ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, April 21, 2024

2019 ರ ಚುನಾವಣೆಗೂ ಈಗಿನ ಚುನಾವಣೆಗೂ ಬದಲಾವಣೆ ಆಗಿದೆಯೆ?

April 2019 ಚುನಾವಣೆಯ ಸಂದರ್ಭದಲ್ಲಿ ಬರೆದ ಲೇಖನ ಈಗಲೂ ಹಸಿರಾಗಿದೆ.ಏನೂ ಬದಲಾಗಿಲ್ಲ ಇನ್ನಷ್ಟು ಭ್ರಷ್ಟರು ಬೆಳೆದಿರಬಹುದು. ಸಾಕಷ್ಟು ಸತ್ಯದರ್ಶನ ಪ್ರಜೆಗಳಿಗಾಗಿರಬಹುದು. ಬದಲಾವಣೆ ಪ್ರಜೆಗಳ ಮನಸ್ಥಿತಿಯಲ್ಲಾದಾಗಲೇ ನಿಜವಾದ ಚುನಾವಣೆ ಸಾಧ್ಯವಿದೆ. ಮತ್ತೊಮ್ಮೆ ಓದಿ  ಏನಾದರೂ ಬದಲಾವಣೆ ಇದ್ದರೆ  ಸೇರಿಸಬಹುದು...


 
ಚುನಾವಣೆ  ಯಾರಿಗೆ ಲಾಭ ,ಯಾರಿಗೆ  ನಷ್ಟ?
ಭಾರತ ದೇಶವನ್ನು ಉಳಿಸಿ  ಬೆಳೆಸಬೇಕಾದ ಈ ಪ್ರಜಾ ಸರ್ಕಾರದಲ್ಲಿ  ನಡೆಸುತ್ತಿರುವ  ಚುನಾವಣೆಯಮುಖ್ಯ ಉದ್ದೇಶ  ಅಧಿಕಾರ ಪಡೆದು ಹಣ ಮಾಡಿಟ್ಟುಪ್ರಜೆಗಳನ್ನು  
ಆಳುವುದಾಗಿದೆ. ಆದರೆ, ನಿಜವಾದ ಸತ್ಯವೆಂದರೆ, ಇಲ್ಲಿ 
 ಪ್ರಜೆಗಳಿಗಿರೋ ಅಧಿಕಾರವನ್ನು ಭ್ರಷ್ಟರಿಗೆ  ಸಹಕರಿಸಿ  ಕಳೆದುಕೊಂಡು, ಅವರ ಸಾಲಸೌಲಭ್ಯ  ಪಡೆದು, ತಾವೇ 
 ಹಿಂದುಳಿದವರೆಂಬ ಅಲ್ಪ ಜ್ಞಾನವನ್ನೇ  ಮರೆತರೆ  ನಷ್ಟ ಯಾರಿಗೆ?.
ಪ್ರಜಾಪ್ರಭುತ್ವ. ದೇಶವೀಗಲೂ  ರಾಜಪ್ರಭುತ್ವ ದಂತೆ
ನಡೆಸಲು  ಕಾರಣವೇ ಪ್ರಜೆಗಳ ಅಜ್ಞಾನದ ಬಡತನ.
