ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, April 14, 2024

ಅಂದಿನ ಅಸಮಾನತೆ ಇಂದಿಗೂ ಹಸಿರಾಗಿದೆಯೆ?

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಾಲದಲ್ಲಿದ್ದ ಅಸಮಾನತೆಗೂ ಈಗಿನ ಅಸಮಾನತೆಯ ಹೆಸರಿನಲ್ಲಿ ‌ನಡೆದಿರುವ ಜಾತಿ ರಾಜಕೀಯಕ್ಕೂ ಬಹಳ ಅಂತರವಿದೆ.ಅಂದಿನ‌ಪ್ರಜೆಗಳಲ್ಲಿದ್ದ ಜ್ಞಾನಕ್ಕೂ ಇಂದಿನ ವಿಜ್ಞಾನಕ್ಕೂ ಬೆಳೆದ ಅಂತರದಲ್ಲಿ ನಿಂತು ತಮ್ಮ ಸ್ವಾರ್ಥ ಅಹಂಕಾರ ಬೆಳೆಸಿಕೊಂಡಿರುವ ಮಾನವರಲ್ಲಿ‌ಮಾನವೀಯತೆ ಎಂದರೆ ಏನೆಂಬುದೇ ಸರಿಯಾಗಿ  ತಿಳಿದಿಲ್ಲದಿರೋದು ಭಾರತದ ಈ ಸ್ಥಿತಿಗೆ ಕಾರಣ. ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೆ ದೊಡ್ಡ ಅವಸ್ಥೆ ಗೆ ಮೂಲವಾಗುತ್ತಿದೆ. ನನಗೆ ಅಧಿಕಾರ ಸ್ಥಾನ ಹಣವಿದೆ ಎಂದು ಇತರರನ್ನು ಆಳೋದೇ ಅಧರ್ಮ. ಇನ್ನು ಈ ಅಧಿಕಾರ ಸ್ಥಾನ ಯಾವ ಮಾರ್ಗದಲ್ಲಿ ನಡೆದು ಗಳಿಸಿದೆ ಎನ್ನುವ ಪ್ರಶ್ನೆ ಹಾಕಿಕೊಳ್ಳದವರು ದೊಡ್ಡ ವ್ಯಕ್ತಿಗಳಾಗಿರುವಾಗ  ಅಧಿಕಾರ ಕೊಟ್ಟು ಮೇಲೇರಿಸಿದವರಿಗೆ ಉತ್ತರ ಸಿಕ್ಕಿದ್ದರೆ ಬದಲಾವಣೆ ಸಾಧ್ಯ. ಆದರೆ ಅಧಿಕಾರ ಕೊಟ್ಟು  ಅವರ ಹಿಂದೆ ‌ನಿಂತು ಬೇಡೋದೇ‌ ಜೀವನ ಎಂದವರಿಗೆ ಇದೇ  ಜೀವನದ ಮುಖ್ಯಗುರಿ ಎನ್ನುವ ಅಜ್ಞಾನ ಇರೋವಾಗ  ಅಧಿಕಾರ ಪಡೆದವರಾಗಲಿ ಕೊಟ್ಟವರಾಗಲಿ ಬದಲಾಗೋದಿಲ್ಲ.
ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ದೇಶಭಕ್ತಿಗೂ ಈಗಿನವರಿಗೂ ಬಹಳ ವ್ಯತ್ಯಾಸವಿದೆ. ಅಂದಿನ ಭಕ್ತರು ಜೀವಭಯ ಬಿಟ್ಟು ದೇಶಕ್ಕಾಗಿ ತಮ್ಮ ಪ್ರಾಣ ಮಾನವನ್ನು ದೇಶಕ್ಕಾಗಿ ಮೀಸಲಿಟ್ಟರೆ ಈಗಿನ‌ ಮೀಸಲಾತಿಯ ಪಿಡುಗು ದೇಶದ ಪ್ರಾಣ ಹಾಗು ಮಾನವನ್ನೇ  ಹಾಳುಮಾಡುತ್ತಿದೆ.ಇಷ್ಟಕ್ಕೂ ಇಲ್ಲಿ ಶಾಶ್ವತವಾಗಿರೋದು ದೇಶವೋ ಪ್ರಜೆಗಳೋ? ಸಾವು ಎನ್ನುವ ಎರಡಕ್ಷರಕ್ಕೆ ಯಾವುದೇ ರೀತಿಯ ಜಾತಿಮತವಿಲ್ಲ. ಇಂದು ಯಾವ ಜಾತಿ ಮತ ಪಕ್ಷದಲ್ಲಿದ್ದರೂ ಮುಂದೆ  ಬದಲಾಗಬಹುದು.ಆದರೆ ದೇಶ ಒಂದೇ ನಿನ್ನೆಯಂತೆ ಇಂದಿರಲಾಗದು ನಿನ್ನೆ ಯ ಕಡೆಗೆ ಇಂದು ಹೋಗಲಾಗದು ಈ ಸತ್ಯ ತಿಳಿಯೋದಕ್ಕೆ ಪುರಾಣ ಇತಿಹಾಸದ ಅಗತ್ಯವಿರದು.
