ಬೇಲಿಯೇ ಎದ್ದು ಹೊಲಮೇಯ್ದರೆ ಕಾಣೋದು ಯಾರು?
ಭಗವಂತನೊಳಗೇ ಅಡಗಿರುವ ಎಲ್ಲಾ ಒಂದೇ ಎನ್ನುವ ಸತ್ಯದಿಂದ ಹಿಡಿದು ಹೊರಟ ಧರ್ಮ ಇಂದು ಬೇರೆ ಬೇರೆ ರೂಪ ಪಡೆದು ತನ್ನ ಅಸ್ತಿತ್ವಕ್ಕೆ ಹೋರಾಟ ನಡೆಸಿದೆ.
ಇದರಲ್ಲಿ ದೇವರು ಮಾನವರು ಅಸುರರು ಎಂದು ಮೂರು ವಿಭಾಗವಿದ್ದರೂ ಕಾಣೋದಕ್ಕೆ ಎಲ್ಲಾ ಮಾನವರೆ. ತನ್ನ ಆತ್ಮರಕ್ಷಣೆಗಾಗಿ ಆತ್ಮಸಾಕ್ಷಿಯ ಕಡೆಗೆ ನಡೆದ ಮಹಾತ್ಮರನ್ನು ದೇವರೆಂದರೆ ಸರಿಯಾಗಬಹುದೆ? ದೇವತೆಗಳಲ್ಲಿಯೂ ಬೇಧವಿದೆ ಎಂದರೆ ಮಾನವನಲ್ಲಿ ಇರುತ್ತದೆ.ಇದೇ ಮುಂದೆ ಅಸುರರ ವಶವಾಗುತ್ತದೆ. ಪುರಾಣ ಇತಿಹಾಸ ಕಾಲದಿಂದಲೂ ನಡೆದುಬಂದ. ಈ ಭೂಮಿಯ ತತ್ವ ಸತ್ಯ ಸತ್ವ ಯುಗಯುಗಕ್ಕೆ ಬದಲಾಗುತ್ತಿದೆ ಇದಕ್ಕೆ ಕಾರಣ ತಂತ್ರದಬಳಕೆ. ಯಾವಾಗ ಸ್ವತಂತ್ರ ವಾಗಿದ್ದ ಸತ್ಯ ಧರ್ಮ ಬಿಟ್ಟು ಮನಸ್ಸು ಹೊರ ಬಂದಿತೋ ಅದು ಮಾಯೆಯ ವಶದಲ್ಲಿ ಅತಂತ್ರಸ್ಥಿತಿಗೆ ತಲುಪಿತು. ಕ್ಷಣಕ್ಷಣವೂ ಮಾಯವಾಗುವ ಕಾಣದ ಆತ್ಮನ ಕಾಣೋದಕ್ಕೆ ಈ ಸತ್ಯ ಹಾಗು ಧರ್ಮ ತತ್ವ ಬೆಳೆದಿದೆ. ಹೀಗಾಗಿ ಯಾರೋ ಒಬ್ಬರಿಂದ ಧರ್ಮ ರಕ್ಚಣೆಯಾಗದು. ಎಲ್ಲರಿಂದಲೂ ಆಗಬೇಕಾದರೆ ಒಗ್ಗಟ್ಟು ಏಕತೆ ಐಕ್ಯತೆಯ ಮಂತ್ರ ಬೇಕು.
ಮಂತ್ರದಿಂದ ಸ್ವತಂತ್ರ ಜ್ಞಾನ ಬೆಳೆದರೆ ತತ್ವಕ್ಕೆ ಬೆಲೆ. ಮಂತ್ರದ ದುರ್ಭಳಕೆ ಆದರೆ ಅತಂತ್ರಸ್ಥಿತಿಗೆ ಧರ್ಮ ತಲುಪುತ್ತದೆ.
