ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, April 28, 2024

ಪ್ರಕೃತಿಯ‌ ಮುಂದೆ ಮಾನವ‌ ನಗಣ್ಯ

   ಎಷ್ಟು ದೊಡ್ಡ ಗಣ್ಯ ವ್ಯಕ್ತಿಯಾಗಿ ಪ್ರಕೃತಿಯ ವಿರುದ್ದ ಹೋರಾಡಿದರೂ ಪ್ರಕೃತಿಯ ಮುಂದೆ ನಗಣ್ಯ.ಇದರರ್ಥ ಈ ಭೂಮಿ ನಡೆದಿರೋದು ಪ್ರಕೃತಿ ಪುರುಷರ ಸಹಕಾರದಲ್ಲಿ ಎಲ್ಲಿಯವರೆಗೆ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪುರುಷನ ಜನ್ಮ ವ್ಯರ್ಥ. ಇಲ್ಲಿ ಪುರುಷನೆಂದರೆ ಆತ್ಮನೆಂದೂ ಆಗುತ್ತದೆ.
ಆತ್ಮಕ್ಕೆ ಲಿಂಗಬೇಧ ಜಾತಿಬೇದ ಧರ್ಮ ಬೇಧವಿಲ್ಲದ ಕಾರಣ ಒಂದು ಜನ್ಮದಲ್ಲಿ ಗಂಡಾಗಿದ್ದರೆ ಮತ್ತೊಂದು ಜನ್ಮದಲ್ಲಿ ಹೆಣ್ಣಾಗಬಹುದು. ಇದನ್ನು ನಮ್ಮ ಪುರಾಣ ಕಥೆಗಳೂ ತಿಳಿಸಿವೆ. ಅವರವರ ಹಿಂದಿನ ಕರ್ಮಾನುಸಾರ ಜನ್ಮವಿದೆ.
ಅಜ್ಞಾನದಲ್ಲಿ ಈ ಜನ್ಮವೇ ಕೊನೆ ಎಂದು ಮಾಡಬಾರದ ಕರ್ಮ ಮಾಡಿದರೆ  ಜನ್ಮ ವ್ಯರ್ಥ. ಒಟ್ಟಿನಲ್ಲಿ ಜ್ಞಾನಕ್ಕೆ ಯಾವ ಇತಿಮಿತಿಗಳಿಲ್ಲ. ಅದರಲ್ಲೂ ಅಧ್ಯಾತ್ಮ ವಿಜ್ಞಾನ ಆಳವಾಗಿ ಇಳಿದಿರುವಾಗ ಹಿಂದಿನಿಂದಲೂ ಪ್ರಕೃತಿ ವಿಕೋಪಗಳಾಗಲು ಕಾರಣವೇ ಮಾನವನ ವಿಕೃತ ಬುದ್ದಿವಂತಿಕೆಯೇ ಆಗಿದೆ. ಇರುವ ಸಣ್ಣ ಜೀವಕ್ಕೆ ಮಾಡುವ ತಂತ್ರ ಕುತಂತ್ರದಿಂದ  ಪ್ರಕೃತಿ  ವಿಕೋಪಗೊಂಡು  ಹೇಳದೆ ಕೇಳದೆ ಜೀವ ಹೋದರೂ  ತನ್ನ ಬುದ್ದಿವಂತಿಕೆಯೇ ಶ್ರೇಷ್ಠ ವೆಂದು ಅಹಂಕಾರ ಪಟ್ಟರೆ ಇದು ಅಜ್ಞಾನವಷ್ಟೆ.
ವೈಜ್ಞಾನಿಕ ಜಗತ್ತಿನಲ್ಲಿ  ಉಚಿತವಾಗಿರುವ ಪ್ರಕೃತಿ ಸಂಪತ್ತನ್ನು ದುರ್ಭಳಕೆ ಮಾಡಿಕೊಂಡು ಮಹಾಗಣಿಗಳು ಬೆಳೆದರು. ಆ ಹಣದಿಂದ  ಜನರನ್ನು ಆಳಿದರು ಆದರೆ ಏನಾಯಿತು ಒಮ್ಮೆ ಜೀವ ಹೋಗೋದನ್ನು ಯಾರಿಗೂ ತಡೆಯಲಾಗಿಲ್ಲ. ಇಷ್ಟು ಸತ್ಯ ಪ್ರತಿಕ್ಷಣ ವಾಗದಿದ್ದರೂ ದಿನಕ್ಕೊಂದು ಬಾರಿ ವಾರಕ್ಕೊಮ್ಮೆ ಕಣ್ಣು ಮುಚ್ಚಿಕೊಂಡು  ಮನಸ್ಸಿಗೆ ಹೇಳಿಕೊಂಡರೆ  ನಾನು ನಗಣ್ಯ ಎನ್ನುವ  ಸತ್ಯದ. ಅರಿವು ಸ್ವಲ್ಪ ಮಟ್ಟಿಗೆ ಬಂದರೆ ಅದೇ ಮುಂದೆ  ನಾನು ಕಾರಣಮಾತ್ರದವನಾಗಿದ್ದು ನಾನಿಲ್ಲವೆನ್ನುವತ್ತಲೂ ಜೀವಾತ್ಮ ಪ್ರಕೃತಿ ಪುರುಷ ಪರಮಾತ್ಮನ ಕಡೆಗೆ ನೆಡೆಯಬಹುದು.