ಆದರೆ ನಾವು ಪ್ರತಿಕ್ಷಣ ಹಿಂದಿನ ದ್ವೇಷ ನೆನಪಿಸಿಕೊಂಡು ಅಂದಿನ ದೇಶದ ಪರಿಸ್ಥಿತಿ ಯನ್ನಾಗಲಿ ಅಂದಿನ ಜ್ಞಾನಿಗಳ ಮನಸ್ಥಿತಿಯನ್ನಾಗಲಿ ಅರ್ಥ ಮಾಡಿಕೊಳ್ಳುವ ಜ್ಞಾನದ ಶಿಕ್ಷಣ‌ಪಡೆಯದೆ  ಯಾರೋ‌ನಮಗೆ‌ ಮೋಸಮಾಡಿ‌ ಹಿಂದುಳಿಸಿದ್ದರು ಎಂದು ಯಾರೋ‌ ಮಧ್ಯವರ್ತಿ  ತನ್ನ ಸ್ವಾರ್ಥ ಸುಖಕ್ಕಾಗಿ ಪ್ರಚಾರ ಮಾಡಿ ಅಧಿಕಾರ ಸ್ಥಾನ ಹಣಬಲ‌ ಜನಬಲ ಸಂಪಾದಿಸಿದ್ದರೆ ಅವರ ಹಿಂದೆ ನಡೆದರೆ  ಇದರಷ್ಟು ಮೂರ್ಖತನ‌ಮತ್ತೊಂದಿಲ್ಲ. ಜನಸಾಮಾನ್ಯರು  ತಮ್ಮ ಸ್ವಂತ ಜ್ಞಾನವನ್ನು ಬಳಸಿಕೊಂಡು ಬದುಕಲು ಇಲ್ಲಿ ಅವಕಾಶವೇ ಇಲ್ಲವೆ? ಶಿಕ್ಷಣದಲ್ಲಿಯೇ  ಅಜ್ಞಾನ ಹೆಚ್ಚಾದರೆ ಇದು ಪ್ರಗತಿಯೆ? 
ಒಂದು ವಿಚಾರ ಮಾನವರು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಜ್ಞಾನವಿದ್ದರೆ ಸಾಕು.
ನಾವು ಭೂಮಿಗೆ ಬಂದಿರೋದು ಭೂಮಿಯ ಋಣ ಅಥವಾ ಸಾಲ ತೀರಿಸಲೆಂದು ಇದಕ್ಕೆ ನಮ್ಮ ಒಳಗೇ ಅಡಗಿರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಉತ್ತಮ ಶಿಕ್ಷಣ ಸಿಗಬೇಕು ಅದಕ್ಕೆ ಗುರುವಿನ ಅನುಗ್ರಹ ಅಗತ್ಯವಿರಬೇಕು.ಗುರುವಾದವರು ಯಾವುದೇ ಜಾತಿ ರಾಜಕೀಯಕ್ಕೆ ಒಳಗಾಗದೆ ಸ್ವತಂತ್ರವಾಗಿ ಜೀವನ‌ನಡೆಸುತ್ತಿದ್ದು ತನ್ನ ನಂಬಿದ ಶಿಷ್ಯರ ಜ್ಞಾನವನ್ನು ಬೆಳೆಸಿ ಸ್ವತಂತ್ರ ವಾಗಿ ಬದುಕಲು  ಸಹಕಾರ ಸಹಾಯ ಮಾಡಬೇಕು.
