ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, April 17, 2024

ಶ್ರೀ ರಾಮನೆಲ್ಲಿ? ರಾವಣನೆಲ್ಲಿ?

 ಶ್ರೀರಾಮ ನವಮಿಯ ಶುಭಾಶಯಗಳು.
 ಈ ವರ್ಷ ವಿಶೇಷವಾಗಿ ಅಯೋಧ್ಯಾದಲ್ಲಿ ಶ್ರೀ ರಾಮನ ದರ್ಶನ ಭಕ್ತರಿಗಾಗುತ್ತಿದೆ. ರಾಮ ಎನ್ನುವ ಎರಡಕ್ಷರದಿಂದ ಎಷ್ಟೋ ಭಕ್ತರು ಮುಕ್ತಿ ಒಡೆದರೆಂದರೆ ರಾಮನಿಗಿಂತ ರಾಮನಾಮವೇ ಶ್ರೇಷ್ಟವೆಂದಿದ್ದಾರೆ. ಕಲಿಯುಗದ‌ರಾಮ ತ್ರೇತಾಯುಗದ ರಾಮನಿಗಿಂತ  ಭಿನ್ನವೆ? ಯಾಕೆ ಇರುವ ಒಬ್ಬನೆ ರಾಮನನ್ನು ಯುಗಯುಗಕ್ಕೆ ಬೇರೆ ಕಾಣುವುದು ಎನ್ನುವ ಪ್ರಶ್ನೆ ಬಂದಾಗ ಅಂದಿನ ರಾಮನ ರಾಜ್ಯಭಾರಕ್ಕೂ ಇಂದಿನ  ಪ್ರಜೆಗಳ ಭಾರಕ್ಕೂ ವ್ಯತ್ಯಾಸವಿದೆ. ಅಂದಿನ ರಾಮ ಪ್ರಜೆಗಳನ್ನು ಧರ್ಮ ಹಾಗು ಸತ್ಯದ ದಾರಿಯಲ್ಲಿ ‌ನಡೆದು ತೋರಿಸಿ ನಡೆಸುತ್ತಿದ್ದ ಎಂದರೆ ಈಗ ರಾಮನೆಲ್ಲಿ? ರಾವಣನೆಲ್ಲಿ?
 ಹೇಗೆ ಶ್ರೀ ಕೃಷ್ಣನಜೊತೆಗೆ ಅರ್ಜುನ ಇರುವನೋ ರಾಮನ ಜೊತೆಗೆ ಹನುಮನಿರುವನು. ಆದರೆ, ಇಂದು  ರಾಮನನ್ನು ವಿಗ್ರಹದಲ್ಲಿ ಪ್ರತಿಷ್ಠಾನ ಮಾಡಿ  ಪೂಜೆ ನಡೆಸಿದರೆ  ಸಾಮಾನ್ಯರಿಗೆ ಸಮಾಧಾನ ಸಿಕ್ಕಂತೆ ಪ್ರತಿಷ್ಟಿತರಿಗೆ ಸಿಗುವುದೆ?
ಇಲ್ಲವೆಂದರೆ ತಪ್ಪು ಎನ್ನಬಹುದು.  ಲೋಕಕಲ್ಯಾಣಕ್ಕಾಗಿ ಭೂಮಿಯಲ್ಲಿ ಅವತರಿಸಿದ ಶ್ರೀ ರಾಮನೊಳಗೇ ರಾವಣ ಮುಕ್ತಿ ಪಡೆದನೆಂದರೆ ಪರಮಾತ್ಮನ ಒಳಗೇ ಅಸುರ ಶಕ್ತಿ  ಇದೆ. ಇದು ಈಗಲೂ ಪ್ರತಿಯೊಬ್ಬರ ಒಳಗೂ ಹೊರಗೂ ಇದೆ.
ಒಳ್ಳೆಯದು ಕೆಟ್ಟದ್ದು ಬೆಳೆಯೋದು ನಮ್ಮ ಸಹಕಾರದಿಂದ ಮಾತ್ರ. ಯಾವಾಗೊಳ್ಳೆಯದಕ್ಕೆ  ತಡೆಯಾಗುವುದೋ ಆಗ ಕೆಟ್ಟದ್ದು ಬೆಳೆಯುತ್ತದೆ.. 
