ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, April 27, 2024

ಅಧ್ಯಾತ್ಮಿಕ ಜ್ಞಾನ =ಭೌತಿಕ ವಿಜ್ಞಾನ?





ಅಧ್ಯಾತ್ಮಿಕ ಸತ್ಯಕ್ಕೂ ಭೌತಿಕ ಸತ್ಯಕ್ಕೂ ವ್ಯತ್ಯಾಸವಿದೆ. ಅಧ್ಯಾತ್ಮಿಕ ಸತ್ಯವನ್ನು ಹೊರಹಾಕಿದರೆ ಎಲ್ಲಾ ಜ್ಞಾನಿಗಳಿಗೆ ಖುಷಿಯಾಗಬಹುದೆಂದು ತಿಳಿಯುವುದೇ ಇಂದು ತಪ್ಪಾಗಿದೆ.ಸತ್ಯ ತಿಳಿದ ನಂತರ ತೆಪ್ಪಗಿರುವುದೂ ಕಷ್ಟ. ನನ್ನ ನಾ ಅರಿತ ಮೇಲೆ ಪ್ರತಿಯೊಬ್ಬರೂ  ಅವರನ್ನು ಅವರು ತಿಳಿದು ನಡೆದರೆ ಎಷ್ಟು ಉತ್ತಮವೆನಿಸುತ್ತದೆ.ಆದರೆ ಇದು ಎಲ್ಲರಿಗೂ ಸಾಧ್ಯವಾಗದ ಕಾರಣ ಎಲ್ಲರಿಂದ ನಾವೇ ದೂರವಿರಬೇಕಾಗಬಹುದು. ಆದರೂ ಸತ್ಯ ಒಂದೇ ಇದು ಒಳಗಿರುವಾಗ  ಒಳಗೇ ಹೊಕ್ಕಿ ‌ ಕಂಡುಕೊಂಡವರು ಜನರಿಂದ ದೂರವಾದರು. ಆಗಲೇ ಪರಮಾತ್ಮ ಹತ್ತಿರವಾಗೋದು. 
ಪರಮಾತ್ಮನ ಕಂಡವರಷ್ಟೆ ಮಹಾತ್ಮರು. ಪರಮಾತ್ಮನ ಬೇಡಿದವರಲ್ಲಿ  ಸತ್ಯಜ್ಞಾನವಿತ್ತು. ಪರಮಸತ್ಯದೆಡೆಗೆ ನಡೆದರೆ  ಭೂಮಿಯ ಸತ್ಯ ಸತ್ವ ತತ್ವದ ಅರಿವಾಗೋದು.
 ಭೌತಿಕದಲ್ಲಿ ಹಣ,ಜ್ಞಾನ  ಕಳೆದುಕೊಳ್ಳುವುದರಿಂದ ದು:ಖ ಹೆಚ್ಚಾಗುತ್ತದೆ.ಹಾಗಾಗಿ ಎಲ್ಲಾ ಸೇರಿಸಿಕೊಂಡು ಮುಂದೆ ನಡೆದವರೆ ಹೆಚ್ಚು. ಆದರೆ ಮುಂದೆ ಹೋದ ಮೇಲೆ ಎಲ್ಲಾ ಕಳೆದುಕೊಂಡು ಹೋಗಲೇಬೇಕು.ಕೊಟ್ಟು ಹೋಗುವುದಕ್ಕಿಂತ ಬಿಟ್ಟು ನಡೆಯುವುದೇ ಉತ್ತಮ. ಇಲ್ಲಿ ಕೊಡುವುದಕ್ಕೆ  ತಂದಿದ್ದಾದರೂ ಏನು? ಅಥವಾ ಬಿಡುವುದಕ್ಕೆ ಗಳಿಸಿದ್ದೇನು? ಪ್ರಶ್ನೆಗೆ ಉತ್ತರ  ನಮ್ಮ ಜ್ಞಾನದಿಂದಷ್ಟೆ ತಿಳಿಯಬಹುದು.