ಇದಕ್ಕಾಗಿ  ನಮ್ಮ ದೇಶವು ಯೋಗಿಯಂತಿರಬೇಕು.ಯೋಗಿ ಎಂದರೆ  ಜ್ಞಾನದಿಂದ ಯೋಗಿಯಾಗಬೇಕಿತ್ತು.‌ಇಂದಿನ ಹಲವರಿಗೆ ಸಾಕಷ್ಟು ಹಣ,ಅಧಿಕಾರವಿದ್ದು  ಜ್ಞಾನದ ಕೊರತೆಯಿದೆ. ಹಣವಿದ್ದವರ ಹಿಂದೆ ಜನ ನಡೆದು ತಮ್ಮ ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು ಆಳಿದರೂ ಕೇಳುವ‌ಅಧಿಕಾರವಿಲ್ಲವಾಗುತ್ತಿದೆ.ಯಾವ‌ಪಕ್ಷ ಎಷ್ಟು ಜನರನ್ನು ವಶಪಡಿಸಿಕೊಳ್ಳಲು ಸಾಧ್ಯವೋ ಅಷ್ಟು ಪಕ್ಷದ ಸಾಧನೆ ಎನ್ನುವ‌ಮಟ್ಟಿಗೆ ಮಧ್ಯವರ್ತಿಗಳು ಪ್ರಚಾರಕರಾಗಿ ನಿಂತು ದೇಶವನ್ನು ಅಡ್ಡದಾರಿಗೆಳೆದರೆ  ಇದರಲ್ಲಿ ಆತ್ಮಜ್ಞಾನ ಇರುವುದೆ? ನೇರ ನಡೆ ನುಡಿಯಿಂದ ಕಷ್ಟಪಟ್ಟು ಅಧ್ಯಾತ್ಮ ಸಾಧನೆಯ ಕಡೆಗೆ ಹೊರಟು ಜೀವನ ಸಾರ್ಥಕ ಗೊಳಿಸಿಕೊಂಡಿದ್ದ ಎಷ್ಟೋ ದಾಸ ಶರಣ ಸಂತ ಭಕ್ತಗಣ ಯೋಗಿಗಳು ದೇಶಭಕ್ತರಾಗಿ  ಜಾತಿಗಿಂತ ವರ್ಣ ವೇ ಶ್ರೇಷ್ಠ ಎಂದರು. ವರ್ಣದ ಪ್ರಕಾರ ಮಾನವನ ಜನ್ಮಕ್ಕೆ ಕಾರಣ ಅವನ ಹಿಂದಿನ ಧರ್ಮ ಕರ್ಮದ ಋಣ ತೀರಿಸೋದಾಗಿತ್ತು.
ಈಗಲೂ ಇದೇ ಭೂಮಿಯನ್ನು ನಡೆಸುತ್ತದೆ.ಆದರೆ ಮುಖ ನೋಡಿ ಅಧಿಕಾರ ಹಣ ನೋಡಿ ಮಣೆಹಾಕುವ ಅಜ್ಞಾನದ ಪ್ರಭಾವದಿಂದಾಗಿ ಜಾತಿ ಮಿತಿಮೀರಿ ಬೆಳೆದು ಮಾನವ ಜಾತಿ ಹಿಂದುಳಿದಿದೆ. ಇದರಿಂದಾಗಿ ಯಾರಿಗೆ ಲಾಭ ನಷ್ಟ ಎಂದರೆ ಮನುಕುಲಕ್ಕೆ ನಷ್ಟಕಷ್ಟ. ತಾನೇ ಬೆಳೆಸಿಕೊಂಡು ಬಂದಿರುವ ಈ ಅಸಂಖ್ಯಾತ ಧರ್ಮ ಮತ,ಜಾತಿ ಪಂಗಡ ಪಕ್ಷದ ಒಳಗೇ ರಾಜಕೀಯತೆ ಬೆಳೆದು ರಾಜಯೋಗದಿಂದ ದೂರವಾಗುತ್ತಾ ತನ್ನವರನ್ನೇ ತಾನರಿಯದೆ ತನ್ನ ತಾನರಿಯದೆ ಎಲ್ಲೋ ಹೊರಗಿರುವ ದೇವರನ್ನು ದೇಶವನ್ನು ಬೇಡಿಕೊಂಡು ಇನ್ನಷ್ಟು ಸಾಲ ಮೈಮೇಲೇರಿಸಿಕೊಂಡರೆ ಅದನ್ನು ತೀರಿಸಲು ಜನ್ಮಜನ್ಮಗಳವರೆಗೂ ಕಷ್ಟವಿದೆ. ಒಟ್ಟಿನಲ್ಲಿ ಸಾಲವೇ ಶೂಲ ಯಾವುದಿದರಮೂಲ ಎಂದರೆ ಸರ್ಕಾರವೇ ಇದರ ಮೂಲ.
