ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, April 18, 2024

ಪ್ರಬುದ್ದ ರೊಳಗೆ ಬುದ್ದನಿರುವನೋ?

ಯಾರು ಯಾವಾಗ ಹೇಗೆ ಬದಲಾಗುವರೆಂದು ಯಾರಿಗೂ ತಿಳಿಯಲಾಗದು.ಭವಿಷ್ಯವನ್ನು ಸಂಪೂರ್ಣ ಸತ್ಯವೆನ್ನಲಾಗದು ಹಾಗಂತ ಭವಿಷ್ಯದ ಬಗ್ಗೆ ಚಿಂತನೆ ನಡೆಸದೆ ಮಾನವ ಬದುಕೋದಿಲ್ಲ. ಮಹಾತ್ಮರಾದವರೆಲ್ಲರಿಗೂ ಭವಿಷ್ಯದ ಬಗ್ಗೆ ಚಿಂತನೆಯಿತ್ತು ಆದರೆ ಚಿಂತೆಯಿರಲಿಲ್ಲ ಕಾರಣ ಜ್ಞಾನದ ಮೂಲಕ ಭವಿಷ್ಯವಿದ್ದರೆ ಚಿಂತೆಯಿಂದ‌ಮುಕ್ತಿ.

ಭಗವಾನ್ ಬುದ್ದ  ರಸ್ತೆಯಲ್ಲಿ ಹೋಗುವಾಗ ಕಂಡ ಬಿಕ್ಷುಕ,ರೋಗಿ,ಶವದ ಕಾರಣವೇ  ರಾಜಕೀಯ ಬಿಟ್ಟುಮನೆತೊರೆದು ವಿರಾಗಿಯಾಗಿದ್ದು ಆದರೆ ಈಗಿನ‌ಸ್ಥಿತಿಗೆ ಕಾರಣ ಬುದ್ದನ ಉಪದೇಶ ಹಿಡಿದು  ಮನೆ  ಸಂಸಾರಬಿಟ್ಟು  ರಾಜಕೀಯಕ್ಕೆ ಇಳಿದವರ ಹಿಂದೆ ‌ನಡೆದಿರೋರು  ನಾವೆಲ್ಲಿ ಎಡವಿದ್ದೇವೆನ್ನುವ ಬಗ್ಗೆ ಚಿಂತನೆ ನಡೆಸಿದರೆ ಅಂದಿನ ರಾಜಪ್ರಭುತ್ವ ದಿಂದ ಪ್ರಜಾರಕ್ಷಣೆ ಆಗುತ್ತಿತ್ತು. ಇಂದಿನ‌ ರಾಜಕೀಯದಿಂದ ಪ್ರಜಾಭಕ್ಷಣೆ ಆಗುತ್ತಿದೆ ಕಾರಣ  ಅಜ್ಞಾನದ ಸ್ವಾರ್ಥಪೂರ್ಣ ರಾಜಕೀಯ ಚಿಂತನೆ. ತತ್ವದ ಬದಲು ತಂತ್ರ ಬೆಳೆದರೆ  ಭಿನ್ನಾಭಿಪ್ರಾಯ ದ್ವೇಷ ಅಸೂಯೆ ಅಸತ್ಯ ಅನ್ಯಾಯ ಅಧರ್ಮ ಕ್ಕೆ ದಾರಿಆಗುತ್ತದೆ.ಹೀಗಾಗಿ ಭಗವಾನ್ ಬುದ್ದರು ಸತ್ಯಂ ವದ ಧರ್ಮಂ ಚರ ಎಂದರು.ಆಸೆಯೇ ದು:ಖಕ್ಕೆ ಕಾರಣವೆಂದರು. ಸಾವನ್ನು ಗೆಲ್ಲೋದೆಂದರೆ ಆತ್ಮಜ್ಞಾನವನ್ನು  ಹೊಂದುವುದೆಂದರು...
