ಸಾಲವೇ ಶೂಲ ಸರ್ಕಾರವೆ ಇದರಮೂಲ.ಸರ್ಕಾರ ಎಂದರೆ ಸಹಕಾರವೆಂದರ್ಥ. ಪ್ರಜೆಗಳ ಸಹಕಾರವಿಲ್ಲದೆ ಯಾವ ಪಕ್ಷವೂ ಬೆಳೆದಿಲ್ಲ ಬೆಳೆಯೋದಿಲ್ಲ.ದೇಶವನ್ನೇ ಸಾಲಕ್ಕೆ ತಳ್ಳಿ ಸರ್ಕಾರ ನಡೆಸಿದರೆ ಇದು ಪ್ರಗತಿಯೇ ಅಧೋಗತಿಯೆ?
ಎಷ್ಟೋ ಮುಗ್ದ ಜನರಿಗೆ ಅನಿಸಬಹುದು.ಯಾಕೆ ಹೆಚ್ಚು ಸಾಲ ಸೌಲಭ್ಯ ಉಚಿತ ವಾಗಿ ಕೊಡುವ ಸರ್ಕಾರದ ವಿರುದ್ದ ಜನ ನಿಂತು ಹೋರಾಡುತ್ತಾರೆ. ಇದರಿಂದಾಗಿ ನಮ್ಮ ಜೀವನ ಸುಖಮಯವಾಗಿ ಸಂತೋಷವಾಗಿರುವಾಗ ಇವರಿಗ್ಯಾಕೆ ಕಷ್ಟ ಎಂದು. ನಿಜ ಕಣ್ಣಿಗೆ ಕಾಣುವ ಈ ಸುಖದ ಹಿಂದೆ ಸಾಲ ಎನ್ನುವ ಶೂಲವೂ ಇರೋವಾಗ. ಅದನ್ನು ಪಡೆದವರ ಜೀವನದಲ್ಲಿ ನೆಮ್ಮದಿ ತೃಪ್ತಿ ಶಾಂತಿ ಎಷ್ಟರ ಮಟ್ಟಿಗೆ ಇರುವುದೆನ್ನುವ ಬಗ್ಗೆ ಚಿಂತನೆ ನೆಡೆಸುವವರು ವಿರಳ. ಇದರ ಜೊತೆಗೆ ಬೆಳೆದಿರುವ ಪರಾವಲಂಬನೆಯಿಂದ ಎಷ್ಟೋ ಕುಟುಂಬಗಳು ಮೂಲದಿಂದ ದೂರವಾಗಿ ಅತಂತ್ರಸ್ಥಿತಿಗೆ ತಲುಪಿರುವ ಸತ್ಯವನ್ನು ಯಾವ ಮಧ್ಯವರ್ತಿಗಳು ಮಾಧ್ಯಮಗಳು ಜನರಿಗೆ ತಿಳಿಸದೆ ತೋರಿಸದೆ ಸರ್ಕಾರದ ಹಿಂದೆ ನಡೆಯುವಂತಾಗಿದೆ. ಇಲ್ಲಿ ಸಾಲ ಸೌಲಭ್ಯಗಳನ್ನು ಪಡೆದವರುನಿಜವಾದ ಬಡವರಾಗಿದ್ದು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಕಡೆಗೆ ನಡೆದಿದ್ದರೆ ಸಮಾಜದ ಜೊತೆಗೆ ದೇಶವೂ ಪ್ರಗತಿಯಾಗುತ್ತದೆ. ಆದರೆ ಯಾವುದೇ ಸಾಲ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯುವಾಗ ಸಾಕಷ್ಟು ಮಧ್ಯವರ್ತಿಗಳ ಸಹಕಾರ ಸಹಾಯ ಬೇಕಾಗುತ್ತದೆ.ಮುಗ್ಧ ಜನರನ್ನು ತಮ್ಮ ವಶಪಡಿಸಿಕೊಂಡು ಅವರಿಗೆ ಸಿಗುವ ಉಚಿತ ಯೋಜನೆಗಳ ಪಾಲಿನಲ್ಲಿ ತಮ್ಮ ಪಾಲನ್ನು ಇಟ್ಟುಕೊಂಡು ನುಂಗಿ ನೀರುಕುಡಿಯುವ ಭ್ರಷ್ಟರು ಕಣ್ಣಿಗೆ ಕಾಣದೆ ಸಾಲದ ಸಂಪೂರ್ಣ ಹೊರೆ ಬಡವನಮೇಲೇ ಬಿದ್ದಾಗ ತೀರಿಸಲಾಗದೆ ಆತ್ಮಹತ್ಯೆ ಯಂತಹಮಹಾಪಾಪಕ್ಕೆ ಬಲಿಯಾದರೆ ನಷ್ಟ ಕುಟುಂಬದವರಿಗೇ ಎನ್ನುವ ಸತ್ಯ ತಿಳಿದವರು ಸರ್ಕಾರದ ಹಣ ಜನರ ಋಣವೆಂದರಿತು ಆ ಋಣಭಾರದಿಂದ ಬಡವನ ಜೀವನಹಾಳಾಗಬಾರದೆನ್ನುವುದ್ದೇಶದಲ್ಲಿ ಅನಾವಶ್ಯಕವಾಗಿ ಸಾಲ ಸೌಲಭ್ಯಗಳಿಗೆ ಬೇಡೋದು ನೀಡೋದುತಪ್ಪುಎಂದುತವಿರೋಧಿಸುವರು.