ಯಾವುದಕ್ಕಾಗಿ ನಮ್ಮ ಜೀವನವನ್ನು ಮೀಸಲಿಡಬೇಕಿತ್ತೋ ಅದನ್ನರಿಯದೆ ಹೊರಗಿನ ವ್ಯಕ್ತಿ ವಸ್ತು ಹಣ ಅಧಿಕಾರ ಸ್ಥಾನದ ಹಿಂದೆ ಹೊರಟವರ ಹಿಂದೆ ಮತ್ತಷ್ಟು ಮಂದಿ ಜ್ಞಾನವಿಲ್ಲದೆ  ಹಿಂದೆ ನಡೆದಷ್ಟೂ ಹಿಂದುಳಿದವರು ಬೆಳೆದರು. ಸಮಸ್ಯೆ ಮನೆಮನೆಯೊಳಗೆ ಬೆಳೆಯಿತು  ಇದನ್ನು ಸರಿಪಡಿಸಲು ಸಾಲ ಸೌಲಭ್ಯಗಳನ್ನು ಸರ್ಕಾರ ಕೊಟ್ಟು ದೇಶವನ್ನು ಸಾಲದಲ್ಲಿ ಮುಳುಗಿಸಿದರೆ ಪ್ರಜೆಗಳಿರೋದು ಎಲ್ಲಿ? ದೇಶದೊಳಗೆ ಇದ್ದಾಗ ಸಾಲ ನಮ್ಮೊಳಗೆ ಇರೋದಿಲ್ಲವೆ? ತೀರಿಸದಿದ್ದರೆ ಮುಕ್ತಿಯಿಲ್ಲ. ಅಗರ್ಭ ಶ್ರೀಮಂತ ರಾದವರು  ದೇಶದ ಸಾಲ ತೀರಿಸುವ ಜ್ಞಾನ ಪಡೆದಿಲ್ಲ.ಅನಾವಶ್ಯಕ ವಾಗಿ ದುಂದುವೆಚ್ಚ ಮಾಡೋದಕ್ಕೆ ಅವಕಾಶವಿದೆ ಎಂದರೆ ಅಜ್ಞಾನವಷ್ಟೆ. ಇಂತಹ ಸಮಾಜದಲ್ಲಿ ಅಸಮಾನತೆಯ ಹೆಸರಿನಲ್ಲಿ ಸಾಕಷ್ಟು ಶ್ರೀಮಂತ ವರ್ಗ ಬೆಳೆದು ನಿಂತು ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಹಾಗಾದರೆ
ನಿಜವಾದ ದೇಶಭಕ್ತರು ಯಾರು? ದೇಶದ ಹಣ ಯಾರ ವಶದಲ್ಲಿದೆ? ಪ್ರತಿಯೊಂದು ಸಮಸ್ಯೆಯ ಮೂಲ ಯಾವುದು?
ಎಂದಾಗ ಶಿಕ್ಷಣವೇ ಇದರ ಮೂಲ. ಪ್ರತಿಯೊಬ್ಬರಲ್ಲಿಯೂ ಅಡಗಿದ್ದ ವಿಶೇಷಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಡದೆ ಆಳಿದವರು ನಮ್ಮವರೆ ಎಂದಾಗ  ಬೇಲಿಯೇ ಎದ್ದು ಹೊಲ‌ಮೇಯ್ದರೆ  ಕಾಯೋರಿಲ್ಲ. ಹೊರಗಿನ ರಾಜಕೀಯತೆ ಮನೆಮನೆಯ ಸಮಸ್ಯೆ ಹೆಚ್ಚಿಸಿದೆ ಎಂದರೆ  ಸಾಧ್ಯವಾದರೆ ಅದರಿಂದ ದೂರವಿದ್ದು ತಮ್ಮ ಆತ್ಮವಿಮರ್ಶೆ ಮಾಡಿಕೊಂಡು ಸ್ವತಂತ್ರ ಜೀವನ ನಡೆಸಬಹುದಷ್ಟೆ.ಇಲ್ಲಿ ಸ್ವತಂತ್ರ ವಾಗಿ ನಾವ್ಯಾರು ಏನೂ ಮಾಡಲಾಗದಿದ್ದರೂ  ಪರಮಸತ್ಯ ಪರಮಧರ್ಮ ಕ್ಕೆ ತಲೆಬಾಗಲು ಸಾಧ್ಯವಿದೆ.