ಎಲ್ಲಾ ಕಡೆಯಿಂದ ಧರ್ಮ ರಕ್ಷಣೆ ಮಾಡೋದು ಬಹಳಕಷ್ಟದ. ಕೆಲಸ.ಒಂದು ಸಂಸಾರದ ಒಳಗಿದ್ದಾಗ ನಮ್ಮ ಮೂಲ ಧರ್ಮ ಕರ್ಮದ/ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಕಷ್ಟು ವರ್ಷಗಳು ಬೇಕು.ಒಂದು ದೇಶದೊಳಗೆ ಇದ್ದಾಗಲೂ ಹಾಗೆಇನ್ನು ವಿಶ್ವ ಮಟ್ಟಕ್ಕೆ ಏರಿದಾಗ ಸಂಸಾರ ದೇಶವನ್ನು ಸೇರಿಸಿಕೊಂಡು ಒಂದೇ ಧರ್ಮ ಎಂದವರಿಲ್ಲ. ಹೀಗಾಗಿ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆಯುವುದು ಧರ್ಮ ಎಂದರು. ಆತ್ಮ ಒಂದೇ ಆದರೂ ಪರಮಾತ್ಮನ ಸತ್ಯದೆಡೆಗೆ ಹೊರಟಾಗ ಜೀವಾತ್ಮನಿಗೆ ಸಾಕಷ್ಟು ಧರ್ಮ ಸಂಕಟಗಳು ಎದುರಾಗುತ್ತದೆ. ಇದೇ ಕಾರಣಕ್ಕಾಗಿ ನಮ್ಮ ಹಿಂದಿನ ಮಹಾತ್ಮರು ಕಷ್ಟಪಟ್ಟು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಪರಮಾತ್ಮನ ಸೇವಾಕಾರ್ಯ/ನಡೆಸುತ್ತಾ ಜೀವನ್ಮುಕ್ತರಾಗಿದ್ದಾರೆ.
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎನ್ನುವ ನಾಲ್ಕು ವರ್ಣ ಗಳು ಅವರದೇ ಆದ ಧರ್ಮ ಕರ್ಮವನನುಸರಿಸಿ ಹಿಂದಿನಿಂದಲೂ ಬಂದಿತ್ತು. ಆದರೆ ಇದರನಡುವೆ ಬೆಳೆದ ರಾಜಕೀಯತೆ ತನ್ನ ಸ್ವಾರ್ಥ ಸುಖಕ್ಕಾಗಿ ಮಾಡಿಕೊಂಡ ಬದಲಾವಣೆಗಳಿಂದಾಗಿ ಧರ್ಮ/ಕುಸಿಯುತ್ತಾ ಜಾತಿ ಬೆಳೆಯಿತು. ಜಾತಿಯ ನಡುವಿರುವ ದ್ವೇಷದಿಂದ. ಇನ್ನಷ್ಟು ಅಧರ್ಮ ಅನ್ಯಾಯ ಅಸತ್ಯಗಳು ಸೇರಿಕೊಂಡು ಮನುಕುಲ ತನ್ನ ಅಸ್ತಿತ್ವಕ್ಕೆ ಹೋರಾಟ ಮಾಡುವಂತಾಯಿತು. ಈಗಲೂ ಹೋರಾಟ ನಡೆದಿದೆ ಆದರೆ ಅದರಲ್ಲಿ ಸತ್ಯ ಧರ್ಮ/ಕ್ಕೆ ಸ್ಥಾನಮಾನವಿಲ್ಲದೆ ಅಧರ್ಮ ಅಸತ್ಯವೇ ಗೆದ್ದು ಬೀಗುತ್ತಿವೆ. ಇದಕ್ಕೆ ಕಾರಣವೇ ಕಲಿಕೆಯಲ್ಲಿರುವ ಕಲಬೆರಕೆ. ಸ್ವತಂತ್ರ ಜ್ಞಾನವನ್ನು ಗುರುತಿಸಲಾಗದ ಶಿಕ್ಷಣ ಪದ್ದತಿ. ಯಾರೋ ಹೊರಗಿನವರು