Suresh Maharshi ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ದ್ವೇಷವನ್ನು ಬಿತ್ತುವಜಾಲತಾಣವಾಗುತ್ತಿರುವುದು ಹಿಂದೂಗಳನ್ನು ಒಗ್ಗಟ್ಟಿನಿಂದ ಇರದಂತೆ ಮಾಡಿದೆ. ಇದರಲ್ಲಿ ಬ್ರಾಹ್ಮಣ ರನ್ನು ಹೆಚ್ಚಾಗಿ ಪ್ರೇರೇಪಣೆ ಮಾಡುವ ಸುದ್ದಿ ಹರಡುವುದು ಬ್ರಾಹ್ಮಣರೇ ಎನ್ನುವುದು ದುರಂತ. ಅದರಲ್ಲಿ ದ್ವೈತಾದ್ವೈತದ ನಡುವಿರುವ ಭಿನ್ನಾಭಿಪ್ರಾಯದಿಂದ ಬ್ರಾಹ್ಮಣ ವದು ವರರಿಗೆ ಸಮಸ್ಯೆ ಹೆಚ್ಚಾಗಿದೆ ಎಂದರೆ ತಾವೇ ತೋಡಿಕೊಂಡ ಹೊಂಡದಲ್ಲಿ ತಾವೇ ಬಿದ್ದರೆ ಎತ್ತುವವರು ಯಾರು? ಒಟ್ಟಿನಲ್ಲಿ ಬ್ರಾಹ್ಮಣ ಎಂದರೆ ಜಾತಿಯೂ ಅಲ್ಲ ವರ್ಣ ವೂ ಅಲ್ಲ .ಬ್ರಹ್ಮಜ್ಞಾನವನರಿತವ ಬ್ರಾಹ್ಮಣ.ಬ್ರಹ್ಮನ ಕೆಲಸವೇನು ಸೃಷ್ಟಿ ಮಾಡೋದು.ಸೃಷ್ಟಿಯ ರಹಸ್ಯವರಿಯುವತ್ತ ನಡೆದಾಗ ನಾನೇನೂ ಅಲ್ಲ ಎನ್ನುವ ಜ್ಞಾನ ಬರುತ್ತದೆ.ಆಗದ್ವೇಷ ಎಲ್ಲಿರುತ್ತದೆ? ಒಟ್ಟಾರೆ ತತ್ವದಿಂದ ಬ್ರಾಹ್ಮಣ ಎದ್ದು ನಿಂತರೆ ಹೊರಗಿರುವ ತಂತ್ರ ಕೆಳಗಿಳಿಯಬಹುದು. ತಾವೇ ತಂತ್ರದ ವಶವಾದರೆ ಸ್ವತಂತ್ರ ಕಳೆದುಕೊಂಡು ಅತಂತ್ರಸ್ಥಿತಿಗೆ ಜೀವಾತ್ಮ ತಲುಪುವನು.
ಜೀವನನಡೆಸಲು ಬಂದವರಿಗೆ ಜೀವಭಯ ಹುಟ್ಟಿಸಿ ಆತ್ಮ ವಂಚನೆ ಮಾಡಿಕೊಂಡು ಎಷ್ಟು ವರ್ಷ ಆಳಿದರೂ ವ್ಯರ್ಥ.
ನಮ್ಮನ್ನು ನಾವು ಆಳಿಕೊಳ್ಳಲು ರಾಜಕೀಯ ಬೇಕೆ? ರಾಜಯೋಗವೆ?