ಪರಮಾತ್ಮನ ಹಿಂದೆ ನಡೆಯುವುದಕ್ಕೆ ಯೋಗವಿರಬೇಕಿದೆ.ಅದರಲ್ಲಿ ಶ್ರೇಷ್ಠ ಜ್ಞಾನಯೋಗ. ಇದು ನಮ್ಮೊಳಗೇ ಇರುವ ಶಕ್ತಿ.ನಮ್ಮಲ್ಲಿ ಅಡಗಿರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ದೀನದಲಿತ ಬಡವರೆನ್ನದೆ ಅವರಲ್ಲಿರುವ‌ಜ್ಞಾನವನ್ನು ಗುರುತಿಸಿ  ಉತ್ತಮ ಶಿಕ್ಷಣ ನೀಡುತ್ತಾ ಅವರನ್ನು ಮಾನವರಂತೆ ಕಾಣುವ ಸಾಮಾನ್ಯ ಜ್ಞಾನವಿದ್ದರೆ ಸಾಧ್ಯ.ಅದು ಬಿಟ್ಟು ಅವರು ಕುಳಿತಲ್ಲಿಂದ ಮೇಲೇಳದಂತೆ ಮಾಡಿ ಉಚಿತ ಹಣ ಸಾಲ ಸೌಲಭ್ಯಗಳನ್ನು ನೀಡಿದರೆ ರೋಗದಿಂದ ಜೀವ ಹೋಗುತ್ತದೆ. ಪರಮಾತ್ಮನ  ದೃಷ್ಟಿಯಲ್ಲಿ ಎಲ್ಲಾ ಒಂದೇ ಹೀಗಿರುವಾಗ ಜಾತಿ  ಸೃಷ್ಟಿ ಮಾಡಿದ್ದು ಯಾರು? ಮಾನವನ ಸೃಷ್ಟಿ ಗೆ ತಕ್ಕಂತೆ ಸ್ಥಿತಿಯಿದೆ ಹೀಗೇ ಲಯವಾಗುತ್ತದೆ. ಹೀಗಾಗಿ  ಮಾನವೀಯತೆ ಹೆಚ್ಚಿಸುವ ತತ್ವಜ್ಞಾನದ ಬಗ್ಗೆ  ಈಗಲಾದರೂ  ಒಗ್ಗಟ್ಟಿನಿಂದ  ಸತ್ಯವರಿತು ಭೂಮಿಯ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ಪ್ರಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು  ಅದರಿಂದ ಜನ್ಮ‌ಪಡೆದ ಈ ಸಣ್ಣ ಜೀವಾತ್ಮನಿಗೆ ಜೀವನ್ಮುಕ್ತಿ ಸಿಗುವ  ಸತ್ಸಂಗದೆಡೆಗೆ‌  ನಡೆಯುವುದಕ್ಕೆ ರಾಜಕೀಯ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಎಂದರೆ ಇದೇ  ದುಷ್ಟರ ಭ್ರಷ್ಟರ ವಶದಲ್ಲಿ ಇರೋವಾಗ ಇದರಿಂದಾಗಿ  ಧರ್ಮ ರಕ್ಷಣೆ ಕಷ್ಟವಿದೆ .ಆದರೆ ಭಗವಂತ  ದುಷ್ಟರು ಭ್ರಷ್ಟರ ಮೂಲಕವೇ ಸಾಮಾನ್ಯರಿಗೆ ಪಾಠ ಕಲಿಸಿರೋದು ಸತ್ಯ. 
ಜಾಣನಿಗೆ‌ಮಾತಿನ‌ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು.