ನಮ್ಮದೇನೂ ಇಲ್ಲ ಎಲ್ಲಾ ಪರಮಾತ್ಮನದು ಎನ್ನುವ ಮಹಾತ್ಮರಿಗೆ ಎಲ್ಲವನ್ನೂ ಕೊಟ್ಟು ಬಿಟ್ಟು  ಹೋಗೋದೇ ಜೀವನವಾಗಿತ್ತು. ಅದೇ ಎಲ್ಲಾ ನನ್ನದೇ ಸಂಪಾದನೆ ಎನ್ನುವ ಮಾನವನಿಗೆ  ಯಾರಿಗೂ ಕೊಡೋದು ಬಿಡೋದು ಇಷ್ಟವಾಗದೆ  ಇನ್ನಷ್ಟು ‌ಮತ್ತಷ್ಟು ಕೂಡಿಹಾಕಿಕೊಂಡು ಕೊನೆಗೆ ಭಾರತಡೆಯಲಾಗದೆ ಜೀವ ಹೋಗುತ್ತದೆ. ಇಲ್ಲಿ ಯಾರನ್ನೋ ಯಾರೋ ಆಳುವುದಕ್ಕಾಗಿ ನಡೆಸೋ ಕಸರತ್ತಿನ ಹಿಂದೆ ಬಹಳ ಪರಿಶ್ರಮವಿದ್ದರೂ ಸತ್ಯ ಧರ್ಮ ವಿಲ್ಲದ ಕಾರಣ  ಕಷ್ಟ ನಷ್ಟಗಳೇ‌ ಬೆಳೆಯುತ್ತದೆ.ಇದಕ್ಕೆ ಅಗೋಚರ ಶಕ್ತಿಗಳೇ ಕಾರಣ ಆಗಿದ್ದರೂ ನಾನೆಂಬ ಅಹಂಕಾರ ಸ್ವಾರ್ಥ ಮಾತ್ರ ತಿಳಿಯದೆ ಒಳಗೇ ಬೆಳೆದಾಗ ಕೊಡೋದು ಬಿಡೋದು ಮಾಡೋದು‌ ನಡೆಯೋದು ಒಂದು ವ್ಯವಹಾರವಾಗಿರುತ್ತದೆ. ಸತ್ಯ ಧರ್ಮ ವಿಲ್ಲದ ಈ ವ್ಯವಹಾರದಲ್ಲಿ  ಜ್ಞಾನದ ಕೊರತೆಯಿದ್ದಾಗ ಪ್ರತಿಯೊಂದು ನಾನೇ ಮಾಡುತ್ತಿರುವಾಗ ಕರ್ಮ ಫಲವೂ  ನನಗೇ ಸೇರುತ್ತದೆ.
ದಾನಧರ್ಮದ ನಡುವಿರುವ ಅಂತರದಲ್ಲಿ  ಬದುಕುತ್ತಿರುವ ಮನುಕುಲಕ್ಕೆ ಉತ್ತಮ ಸತ್ಯಜ್ಞಾನದ ಶಿಕ್ಷಣ ದೊರೆತಾಗಲೇ ದಾನವರು  ಯಾರು? ದೇವರು ಯಾರು ಎನ್ನುವ ಸತ್ಯ ತಿಳಿಯಬಹುದಷ್ಟೆ.
ದೇವರು ಕೇಳಿದ್ದನ್ನು ಕೊಡಬಹುದು ಆದರೆ , ಕೊಟ್ಟಿದ್ದನ್ನು ಸದ್ಬಳಕೆ ಮಾಡಿಕೊಳ್ಳಲು  ಆತ್ಮಜ್ಞಾನದ ಅಗತ್ಯವಿದೆ. ಇದೇ ಕೊಡದಿದ್ದರೆ ದೇವರಾಗೋದಿಲ್ಲ. ಅಸುರರು ಬೆಳೆಯುವರು.
