ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, April 2, 2024

ಪುರಾಣ ಕಥೆಗಳಿಂದ ಜ್ಞಾನ ಬೆಳೆಯಬೇಕು

ಗರಿಕೆ ಗಣಪತಿಗೆ  ಇಷ್ಟ,ತುಳಸಿ ವಿಷ್ಣುವಿಗೆ ಇಷ್ಟ. ವಿಷ್ಣುವಿನೊಳಗೆ ಗಣಪತಿ ಇರೋದು  ಗಣಪತಿಯಿಂದಲೇ ಎಲ್ಲಾ ವಿಘ್ನನಿವಾರಣೆಯಾಗೋದು. ಭೂಮಿಯ ಮೇಲಿರುವ ಎಲ್ಲಾ ದೇವಾನುದೇವತೆಗಳು  ಆತ್ಮಸ್ವರೂಪಿಗಳು.ಅವತಾರ ಪುರುಷ ಸ್ತ್ರೀ ಯರು ಧರ್ಮ ರಕ್ಷಕರು. ಧರ್ಮ ರಕ್ಷಣೆಗೆ ದೇವತಾರಾಧನೆ ನಡೆಯಬೇಕು. ಇದಕ್ಕಾಗಿ ದೈವತ್ವದ ಅಗತ್ಯವಿದೆ. ದೈವತ್ವ ತತ್ವಜ್ಞಾನದಿಂದ ಬೆಳೆದಿದೆ. ಹಾಗಾದರೆ ಇಂದು‌  ಅಸುರತ್ವ‌ಹೆಚ್ಚಾಗಲು ಕಾರಣವೇನಾಗಿದೆ? ಎಂದರೆ  ತತ್ವವನ್ನು ತಂತ್ರವಾಗಿಸಿ  ಪುರಾಣ‌ಕಥೆ ಹೊರಗಿದೆ. ಪ್ರತಿಯೊಂದು ಕಥೆಯ ಒಳಗಿನ ಸತ್ವ ಸತ್ಯ ತತ್ವವನರಿತರೆ  ಈಗಲೂ ದೇವಾಸುರರಿರೋದನ್ನು ಕಾಣಬಹುದು. 

  *ಗರಿಕೆ ಹುಲ್ಲಿನ ಇತಿಹಾಸ ಹಾಗೂ ಮಹತ್ವ*

ಅದು ಸಮುದ್ರ ಮಥನದ ಕಾಲ. ಸುರರು ಮತ್ತು ಅಸುರರು ಮಥನ ಮಾಡಿ ಸೋತಿದ್ದಾರೆ. ಸಾಕ್ಷಾತ್ ವಿಷ್ಣುವೇ ಮಂದಾರ ಪರ್ವತ ಎತ್ತಿ ಹಿಡಿದು ಮಥಿಸ ತೊಡಗಿದ್ದಾನೆ. ಬಲಗೈಯಿಂದ ವಾಸುಕಿಯ ಶಿರವನ್ನು ಹಿಡಿದು ವೇಗವಾಗಿ ಎಳೆದಾಗ ಮಂದರವು ಗಿರ್ರನೆ ನೂರಾರು ಸುತ್ತು ತಿರುಗಿದೆ. ಅಷ್ಟರಲ್ಲೇ ಎಡಗೈಯಿಂದ ವಾಸುಕಿಯ ಬಾಲವನ್ನು ಸೆಳೆದಾಗ ಇನ್ನೂ ವೇಗದಿಂದ ಬಲಮಗ್ಗುಲಿಗೆ ತಿರುಗುತ್ತಿದ್ದ ಪರ್ವತ ಫಕ್ಕನೆ ಎಡಮಗ್ಗುಲಿಗೆ ವಾಲಿ ರಭಸದಿಂದ ತಿರುಗ ತೊಡಗಿದೆ.