ಏನೇ ಆಗಲಿ ಮಧ್ಯವರ್ತಿಗಳು ಭ್ರಷ್ಟಚಾರಿಗಳು ಇದರಲ್ಲಿ ಪಾಲುದಾರ ರಾದರೆ ಮೇಲಿರುವ ಭಗವಂತನಿಗೆ ಕಾಣೋದಿಲ್ಲವೆ?ತಮ್ಮ ಶ್ರಮದಿಂದ ಗಳಿಸಿದಹಣವೇ ಇರೋದಿಲ್ಲ.ಇನ್ನು ಯಾರಿಗೋ ಸೇರಬೇಕಾದ ಹಣವಾಗಲಿ ಆಸ್ತಿ ಅಧಿಕಾರ ಸ್ಥಾನವನ್ನು ಅಸತ್ಯ ಅನ್ಯಾಯ ಅಧರ್ಮದಿಂದ ಪಡೆದರೆ ಅದಕ್ಕೆ ತಕ್ಕಂತೆ ಪ್ರತಿಫಲ ಅನುಭವಿಸೋದು ಪಡೆದವರೆ ಜೊತೆಗೆ ಅವರ ಮಕ್ಕಳು ಮೊಮ್ಮಕ್ಕಳೂ ಅದರ ಸಾಲ ತೀರಿಸಲೇಬೇಕೆನ್ನುವುದು ಕರ್ಮ ಸಿದ್ದಾಂತ.
ಸಾಲವೆಂದರೆ ಋಣಕರ್ಮ ಎಂದರೆ ಕೆಲಸ. ಭೂಮಿಗೆ ಬಂದ ಪ್ರತಿಯೊಬ್ಬರ ಸಾಲ ತೀರಿಸಲು ಸತ್ಕರ್ಮಸ್ವಧರ್ಮ ದಿಂದ ಸಾಧ್ಯವೆನ್ನುವ ಅಧ್ಯಾತ್ಮ ಚಿಂತಕರು ಪಾಲಿಗೆ ಬಂದದ್ದು ಪಂಚಾಮೃತವೆಂದರು.