ಎಷ್ಟು ಸತ್ಯ ಹೊರಹಾಕಿದರೂ ಲಿಂಗಬೇಧ ಜಾತಿಬೇದ ಧರ್ಮ ಬೇದ ಮಾಡಿಕೊಂಡು ಅಸತ್ಯ ಅನ್ಯಾಯ ಅಧರ್ಮ ದ ರಾಜಕೀಯದ ಹಿಂದೆ ನಡೆದಷ್ಟೂ ಬ್ರಹ್ಮ ಕಾಣೋದಿಲ್ಲ.ಕಾರಣ ಅರ್ಧ ಸತ್ಯದ ಮಧ್ಯವರ್ತಿಗಳು ವ್ಯವಹಾರಕ್ಕೆ ಇಳಿದಾಗ ಹಣವೇ ಕಾಣೋದು. ಹೆಣವಾದರೂ ಸುಮ್ಮನಿರುವುದು ಹಣ ಮಾಡಬಾರದ್ದು ಮಾಡಿಸುತ್ತಿದೆ..ಒಬ್ಬ ಹಿಂದೂ ಸತ್ತರೆ ಹಿಂದೂ ಧರ್ಮಕ್ಕೆ ನಷ್ಟ ಅದೇ ಒಬ್ಬ ಬ್ರಾಹ್ಮಣ ಸತ್ತರೆ ಹಿಂದೂಗಳಿಗೇಕಷ್ಟ ನಷ್ಟ...ಇಲ್ಲಿ ಜ್ಞಾನದಪ್ರಶ್ನೆ ಬಂದಾಗ ಯಾರಲ್ಲಿ ಎಷ್ಟು ಜ್ಞಾನವಿದೆ ಎಂದು ಲೆಕ್ಕಾಚಾರ ಹಾಕೋದು ಕಷ್ಟವಿದೆ.ಆದರೆ ಹಣವನ್ನು ಲೆಕ್ಕಹಾಕಬಹುದು. ಆದರೆ ಅದು ಶಾಶ್ವತವಿರದು.ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ ಹಣ ಇದ್ದಾಗ ಜ್ಞಾನವಾಗಲಿ ದೇವರಾಗಲಿ ಕಾಣದು.
ಇಲ್ಲದವರಲ್ಲಿ ಎರಡೂ ಇದ್ದರೂ ಬೆಲೆಕೊಡದೆ ಕೆಳಗೆ ಹಾಕಿದಷ್ಟೂ ಮನುಕುಲ ದಾರಿತಪ್ಪುವುದಷ್ಟೆ. ಬ್ರಾಹ್ಮಣರನ್ನು ದೇವರೆಂದರು ಕಾರಣ ಅವರಲ್ಲಿ ದೈವತ್ವವಿದೆಯೆಂದು. ಅಂದರೆ ದೈವೀಗುಣಗಳಾದ. ನಿಸ್ವಾರ್ಥ ನಿರಹಂಕಾರ ತೃಪ್ತಿ ಸಹನೆ, ಶಾಂತಿ ಆತ್ಮಜ್ಞಾನದ ಲಕ್ಷಣ.ಇದರಿಂದಾಗಿ ಬ್ರಹ್ಮನಸೃಷ್ಟಿ ರಹಸ್ಯಜ್ಞಾನ ಅರ್ಥ ವಾಗುತ್ತದೆ. ಹೀಗಾಗಿ ಮಹರ್ಷಿಗಳು ಕಾಡಿನಲ್ಲಿ ಸ್ವತಂತ್ರವಾಗಿ ದ್ದು ತಮ್ಮ ತಪಸ್ಸಿನ ಶಕ್ತಿಯಿಂದ ಈ ಬ್ರಹ್ಮಾಂಡದ ರಹಸ್ಯವರಿತರು. ಇದೀಗ ಓದಿ ತಿಳಿಯುವ ವಿದ್ಯೆಯಾಗಿದೆ.ಅದೇ ವ್ಯವಹಾರದ ವಸ್ತುವಾಗಿ ಬಳಸಿದರೆ ಹಣಬರುತ್ತದೆ ಅಧಿಕಾರ ಸ್ಥಾನ ಸಿಗುತ್ತದೆ. ಆದರೆ ಮಹರ್ಷಿಗಳ ಅನುಭವ ಜ್ಞಾನ ಸಿಗಬೇಕಾದರೆ ಆ ದಾರಿಯಲ್ಲಿ ನಡೆಯಬೇಕು. ಈಗ ಕಾಡನ್ನು ಕಡಿದು ನಾಡನ್ನು ಬೆಳೆಸೋ ಕಾಲವಾಗಿದೆ. ನಾಡಿನಲ್ಲಿ ದ್ದು ಕಾಡಿನಲ್ಲಿರುವಂತೆ ಬದುಕಬಹುದೆ? ಕಾಲಬದಲಾದರೂ ತತ್ವಒಂದೆ .ಸೃಷ್ಟಿ ಸತ್ಯಧರ್ಮದಪರ ಇದ್ದರೆ ಸ್ಥಿತಿ ಲಯವೂ ಉತ್ತಮ. ಸೃಷ್ಟಿ ಯೇ ಸರಿಯಿಲ್ಲವಾದರೆ ಸ್ಥಿತಿಯ ಗತಿ ಅಧೋಗತಿ ಆಗ ಲಯವನರಿಯದ ಅಜ್ಞಾನಕ್ಕೆ ಬೆಲೆಕೊಟ್ಟು ಹೆಣವನ್ನು ಹಣಕೊಟ್ಟು ಖರೀದಿಸುವ ಕಾಲ ಬರುತ್ತದೆ. ಇದೀಗ ಕಣ್ಣಾರೆ ಕಂಡರೂ ಹೇಳೋ ಸ್ಥಿತಿಯಲ್ಲಿ ಬ್ರಾಹ್ಮಣರಿಲ್ಲ.