ಸ್ವಾವಲಂಬನೆ  ಹೆಸರಲ್ಲಿ,  ವಿದೇಶಿ ಶಿಕ್ಷಣವನ್ನು ನೀಡಿ
ವಿದೇಶಿ ಬಂಡವಾಳ,ಸಾಲ,ವ್ಯವಹಾರ ವನ್ನು ಬೆಳೆಸಿ,
ಪ್ರಜೆಗಳ   ಮೂಲ ಧರ್ಮ ಕರ್ಮಕ್ಕೆ ಕೊಳ್ಳಿ ಇಟ್ಟು
ಹಳ್ಳಿಯ  ಸ್ವಾವಲಂಬನೆಗೆ   ಬಡತನದ  ಪಟ್ಟಿಕಟ್ಟಿ
ಸಾಲದೆಡೆಗೆ   ನಡೆಸಿ,ಸರ್ಕಾರದ   ಗುಲಾಮರಂತೆ
ಈಗಲೂ  ಅವರನ್ನು  ರಾಜಕಾರಣಿಗಳು   ತಮ್ಮವಶ
ಪಡಿಸಿಕೊಂಡು  ಗೆದ್ದು, ಮತ್ತಷ್ಟು ಸರ್ಕಾರದ ಸಾಲ
ಕೊಟ್ಟರೆ, ರಾಜಕಾರಣಿಗಳೇನು  ದುಡಿದು ಸಾಲ ತೀರಿಸಲು ಸಾಧ್ಯವೆ?.ಇಲ್ಲಾ   ಏನೂ ತಿಳಿಯದ ಮುಗ್ದಜನ‌ರಿಗೆ  ಆಸೆ,,
ಆಮಿಷ ಒಡ್ಡಿ ,ಸರ್ಕಾರದ  ಉಚಿತಸೌಲಭ್ಯದ ಜೊತೆಗೆ  
ಸಾಲ ಪಡೆಯಲು   ಮಧ್ಯವರ್ತಿಗಳು ಸಹಕರಿಸುವುದರ 
 ಜೊತೆಗೆ  ತಮ್ಮಜೀವನ. 
 ನಡೆಸುವ ಷ್ಟು  ಲಾಭ  ಪಡೆದುಕೊಂಡು ಸಾಲ ಮಾತ್ರ 
ಬಡವರ ಹೆಸರಿಗೆ ಬಿಟ್ಟರೆ ನಿಜವಾದ ಭ್ರಷ್ಟರು ಯಾರು?
ಇತ್ತೀಚಿನ ದಿನಗಳಲ್ಲಿ  ದಿನಕ್ಕೊಂದು  ಮಾಧ್ಯಮ
ತನ್ನ  ಸ್ವಾರ್ಥ ಕ್ಕೆ  ದೇಶದ  ಕ್ರಾಂತಿ ಗೆ  ಹುಟ್ಟುತ್ತಿದೆ.
ಇದನ್ನು  ನಡೆಸಲು  ಸತ್ಯದಿಂದ ಸಾಧ್ಯವೆ? ಸಾಧ್ಯವಿಲ್ಲ ಎಂದರೆ,  ಇಲ್ಲಿಂದಲೇ ಅಸತ್ಯ ಅನ್ಯಾಯ ಅಧರ್ಮ,
ಭ್ರಷ್ಟಾಚಾರ,ಕೊಲೆ,ಸುಲಿಗೆ,ಅತ್ಯಾಚಾರ...
ಮುಂತಾದ  ಕೆಟ್ಟ ಸುದ್ದಿಗಳು  ದೇಶದ ತುಂಬಾ ಹರಡಿ
ತಾವು  ಮಾತ್ರ  ಮನರಂಜನೆಯಲ್ಲಿ  ಕಾಲ ಕಳೆಯುವ
ಇವರಿಗೆ  ನಮ್ಮಲ್ಲಿ  ಸ್ವಾತಂತ್ರ್ಯ ಹೆಚ್ಚು.ಅದೇ ಸ್ವಾತಂತ್ರ್ಯ  ಸರಳ ಜೀವಿಗಳಿಗೆ, ಸ್ವಾವಲಂಬಿಗಳಿಗೆದೊರೆತು, ಉತ್ತಮ
. ಶಿಕ್ಷಣ  ನೀಡಿದ್ದರೆ  ನಮ್ಮ ಭಾರತರಾಜಕಾರಣಿಗಳನ್ನು  ಆರಿಸಿ ಗೆಲ್ಲಿಸುವ. ಉತ್ತಮಪ್ರಜಾಪ್ರಭುತ್ವದೇಶವಾಗಿರುತ್ತಿತ್ತು.