ಈ ವೇಗಕ್ಕೆ ಸಾಗರವು ಭೋರ್ಗರೆದು ಮೇಲೆ ಚಿಮ್ಮಿದೆ. ಇಂತಹ ಸ್ಥಿತಿಯಲ್ಲಿ ವೇಗವಾಗಿ ಅತ್ತಿತ್ತ ಚಲಿಸುತ್ತಿರುವ ಭಗವಂತನ ಶರೀರದಿಂದ ರೋಮಗಳು ಚಿಮ್ಮಿ ದಡದಲ್ಲಿ ಬಿದ್ದಿವೆ. ಆ ರೋಮದಿಂದ ಹರಿತ ಶಾದ್ವವರ್ಣದ ಗರಿಕೆ ಹುಟ್ಟಿದೆ. ಹೀಗೆ ದೂರ್ವೆ ವಿಷ್ಣುತನೂದ್ಬವೆ ಎನ್ನಲಾಗಿದೆ. ಕ್ಷೀರಾಂಬುಧಿಯ ಅಲೆಗಳ ಪೆಟ್ಟಿಗೆ ಜಾರಿದ ವಿಷ್ಣುರೋಮದಿಂದ ಉದಿಸಿದ ಗರಿಕೆ ಮೇಲೆ ಅಮೃತ ಕಳಶವನ್ನು ಇರಿಸಲಾಯಿತು, ಅಮೃತದ ಸಂಪರ್ಕದಿಂದ ಗರಿಕೆ ಹುಲ್ಲು ಅಮೃತ ತೃಣವೆನಿಸಿ, ರೋಗ ನಿವಾರಕ ಔಷದ ವೆನಿಸಿತು. ಭಗವಂತನ ಆನಂದಭಾಷ್ಪದಿಂದುಸಿ ಬಂದ ಸಸ್ಯ ತುಳಸಿ, ಅಲ್ಲಿ ಲಕ್ಷ್ಮದೇವಿ ಸನ್ನಿಹಿತಳಾದಳು, ಹಾಗೆಯೆ ಭಗವಂತನ ರೋಮದಿಂದುದಿಸಿ ಬಂದ ಹುಲ್ಲು ಹಾಗು ದರ್ಭೆ ಅಲ್ಲಿಯೂ ಲಕ್ಷ್ಮಿದೇವಿ ಸನ್ನಿಹಿತಳಾದಳು. ದೂರ್ವೆಯಲ್ಲಿ ಸನ್ನಿಹಿತಳಾದ ಲಕ್ಷ್ಮಿಗೆ ದೂರ್ವದೇವಿ ಎಂದು ಕರೆಯಲಾಯಿತು.

ಗರಿಕೆ ರಸವು ದುಃಸ್ವಪ್ನವನ್ನು ಪರಿಹರಿಸುವ ಶಕ್ತಿಯುಳ್ಳ ಇದು ಮಾನಸ ಗೊಂದಲಗಳನ್ನು ಪರಿಹರಿಸುತ್ತದೆ. ಹಲವು ಬಗೆಯ ಔಷದಿಗಳಲ್ಲಿ ದೂರ್ವೆಯ ವಿನಿಯೋಗವನ್ನು ಆಯುರ್ವೇದವು ನಿರೂಪಿಸಿದೆ. ಸ್ತಿಯರ ಗರ್ಭಧಾರಣ ಶಕ್ತಿಗಾಗಿ ದೂರ್ವಾರಸ ಸೇವನದ ವಿಧಿಯನ್ನು, ಪುಂಸವನದಲ್ಲಿ ಅಳವಡಿಸಿದ್ದಾರೆ. ದೇವರ ಪೂಜೆಗೆ ಹೂವೇ ಸಿಗದಿದ್ದರು ಗರಿಕೆಯೊಂದನ್ನು ಏರಿಸಿದರೆ ಎಲ್ಲಾ ಪುಷ್ಟಗಳನ್ನು ಏರಿಸಿದ ಪುಣ್ಯ ಲಭಿಸುತ್ತದೆ. ಭಕ್ತಿಯಿಂದ ದೂರ್ವಾಂಕುರ ಅರ್ಚನೆಯಿಂದ ಸರ್ವ ಯಜ್ಞಗಳ ಫಲವು ದೊರೆಯುವುದು.