ಎಲ್ಲಾ ರಾಜಕೀಯಮಯ ವ್ಯವಹಾರಕ್ಕೆ ಸೀಮಿತವಾದಾಗ ಧರ್ಮ ಸೂಕ್ಮಗಳು ಅರ್ಥ ವಾಗೋದಿಲ್ಲ.
ಇಲ್ಲಿ ಬ್ರಾಹ್ಮಣ ಎಂದರೆ ಜಾತಿ ವರ್ಣ ವಲ್ಲ ಎಂದು ಮೊದಲೇ ತಿಳಿಸಿದಂತೆ ಇದನ್ನು ಸತ್ಯಜ್ಞಾನದಿಂದ ಅರ್ಥ ಮಾಡಿಕೊಂಡರೆ ಉತ್ತಮ.ಇಲ್ಲವಾದರೆ ಇದಕ್ಕೂ ಪರ ವಿರೋಧದ ಪ್ರತಿಕ್ರಿಯೆ ಬರುತ್ತದೆ. ಎಲ್ಲಿಯವರೆಗೆ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆಯನ್ನು ತತ್ವದಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಈ ಧರ್ಮ ಅಧರ್ಮದೊಳಗೇ ಅಡಗಿರುತ್ತದೆ. ಅಸತ್ಯದೊಳಗೆ ಸತ್ಯ, ಅನ್ಯಾಯದೊಳಗೇ ನ್ಯಾಯ, ಅದ್ವೈತ ದೊಳಗೇ ದ್ವೈತ ವಿದೇಶದೊಳಗೇ ದೇಶ, ವಿಜ್ಞಾನದೊಳಗೇ ಜ್ಞಾನ, ಹಾಗೆ ಅಸುರರೊಳಗೇ ಸುರರು ಬಂಧನದಲ್ಲಿರುವುದನ್ನು ನಾವೀಗ ಕಂಡೂ ಕಾಣದಂತೆ ನಮ್ಮವರನ್ನೇ ದ್ವೇಷ ಮಾಡುತ್ತಾ ಸತ್ಯಕ್ಕೆ ಬೆಲೆಕೊಡದೆ ಧರ್ಮದ ಹೆಸರಿನಲ್ಲಿ ದ್ವೇಷ ಬೆಳೆಸಿಕೊಂಡು ಹಣ ಬೇಕು ಜ್ಞಾನ ಬೇಡ ಎನ್ನುವ ಸ್ಥಿತಿಗೆಬಂದಿದ್ದೇವೆ. ಇದಕ್ಕೆ ಪ್ರತಿಕ್ರಿಯೆ ಬರೋದಿಲ್ಲವಾದರೂ ಸತ್ಯ ಒಂದೇ ."ಅಹಂ ಬ್ರಹ್ಮಾಸ್ಮಿ" ಅಂದರೆ ನಾನೇ ಬ್ರಹ್ಮನಾದಾಗ ನನ್ನಲ್ಲಿ ಬ್ರಹ್ಮಜ್ಞಾನವಿದೆಯೆ? ಎಲ್ಲರಲ್ಲಿಯೂ ಅಡಗಿರುವ ಆ ಬ್ರಹ್ಮ ತತ್ವ ನನಗೆ ಕಾಣುತ್ತಿದೆಯೆ? ಇಡೀ ಬ್ರಹ್ಮಾಂಡವನ್ನು ಆಳುವ ಶಕ್ತಿಯಿದೆಯೆ? ಸತ್ಯವಿಲ್ಲದ ಧರ್ಮ ಕುಂಟುತ್ತದೆ. ಧರ್ಮ ವಿಲ್ಲದ ಸತ್ಯ ಕುರುಡು ಜಗತ್ತನ್ನು ಆಳುತ್ತದೆ. ಇದು ಕಲಿಯುಗದ ಮಹಿಮೆ.