ಆದರೆ, ಇಂದಿಗೂ   ಭ್ರಷ್ಟರನ್ನು  ಬೆಳೆಸಿ,ಅವರಅಧಿಕಾರದಲ್ಲೇ  
ತಮ್ಮ ಜೀವನ ನಡೆಸುವವರ  ನಮ್ಮಪ್ರಜೆಗಳಿಂದ  ಉತ್ತಮ 
 ಸರ್ಕಾರ  ನಿರೀಕ್ಷೆ  ಮಾಡೋಮೊದಲು,ಪ್ರಜ್ಞಾವಂತರು,
ಜ್ಞಾನಿಗಳು,ಸಂಘ,ಸಂಸ್ಥೆಸರ್ಕಾರಿಅಧಿಕಾರಿಗಳು,ಕಲಾವಿದರು  
ಹೇಗೆ  ತಮ್ಮಅಧಿಕಾರವನ್ನು  ಸದುಪಯೋಗ  ಪಡಿಸಿಕೊಂಡು  ದೇಶ  ರಕ್ಷಣೆ ಮಾಡಿದ್ದಾರೆಂದು   ಆತ್ಮಾವಲೋಕನಮಾಡಿಕೊಂಡರೆ  ಅತ್ಯುತ್ತಮ.ಬಡವರ  ಹೆಸರಲ್ಲಿ ತಮ್ಮ  ಬಡತನ   ಹೊಸದಾಗಿ     ಹೆಚ್ಚಿಸಿಕೊಂಡು
ಮಧ್ಯವರ್ತಿ ಯಾಗಿರೋರಿಗೆ  ದೇಶದ   ಸಾಲ  ಕಾಣೋದಿಲ್ಲ. ಕೇವಲ ತಮ್ಮ ಹೆಸರು,ಅಧಿಕಾರಕ್ಕಾಗಿ  ಅಸತ್ಯದ  ರಾಜಕೀಯಕ್ಕೆ  ಸಹಕರಿಸುವ  ಅನೇಕ ವಿದ್ಯಾವಂತ, ಬುದ್ದಿಜೀವಿಗೆ  ಅಜ್ಞಾನವೇ  ಶತ್ರುವಾಗಿದ್ದರೂ  ಕಾಣದೆ  ಕುರುಡರ  ಸಹವಾಸದಲ್ಲಿ  ಒಳಗಿನ  ಕಣ್ಣು  ತೆರೆಯದಿದ್ದರೆ
ಇದುಪ್ರಜಾಪ್ರಭುತ್ವಕ್ಕೆ  ಮಾಡೋ ದ್ರೋಹವಷ್ಟೆ.
ಇದು   ಎಲ್ಲರಲ್ಲೂ  ಅಡಗಿರೋ  ಮಹಾಶತ್ರು.ಇಲ್ಲಿ
ಪಕ್ಷಗಳನ್ನೇ  ಬೇರೆ ಬೇರೆ ಮಾಡಿದರೂ, ಆಡಳಿತದ
ಸಮಯದಲ್ಲಿರೋ ಪಕ್ಷದ  ಎಲ್ಲಾ ಉಚಿತ ಸಾಲ ಸೌಲಭ್ಯ ಪಡೆಯುವಾಗ  ಪಕ್ಷ ನೋಡದೆ, ಪಡೆಯುವ
ಜನರನ್ನು  ಏನೆನ್ನಬೇಕು?.