ರಾವಣನ‌ಜನ್ಮ‌ರಹಸ್ಯ ತಿಳಿದ ವಿಚಾರವೆ. ಮೂಲದಲ್ಲಿ ದೇವತೆಯಾಗಿದ್ದ  ಜಯವಿಜಯರ ಅಹಂಕಾರದ ಫಲವಾಗಿ ಅಸುರ‌ಜನ್ಮವಾಗಿದೆ. ಇವರ ಸಂಹಾರಕ್ಕಾಗಿಯೇ‌ಪರಮಾತ್ಮನ ಅವತಾರದಲ್ಲಿ ಶ್ರೀ ರಾಮಾವತಾರ. 
ಬ್ರಾಹ್ಮಣಕುಲದಲ್ಲಿ‌ಜನ್ಮ‌ತಳೆದು ಸರ್ವ ವೇದಪಾರಂಗತನಾಗಿ ಮಹಾಜ್ಞಾನಿಯಾದ ರಾವಣ ಶಿವಭಕ್ತ ದೈವಭಕ್ತನಾದರೂ‌
ಮಹಾಮಾಯೆಯ ವಶದಲ್ಲಿ ಅಹಂಕಾರ ಪೀಡಿತನಾಗಿ  ನಾನು ಶಾಶ್ವತ ಎಂದು  ಮಹಾಸತಿ ಸೀತೆಯ ಅಪಹರಣ ಮಾಡಿದ ಪರಿಣಾಮವೆ ರಾಮಾಯಣ ಯುದ್ದ ನಡೆಯಿತು.
ಇಲ್ಲಿ ವ್ಯಕ್ತಿಯ ಒಳಗಿದ್ದ ಶಕ್ತಿ ಕಣ್ಣಿಗೆ ಕಾಣದು. ಅದೇ ಶಕ್ತಿ ಭೂಮಿಯನ್ನು ಆಳುವುದು. ಕೊನೆಗೆ ಸೋತು‌
ಮರೆಯಾಗುವುದು.  ಗೆದ್ದವರು  ದೇವರು ಸೋತವರು ಅಸುರರು.
ಇದೇ‌ಕಾರಣಕ್ಕೆ ಈಗಲೂ ದೇವಾಸುರ ಶಕ್ತಿಯ‌ನಡುವೆ ಭಿನ್ನಾಭಿಪ್ರಾಯ ದ್ವೇಷ ಹ ಠ ಮಠಗಳಾಗಿ ಚಟ್ಟ ಏರೋದನ್ನು ಯಾರೂ ತಪ್ಪಿಸಿಲ್ಲ.ಯುದ್ದದಿಂದ ಧರ್ಮ ರಕ್ಷಣೆ  ಆದರೆ  ಶಾಂತಿ ತೃಪ್ತಿ ‌ಮುಕ್ತಿ ಎನ್ನುವರು.
ರಾವಣ ಬ್ರಾಹ್ಮಣನಾಗಿ  ಎಲ್ಲಾ ತಿಳಿದೂ  ಕ್ಷತ್ರಿಯನಾದ ರಾಮನ‌ಕೈಯಿಂದ ಹತನಾದರೂ  ರಾವಣನಲ್ಲಿದ್ದ ಒಳ್ಳೆಯ ಗುಣ‌ಪ್ರಚಾರಕ್ಕೆ ಬರಲಿಲ್ಲ. ಕ್ಷತ್ರಿಯನಾಗಿ ತನ್ನ ಧರ್ಮ ಕ್ಕೆ ವಿರುದ್ದ ನಡೆಯದೆ ಹೆಣ್ಣು ಹೊನ್ನು ಮಣ್ಣಿನಿಂದ ದೂರವಾದ ಶ್ರೀ ರಾಮನು ಇಂದು ಪುರುಷೋತ್ತಮ. ಪುರುಷರಲ್ಲಿ ಉತ್ತಮನಾದವನೆ  ಶ್ರೀ ರಾಮಚಂದ್ರ. ಹೀಗಾಗಿ ಸಾಮಾನ್ಯರಿಂದ ಹಿಡಿದು ಅಸಮಾನ್ಯರವರೆಗೂ  ಒಳಗಿರುವ ಜ್ಞಾನದ ಮೇಲೇ  ಉತ್ತಮ ಅಧಮವೆನ್ನುವ ತೀರ್ಮಾನ ಆಗುತ್ತದೆ.