ಕನಕಧಾರ ಸ್ತೋತ್ರ ರಚನೆ ಮಾಡಿ ಬಡವನ ಬಡತನ ನಿವಾರಣೆ ಮಾಡಿದ ಶ್ರೀ ಶಂಕರಾಚಾರ್ಯರಂತಹ ಮಹಾಗುರುಗಳು ಹಾಗೆ ಧನಕನಕವನ್ನು ದಾನ ಮಾಡಿ ಪರಮಾತ್ಮನ ದಾಸರಾದ ಕನಕದಾಸರನ್ನು ಮಹಾತ್ಮರು ಎಂದು ಪೂಜಿಸುವ ನಮಗೆ ಹಣಕ್ಕಾಗಿ ಜ್ಞಾನವನ್ನು ದುರ್ಭಳಕೆ ಮಾಡಬಾರದೆನ್ನುವ ಸಾಮಾನ್ಯಜ್ಞಾನವಿದ್ದರೆ ಸರ್ಕಾರಗಳನ್ನು ಸರಿಯಾಗಿ ನಡೆಸಿಕೊಂಡು ದೇಶದ ಸಾಲ ತೀರಿಸುವಷ್ಟು ಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಸರ್ಕಾರದ ಶಾಲಾಕಾಲೇಜ್ ಗಳಲ್ಲಿ ಉತ್ತಮವಾದ ಜ್ಞಾನದ ವಿಷಯವುಳ್ಳ ಪಠ್ಯವಿರಬೇಕು ಶಿಕ್ಷಕರಿರಬೇಕು.ಪೋಷಕರ ಸಹಕಾರ ಬೇಕು. ಪೋಷಕರಿಗೇ ಸತ್ಯದ ಅರಿವಿಲ್ಲವಾದಾಗ ಮಕ್ಕಳಿಗೆ ಅರಿವು ಮೂಡಿಸಿ ಜನಜಾಗೃತರಾಗುವಂತಹ ಕಾರ್ಯಕ್ರಮ ಧಾರ್ಮಿಕ ವರ್ಗ ಮಾಡಬೇಕು.ಧಾರ್ಮಿಕ ವರ್ಗ ವೇ ಸರ್ಕಾರದ ಹಿಂದೆ ನಡೆದಾಗಲೇ ಬಡತನಹೆಚ್ಚುವುದು. ಭಾರತದಲ್ಲಿ ಸಾಕಷ್ಟು ಜ್ಞಾನಿಗಳಿರುವರು. ಆದರೆ ಅವರ ಜ್ಞಾನ ಗುರುತಿಸಿ ಬೆಳೆಸುವ ಸಹಕಾರವಿಲ್ಲದೆ ಸರ್ಕಾರ ಕೊಡುವ ಸಾಲ ಸೌಲಭ್ಯಗಳು ಉಚಿತ ಯೋಜನೆಯ ಫಲಾನುಭವಿಗಳು ಬೆಳೆದು ದೇಶ ಸಾಲದಲ್ಲಿದೆ. ಇದನ್ನು ತೀರಿಸಲು ಈಗಲೂ ಜನರಲ್ಲಿ ಅಲ್ಪ ಸ್ವಲ್ಪ ಅರಿವಿದ್ದರೂ ಸದ್ಬಳಕೆಯಾಗದಿರೋದು ದುರಂತಕ್ಕೆ ಕಾರಣ.
ಸಾಲಮಾಡಿ ಕೆಟ್ಟ,ಸಾಲವೇ ಶೂಲ ಎಂದಿರುವರು ಅರಿತವರು.
ಭೂಮಿಯ ಸಾಲ ತೀರೋದು ಸೇವೆಯಿಂದ ಅದೂ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ದಾನ ಧರ್ಮದಿಂದ. ದೇಶದ ಸಾಲ ತೀರಿಸಲು ಮತದಾನದಿಂದ ಸಾಧ್ಯವೆಂದರೆ ಇದರಲ್ಲಿ ಪ್ರಜೆಗಳಮತದಾನ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಇರಬೇಕಿದೆ .ಈಗ ಹೇಗಿದೆ? ನಿಜವಾದ ಜ್ಞಾನಿಗಳು ದೇಶಭಕ್ತರು ದೇವರ ಭಕ್ತರು ಈ ರೀತಿಯಲ್ಲಿ ಚಿಂತನೆ ನಡೆಸಿದರೆ ಹೊರಗಿನ ರಾಜಕೀಯ ನಮ್ಮ ಸಹಕಾರದಿಂದ ಎತ್ತ ಸಾಗಿದೆ ಎಂದು ತಿಳಿಯಬಹುದು.
ಅಮಾಯಕರನ್ನು ಮುಗ್ದ ಮಕ್ಕಳು ಮಹಿಳೆಯರನ್ನು ಹೊರಗೆ ಎಳೆದುಕೊಂಡು ಪಕ್ಷಕಟ್ಟಿ ಅಧಿಕಾರ ಪಡೆದರೆ ಜನರಲ್ಲಿ ಜ್ಞಾನ ಬರೋದಿಲ್ಲ.ಬದಲಾಗಿ ಅಜ್ಞಾನ ಮಿತಿಮೀರಿ ಸಂಸಾರದಲ್ಲಿ ಸಮಸ್ಯೆ ಗಳು ಮಿತಿಮೀರುತ್ತದೆ.
