ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, April 3, 2024

ಸದವಕಾಶದ ಕೊರತೆಯೇ ಕೊರಗಿಗೆ ಕಾರಣವೆ?



**ಅಂತಿಮವಾಗಿ ನಾವು ಬಳಸಿಕೊಳ್ಳಲು ಎಡವಿದ ಸದವಕಾಶಗಳ ಬಗ್ಗೆ ಕೊರಗುವುದೊಂದೇ ಜೀವನದಲ್ಲಿ  ಉಳಿದಿರುವ ಏಕೈಕ ದಾರಿಯಾಗಿರುತ್ತದೆ.**

ಈ ವಿಚಾರವನ್ನು ಭೌತಿಕದಲ್ಲಿ ಒಪ್ಪಿಕೊಳ್ಳಬಹುದು.ಆದರೆ ಅಧ್ಯಾತ್ಮ ದಲ್ಲಿ  ಸದವಕಾಶ ಸಿಗುವುದೇ ಅಪರೂಪ. ತನ್ನ ತಾನರಿತು ನಡೆಯೋ ಅವಕಾಶ ಸಿಗೋದು ಅಪರೂಪ. ಅವಕಾಶ ಸಿಕ್ಕಿದಾಗಲೂ ಸತ್ಯ ಶೋಧನೆ ಮಾಡದೆ ಬಳಸಿದರೆ ಕಷ್ಟ ನಷ್ಟದ ಸರಪಳಿಯಲ್ಲಿ ಬಂಧನವಾಗುತ್ತದೆ ಜೀವನ. ಜೀವನದಲ್ಲಿ ಕಷ್ಟ ನಷ್ಟಗಳಾದಾಗ  ಹಿಂದಿರುಗಿ  ಅದೇ ಅವಕಾಶಕ್ಕಾಗಿ  ಕೂತವರಿಗೆ  ತಿರುಗಿ ಅವಕಾಶ ಸಿಕ್ಕಿದಾಗ ಸತ್ಯದ ಅರಿವಿರುತ್ತದೆ ಆಗ ಕೊರಗಿರುವುದಿಲ್ಲ. ಅಂದರೆ ನಮ್ಮ ಉತ್ತಮ ಪ್ರಯತ್ನಕ್ಕೆ ಅವಕಾಶ ಸಿಕ್ಕಿ ಮುಂದೆ ಹೋದಾಗ ಆತ್ಮತೃಪ್ತಿ ಸಿಗೋದಾದರೆ ಅಂತಹ ಸದವಕಾಶ ತಪ್ಪಿಸಿಕೊಳ್ಳಬಾರದು.ಕೆಲವೊಮ್ಮೆ ತಪ್ಪಿ ಹೋದರೂ  ಮತ್ತೆ ಸಿಗುವ ನಂಬಿಕೆಯಿದ್ದರೆ  ಕೊರಗುವುದರಿಂದ ಮುಕ್ತಿ ಸಿಗುತ್ತದೆ ಅನಿಸುತ್ತದೆ.
ಇಲ್ಲಿ ಒಂದು ಅನುಭವದಿಂದ  ವಿಚಾರ ತಿಳಿಸುವುದಾದರೆ  ನನಗೆ  ಮೊದಲಿನಿಂದಲೂ  ಸತ್ಯ ಯಾವುದು  ಯಾಕಿಷ್ಟು ದು:ಖ  ಜೀವನದ ಉದ್ದೇಶ ಇವೆಲ್ಲದರ ಬಗ್ಗೆ ಆಸಕ್ತಿಯಿದ್ದರೂ  ತಿಳಿಯುವ  ಸದವಕಾಶವಿರಲಿಲ್ಲ. ಎಲ್ಲೋ ಹೇಳಿ ಕೇಳಿ ನೋಡಿ ತಿಳಿದು ಮುಂದೆ ಬಂದಾಗ ಪ್ರಶ್ನೆ ಮಾಡುವ ಅವಕಾಶವಿರಲಿಲ್ಲ. ಕೊನೆಗೆ  ಪ್ರಶ್ನೆಗೆ ಉತ್ತರ‌ಹೊರಗೆ ಹುಡುಕಿ ಸುಸ್ತಾಗಿ ಸಿಗದಿದ್ದಾಗ ಉತ್ತರ ಒಳಗೆ ಸಿಕ್ಕಿತು. ಹಾಗಂತ ಹೊರಗಿನ ಪ್ರಯತ್ನ ವ್ಯರ್ಥ ವಾಗಲಿಲ್ಲ.