ಇದರಲ್ಲಿ  ನಾವಿದ್ದರೆ  ಇದೇ ಅಧರ್ಮ.ಇದರ ಫಲ
ಮಕ್ಕಳೇ  ಅನುಭವಿಸುವಾಗ, ಈ ರಾಜಕಾರಣಿಗಳು
ಇರೋಲ್ಲ.ಈ  ಪಕ್ಷವೂ ಇರೋಲ್ಲ. ಆದರೆ ಭಾರತ
ಮಾತೆ  ಯಾವಾಗಲೂ  ಅವಳ ಸಾಲ ತೀರಿಸದ ಪ್ರಜೆ
ಯನ್ನು  ಬಿಡುಗಡೆ  ಮಾಡಲಾಗದೆ  ಇಟ್ಟುಕೊಂಡು
ದುಡಿದು ತಿನ್ನುವುದು  ತಪ್ಪುವುದಿಲ್ಲ. ಹೀಗಿರುವಾಗ
ಯಾರು  ನಮಗೆ ಮುಕ್ತಿ ಕೊಡೋರೆಂದು ಭಾರತೀಯ
ಪ್ರಜೆಗಳಿಗೆ  ಜ್ಞಾನವಿಲ್ಲದೆ,ಭ್ರಷ್ಟರಿಗೆಸಹಕರಿಸಿಕೊಂಡು  ಮೈ ಬೆಳೆಸಿಕೊಂಡರೆ  ಆತ್ಮಹತ್ಯೆ ಹೆಚ್ಚಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಅಜ್ಞಾನ ಕಾರಣ.ಅಜ್ಞಾನಕ್ಕೆ  ನಮ್ಮ  ಸ್ವದೇಶದ ಸತ್ಯಜ್ಞಾನದ  ಶಿಕ್ಷಣದ ಕೊರತೆ ಕಾರಣ.ಇದನ್ನು  ಪ್ರಜೆಗಳಿಗೆ  ನೇರವಾಗಿ ನೀಡಲಾಗದಿದ್ದರೂ,ಮಠ,ಮಂದಿರಕ್ಕೆ 
ಬದಲು ಶಿಕ್ಷಣ ಸಂಸ್ಥೆ  ಪ್ರಾರಂಭಿಸಿ  ಶಿಕ್ಷಣ ದಾಸೋಹ  ನೀಡಿ
ಶಿಷ್ಯರ ,ಭಕ್ತರ ಸಂಸಾರದಲ್ಲಿ  ಜ್ಞಾನ  ಬೆಳೆಸಿದ್ದರೆ  ಈ
ಅಜ್ಞಾನ  ಬೆಳೆಯುತ್ತಿರಲಿಲ್ಲ. ಕಾಲಪ್ರಭಾವ ಎಲ್ಲವೂ
ನಡೆದಿದೆ. ಮಾನವ ಕಾರಣಮಾತ್ರನೆಂದು  ಸತ್ಯಜ್ಞಾನ
ಇದ್ದರೂ ಇಲ್ಲದವನಂತೆ ರಾಜಕೀಯದಲ್ಲಿಮುನ್ನಡೆದು, ದೇಶ  ಉಳಿಸುವುದಿರಲಿ  ತನ್ನ ಆತ್ಮಕ್ಕೆ ದ್ರೋಹಬಗೆದುಕೊಂಡರೆ  ಇದು  ನಾವೇ  ತಂದಿಟ್ಟಸರ್ಕಾರದ ಫಲ, ತಿಂದು  ತೇಗಿದರೆ   ರೋಗವೇ    ಬರೋದು.ಆರೋಗ್ಯವಾಗಿದ್ದ ಭಾರತೀಯ ಶಿಕ್ಷಣ,ಇಂದಿನ.  ರಾಜಕೀಯಕ್ಕೆ    ಬಲಿಯಾಗಿ   ಅನಾರೋಗ್ಯಹೆಚ್ಚಿಸಿಕೊಂಡು  ವಿದೇಶದೆಡೆಗೆ ಸಾಗಿದೆ.ಇಂತಹ
ವಿದೇಶಿ ವ್ಯಾಮೋಹ  ರಾಜಕಾರಣಿಗಳಲ್ಲೇ ಅಡಗಿದೆ.