ಇವುಗಳಲ್ಲಿ  ಎಲ್ಲೂ ರಾಜಕೀಯವಿರಲಿಲ್ಲ. ಆದರೆ ಈಗ ಪ್ರತಿ‌ಮನೆಮನೆಯಲ್ಲೂ ರಾಜಕೀಯ ಪ್ರವೇಶ ಮಾಡುತ್ತಾ ನಾನೇ  ಸರಿ ಎನ್ನುವ ಹಠದಿಂದ ಮನೆಬಿಟ್ಟು ಹೊರದೇಶಕ್ಕೆ ಹೊರರಾಜ್ಯಕ್ಕೆ ಹೊರಟು ಮೂಲದ ಧರ್ಮ ಕರ್ಮ ಕ್ಕೆ ಚ್ಯುತಿ ಬಂದಾಗ ಸರ್ಕಾರ ಕಾರಣವೆಂದರೆ  ಸತ್ಯ ನಮ್ಮ ಸಹಕಾರವೇ ಎಲ್ಲದ್ದಕ್ಕೂ ಕಾರಣ.
ಸಂಸಾರ ಬಿಟ್ಟು ಹೋಗೋದನ್ನು ವೈರಾಗ್ಯವೆಂದರೆ ಇಂದು ತಪ್ಪಾಗಬಹುದು.
ಯಾರೋ ದೊಡ್ಡ ವಜ್ರ ವ್ಯಾಪಾರಿಗಳು ಗಂಡ ಹೆಂಡತಿ ಎಲ್ಲಾ ಆಸ್ತಿ ಕೊಟ್ಟು ಸಂನ್ಯಾಸ ಸ್ವೀಕಾರ ಮಾಡಿದರೆಂದು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಅಷ್ಟೊಂದು  ಆಸ್ತಿ ಯಾರ ಕೈ ಸೇರುವುದೋ ಅವರು ಅದನ್ನು ಹೇಗೆ ಬಳಸುವರೋ ನಂತರ  ಅದರಿಂದ ಸಮಾಜ ಹೇಗೆಬದಲಾಗುವುದೋ ಯಾರಿಗೂ ಭವಿಷ್ಯದ. ಚಿಂತೆಯಿಲ್ಲ. ಒಟ್ಟಿನಲ್ಲಿ ಸಂನ್ಯಾಸ ಸ್ವೀಕಾರ ಇಂದು ಬಹಳ ಸುಲಭ. ಅದಕ್ಕಾಗಿ ಆತ್ಮಜ್ಞಾನ ಅಗತ್ಯವಿದೆ. ವೈರಾಗ್ಯವೆಂದರೆ ಕೇವಲ ಸಂಸಾರ ಬಿಟ್ಟು ಕಾವಿ ಧರಿಸೋದಲ್ಲ. ಅಂದಿನ ಸಂನ್ಯಾಸಿಗಳಿಗೂ ಈಗಿನವರಿಗೂ ವ್ಯತ್ಯಾಸವಿದೆ. ಹಾಗೆ ಯೋಗಿಗಳಿಗೂ ಸಂನ್ಯಾಸಿಗಳಿಗೂ ವ್ಯತ್ಯಾಸವಿದೆ. ಶ್ರೀ ಕೃಷ್ಣ ಪರಮಾತ್ಮ ಮಹಾಯೋಗಿ. ಸಂಸಾರದ ಸಂಪೂರ್ಣ ಅರಿವಿದ್ದರೂ ಸಂನ್ಯಾಸಿಯಂತೆ  ವೈರಾಗ್ಯದಲ್ಲಿ ಬದುಕೋದೆ ಮಹಾಯೋಗಿಗಳ ಲಕ್ಷಣ.
ಸಂಸಾರಕ್ಕೆ ಇಳಿಯದೆ ಅಥವಾ ಸಂಸಾರಸಾಗರದಲ್ಲಿ ಈಜಲಾಗದೆ  ಮನೆಬಿಟ್ಟು  ಆಶ್ರಮ ಸೇರುವುದು ಸುಲಭ.ಇದಕ್ಕೆ ಹಣವಿದ್ದರೆ ಸಮಾಜ ಒಪ್ಪುತ್ತದೆ. ಹಣದಿಂದ ಬುದ್ದರಾಗೋದಿಲ್ಲ. ಹೀಗಾಗಿ ಪ್ರಭುದ್ದತೆಯನ್ನು  ನಂಬಿ ಕೆಟ್ಟವರು ಇದ್ದಾರೆ. ಬುದ್ಧರನ್ನು‌ನಂಬಿ ನಡೆದವರಿದ್ದಾರೆ. 