ಕಲಿಕೆಯೇ ಅಸತ್ಯ ಅಧರ್ಮ ವಾದಾಗ ಬ್ರಹ್ಮಜ್ಞಾನವಾಗದು.
ನಮ್ಮೊಳಗೇ ಅಡಗಿರುವ ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.ಆತ್ಮವೇ ದೇವರು.ಆದರೆ ಅದನ್ನು ದೈವತ್ವದೆಡೆಗೆ ನಡೆಯಲು ಬಿಟ್ಟಾಗ ಮಾತ್ರ ಬ್ರಹ್ಮನ ತತ್ವ ತಿಳಿಯಬಹುದು.
ಬ್ರಹ್ಮ ವಿಷ್ಣು ಮಹೇಶ್ವರರ ನಡುವೆಯೇ ಅಂತರ ಬೆಳೆಸಿಕೊಂಡು ನಾನೇ ದೇವರೆಂದಾಗ ಅಂತರದಲ್ಲಿ ಅಸುರರು ಸೇರಿ ದೇವರನ್ನು ಆಳುವರಲ್ಲವೆ?
ಪುರಾಣಕಾಲದಿಂದಲೂ ಬೆಳೆದಿರುವ ರಾಜಕೀಯ ಇಂದಿಗೂ ಮನುಕುಲಕ್ಕೆ ಅಜ್ಞಾನ ಹೆಚ್ಚಿಸುತ್ತಾ ಭೂಮಿಯ ಋಣದಿಂದ ಮುಕ್ತಿ ಹೊಂದದೆ ಪುನರ್ಜನ್ಮ ಹೆಚ್ಚಾಗಿ ಜನಸಂಖ್ಯೆಮಿತಿಮೀರಿದೆ. ಜನರನ್ನು ಆಳೋದಕ್ಕೆ ಅಸತ್ಯ ಅನ್ಯಾಯ ಅಧರ್ಮ ಎತ್ತಿಹಿಡಿದರೆ ಅದೇ ರಾರಾಜಿಸುತ್ತದೆ.ಯಾವುದನ್ನು ಬೆಳೆಸಬೇಕೋ ಅದನ್ನು ಬೆಳೆಸಿದರೆ ಜ್ಞಾನಬರುವುದು. ಜ್ಞಾನ ಬರೋದಕ್ಕೆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಸತ್ಯಜ್ಞಾನ ಬೇಕು.ಮಿಥ್ಯಜ್ಞಾನದ ಬಳಕೆಯಿಂದ ಅಜ್ಞಾನ ಮಿತಿಮೀರಿದೆ. ಇದಕ್ಕೆ ಬ್ರಾಹ್ಮಣರೂ ಸೇರಿದಾಗಲೇ ಭ್ರಷ್ಟಾಚಾರ ವಾಗೋದು.
ಬ್ರಾಹ್ಮಣ ರಿಗೆ ಬ್ರಾಹ್ಮಣರು ವೈರಿಗಳಾಗಿದ್ದರೆ ಪರರಿಗೆ ಒಳ್ಳೆಯ ಅವಕಾಶ ಸಿಕ್ಕಿದಂತೆ.
ಶಾಸ್ತ್ರ ದ ಪ್ರಕಾರ ಶುದ್ದಬ್ರಾಹ್ಮಣ ಏನನ್ನೂ ಕೂಡಿಟ್ಟುಕೊಳ್ಳಬಾರದಂತೆ. ಈಗ ಅಸಾಧ್ಯ.ಬಡಬ್ರಾಹ್ಮಣ, ಬಡ ಶಿಕ್ಷಕ, ಬಡ ರೈತ,ಬಡ ಸೈನಿಕ...ಇವರು ಭೂತಾಯಿಯ ಋಣ ತೀರಿಸುವ ಜ್ಞಾನಿಗಳು. ಈಗೆಲ್ಲಿರುವರು?