ಹಣಕೊಟ್ಟರೆ ಮಾತ್ರ ಮತದಾನ ಎನ್ನುವಮಂದಿಯಿಂದ ದೇಶ ಉದ್ದಾರವಾಗುವುದೆ? ಅಧಿಕಾರ ಪಡೆಯಲು ಭ್ರಷ್ಟಚಾರದ ಹಣಬಳಸಿದರೆ ಭ್ರಷ್ಟರ ಹಣದಲ್ಲಿ ಜನಜೀವನ. ಒಟ್ಟಿನಲ್ಲಿ ಕೆರೆಯನೀರನು ಕೆರೆಗೆ ಚೆಲ್ಲಿ ಎಂದಿದ್ದು ಪರಮಾತ್ಮನ ಹಣವನ್ನು ಪರಮಾತ್ಮನಿಗೆ ಕೊಡೋದು ಆಗಿತ್ತು.ಇಂದು ನಮ್ಮವರ ದುಡಿಮೆಯ ಹಣವನ್ನು ಪರಕೀಯರಿಗೆ ಕೊಟ್ಟು ಪರಕೀಯರ ಋಣವನ್ನು ನಮ್ಮವರಿಗೆ ಹಂಚಿದರೆ ಸಮಸ್ಯೆಗೆ ಪರಿಹಾರ ಸಿಗದಲ್ಲವೆ?
ನಮ್ಮ ಜೀವ ಸಾಕಿಕೊಳ್ಳಲು ಪರಕೀಯರ ಸಹಾಯ ಹಸ್ತಕ್ಕೆ ಬದಲಾಗಿ ಪರಮಾತ್ಮನ ಕಡೆಗೆ ಧರ್ಮ ಕರ್ಮ ವಿದ್ದರೆ ಜೀವನ್ಮುಕ್ತಿ .ಇದಕ್ಕೆ ರಾಜಯೋಗದ ಶಿಕ್ಷಣವಿರಬೇಕಿತ್ತು.ಶಿಕ್ಷಣವೇ ಪರಕೀಯರ ರಾಜಕೀಯದೆಡೆಗೆ ನಡೆದು ಮಕ್ಕಳು ಮಹಿಳೆಯರ ಮೇಲೂ ಸಾಲದ ಹೊರೆ ಹೆಚ್ಚಾದಾಗ ಸಾಲ ತೀರಿಸಲು ದುಡಿಯಲೇ ಬೇಕು. ಮನೆಯೊಳಗೆ ಸಾಧ್ಯವಾಗದಿದ್ದರೆ ಹೊರಗೆ ನಡೆಯಲೇಬೇಕು.ದೇಶದೊಳಗೆ ಉದ್ಯೋಗ ಸಿಗದಿದ್ದರೆ ವಿದೇಶಕ್ಕೆ ಹೋಗಿ ದುಡಿಯಬೇಕು.ಒಟ್ಟಿನಲ್ಲಿ ನಮ್ಮ ಸಾಲ ನಾವೇ ಕಷ್ಟಪಟ್ಟು ಇಷ್ಟಪಟ್ಟು ತೀರಿಸುವುದೇ ಧರ್ಮ.ಇದನ್ನು ಸರ್ಕಾರ ಮನ್ನಾ ಮಾಡಿದರೂ ಮೇಲಿರುವಪರಮಾತ್ಮನಲೆಕ್ಕಾಚಾರದಲ್ಲಿ ಮನ್ನಾ ಆಗಿರದ ಕಾರಣ ಇನ್ನೊಂದು ಜನ್ಮದಲ್ಲಿ ಕಷ್ಟಪಟ್ಟು ಧರ್ಮ ದ ಹಾದಿ ಹಿಡಿದು ತೀರಿಸಲೇಬೇಕೆನ್ನುತ್ತದೆ ಸನಾತನಧರ್ಮದ ಕರ್ಮ ಸಿದ್ದಾಂತ. ಇದನ್ನರಿತ ಮಹಾತ್ಮರುಗಳು ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನನಾಮಒಂದಿದ್ದರೆ ಸಾಕೋ ಎಂದಿದ್ದಾರೆ.