ಪ್ರಭುದ್ದತೆ ವಿಜ್ಞಾನ‌ಜಗತ್ತನ್ನು ನಡೆಸಿದರೆ ಬುದ್ದ ರು ಅಧ್ಯಾತ್ಮ ಜಗತ್ತಿನ ಶಕ್ತಿ. 
ಮಾನವನ ಚಿಂತನೆಗಳು ಬದಲಾಗುತ್ತಲೇ ಇರುತ್ತದೆ. ಸಂನ್ಯಾಸಿ  ರಾಜಕೀಯ ನಡೆಸಲಾಗದು, ರಾಜಕೀಯಕ್ಕೆ ಇಳಿದವರು ಕೊನೆಯಲ್ಲಿ ಜ್ಞಾನೋದಯವಾಗಿ ಸಂನ್ಯಾಸಿಯಾಗಲೂಬಹುದು. ಯಾರಿಗೆ ಯಾವ ರೀತಿಯಲ್ಲಿ ಭಗವಂತ ಬುದ್ದಿ ನೀಡುವನೋ ಹಾಗೆ  ಜೀವನ ನಡೆಯುತ್ತದೆ.
ಇದನ್ನು ಈಗಲೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣಬಹುದು. ಹಾಗಾಗಿ‌ಬದಲಾವಣೆ‌ಜಗದ ನಿಯಮ.
ಬಡವ ಶ್ರೀಮಂತ ನಾದರೆ  ಸಂತೋಷಪಡುವ‌ ಜನ, ಶ್ರೀಮಂತ ಬಡವನಾದರೂ ಸಂತೋಷಪಡುವರು.ಕಾರಣ ಅವರವರ ಶ್ರಮದ ಫಲವಷ್ಟೆ. ಇದು ಜ್ಞಾನದಿಂದ ಆದರೆ ಉತ್ತಮ.
ಬುದ್ದನನ್ನು ಶರಣ ದಾಸ ಸಂತ ಸಂನ್ಯಾಸಿಗಳನ್ನು ಬಡವರೆಂದು ಕಾಣುವುದೇ ಅಜ್ಞಾನ. ಅಜ್ಞಾನಕ್ಕಿಂತ ದೊಡ್ಡ ಬಡತನ ಯಾವುದಿಲ್ಲ ಎನ್ನುವರು  ಜ್ಞಾನಿಗಳು. ಇದಕ್ಕಾಗಿ ಶ್ರಮಪಟ್ಟು ಜ್ಞಾನದೆಡೆಗೆ ಎಲ್ಲಾ ಅಧಿಕಾರ ಬಿಟ್ಟು ನಡೆದಿದ್ದರು. ಅಗೋಚರ ಶಕ್ತಿಯ ಹಿಡಿತದಲ್ಲಿರುವ ಮಾನವನಿಗೆ  ಅಂದರೆ ನಮಗೆ ನಮ್ಮ ಭವಿಷ್ಯ ತಿಳಿದಿರದು.
ಬೇರೆಯವರೆ ತಿಳಿಸಬೇಕು.ವೈದ್ಯರಿಗೆ ರೋಗಬಂದರೆ ಅವರ ಔಷಧಿಯಿಂದ ಗುಣವಾಗದು. ಅಂದರೆ ಪರಮಾತ್ಮ ಒಳಗೇ ಇದ್ದರೂ ಹೊರಗಿನವರ ಮೂಲಕವೇ ನಮ್ಮ ಕಣ್ಣಿಗೆ ಕಾಣೋದು. ಕಾಣಲು ಬೇಕಾದ ಮೂರನೆಯ ಕಣ್ಣು ಒಳಗೆ ತೆರೆದಿರಬೇಕಷ್ಟೆ.