ಋಣ ತೀರಿಸಲು ಭೂ ಸೇವೆಯನ್ನು ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಯಿಲ್ಲದೆ ಸತ್ಯ ಧರ್ಮದಲ್ಲಿ ನಡೆಯಬೇಕು. ನಡೆಯಲುಬಿಡುವರೆ? ಅಂತಹ ಸತ್ಸಂಗವಿದೆಯೆ? ಎಲ್ಲಾದರೂ ಇದ್ದರೆ ದಯವಿಟ್ಟುತಿಳಿಸಿ.
ಇದರಲ್ಲಿ ಯಾವ ವರ್ಗ ವಾದರೂ ಸರಿ ಸ್ವತಂತ್ರ ವಾಗಿದ್ದು ಸತ್ಯ ತಿಳಿದು ನಡೆಯಲು ಸ್ವಾತಂತ್ರ್ಯ ವಿದೆ. ಆದರೆ ರಾಜಕೀಯಕ್ಕೆ ಸಹಕಾರಕೊಟ್ಟು ಹೊರಗೆ ಬಂದವರಿಗೆ ತಮ್ಮ ಸ್ವತಂತ್ರ ಜ್ಞಾನದ ಕೊರತೆಯಾಗಿದೆ. ಒಳಗೇ ಇದ್ದದ್ದನ್ನು ಇಲ್ಲ ಎಂದರೂ ನಷ್ಟ.ಇದೆ ಎಂದರೂ ಕಷ್ಟಪಡಲೇಬೇಕಷ್ಟೆ.
ಕಷ್ಟಪಡದೆ ಸತ್ಯ ತಿಳಿಯಲಾಗದು. ಸತ್ಯವಿಲ್ಲದೆ ಧರ್ಮ ನಿಲ್ಲದು,ಧರ್ಮ ವೇ ಇಲ್ಲದ ಜೀವನ ಜೀವನವಾಗದು. ಜೀವಿಗಳ ವನ ಜೀವನ.ಜೀವಾತ್ಮ ಪರಮಾತ್ಮನೊಳಗಿದ್ದರೂ ನಾನೇ ಬೇರೆ ನೀನೇ ಬೇರೆ ಎನ್ನಬಹುದಷ್ಟೆ ಆದರೆ ಅದು ಸತ್ಯವಾಗಿರದು. ಬೇರೆ ಮಾಡೋದುಸುಲಭೊ ಒಂದುಮಾಡೋದೇ ಕಷ್ಟ. ಆ ಒಂದೇ ಬ್ರಹ್ಮನನ್ನು ಅನೇಕ ಮಾಡಿರುವಾಗ ಅವರಿಂದ ಜನ್ಮ ಪಡೆದಾಗ ಅಸಂಖ್ಯಾತ ಜೀವಿಗಳ ಸತ್ಯಾಸತ್ಯತೆಯನ್ನು' ಅಲ್ಲ' ಗೆಳೆದಾಗಲೇ ಅಲ್ಲನ ಸೃಷ್ಟಿ ಹೆಚ್ಚಾಗಿದೆ. ಎಲ್ಲದರಲ್ಲೂ ಅಲ್ಲನಿದ್ದರೆ ನಮ್ಮಲ್ಲೂ ಇರಲೇಬೇಕಷ್ಟೆ.
ಅಸುರ ಶಕ್ತಿ ನಮ್ಮೊಳಗೇ ಇರೋವಾಗ ಹೊರಗಿನಿಂದ ಬೆಳೆದವರು ಕೂಡಿಕೊಳ್ಳುವರು. ನಕಾರಾತ್ಮಕ ಸಕಾರಾತ್ಮಕ ಶಕ್ತಿಗಳನಡುವಿನ ಯುದ್ದದಲ್ಲಿ ಗೆದ್ದವರು ಯಾರು ಸೋಲು ಯಾರಿಗೆ? ಶಾಶ್ವತವಲ್ಲದ ಜೀವಕ್ಕಾಗಿ ಶಾಶ್ವತವಾಗಿರುವ ಆತ್ಮವಂಚನೆ ಹೆಚ್ಚಾದಾಗಲೇ ಅತೃಪ್ತ ಆತ್ಮಗಳ ಸಾಮ್ರಾಜ್ಯ ಸೃಷ್ಟಿ ಯಾಗುತ್ತದೆ.
No comments:
Post a Comment