ಸರ್ವ ಯಜ್ಞಗಳಿಂದಲೂ ದುರ್ಲಭವಾದ ಫಲವನ್ನು ದೂರ್ವಾಂಕುರವನ್ನು ಭಕ್ತಿಯಿಂದ ಭಗವಂತನಿಗೆ ಅರ್ಪಿಸಿ ಪೂಜಿಸುವುದರಿಂದ ಪುಣ್ಯವನ್ನು ಪಡೆಯಬಹುದು. ಹರಿಪೂಜೆಗೆ ತುಳಸಿ ಮುಖ್ಯ, ಪರಿಪೂರ್ಣತೆಗೆ ಗರಿಕೆಯೂ ಮುಖ್ಯ..🌹🙏🏻
ಪ್ರತಿಯೊಂದು ಪರಮಾತ್ಮನ ಸೃಷ್ಟಿ ಎನ್ನುವ ಮೂಲಕ ದೇವತಾರಾಧನೆಯಲ್ಲಿ ಬಳಸುವರು. ಹಾಗಾಗಿ ಒಂದೊಂದು ದೇವರಿಗೆ ಒಂದೊಂದು ಶ್ರೇಷ್ಠ ವೆಂದಾಯಿತು.ಎಲ್ಲಾ ಒಂದೇ  ದೇವರಿಗೆ ತಲುಪಿದರೂ  ಆ ಒಬ್ಬನನ್ನು ಎಲ್ಲಾ ಪೂಜಿಸಲಾಗದ ಕಾರಣ ಅಧಿದೇವತೆಗಳಾಗಿ ಒಂದು ದೇವತೆಗಳ ಸರ್ಕಾರ ಸೃಷ್ಟಿ ಯಾಗಿ ಭೂಮಿ ನಡೆದಿದೆ. ಇದರಲ್ಲಿ ನನ್ನ ಅಧಿಕಾರವನ್ನು ಇನ್ನೊಬ್ಬರು ಕಿತ್ತುಕೊಂಡರೆ ಯುದ್ದಗಳಾಗುವುದು. ಇನ್ನೊಬ್ಬರ ಅಧಿಕಾರದಲ್ಲಿ ನಾನು ಸಹಕಾರ ಕೊಡದಿದ್ದರೂ ಯುದ್ದವಾಗುವುದು. ಯುದ್ದವಾದಾಗ ಅಧಿಕಾರವನ್ನು ಧರ್ಮದಿಂದ  ಪಾಲನೆ ಮಾಡಿದರೆ ಧರ್ಮ ಯುದ್ದ.ಇಲ್ಲವಾದರೆ ಅಧರ್ಮ ಯುದ್ದ. ದೇವಾಸುರರ ಈ ಅಧಿಕಾರದ  ಕಿತ್ತಾಟದಲ್ಲಿ ಯಾರು ಗೆದ್ದರು ಸೋತರು ಎನ್ನುವ ಲೆಕ್ಕಾಚಾರವನ್ನು ಮಾನವರು ಮಾಡುವರೆಂದರೆ  ಮಾನವನಿಗಿರುವ ಸಾಮಾನ್ಯಜ್ಞಾನ ಎಷ್ಟು ಮುಖ್ಯವೆಂದು ತಿಳಿದರೆ ಸಾಕು.ಈಗಿನ ಪ್ರಜಾಪ್ರಭುತ್ವ ನಡೆದಿರೋದೆ ಸಾಮಾನ್ಯಪ್ರಜೆಗಳಿಂದ.ಪ್ರಜೆಗಳಲ್ಲಿ ದೇವಾಸುರರ ಗುಣಗಳಿವೆ. ಯಾರು ಹೆಚ್ಚು ದೈವತ್ವಪಡೆದರೂ  ಭಗವಂತನೆಡೆಗೆ ಹೋಗಬಹುದು. ಆದರೆ ಅಂತಹ ತತ್ವಜ್ಞಾನದ ಶಿಕ್ಷಣವಿಲ್ಲದೆ ತಂತ್ರಜ್ಞಾನವನ್ನು ಬಳಸಿಕೊಂಡು  ಹೊರಗೆ ಹೋರಾಟ ಹಾರಾಟ ಮಾರಾಟದಿಂದ ಯುದ್ದವಾದರೆ   ಜೀವಹೋಗೋದು  ಸಹಜ‌.ಅದರೊಂದಿಗೆ  ಧರ್ಮ ಸೂಕ್ಮಜ್ಞಾನವಿರುವುದೆ? ಯಾರನ್ನು ಯಾರು ಆಳೋದು? ದೇವರೆಲ್ಲಿ? ಅಸುರರು ಯಾರು? ನಮ್ಮ ಸಹಕಾರ ವಿಲ್ಲದೆ ಏನೂ‌ ಯಾರೂ ಬೆಳೆದಿಲ್ಲ.ಎಂದಾಗ ಸಹಕಾರ  ದೈವತ್ವದೆಡೆಗೆ ಇದ್ದರೆ ಉತ್ತಮ ‌ಸರ್ಕಾರವಿರುವುದು.
ಇಡೀ ಭೂಮಂಡಲ  ಆವರಿಸಿರುವ ಪರಮಾತ್ಮನ ಶಕ್ತಿಯನ್ನು  ಯೋಗಶಕ್ತಿಯಿಂದಷ್ಟೆ  ಅರ್ಥ ಮಾಡಿಕೊಂಡವರು ಯೋಗಿಗಳಾದರು.ಮಹರ್ಷಿಗಳಾದರು. ದೇವಾನುದೇವತೆಗಳಿಗೆ ಗುರುವಾದರು. ಗುರುವನ್ನು ದೇವರಿಗಿಂತ ದೊಡ್ಡವರೆಂದರು. ಗುರುವನ್ನು ದೇವತೆಗಳು ಪೂಜಿಸಿದಂತೆ ಗುರುವೂ ದೈವತ್ವವನ್ನು ಪೂಜಿಸಬೇಕಿದೆ. 

No comments:

Post a Comment