ತಿಳಿಸಿದ್ದನ್ನು ತಲೆಗೆ ತುಂಬುವಕೆಲಸದಲ್ಲಿ ನಮ್ಮ ಸ್ವಂತ ಬುದ್ದಿ ಜ್ಞಾನವಿಲ್ಲದೆ ಜೀವನ ಪರರ ವಶವಾಗುತ್ತಿದೆ. ಎಷ್ಟು ಸ್ವಾವಲಂಬನೆ ಎಂದರೂ ಹೊರಜಗತ್ತಿನಲ್ಲಿ ಇದ್ದೇಬದುಕುವಾಗ ಸ್ವಾಭಿಮಾನ ಸರಳ ಜೀವನ, ಸತ್ಯ ಧರ್ಮ ವಿಲ್ಲವಾದರೆ ಅತಂತ್ರಸ್ಥಿತಿಗೆ ಜೀವಾತ್ಮ ತಲುಪಬಹುದಷ್ಟೆ. ತೃಪ್ತಿ ಸಿಗದ ಅತೃಪ್ತ ಆತ್ಮಗಳ ಕುಣಿದಾಟ ಬಡಿದಾಟ ಹೊಡೆದಾಟ ಹೆಚ್ಚಾಗಿದೆ ಎಂದರೆ ಮಾನವನೊಳಗೇ ಇರುವ ಈ ಅಗೋಚರ ಶಕ್ತಿಯನ್ನು ಹೊರಗಣ್ಣಿನಿಂದ ಅರ್ಥ ಮಾಡಿಕೊಳ್ಳಲು ಕಷ್ಟ.ಇದಕ್ಕೆ ಒಳಗಣ್ಣು ತೆರೆಯಬೇಕಿದೆ.ಒಳಗಣ್ಣು ತೆರೆಯಲು ಸತ್ಯಜ್ಞಾನದ ಶಿಕ್ಷಣ ಕೊಡಬೇಕಿದೆ. ಸತ್ಯ ವೇ ಇಲ್ಲದ ಮೇಲೆ ಧರ್ಮ ಉಳಿಯುವುದೆ? ಇದಕ್ಕೆ ನಮ್ಮದೇ ಸಹಕಾರ ಕಾರಣವಾದಾಗ ಅದರ ಫಲವೂ ನಾವೇ ಉಣ್ಣಬೇಕಷ್ಟೆ.
ಮಾಡಿದ್ದುಣ್ಣೋ ಮಹಾರಾಯ.
ಪರರೆಲ್ಲ ನಮ್ಮವರು ಎಂದು ನಮ್ಮವರನ್ನೇ ಪರಕೀಯರ ವಶಕ್ಕೆ ಬಿಟ್ಟರೆ ಹೇಗೆ? ಪರಮಾತ್ಮನ ಕಾಣೋದು ಒಳಗೇ ಸಂಶೋಧನೆ ಆಗಬೇಕು.ಹೊರಗಿನ ಸಂಶೋಧನೆಯಿಂದ ಜಗತ್ತು ಹೊರಗೆ ಬೆಳೆಯುತ್ತಾ ಭೂಮಿಗೇ ಭಾರವಾಗಿದೆ. ಆತ್ಮಜ್ಞಾನಿಗಳಿಂದ ಭೂ ಭಾರ ಕಡಿಮೆಯಾಗುತ್ತದೆ. ಆತ್ಮಜ್ಞಾನಕ್ಕೆ ಸತ್ಯ ಧರ್ಮ ಅಗತ್ಯ. ಹಾಗಾದರೆ ಸತ್ಯ ಯಾವುದು ಧರ್ಮ ಎಲ್ಲಿದೆ?
ಮೂಲಾಧಾರ ಚಕ್ರ ಶುದ್ದಿಯಾಗದೆ ಸಹಸ್ರಾರ ಚಕ್ರ ಶುದ್ದಿಯಾಗದು. ಮೂಲವನ್ನರಿತು ನಡೆದರೆ ನಿಧಾನವಾದರೂ ಸಹಸ್ರಾರು ವರ್ಷಗಳಿಂದ ನಡೆದು ಬಂದಿರುವ ಹಿಂದೂ ಧರ್ಮದ ಕೆಲವು ಸೂಕ್ಮ ವಿಷಯ ಒಳಗೇ ತಿಳಿಯಬಹುದು. ಒಳಹೊಕ್ಕಿ ನೋಡದವರಿಗೆ ಅರ್ಥ ಆಗದು.
ಬದಲಾದರೆ ಜಗದ ನಿಯಮ.ಭೂಮಿ ತಿರುಗುತ್ತಲೇ ಇರುತ್ತದೆ ಮಾನವ ಮಾತ್ರ ಹಿಂದಿರುಗಿ ನೋಡದೆ ನಡೆಯೋದು. ಅದಕ್ಕೆ ಹಿಂದೂ ಧರ್ಮ ಹಿಂದುಳಿದಿರೋದು.
No comments:
Post a Comment