ದೇಶಭಕ್ತರಂತೆ  ನಾಟಕವಾಡಿ,ದೇಶವಾಸಿಗಳಿಗೆ ಸಾಲ
ನೀಡಿ,ಸರ್ಕಾರವನ್ನು  ಸಾಲಕ್ಕೆ ತಳ್ಳಿ,ವಿದೇಶಿಗಳ ಕೈಗೆ
ವ್ಯವಹಾರ ಕೊಟ್ಟು, ಭಾರತದಲ್ಲಿ ಅವರ ವ್ಯಾಪಾರಕ್ಕೆ
ಅವಕಾಶ ನೀಡಿ, ನಮ್ಮ  ಪ್ರಜೆಗಳಿಗೆ  ಉದ್ಯೋಗ ದ
ಅವಕಾಶವೆಂದು  ಹಳ್ಳಿಗಳ ಮೂಲ ಧರ್ಮ  ಕರ್ಮ
ಬಿಡಿಸಿ, ನಗರಗಳನ್ನು ಬೆಳೆಸಲು  ವಿದೇಶಿ ಕಂಪನಿಗೆ
ನೆಲ ಜಲ ಬಿಟ್ಟು, ತಾನೇ ರಾಜನಂತೆ  ಮೆರೆಯುವವರ
ಹಿಂದೆ  ನಿಂತು, ರಾಜಕೀಯಕ್ಕೆ  ನಾವೇ ಸಹಕಾರ ನೀಡಿ  ಇಂದಿನ ಚುನಾವಣೆಯಲ್ಲಿ  ಯಾವ ಪಕ್ಷವೂ ದೇಶದ 
  ಪರವಾಗಿದೆ?. ಅವರಿಗೆ  ಅಧಿಕಾರ ಸ್ಥಾನ ಕ್ಕೆವೈಜ್ಞಾನಿಕ  ಚಿಂತನೆಯೇ  ಮುಖ್ಯವಾಗಿದೆ.ಇದರಲ್ಲಿಮಾನವೀಯತೆ ಎಲ್ಲಿದೆ?. 
ಧರ್ಮ ಎಲ್ಲಿದೆ? ಸತ್ಯ?
ವಿದೇಶಿಗಳನ್ನು  ವಿರೋಧಿಸೋದು  ನಮ್ಮ ಧರ್ಮ
ಅಲ್ಲ. ಆದರೆ, ನಮ್ಮನ್ನು   ನಮ್ಮಂತೆ ಬದುಕಲು ಬಿಡದೆ , ಪರರಂತೆ  ಬದುಕಲು  ಸಹಕರಿಸುವುದುಅಧರ್ಮ. 
ಇದಕ್ಕೆ   ಅಜ್ಞಾನದ ಸಹಕಾರ ಕಾರಣ.
ಪ್ರಗತಿಪರ ಸರ್ಕಾರದಲ್ಲಿ  ವೈಭವದ ವೈಜ್ಞಾನಿಕತೆಯ
 ವಿದೇಶಿ  ವಿಜ್ಞಾನವೆ ಎದ್ದು ನಿಂತಿದೆ ಎಂದರೆ, ನಾವು  
ಯಾವ  ದಿಕ್ಕಿನಲ್ಲಿ  ಮುನ್ನಡೆದೆವು?. 
ಚುನಾವಣೆ  ನಮ್ಮ ಜ್ಞಾನವನ್ನು  ಬೆಳೆಸಲಿ,ಅಜ್ಞಾನ
ಅಳಿಸಲೆಂದು  ಆ ಭಾರತಾಂಬೆಯನ್ನು  ಬೇಡೋಣ.
ರಾಜಕಾರಣಿಗಳು  ಪ್ರಜೆಗಳ ಸೇವಕರು ನಿಜ,ಆದರೆ
ಪ್ರಜೆಗಳ ಅಜ್ಞಾನವನ್ನೇ  ಬೆಳೆಸುವ  ನಮ್ಮ ಸರ್ಕಾರ
ಯಾವ ದಿಕ್ಕಿನಲ್ಲಿ  ಮುನ್ನಡೆದಿದೆ?. 
ಹಣದಲ್ಲೋ, ಜ್ಞಾನದಲ್ಲೋ? .ಶಿಷ್ಟಾಚಾರದಲ್ಲೋ
ಭ್ರಷ್ಟಾಚಾರದಲ್ಲೋ?.. ಸ್ವದೇಶದಲ್ಲೋ ವಿದೇಶದಲ್ಲೋ?
ಕಣ್ಣಿಗೆ  ಕಾಣೋದೆಲ್ಲಾ  ಸತ್ಯವಲ್ಲ. ನಿಜವಾದ ಭ್ರಷ್ಟ
ಎದುರಿಗೆ ನಾಟಕ ಮಾಡಿ  ಅಧಿಕಾರ ಪಡೆದರೆ, ಅದೇ
ದೇಶಭಕ್ತ   ಎದುರಿನಲ್ಲಿ  ನಿಂತು  ಹೋರಾಡುತ್ತಾನೆ.