ಆದರೆ ತೀರ್ಮಾನ ಮಾಡೋದು  ಮಾನವ ರೂಪದಲ್ಲಿರುವವರೆ  ಆದಾಗ ಕೆಲವರಿಗೆ  ಒಳ್ಳೆಯದು ಕೆಟ್ಟದ್ದಾಗಿ ಕಂಡರೆ ಹಲವರಿಗೆ ಕೆಟ್ಟದ್ದು ಒಳ್ಳೆಯದಾಗಿ ಕಾಣುತ್ತದೆ.ಇವರಿಬ್ಬರ ನಡುವೆ  ಬೆಳೆಯುವ ಮಧ್ಯವರ್ತಿಗಳು ‌ಸರಿಯಾಗಿಲ್ಲವಾದಾಗಲೇ ದೊಡ್ಡ ರಾಮಾಯಣ ಮಹಾಭಾರತ ಯುದ್ದ ಬೆಳೆಯೋದು. ಈಗ ಸಾಮಾನ್ಯವಾಗಿ ಮನೆಮನೆಯೊಳಗೆ ಈ ಗ್ರಂಥ ಪಠಣವಿದ್ದರೂ ರಾಮ ರಾವಣರ ನಡುವೆ ಅಂತರಹೆಚ್ಚಿಸಿ ರಾಮನ ಹೆಸರಿನಲ್ಲಿ ರಾವಣನ ರಾಜ್ಯ ಸ್ಥಾಪನೆಗೆ ಸಂಚು ಮಾಡಿದರೆ  ಎಲ್ಲದ್ದಕ್ಕೂ ಸಾಕ್ಷಿಯಾಗಿರುವ ಆತ್ಮಕ್ಕೆ‌ಮೋಸಮಡಿದಂತೆ.ಅಂದರೆ ನಮಗೆನಾವೇ ಮೋಸಹೋದಂತೆ.
ರಾಮ ರಾಮನೆ ರಾವಣ ರಾವಣನೆ ಆದರೂ ಇಬ್ಬರೂ ಒಂದೇ ಶಕ್ತಿಯ ಒಳಗಿರುವ  ಕಾರಣ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ ಅಸುರ.ಸದ್ಬಳಕೆ ಮಾಡಿಕೊಂಡರೆ ಸುರ.
 ಕಾಲಬದಲಾಗಿದೆ. ಸೀತೆಯಂತೆ ಯಾರೂ ಇರಲಾಗದು.ರಾಮನಂತೆ ಯಾರೂ ಆಳಲಾಗದು.ಆದರೆ ಅವನ  ಧರ್ಮತತ್ವ  ತಿಳಿದು ನಡೆದರೆ ಅವರವರ ಪಿತೃಗಳ ವಾಕ್ಯದಂತೆ‌ ನಡೆಯಬಹುದು, ಪ್ರಜಾಪ್ರಭುತ್ವದಲ್ಲಿ ಸ್ವತಃ ಪ್ರಜೆಯಾಗಿದ್ದು  ನಮ್ಮ ಧರ್ಮ ರಕ್ಷಣೆಗಾಗಿ ಸೇವೆ ಮಾಡಬಹುದು. ಆಗದಿದ್ದರೆ ದೈವಶಕ್ತಿಯನರಿತು ಇದ್ದಲ್ಲಿಯೇ ಜಾಗೃತವಾಗಿರಬಹುದು. ಯಾವಾಗ ಯಾರು ಯಾವರೂಪದಲ್ಲಿ ಬರುವರೋ ಗೊತ್ತಿಲ್ಲ. ಎಲ್ಲರನ್ನೂ ಶ್ರೀಮಂತ ವಾಗಿಸಲು ಹೋಗಿ ತಾವೇ ಬಡವನಾದರೆ ಇದಕ್ಕೆ ದೇವರು ಕಾರಣರಲ್ಲ.ಹಣದಿಂದ ದೈವತ್ವವಿರದು ಗುಣಜ್ಞಾನದಿಂದಷ್ಟೆ ದೇವರಾಗಿರೋದು ಶ್ರೀ ರಾಮ.ಹಾಗೆ ಇತರ ದೇವಾನುದೇವತೆಗಳು  ಇದ್ದರು ಇದ್ದಾರೆ ಇರುತ್ತಾರೆ.ಸೂಕ್ಮ ದೃಷ್ಟಿಯಿಂದ  ಕಾಣಬಹುದು ರಾಜಕೀಯ ದೃಷ್ಟಿಯಲ್ಲಿ ಅಳೆಯಬಾರದು.

No comments:

Post a Comment