ಸದವಕಾಶಗಳು ಪ್ರತಿಕ್ಷಣ  ನಮ್ಮೊಂದಿಗಿದ್ದರೂ  ನಾನು ಗಮನಿಸದಿರೋದಕ್ಕೆ ಕಾರಣವಿರುತ್ತದೆ.  ಹೀಗೇ ಎಲ್ಲರಿಗೂ  ಆಗಿರುತ್ತದೆ. ಕೆಲವರಿಗೆ ಪ್ರಾರಂಭದಲ್ಲೇ ಅವಕಾಶ ಸಿಕ್ಕಿದ್ದರೆ ಕೆಲವರಿಗೆ ಜೀವನದ‌ಮಧ್ಯೆ ಭಾಗದಲ್ಲಿ ಸಿಗಬಹುದು ಕೆಲವರಿಗೆ ಕೊನೆಯಲ್ಲಿ ಸಿಗಬಹುದು. ಅವಕಾಶವು ನಮ್ಮ ಜ್ಞಾನದ ಚೌಕಟ್ಟಿನಲ್ಲಿದ್ದರೆ ಬಳಸಿಕೊಳ್ಳುವುದು ಸುಲಭ. ಹಾಗೆ ಅಜ್ಞಾನದಲ್ಲಿಯೂ ಅವಕಾಶವಿರುತ್ತದೆ. ಯಾವುದನ್ನು ಬಳಸಿದರೂ ಬೆಳೆಯುತ್ತದೆ .ಇದರಿಂದ  ಸಮಾಜಕ್ಕಾಗಲಿ ಸಂಸಾರಕ್ಕಾಗಲಿ ಉಪಯೋಗವಿದ್ದರೆ  ಕೊರಗಿನಿಂದ ಹೊರಬರಬಹುದು. ಇಲ್ಲವಾಗಿದ್ದರೆ ಕೊರಗೇ ಹೆಚ್ಚುವುದು.
ಇತ್ತೀಚಿನ ದಿನಗಳಲ್ಲಿ ಹೊರಗೆ ಸಾಧನೆ ಮಾಡುವುದಕ್ಕೆ ಅವಕಾಶವಿದೆ.ಇದರಿಂದ ಒಳಗೇ ನಷ್ಟವಾಗಿ ಕೊರಗುವ‌ ಮೊದಲು  ಯೋಚನೆ ಮಾಡಿ  ಅವಕಾಶ ಬಳಸಿಕೊಳ್ಳುವುದು ಉತ್ತಮ. ಜನ ಮೊದಲು ಹೆಸರು ಹಣ ಮಾಡಿದವರನ್ನು ಎತ್ತಿ ಏಣಿಗೇರಿಸಿ ಕೊನೆಯಲ್ಲಿ ಕೈ ಬಿಡುವುದು ಸಾಮಾನ್ಯವಾದಾಗ  ಎಚ್ಚರದಿಂದ  ಮೇಲೆ ಹತ್ತುವುದು ಅಗತ್ಯವಿದೆ. ಎಷ್ಟೇ ಇದ್ದರೂ ಒಂದಲ್ಲ ಒಂದು ಕೊರಗಿರುತ್ತದೆ. ಹಾಗಂತ  ಕೊರಗಿಲ್ಲದೆ ಬದುಕಲಾಗದು. ಅದಕ್ಕೆ ಇತಿಮಿತಿಯಲ್ಲಿ ಸದವಕಾಶವನ್ನು ಬಳಸುತ್ತಾ  ಅದರೊಂದಿಗೆ ಹೆಜ್ಜೆ ಹಾಕಿದರೆ ಉತ್ತಮ.
ಜೀವನದಲ್ಲಿ ಕಲಿಕೆ ನಿರಂತರವಾಗಿ  ಇರುತ್ತದೆ.ಎಲ್ಲಾ ಕಲಿಕೆಯೂ  ಕೊರತೆಯನ್ನು ನೀಗಿಸುವುದಿಲ್ಲ ಹಾಗಾಗಿ ನಮ್ಮ ಜ್ಞಾನದ ಕೊರತೆಯನ್ನು ನೀಗಿಸುವ ಶಿಕ್ಷಣ ನಮ್ಮ ಕೈ ಮೀರಿ ಹೋದಾಗ ಕೊರಗುವುದು ಸಹಜ. ಇದಕ್ಕೆ ಅವಕಾಶ ಸಿಗೋದು‌ ಅಪರೂಪ. ಸತ್ಯ ಒಂದೇ  ಅಸತ್ಯ ಹಲವು. ಅಸತ್ಯದೆಡೆಗೆ ನಡೆಯೋ ಅವಕಾಶವೂ ಹಲವು ಇದರಿಂದಾಗಿ ಕೊನೆಯಲ್ಲಿ ಕೊರಗುವ‌ಬದಲು ಮೊದಲೇ ಸತ್ಯದ ಕಡೆಗೆ ನಡೆಯೋ ಅವಕಾಶವಿದ್ದರೆ ಧೈರ್ಯವಾಗಿ ನಡೆದರೆ ಕೊರಗು ಕಡಿಮೆಯಾಗುತ್ತದೆ. ಇದಕ್ಕೆ ಸತ್ಯವೇ ದೇವರೆಂದಿರೋದು.