ತಿಳಿದವರಿಗೆ ಇದರರ್ಥ ವಾಗುತ್ತದೆ.ಇತ್ತೀಚೆಗೆ ಹಣವಿದ್ದು ಆಸ್ತಿ ಇದ್ದವರೂ ಸರ್ಕಾರದ ಉಚಿತಯೋಜನೆಗಳಿಗೆ ಕೈ ಒಡ್ಡಿ ತಮ್ಮ ಸ್ವಾರ್ಥ ಸುಖಕ್ಕಾಗಿ ಸಹಕರಿಸಿರುವುದು ದುರಂತಕ್ಕೆ ಕಾರಣ. ನಿಜವಾದ ಬಡವರು ಸ್ವಾವಲಂಬಿ ಯಾಗಿ ಸ್ವತಂತ್ರ ವಾಗಿದ್ದರೂ ಅವರನ್ನು ಬಡವರು ದೀನರು ಹಿಂದುಳಿದವರೆನ್ನುವ ಪಟ್ಟಿಗೆ ಸೇರಿಸಿ ಅವರ ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು ರಾಜಕೀಯ ನಡೆಸಿರೋದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ತಡೆಯಲು ಕಷ್ಟ.ತಿಳಿದು ಸರಿಮಾರ್ಗ ಹಿಡಿಯಲು ಸಾಧ್ಯವಾದವರು ಪ್ರಯತ್ನಪಟ್ಟರೆ ಬದಲಾವಣೆ ಸಾಧ್ಯವಿದೆ.ಹೆಚ್ಚು ಕೊಡುವವರು ಉತ್ತಮರೆನ್ನುವುದೇ ಅಜ್ಞಾನ. ಇಲ್ಲಿ ಕೊಡುವವನು ಯಾರು? ಪಡೆಯುವವನು ಯಾರು?
ಮೂಲಭೂತ ಸೌಕರ್ಯ ಕ್ಕೆ ಕೊರತೆಯಿಲ್ಲವಾದರೆ ಕೊಡುವ ಅಗತ್ಯವಿಲ್ಲ. ಅತಿಯಾಗಿ ಕೊಟ್ಟರೆ ದಾನವರಾಗುವರು.
ಪುರಾಣದಲ್ಲಿ ಹೇಗೆ ದಾನಶೂರ ಕರ್ಣನ ಸ್ಥಿತಿ ಹಾಗೆ ಬಲಿಚಕ್ರವರ್ತಿಯ ಸ್ಥಿತಿ ಆಗುವುದೋ ಹಾಗೇ ಪಾತಾಳಕ್ಕೆ ಪರಮಾತ್ಮ ಕಳಿಸುವನು. ಸತ್ಪಾತ್ರರಿಗೆ ಕೊಡುವ ದಾನ ನಿಜವಾದ ದಾನ ಧರ್ಮ ಕಾರ್ಯವೆನಿಸುತ್ತದೆ. ಸರ್ಕಾರದ ಹಣ ಜನರ ಋಣವಾಗಿದೆ. ಯಾವ ರಾಜಕಾರಣಿಯೂ ಕಷ್ಟಪಟ್ಟು ದುಡಿದುಗಳಿಸಿದ ಹಣವಲ್ಲ ಎನ್ನುವ ಸತ್ಯ ಜನರಿಗೆ ತಿಳಿಯುವುದು ಅಗತ್ಯ.ಆದರೆ ತಿಳಿಸುವವರು ಯಾರು? ತಿಳಿಸುವ ಅಧಿಕಾರ ಯಾರಿಗಿದೆ? ನಿಜವಾದ ಗುರುಹಿರಿಯರು ಶಿಕ್ಷಕರು ಜ್ಞಾನಿಗಳು ಸಾಹಿತಿಗಳು ಇನ್ನಿತರ ಧಾರ್ಮಿಕ ವರ್ಗ ಈ ಕೆಲಸ ಮಾಡಿದ್ದರೆ ಭಾರತದಲ್ಲಿ ಬಡವರಿರುತ್ತಿರಲಿಲ್ಲ. ಕಾಲದ ಪ್ರಭಾವಕ್ಕೆ ಒಳಗಾದವರೆ ಎಲ್ಲರೂ ಕಲಿಯಬಾರದನ್ನು ಕಲಿತು ಕಲಿಯಬೇಕಾದ್ದನ್ನು ತೊರೆದು ಸಾಲದ ಹಿಂದೆ ನಡೆದಿರುವರು. ನಾವೆಲ್ಲರೂ ಸಾಲಗಾರರೆ ಅದನ್ನು ತೀರಿಸಲು ರಾಜಕೀಯದ ಹಣದಿಂದ ಕಷ್ಟ.ರಾಜಯೋಗದ. ಜ್ಞಾನದಿಂದ ಸಾಧ್ಯವಿದೆ ಎಂದಿದ್ದಾರೆ ಮಹಾತ್ಮರುಗಳು. ಎಲ್ಲಿರುವರು ಮಹಾತ್ಮರುಗಳು?
No comments:
Post a Comment