ಹಣದಿಂದ ಹೆಣ್ಣು ಹೊನ್ನು ಮಣ್ಣಿನ ಋಣ ತೀರಿಸಲು ಕಷ್ಟವಿದೆ. ಅದಕ್ಕಾಗಿ ಸತ್ಯಜ್ಞಾನ ಅಗತ್ಯವಿದೆ. ಎಷ್ಟೋ ಜನ್ಮದ ಋಣವನ್ನು ಒಂದೇ ಜನ್ಮದಲ್ಲಿ ತೀರಿಸಲಾಗದು.ಕೊನೆಪಕ್ಷ ಈ ಜನ್ಮಕ್ಕೆ ಸಿಕ್ಕಿದ್ದರಲ್ಲಿ ಉತ್ತಮ ದಾನ ಧರ್ಮ ಕಾರ್ಯ ನಡೆಸಿ ಪ್ರಕೃತಿಯನ್ನು ಗೌರವಿಸಿ ಪೂಜಿಸಿ ಆರಾಧಿಸುವ ಜ್ಞಾನ ಇದ್ದರೆ ಒಳಗಿರುವ ಅಹಂಕಾರ ಸ್ವಾರ್ಥ ಕ್ಕೆ ಸ್ಥಳವಿಲ್ಲದೆ ಆತ್ಮವಿಶ್ವಾಸ ಹೆಚ್ಚುವುದಲ್ಲವೆ?
ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಎಷ್ಟು ಮನೆ ಕಟ್ಟಿದರೂ ಅದೂ ಪ್ರಕೃತಿಯ ಋಣವೇ ಆದಾಗ ಅದರಲ್ಲಿ ಸ್ತ್ರೀ ಶಕ್ತಿಗೆ ಗೌರವಾಧರ ಸಂತೋಷ ಶಾಂತಿಸಮಾಧಾನ ಇದ್ದರೆ  ಅದೇ ನಿಜವಾದ ಸ್ವರ್ಗದ ಮನೆ. ಅವಳಿಗೇ ಸಿಗದ ನೆಮ್ಮದಿ  ಮಕ್ಕಳಿಗೆ ಸಿಗುವುದೆ? ಹಾಗೆ ಭಾರತ ಮಾತೆಯು ಭಾರತೀಯರ ಮನೆಯೊಳಗೆ ಇರುವಳೋ ಹೊರಗಿರುವಳೋ ಎಂದು ನಾವೇ ಕಂಡುಕೊಂಡರೆ ಸಾಕು.ಈ ಸ್ಥಿತಿಗೆ ಕಾರಣದ ಜೊತೆಗೆ ಪರಿಹಾರವೂ ಒಳಗೇ ಸಿಗುತ್ತದೆ.
ಭಾರತದಲ್ಲಿ ಹೆಚ್ಚಾಗಿ ಸ್ತ್ರೀ ಸ್ವಾವಲಂಬನೆಗೆ ಬೆಲೆಕೊಡುತ್ತಿದೆ ಎಂದರೆ  ಮನೆಯೊಳಗೋ ಹೊರಗೋ ಎನ್ನುವ ಪ್ರಶ್ನೆ ಬಂದಾಗ ಸಂಸಾರದ ಜೊತೆಗೆ ಸಮಾಜವನ್ನು ನಡೆಸುವತ್ತ ಸ್ತ್ರೀ ದುಡಿಯುತ್ತಿರುವುದರಿಂದ  ದಣಿದು ಸುಸ್ತಾದವರಿಗೆ  ಒಳಗೇ ಅಡಗಿರುವ ಜ್ಞಾನ ಹೆಚ್ಚುವುದೆ? ಆರಾಮಾಗಿ ಕುಳಿತು ತಿಂದರೂ ಕಷ್ಟ ಅತಿಯಾಗಿ ದುಡಿದರೂ ಕಷ್ಟ.ಒಟ್ಟಿನಲ್ಲಿ ನಮ್ಮ ಹತ್ತಿರವಿರುವ  ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರಕೃತಿಯ ಪರ ನಿಂತು ಆತ್ಮಾವಲೋಕನ ಮಾಡಿಕೊಳ್ಳಲು ಪುರುಸೊತ್ತಿಲ್ಲದೆ ಪ್ರಕೃತಿ ವಿರುದ್ದ ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೆ  ಮಾನವ ಜನ್ಮ ವ್ಯರ್ಥ .
"ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ" ಮನಸ್ಸಿನಂತೆ‌ಮಡದಿಯೂ ಹೊರಗೆ ಹೊರಟರೆ ಎಷ್ಟು ಕೋಟಿಯಿದ್ದರೂ ಬಡಪಾಯಿಯೇ. ಭೂಸಾಲ ಸ್ತ್ರೀ ಋಣ, ತಾಯಿ ಋಣ ...ತೀರಿಸಲು ಸತ್ಯ ಧರ್ಮ ದ ಕಾಯಕ ಅಗತ್ಯವೆಂದರು.ಇದು ನಿಸ್ವಾರ್ಥ ನಿರಹಂಕಾರದ ಪ್ರತಿಫಲಾಪೇಕ್ಷೆಯಿಲ್ಲದ  ಸೇವೆಯಾಗಿರಬೇಕೆಂದರು.  ಈಗಿದು ಸಾಧ್ಯವೆ?  ಸಾದು ಸಂತ ದಾಸ ಶರಣರು ಮಹಾತ್ಮರು ಯೋಗಿಗಳ ದೇಶ ಇಂದು ಭೋಗದೆಡೆಗೆ ಹೊರಗಿನ‌ಸಾಲ ಬಂಡವಾಳ ವ್ಯವಹಾರಿಕ ಶಿಕ್ಷಣದಲ್ಲಿಯೇ ಮುಳುಗಿದ್ದರೆ  ಋಣ ತೀರುವುದೆ? ಬಡತನಕ್ಕೆ ಕಾರಣ ಹಣವಿಲ್ಲದಿರೋದಲ್ಲ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಬರದಿರೋದು.ಇದಕ್ಕೆ ದುಬಾರಿ ಶಿಕ್ಷಣ. ಶಿಕ್ಷಣವೇ ಸಾಲ ಮಾಡಿ ಪಡೆದಾಗ ಸಾಲ ತೀರಿಸಲು  ಪ್ರಕೃತಿ ವಿರುದ್ದ ನಿಂತರೆ  ಪ್ರಕೃತಿ ವಿಕೋಪಕ್ಕೆ ಜೀವ ಹೋಗುತ್ತದೆ. ಕಣ್ಣಿಗೆ ಕಾಣುವ ಸತ್ಯದ  ಹಿಂದೆ ಕಾಣದ ಸತ್ಯವೇ ಹೆಚ್ಚಾಗಿದೆ. 
ಸುಂದರವಾಗಿರೋದೆಲ್ಲ ಸಂತೋಷಕೊಡುವುದೆಂದು ಬಳಸಿ ದು:ಖದ ಅಂತ್ಯ ಕಾಣುತ್ತಿರುವ ಮನುಕುಲಕ್ಕೆ  ಪ್ರಕೃತಿ ಸರಿಯಾದ ಪಾಠ ಕಲಿಸುವುದು ಧರ್ಮವೇ ಆಗಿದೆ.  ಪ್ರಕೃತಿಯ ಒಂದು ಭಾಗವಾಗಿರುವ ಮಾನವ ತನಗೆ ತಾನೇ ಮೋಸಹೋಗಿರುವಾಗ ಯಾರೋ ಹೊರಗಿನವರು ಬಂದು  ಆಳುವುದು  ಸಹಜ. ಇದೇ ರೀತಿಯಲ್ಲಿ ನಮ್ಮ ದೇಶದ ಪ್ರಜೆಗಳ ಸ್ಥಿತಿಯಾಗುತ್ತಿದೆ. ನಮ್ಮವರನ್ನೇ ದ್ವೇಷ ಮಾಡಿದರೆ‌ ಬದಲಾವಣೆ ಸಾಧ್ಯವಿಲ್ಲ.ಕಲಿಯುಗದ ವಿಶೇಷತೆಯೇ ಇದು.