ಕಣ್ಣಿಗೆ  ಕಾಣುವ ಜಗತ್ತು  ತೃಣಮಾತ್ರದ್ದು ಕಾಣದ ಜಗತ್ತು ಕ್ಷಣಮಾತ್ರದಲ್ಲಿ ಕಣ್ಮರೆಯಾಗುತ್ತದೆ ಹಾಗಂತ  ಆ ಕ್ಷಣವನ್ನು ನೆನಪಿಸಿಕೊಂಡು  ಸದವಕಾಶವನ್ನು  ಬಳಸಿಕೊಂಡರೆ  ನಮ್ಮ ಕೊರಗಿನ ಮೂಲ ತಿಳಿಯಬಹುದು.ತಿಳಿದರೂ  ಏನೂ ಮಾಡಲಾಗದಿದ್ದಾಗ‌ಮರೆತು ಬಿಡೋದು ಉತ್ತಮ.ಯಾರೂ ಶಾಶ್ವತವಲ್ಲ ಯಾವುದೂ ಸ್ಥಿರವಲ್ಲವಾದಾಗ ಸದವಕಾಶ ಬಂದರೂ ಸರಿ ಬರದಿದ್ದರೂ ಸರಿ ಎನ್ನಬಹುದು. ಒಳ್ಳೆಯದಕ್ಕೆ ಸಿಗುವ ಅವಕಾಶ ಕೆಟ್ಟದ್ದಕ್ಕೆ ಸಿಕ್ಕರೆ ಕೊರಗುವುದು ನಿಶ್ಚಿತ. ಕೆಲವರಿಗೆ ಉತ್ತಮ ವಿಚಾರಗಳನ್ನು ಪ್ರಚಾರ ಮಾಡುವ ಅವಕಾಶ ಕೊಟ್ಟಿದ್ದರೂ ಮಾಡೋದಿಲ್ಲ .ಕೆಲವರಿಗೆ ಮಾಡುವ‌ಮನಸ್ಸಿದ್ದರೂ ಅವಕಾಶವಿರೋದಿಲ್ಲ. ಹಾಗಂತ ಒಳ್ಳೆಯದಕ್ಕೆ ಕೊರತೆಯಿಲ್ಲ ಒಳ್ಳೆಯವರು ಬೆಳೆಯೋದಿಲ್ಲವಷ್ಟೆ. 
ಶ್ರೇಷ್ಠ ವ್ಯಕ್ತಿತ್ವವುಳ್ಳವರು  ಸರಳವಾಗಿ ಸತ್ಯ ಧರ್ಮ ದಲ್ಲಿ ಶಾಂತಿಯಿಂದ  ಬದುಕುತ್ತಿದ್ದರೆ ಕಂಡವರು ಕಾಣದಂತಿರುವರು.ಅದಕ್ಕೆ ವಿರುದ್ದವಿರುವ ವ್ಯಕ್ತಿಯನ್ನು ಎಲ್ಲಾ ಗಮನಿಸುತ್ತಾ ಮನರಂಜನೆಯ ಜೊತೆಗೆ ತಾವೂ ಹೆಜ್ಜೆ ಹಾಕಿದರೆ ಸದವಕಾಶವೆನ್ನಬಹುದೆ? ನಿಜ ಜೀವನದಲ್ಲಿ ಸಂತೋಷ ಅಗತ್ಯ. ಸಂತೋಷದಿಂದ ಆತ್ಮಸಂತೋಷ ಆತ್ಮಸಂಶೋಧನೆಯೂ ಆಗಬೇಕಿದೆ.ಇದನ್ನು ಅಧ್ಯಾತ್ಮ ವೆಂದರು. ಬಹಳ ವೇಗದಲ್ಲಿ ಬೆಳೆಯುವ ಜಗತ್ತಿನಲ್ಲಿ ಅವಕಾಶಕ್ಕೆ ಕೊರತೆಯಿಲ್ಲ. ಆದರೆ ಅವಕಾಶದ ಹಿಂದಿನ ಗುರಿ ಉದ್ದೇಶ ತಿಳಿದು ಬಳಸುವ ಜ್ಞಾನಕ್ಕೆ ಕೊರತೆಯಿದೆ. ಹೀಗಾಗಿ ಎಲ್ಲಾ ಅವಕಾಶವನ್ನು ಸ್ವಾಗತಿಸಿ ಕೊನೆಗೆ ಹಿಂದಿರುಗಲಾಗದೆ ಕೊರಗಿ ಹೋದವರು ಹೆಚ್ಚಾಗಿದ್ದಾರೆ. 

No comments:

Post a Comment