ಆದರೆ, ನಮ್ಮಲ್ಲಿ  ದೇಶಭಕ್ತರಿಗೆ ಹೋರಾಟ ನಡೆಸಲು
ರಾಜಕಾರಣಿ  ಅಪ್ಪಣೆ ಬೇಕು.ಇದೇ ನಮ್ಮದುರಾದೃಷ್ಟ
ಆದರೆ, ಒಂದಂತೂ  ಸತ್ಯ. ನಮ್ಮ ರಾಜಕಾರಣಿಗಳಿಗೆ
ಸತ್ಯಜ್ಞಾನವಿಲ್ಲದೆ  ಮುನ್ನಡೆಯಲು ಕಾರಣ  ಅವರ
ಮೂಲ ಶಿಕ್ಷಣ. ಸ್ವದೇಶದ ಶಿಕ್ಷಣಕ್ಕೆ  ವಿರುದ್ದ  ಪ್ರಜೆಗಳೇ  
ನಡೆದರೆ  ಇದು ದೇಶಭಕ್ತಿಯೆ?. ಹಾಗಾದರೆ
ಇಲ್ಲಿ  ನಾವು ಎಡವಿರುವುದೆಲ್ಲಿ?
ಜೀವನ  ನಡೆಸಲು  ಬೇಕಾದ ಸತ್ಯಜ್ಞಾನವಿಲ್ಲದ ಪ್ರಜೆ
ನಡೆಯೋದು ಮಿಥ್ಯಜ್ಞಾನದಲ್ಲಿ.  ಹಾಗೆ  ಮುನ್ನಡೆದ
ಭಾರತ  ಈಗ  ಧರ್ಮ,ಸಂಸ್ಕೃತಿ,ಭಾಷೆಯ ವ್ಯವಹಾರ
ನಡೆಸಿ  ಹಣದಲ್ಲಿ ಶ್ರೀಮಂತ ನಾಗಿರ ಬಹುದು.
ಅದೇ  ಅಜ್ಞಾನವನ್ನೂ   ಹೆಚ್ಚಿಸಿದೆ  .ಇಲ್ಲಿ ಅಹಂಕಾರ,
ಸ್ವಾರ್ಥ ದ  ಜೀವ‌ನವೇ ಅಜ್ಞಾನ.
ಇದಕ್ಕೆ  ಸಹಕರಿಸುತ್ತಿರುವ ಮಧ್ಯವರ್ತಿಗಳು  ಯಾವ
ಯೋಚನೆಯಿಲ್ಲದೆ  ಮನರಂಜನೆಯಲ್ಲಿದ್ದಾರೆ..ಇದು
ಪ್ರಜಾಪ್ರಭುತ್ವ ಧರ್ಮವೆ?.
ಧಾರ್ಮಿಕ ಕ್ಷೇತ್ರದಲ್ಲಿ  ಅಸಂಖ್ಯಾತ ದೇವರ ಹೆಸರು
ಮುಂದಿಟ್ಟುಕೊಂಡು  ಜನರನ್ನು  ಹಿಂದೆ ತಳ್ಳಿದರೆ,
ರಾಜಕೀಯ ಕ್ಷೇತ್ರದಲ್ಲಿ  ಪಕ್ಷವನ್ನು ದೇಶವನ್ನು ಮುಂದೆ ಇಟ್ಟು  ತಮ್ಮ  ಅಧಿಕಾರ  ಚಲಾಯಿಸಿಈಗಬಡವರುಹಿಂದುಳಿದವರು 
 ಹೆಚ್ಚಾಗಿ, ಸರ್ಕಾರವೇ ಸಾಲ ನೀಡಿ ಸಾಕಬೇಕಾಗಿದೆ.