ಭಗವಂತ ನಮ್ಮ ಹಿಂದಿನ ವೈರಿಗಳನ್ನು ನಮ್ಮ ಮಕ್ಕಳು ಸ್ನೇಹಿತರು ಬಂಧು ಬಳಗದ ರೂಪದಲ್ಲಿ ಬಿಟ್ಟು ಶತ್ರುಗಳನ್ನು ಪ್ರೀತಿಸು ಎಂದಾಗ,ಅವರ ತಪ್ಪನ್ನು ತಿದ್ದದೆ ಪ್ರೀತಿಸಿದರೆ ಅದೇ ಮುಂದೆ ‌ ವಿರುದ್ದ ದಿಕ್ಕಿನಲ್ಲಿ ನಡೆಸುತ್ತದೆ. ಒಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿಯೇ ಸಂಸ್ಕಾರಯುತ ಶಿಕ್ಷಣ ಪಡೆದರೆ ಜೀವನದಲ್ಲಿ  ನಡೆಯೋ ಬದಲಾವಣೆಗಳನ್ನು ಪ್ರಕೃತಿ ಸಹಜ ಎಂದು ಅರ್ಥ ಮಾಡಿಕೊಳ್ಳುವ ಜ್ಞಾನವಿರುತ್ತದೆ. ಇಲ್ಲವಾದರೆ ಭೂಮಿಯೇ ಸರಿಯಿಲ್ಲ ಪ್ರಕೃತಿ ಸರಿಯಿಲ್ಲ ದೇವರು ದೇಶ ಸಂಸಾರ ಸಮಾಜವೇ ಸರಿಯಿಲ್ಲ ಎನ್ನುವ ಹಂತಕ್ಕೆ ಮನಸ್ಸು  ತಲುಪಿ ತನ್ನ ತಾನು ಸರಿಪಡಿಸಿಕೊಳ್ಳಲು ಕಷ್ಟವಾಗಿ ಪ್ರಕೃತಿಯನ್ನು ವಿಕೃತವಾಗಿ ಬಳಸುವ ಅಸುರರು ಬೆಳೆಯುವರು.  ನಿರಾಕಾರದಿಂದ ಸಾಕಾರ ಬೆಳೆದರೆ ಅಜ್ಞಾನ.ಸಾಕಾರದಿಂದ ನಿರಾಕಾರದತ್ತ ನಡೆದರೆ ಜ್ಞಾನ.ಆಗ ಪ್ರಕೃತಿಯ ರಕ್ಷಣೆಯಾಗುತ್ತದೆ. 
ಮುಖ ನೋಡಿ ಮಣೆ ಹಾಕುವ ಗುಣವೇ ಅಜ್ಞಾನವಾಗಿದೆ.
ಇದರಲ್ಲಿನ  ಸಾಮಾನ್ಯಜ್ಞಾನದಿಂದಲೇ ನಮ್ಮ ಇಂದಿನ ಪರಿಸ್ಥಿತಿಗೆ ಕಾರಣ ತಿಳಿಯಬಹುದು. ಇಂದು ಹಣದಲ್ಲಿ ಶ್ರೀಮಂತ ನಾಗಿದ್ದರೂ ಅದೂ ಕೂಡ ಋಣವಾಗಿರುವಾಗ ಒಮ್ಮೆ ತೀರಿಸಲೇಬೇಕು. ಇದರಿಂದ ಯಾವ ದೇವಾನುದೇವತೆಗಳೂ  ಬಿಡುಗಡೆ ಪಡೆಯಲಾಗಿಲ್ಲ ಎಂದಾಗ ಹುಲುಮಾನವರ ಭವಿಷ್ಯದ ಕಥೆ ಹೇಗಿರಬಹುದು.
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ ಎಂದು ಪ್ರಶ್ನೆ ಮಾಡಿಕೊಂಡವರು ಪ್ರಕೃತಿಯನ್ನು ಗೌರವದಿಂದ ಆರಾಧಿಸುತ್ತಿದ್ದರು. ಈಗಿದು ತಮ್ಮ ಸ್ವಾರ್ಥ ಸುಖಕ್ಕಾಗಿ ನಡೆದಿರೋದು ದುರಂತ. ದುರ್ಭಳಕೆ ಮಾಡಿಕೊಂಡು  ಜೀವನ‌ನಡೆಸೋದು ಅಸುರಿತನ.

No comments:

Post a Comment