ಇಂದಿನ ಸರ್ಕಾರಗಳು ಜನರ ಬಡತನ ಹೆಚ್ಚಿಸಿ ಸಾಲ ಸೌಲಭ್ಯಗಳನ್ನು  ಭಾಗ್ಯೋದಯಗಳನ್ನು  ಕೊಡುತ್ತಾಬಿಕ್ಷುಗಳ  ದೇಶವನ್ನು  ಬಿಕ್ಷುಕರ ದೇಶ ಮಾಡಿದರೂ ಯಾರೂ  ಮಾತನಾಡುವಂತಿಲ್ಲ.ಇಲ್ಲಿ ಪಾಲುದಾರರಾದ ಪ್ರಜೆಗಳಿಗೆ  ವಿರೋಧಿಸುವ. ಅಧಿಕಾರವಿಲ್ಲ. ಅಧಿಕಾರ  ಕೊಟ್ಟಿರೋದೆ ನಾವಾದಾಗ  ಪ್ರಶ್ನೆ ಮಾಡುವ ಹಾಗಿಲ್ಲ.. 
ಬೀಷ್ಮಾಚಾರ್ಯರಂತೆ   ದೇಶದ ಉಪ್ಪಿನ ಋಣ  ತೀರಿಸಲು ನಾವು ಭ್ರಷ್ಟರಿಂದ ದೂರವಿದ್ದರೆ ಸಾಧ್ಯ. ದುರ್ಯೋಧನನ ವಶದಲ್ಲಿ ಇದ್ದ ಮಹಾತ್ಮರಾದ ಬೀಷ್ಮರಿಗೂ ಅಂದು ಅನ್ಯಾಯದ ವಿರುದ್ದ ನಿಲ್ಲಲಾಗದ ಧರ್ಮ ಸಂಕಟವಿತ್ತು.  ಈಗಲೂ ಎಷ್ಟೋ  ದೇಶ ಭಕ್ತರಿಗೆ ಗುರುಹಿರಿಯರಿಗೆ ಸತ್ಯ ತಿಳಿದೂ  ಹೇಳಲಾಗದವರಿದ್ದಾರೆ.ಅದಕ್ಕೆ ದೇಶ ಹೀಗಿದೆ.
 ಬುದ್ದರಾಗಬೇಕೋ ಪ್ರಭುದ್ದರಾಗಬೇಕೋ? ಮುಗ್ದತೆ ಹಣ ಕೊಟ್ಟು ಬರೋದಿಲ್ಲ. ದೇವರಿಗೆ‌ಮುಗ್ದ ಮನಸ್ಸುಗಳು ಪ್ರಿಯ. ಅದು ಮಕ್ಕಳೊಳಗಿರುತ್ತದೆ. ಅದನ್ನರಿತು ದೈವತ್ವದೆಡೆಗೆ ನಡೆಸೋದೆ  ನಿಜವಾದ ಪೋಷಕರ ಧರ್ಮ ವಾಗಿತ್ತು.‌ ಪ್ರಯತ್ನಪಟ್ಟರೆ  ಸಾಧ್ಯವಿದೆ.ನಿಧಾನವೇ ಪ್ರಧಾನ.
ನಮ್ಮ ಪ್ರಧಾನಮಂತ್ರಿಗಳಾಗಿರುವವರು‌  ದೇಶಕ್ಕಾಗಿ  ಸೇವೆ ಮಾಡುತ್ತಾ  ಮುಂದೆ ಬಂದವರು. ಅವರ ಹಿಂದೆ ಸಾಕಷ್ಟು ಕೈಗಳು ಕೆಲಸಮಾಡಿವೆ ಆದರೂ ಕಾಣೋದಿಲ್ಲ. ಹಾಗೆಯೇ ಭಗವಂತ ಹಿಂದೆ ಮುಂದೆ ಇದ್ದರೂ ನಮಗೆ ಕಾಣೋದಿಲ್ಲ ಎಂದರೆ ಸತ್ಯವಲ್ಲ. ನಮ್ಮ ಧರ್ಮ ಕರ್ಮ ದ ಬಗ್ಗೆ ನಮಗೆ ಅರಿವಿದ್ದರೆ  ಸಾಕು  ಬುದ್ದ ಒಳಗೇ ಇದ್ದು ಕಾಣಬಹುದು.

No comments:

Post a Comment