ಮತದಾನ‌ ಮಾಡೋದು  ಪ್ರಜಾ ಧರ್ಮ.ಆದರೆ ಇದು
ದಾನವರಿಗೆ ಮಾಡಿದರೆ ಅಧರ್ಮ. ಮಾನವೀಯತೆ
ಇರುವವರು  ರಾಜಕೀಯಕ್ಕೆ ಬರಲಿ. ಅವರನ್ನೂ  ನಮ್ಮ ಅಜ್ಞಾನ ಸುತ್ತಿಕೊಂಡುದಾನವರಾಗಿಸಬಹುದು.ಅರ್ಧಸತ್ಯದ 
 ಜ್ಞಾನವೂಅಜ್ಞಾನವೆ.
ಸಂಸಾರದೊಳಗಿನ  ಸಮಸ್ಯೆಯನ್ನು ಸಂನ್ಯಾಸಿ
ಯಿಂದ  ಪರಿಹಾರವಾಗುವುದೆ? ದೇಶದೊಳಗಿನ ಸಮಸ್ಯೆಯನ್ನು ವಿದೇಶ ಸರಿಪಡಿಸುವುದೆ?. ಆತ್ಮಜ್ಞಾನದ ಕೊರತೆಯನ್ನು ವಿಜ್ಞಾನ ಸರಿಪಡಿಸುವುದೆ? ಆಕಾಶದೆತ್ತರಕ್ಕೆ ನಿಂತುಭೂಮಿಯ ಸಮಸ್ಯೆ  ಪರಿಹರಿಸಲು ಸಾಧ್ಯವೆ?
ಹಾಗೆ, ನಮ್ಮದೇ  ಪಾಪ ಕರ್ಮಕ್ಕೆ  ಸರ್ಕಾರದ  ಹಣ
ಏನೂ ಮಾಡಲಾಗದು ಇನ್ನಷ್ಟು ಸಾಲ ಮೈಗೆ ಹೊತ್ತು
ಕೊಂಡು  ಆತ್ಮಹತ್ಯೆ  ಹೆಚ್ಚಾಗಬಹುದು. ಇದು ಆಧ್ಯಾತ್ಮ ಸತ್ಯ.ಆತ್ಮಕ್ಕೆ  ಹಿಂದೂ ಮುಸ್ಲಿಂ, ಕ್ರೈಸ್ತ....
ಇಲ್ಲ.ಎಲ್ಲರೂ ಒಂದೆ.ಇದೇ ಅದ್ವೈತ.
ಭೂತಾಯಿ, ಭಾರತಮಾತೆ, ಪ್ರಕೃತಿಯನ್ನು  ವಿರೋಧಿಸಿ  ನಡೆದವರಿಗೆ  ಸ್ತ್ರೀ  ಋಣ ತೀರಿಸಲು ಕಷ್ಟ. ಇದನ್ನು  ಸತ್ಯಧರ್ಮದಿಂದ  ತೀರಿಸಲು  ರಾಜಕೀಯಬೇಡ.
ರಾಜಯೋಗ ಬೇಕಿದೆ. ಅಂದರೆತನ್ನನ್ನು  ತಾನೆ ಆಳಿಕೊಳ್ಳಬೇಕಿದೆ. ಸ್ವಂತ ಬುದ್ದಿ ಬೇಕಿದೆ. ಸ್ವತಂತ್ರ ಜ್ಞಾನ ಅಗತ್ಯವಿದೆ. ಇದು ಒಳಗೇ ಅಡಗಿದ್ದರೂ ಗುರುತಿಸಿ  ಬೆಳೆಸೋ ಗುರುವಿನ‌  ಅಗತ್ಯ ಬಹಳ ಜನರಿಗಿದೆ.  ಕೆಲವೆಡೆ ಬದಲಾವಣೆ  ಕಾಣುತ್ತಿದೆ ಆದರೂ ಅದರಲ್ಲಿ ರಾಜಕೀಯ ವ್ಯಕ್ತಿಯಿರಬಾರದಷ್ಟೆ. ವ್ಯಕ್ತಿ ಕ್ಷಣಿಕ ಶಕ್ತಿ ಶಾಶ್ವತ. 
 ಪ್ರಜೆಗಳು  ಕಷ್ಟ ಪಟ್ಟು ದುಡಿದರೆ ಸುಖವಿದೆ.

No comments:

Post a Comment