ಸರಸ್ವತಿಯನ್ನು ವೈಭವದಿಂದ ಅಲಂಕರಿಸಿ ಪೂಜಿಸಿದರೆ ಜನರು ಅವಳ ವೈಭೋಗಕ್ಕೆ ಮರುಳಾಗಿ ಹಣ ಬೇಡುವರು. ಆದರೆ  ಅವಳ ಮೂಲ ಶಕ್ತಿಯೇ ಜ್ಞಾನವಾದ್ದರಿಂದ ಜ್ಞಾನ ಹಿಂದುಳಿಯುವುದು. ಇದರಿಂದಾಗಿ  ಸರಸ್ವತಿ ಇಲ್ಲದ ಜಗತ್ತಿನಲ್ಲಿ ಮಾನವ ಲಕ್ಮಿಯನ್ನು ದುರ್ಭಳಕೆ ಮಾಡಿಕೊಳ್ಳಬಹುದು. ಕಲಿಕೆಯ ಕಾಲ ಕಲಿಗಾಲ.ಭೂಮಿಯ ಋಣ ತೀರಿಸದೆ  ಮೇಲೇರಲು ಅಸಾಧ್ಯವೆಂದಾಗ  ಭೂಮಿಯಲ್ಲಿ ಯಾವ ಆಸ್ತಿ ಮಾಡಿದರೆ ಮೇಲಕ್ಕೆ ಹೋಗಲು ಸಾಧ್ಯವೆನ್ನುವ ಸಾಮಾನ್ಯ ಜ್ಞಾನ ಮಾನವನಿಗಿದ್ದರೆ  ಜ್ಞಾನದಿಂದ  ಮೇಲಕ್ಕೆ ಹೋಗಬಹುದು.
ಜ್ಞಾನ ಹೆಚ್ಚಿಸಿಕೊಳ್ಳಲು ಸತ್ಯದ ನಡೆ ನುಡಿಯ ಜೊತೆಗೆ ಧರ್ಮ ವೂ ಅಗತ್ಯ. ಎಲ್ಲರೊಳಗೂ ಹೊರಗೂ ಇರುವ ಈ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು  ರಾಜಕೀಯದಿಂದ ಕಷ್ಟ.ರಾಜಯೋಗದಿಂದ ಸಾಧ್ಯ.ಅಂದರೆ ವ್ಯಕ್ತಿಯ ಒಳಗೇ ಇರುವ ಪರಮಾತ್ಮನ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಉತ್ತಮ ಗುರುವಿನ ಅಗತ್ಯವಿದೆ.ಉತ್ತಮ ಶಿಕ್ಷಣದ ಅಗತ್ಯವಿದೆ. ಉತ್ತಮ ಕುಲದಲ್ಲಿ ಜನ್ಮ ಪಡೆಯುವುದೂ ಪೂರ್ವ ಜನ್ಮದ ಪುಣ್ಯವಾಗಿದೆ. ಉತ್ತಮಕುಲೆಂದರೆ ಶ್ರೀಮಂತ ಕುಲವೆನ್ನುವುದು ಕೆಲವರ ನಂಬಿಕೆ.ಆದರೆ ಶ್ರೀಮಂತ ಜ್ಞಾನವಿದ್ದರೂ ಉತ್ತಮಕುಲವಾಗಿರುತ್ತದೆ. ಸತ್ಯ ಧರ್ಮ ವಿಲ್ಲದೆ ಹಣಗಳಿಸಿ ಶ್ರೀಮಂತ ರಾದವರಲ್ಲಿ ಅಹಂಕಾರ ಸ್ವಾರ್ಥ ಮನೆ ಮಾಡಿರುವಾಗ ಉತ್ತಮರಾಗೋದು ಹೇಗೆ? ಹಾಗಾಗಿ ಯಾರೇ ಎಲ್ಲೇ ಜನ್ಮ ಪಡೆದಿದ್ದರೂ ಅವರ ಮೂಲ ಗುರುಹಿರಿಯರ  ಧರ್ಮ ಕರ್ಮ ವೇ ಅವರ ಭವಿಷ್ಯದ ಬುನಾದಿಯಾಗಿರುತ್ತದೆ. ವಾಸ್ತವದಲ್ಲಿ ಜನರು ನೋಡೋದು ಹಣ ಅಧಿಕಾರ ಸ್ಥಾನ ಮಾತ್ರ  ಇದನ್ನು ಸನ್ಮಾರ್ಗದಲ್ಲಿ ನಡೆದು ಗಳಿಸೋದು ಕಷ್ಟ.ಹೀಗಾಗಿ ವಾಮಮಾರ್ಗ ಹಿಡಿದು ಹೋಗಿ ಗಳಿಸಿದ ಹಣವನ್ನು ಕೊಟ್ಟು ಬಿಟ್ಟು ಹೋಗೋದೇ ಜೀವನವಾಗಿದೆ. ಇದನ್ನು ಭ್ರಷ್ಟಾಚಾರ ಎನ್ನುವರು. ಕೊಡುವುದಾದರೆ ನಿನ್ನ ಶ್ರಮ ದಿಂದ ಧರ್ಮದಿಂದ ಗಳಿಸಿದ್ದನ್ನು ಕೊಡು ಇಲ್ಲವಾದರೆ ಬಿಟ್ಟು ಬಿಡು ಎನ್ನುವರು. 
