲಿಯೂ ಒಂದು ವಿಶೇಷ ಗುಣಜ್ಞಾನವಿದೆ ಎಂದರಿತು ಅದಕ್ಕೆ ಪೂರಕವಾದ ಶಿಕ್ಷಣ ಕೊಟ್ಟು ಸ್ವತಂತ್ರ ವಾಗಿ ನಡೆದು ಸತ್ಯ ತಿಳಿಯಲು ಸಹಕರಿಸುವುದೇ ಗುರು. ಆ ಒಳಗಿನ ಅರಿವಿನಿಂದ ಭೂಮಿ ನಡೆದಿದೆ. ಭೂಮಿಯ ಮೇಲಿರುವ ಮನುಕುಲಕ್ಕೆ ಯಾವಾಗ ಒಳಗಿನ ಅರಿವಿನ ಕೊರತೆಯಾಗಿ ಹೊರಗಿನ ಅರಿವು ತುಂಬಲಾಗುವುದೋ ಅದರಲ್ಲಿ ಸತ್ಯವಿಲ್ಲದೆ ಹೋದಾಗಲೇ ಅಸುರಿ ಶಕ್ತಿ ದೇಹವನ್ನು ಆಳಲು ಪ್ರಾರಂಭಿಸೋದು.
ಎಷ್ಟು ಹಣಗಳಿಸದರೇನು ಸತ್ಯಜ್ಞಾನವಿಲ್ಲದೆ ಹಣವನ್ನು ನೀರಿನಂತೆ ಸುರಿದರೂ ಋಣ ತೀರಿಸಲು ಜ್ಞಾನ ಬೇಕಷ್ಟೆ.
ಭೂಮಿ ಹೆಣ್ಣು ಹೊನ್ನು ಮಣ್ಣಿನಿಂದ ಆಕರ್ಷಕ ವಾಗಿ ಕಾಣುತ್ತದೆ. ಆದರೆ ಇದರ ಋಣ ತೀರಿಸಲು ಹೊರಟವರಿಗೆ ಮಾತ್ರ ಗೊತ್ತು ಭೂಮಿಯಿಂದ ಬಿಡುಗಡೆ ಪಡೆಯೋದು ಕಷ್ಟವೆಂದು.ಹೀಗಾಗಿ ಸಾಕಷ್ಟು ಮಂತ್ರ ತಂತ್ರ ಯಂತ್ರಗಳ ಮಧ್ಯಸ್ಥಿಕೆ ಯಲ್ಲಿ ಮಾನವ ಭೂಮಿಯನ್ನು ಆಳಲು ಹೊರಟು ಈಗಿದೇ ದೊಡ್ಡ ದೊಡ್ಡ ಸಮಸ್ಯೆಗಳನ್ನು ಹೊತ್ತು ತರುತ್ತಿದೆ. ಹಾಗಾದರೆ ಇವುಗಳ ಅಗತ್ಯವಿಲ್ಲವೆ? ಅಗತ್ಯಕ್ಕೆ ಮೀರಿದ ಮಧ್ಯವರ್ತಿಗಳು ಸ್ವತಂತ್ರ ಜ್ಞಾನವನ್ನು ಬೆಳೆಸೋದಿಲ್ಲ. ಹಾಗೇನಾದರೂ ಸ್ವತಂತ್ರ ಜೀವನ ನಡೆಸಿದ್ದರೆ ಅದರಲ್ಲಿ ಉತ್ತಮ ಗುರು ಹಿರಿಯರ ಆಶೀರ್ವಾದ ಸಹಕಾರವಿರುತ್ತದೆ.ಇದರಲ್ಲಿ ಆತ್ಮಜ್ಞಾನವಿರುವ ಕಾರಣ ಋಣ ತೀರುತ್ತದೆ ಜೀವಾತ್ಮ ಪರಮಾತ್ಮನ ಕಡೆಗೆ ನಡೆದಾಗ ಶಾಂತಿ ಸಂತೋಷ ಸಿಗುತ್ತದೆ.ಸ್ಥಿತಪ್ರಜ್ಞರಾಗಿದ್ದು ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ. ಕೊನೆಯಲ್ಲಿ ನಾನೆಂಬುದಿಲ್ಲ ಎನ್ನುವ ಹಂತಕ್ಕೆ ತಲುಪಿದಾಗಲೇ ಜೀವಕ್ಕೆಮುಕ್ತಿ.
ಸಧ್ಯದ ರಾಜಕೀಯ ಮನಸ್ಥಿತಿಯಲ್ಲಿರುವ ಮಾನವನಿಗೆ ತನ್ನ ತಾನಾಳಿಕೊಂಡಿರೋದು ಬಹಳಕಷ್ಟ.ಹೀಗಿರುವಾಗ ಇತರರನ್ನು ಆಳೋದರಲ್ಲಿ ಅರ್ಥ ವಿದೆಯೆ? ಇಲ್ಲಿ ಹಣಬಲ ಜನಬಲ ಅಧಿಕಾರ ಬಲದಿಂದ ಆಳೋದು ಸುಲಭ.ಇದು ಅಜ್ಞಾನಿಗಳನ್ನು ತನ್ನ ವಶಕ್ಕೆ ಪಡೆಯುವ ತಂತ್ರ.ಇದರಲ್ಲಿ ಸತ್ಯ ಧರ್ಮದ ಕೊರತೆಯಾದಷ್ಟೂ ಜೀವನವೇ ಅತಂತ್ರ.
ಹಾಗಾಗಿ ನಿಜವಾದ ಜ್ಞಾನಿಗಳು ರಾಜಕೀಯದಿಂದ ದೂರವಿದ್ದು ಸ್ವತಂತ್ರ ಜ್ಞಾನದಿಂದ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡಿದ್ದರು. ಅಂದಿನ ಶಿಕ್ಷಣವೂ ಇದಕ್ಕೆ ಪೂರಕವಾಗಿತ್ತು.ಆದರೆ ಇಂದಿನ ಶಿಕ್ಷಣದಲ್ಲಿ ಒಳಗಿನ ಸತ್ಯಕ್ಕೆ (ಆತ್ಮಸಾಕ್ಷಿ) ಬೆಲೆಕೊಡದೆ ಮಹಿಳೆ ಮಕ್ಕಳನ್ನು ಆಳಲು ಹೊರಟು ಭೂಮಿಯ ಮೇಲಿದ್ದರೂ ಆಕಾಶ ನೋಡುತ್ತಾ ನಡೆದು ಎಡವಿಬೀಳೋದೇ ಹೆಚ್ಚಾಗಿದೆ. ಬಿದ್ದವರನ್ನು ಮೇಲೆತ್ತುವ ಕೆಲಸದಲ್ಲಿ ರಾಜಕೀಯವಿದೆ ರಾಜಯೋಗವಿದ್ದರೆ ಬದಲಾವಣೆ ಸಾಧ್ಯವಿದೆ.
No comments:
Post a Comment