ಜಿಪುಣನೇ ಎಲ್ಲರಿಗಿಂತ ದಾನಿ ಎನ್ನುವ ಮಾತಿದೆ.ಕಾರಣ ತನ್ನ ಹಣವನ್ನು ತಾನೂ  ಬಳಸದೆ ಕೂಡಿ ಹಾಕಿ ಕೊನೆಗೊಮ್ಮೆ ಎಲ್ಲಾ ಬಿಟ್ಟು ಹೊರಡುವನು.ಇದರಲ್ಲಿ ಶ್ರೀ ಪುರಂಧರ ದಾಸರ  ಪೂರ್ವ ಕಥೆ ನೆನಪಾಗುತ್ತದೆ. ಆದರೆ ಅವರ ನಂತರದ ಜ್ಞಾನದ‌ಬದುಕಿನಲ್ಲಿ ಕೊಟ್ಟಿದ್ದು  ಸತ್ಯಜ್ಞಾನವನ್ನು ಅದನ್ನು  ವಿರೋಧಿಸಿ ದವರೆ ಹೆಚ್ಚು.ಈಗಲೂ ಪ್ರಚಾರಕ್ಕೆ ಬಳಸುವ  ಸಾಹಿತ್ಯದಲ್ಲಿ  ವ್ಯವಹಾರವೇ‌ಹೆಚ್ಚು. ಧರ್ಮ ತತ್ವವಿಲ್ಲದೆ ತಂತ್ರದ ಉಪದೇಶವಾಗುತ್ತಿದೆ.
ರಾಜಕಾರಣಿಗಳು ಜನರ ಹಣವನ್ನು ನಮ್ಮದೆಂದು ಹಂಚುವರು. ಆದರೆ ಹಂಚಿಕೆಯಲ್ಲಿಯೇ  ಭ್ರಷ್ಟಾಚಾರ ವಿದ್ದರೆ  ಧರ್ಮ ಉಳಿಯೋದಿಲ್ಲ. ನನ್ನ ಗೆಲ್ಲಿಸಿದರೆ ನಿನ್ನ ನಾ ಆಳುವೆನು ಎನ್ನುವ ಅರ್ಥದಲ್ಲಿ  ನಡೆದಿರುವ ಈ ರಾಜಕೀಯ ವ್ಯವಸ್ಥೆ  ದೇಶವನ್ನೇ ವಿದೇಶಕ್ಕೆ ಬಿಟ್ಟುಕೊಡುವಷ್ಟು ಮುಂದೆ ಬಂದು ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಇದಕ್ಕೆ ಸಹಾಯ ಮಾಡುವ ದೊಡ್ಡ ವ್ಯಕ್ತಿಗಳಿಗೆ ಬೇಕಾಗಿರೋದು ಅಧಿಕಾರ ಹಣ ಸ್ಥಾನವಷ್ಟೆ. ಇದರಿಂದಾಗಿ  ಆತ್ಮಹತ್ಯೆ ಹೆಚ್ಚಾಗುತ್ತದೆ.
ಒಟ್ಟಿನಲ್ಲಿ ವ್ಯಕ್ತಿಯ ಹಿಂದೆ ಬಿದ್ದರೆ ನಮ್ಮ ಶಕ್ತಿ ದುರ್ಭಳಕೆ ಆಗುವ ಸಾಧ್ಯತೆ ಹೆಚ್ಚು.ಆದರೆ ನಮ್ಮ ಶಕ್ತಿಯನ್ನರಿತು ಒಳಗೇ ನಡೆದರೆ  ವ್ಯಕ್ತಿಯ ಒಳ ಉದ್ದೇಶ  ಅರ್ಥ ವಾಗುವ ಜ್ಞಾನವಿರುತ್ತದೆ.  ಸ್ವಂತ ಬುದ್ದಿ  ಜ್ಞಾನ ,ಹಣ ಜನರನ್ನು ಕೂಡಿಕೊಂಡು ಬಾಳುವುದೇ ಜೀವನ. ಇದನ್ನರಿಯದೆ ಹೊರ ನಡೆದಷ್ಟೂ‌ ಎಲ್ಲಾ ಇದ್ದೂ ಏನೂ ಇಲ್ಲವೆನ್ನುವ   ಮರಣ. 
ಆದರೆ, ಇದು ಕಣ್ಣಿಗೆ ಕಾಣೋದಿಲ್ಲ.ಕಂಡರೂ ಬಳಸೋರಿಲ್ಲ, ಬಳಸಿದರೆ ಹಣಸಿಗೋದಿಲ್ಲ ಹಣಸಿಕ್ಕರೂ ನಿಲ್ಲೋದಿಲ್ಲ.
ಹಣವಿಲ್ಲದೆ ಜನಬಲವಿಲ್ಲ ಜನಬಲವಿಲ್ಲದೆ ಸತ್ಯ ನಿಲ್ಲೋದಿಲ್ಲ.ಆದರೂ ಸತ್ಯವೇ ದೇವರೆಂದರಲ್ಲ.ನಿರಾಕಾರ ಬ್ರಹ್ಮನನ್ನು ಸಾಕಾರ ಮಾಡೋರೇ ಎಲ್ಲಾ..ಹೀಗಾಗಿ ಮಾಡಿದ್ದುಣ್ಣೋ ಮಹಾರಾಯ ಎಂದರು ಎಲ್ಲಾ ಮಹಾತ್ಮರುಗಳು. ಮಹಾತ್ಮರನ್ನೇ ದೂರುವರಲ್ಲ ಇದಕ್ಕೆ ಕಾರಣ ಅಜ್ಞಾನವಾಗಿದೆಯಲ್ಲ.ಇದಕ್ಕೆ ಕಾರಣವೇ ಶಿಕ್ಷಣ ವ್ಯವಸ್ಥೆ ಯಾಗಿದೆಯಲ್ಲ. ಸ್ವಧರ್ಮ ಸ್ವರ್ಗ ಪರಧರ್ಮ ನರಕ
ಸ್ವಾವಲಂಬನೆ ಸ್ವರ್ಗ ಪರಾವಲಂಬನೆ‌ನರಕ
ಸ್ವಾಭಿಮಾನ ಸ್ವರ್ಗ ದುರಭಿಮಾನ ನರಕ
ಸ್ವದೇಶಿ ಶಿಕ್ಷಣ ಸ್ವರ್ಗದ ದಾರಿ ತೋರಿಸಿದರೆ ವಿದೇಶಿ ಶಿಕ್ಷಣ ನರಕದ ದಾರಿ ತೋರಿಸುತ್ತದೆ.ವಿದೇಶಿಗಳಿಗೆ ಅವರ ಶಿಕ್ಷಣ ಶ್ರೇಷ್ಠ ವಾದಾಗ  ಸ್ವದೇಶಿಗಳಿಗೂ ದೇಶೀಯ ಮೂಲ ಶಿಕ್ಷಣ ಶ್ರೇಷ್ಠ ವಾಗಿದ್ದರೆ  ಅದರ ಜ್ಞಾನವನ್ನು ಕೊಟ್ಟು ಬಿಟ್ಟು ‌ನಡೆಯುವುದೇ ಜೀವನದ ಗುರಿ.ಇದೇ ಧರ್ಮ.
ಯಾರದ್ದೋ ದೇಶದಲ್ಲಿ ಯಾರದ್ದೋ ಜ್ಞಾನವನ್ನು ಯಾರಿಗೋ ಕೊಟ್ಟು ಬಿಟ್ಟು ನಡೆಯುವುದೇ ಅಧರ್ಮ.


No comments:

Post a Comment