ನುಡಿದರೆ ಮುತ್ತಿನ ಮಾತಿನಂತಿರಬೇಕು ಎಂದರು  ಅದನ್ನರಿತು ನಡೆಯದಿದ್ದವರ ಸಂಖ್ಯೆ ಬೆಳೆದಂತೆಲ್ಲಾ ಮಹಾತ್ಮರುಗಳು  ಮೌನವಾಗಿ ಮುಂದೆ ನಡೆದರು. ಆದರೆ ಇದೇ ಸತ್ಯವೆಂದರಿತ ಅಜ್ಞಾನಿಗಳು  ದುಷ್ಟಭ್ರಷ್ಟರಾಗಿ ಮೆರೆದಾಗ  ಅವರ ಹಿಂದೆ ಬರುತ್ತಿದ್ದವರಿಗೆ  ಭಗವಂತನೇ ಅವರ ಮೂಲಕ ಪೆಟ್ಟುಕೊಟ್ಟು ಸಾವು ನೋವು ಹಿಂಸೆಯ ಮೂಲಕ ಪಾಠ ಕಲಿಸುತ್ತಿದ್ದಾನೆ. ಇದನ್ನು  ಸೂಕ್ಮಜ್ಞಾನದಿಂದ ಅರ್ಥ ಮಾಡಿಕೊಂಡಾಗ ಆಗೋದೆಲ್ಲಾ ಒಳ್ಳೆಯದಕ್ಕೆ, ಆಗೋದನ್ನು ತಡೆಯಲಾಗದು ಎಂದು ಮೊದಲೇ  ಜ್ಞಾನಿಗಳು ತಿಳಿಸಿರೋದು ಸತ್ಯವೆನಿಸುತ್ತದೆ.ಹಾಗಾದರೆ ಸುಮ್ಮನೆ ಕೂರಲು ಸಾಧ್ಯವೆ? ಜೀವ ಹೋದರೂ ಸರಿ ಏನೂ ಮಾಡೋದಿಲ್ಲವೆನ್ನಬಹುದೆ? ಸಾಧ್ಯವಿಲ್ಲ ಕಾರಣ ನಮ್ಮ ನ್ನು ನಡೆಸುತ್ತಿರುವ ಅಗೋಚರ ಶಕ್ತಿಯ ಕೈಗೊಂಬೆಗಳಾಗಿರುವ ನಮ್ಮಲ್ಲಿ ಒಂದು ಶಕ್ತಿಯಿದೆ. ಅದು ನಿರಂತರವಾಗಿ ಚಲಿಸುತ್ತಲೇ ಇರೋವಾಗ ಮಾನವ ಒಂದು ಕಡೆ ಸುಮ್ಮನೆ ಕೂರಲು ಕಷ್ಟ.ಅದರಲ್ಲೂ ಇಂದಿನ ಪರಿಸ್ಥಿತಿಯಲ್ಲಿ ಮನಸ್ಸನ್ನು ಹತೋಟಿಗೆ ತಂದುಕೂರಲು ಯೋಗವಿರಬೇಕು.
ಜಗನ್ಮಾತೆ ಜಗಧೀಶ್ವರರ ನಡುವೆಯೇ ಅಂತರ ಹೆಚ್ಚಿಸಿ ಆಳುವ ಅಸುರರು  ಕಲಿಯುಗದಲ್ಲಿ ಬೆಳೆದಿರೋದಕ್ಕೆ ಕಾರಣ  ಅಜ್ಞಾನದ ಶಿಕ್ಷಣವಾಗಿದೆ.ಯಾವಾಗ ಸ್ತ್ರೀ ಯನ್ನು ದುರ್ಭಳಕೆ ಮಾಡಿಕೊಂಡು ಆಳಿದರೋ ಆಗಲೇ ಭೂಮಿಯಲ್ಲಿ ಅಸುರ ಶಕ್ತಿ ಬೆಳೆದಿದೆ.ಯುಗಯುಗದಿಂದಲೂ ನಡೆದಿದ್ದರೂ ಕಲಿಗಾಲದ ಕಲಿಕೆ ಆಕಾಶದೆತ್ತರ ಬೆಳೆದು ಭೂಮಿಯ ತತ್ವ ಸತ್ವ ಸತ್ಯಕ್ಕೆ ವಿರುದ್ದವಾದಾಗಲೇ  ಭೂಕಂಪ ಪ್ರಳಯ ಇನ್ನಿತರ ಪ್ರಕೃತಿವಿಕೋಪಗಳಾಗಿ ಜೀವ ಹೋಗೋದು.
ಜೀವವಿದ್ದರೆ ತಾನೆ ಜೀವನ? ಜೀವಕೊಟ್ಟು ಜೀವನ‌ಕೊಟ್ಟು ಭೂಮಿಯಲ್ಲಿ ಬದುಕಲು ಬಿಟ್ಟರೆ ಅದನ್ನು ದುರ್ಭಳಕೆ ಮಾಡಿಕೊಂಡು ಆಳಿ ಅಳಿಸಿದರೆ  ಉದ್ದಾರವಾಗುವರೆ?  ಇದೀಗ ಧಾರ್ಮಿಕ ಕ್ಷೇತ್ರದಲ್ಲಿ ನಡೆದಿರೋದು ಭಾರತಕ್ಕೆ ಸಂಕಟ ತಂದಿದೆ. ಇದರ ಫಲ ಭಾರತೀಯರು ಅನುಭವಿಸಬೇಕಾಗಿದೆ. ಸತ್ಯ ತಿಳಿಸಬಾರದು ಎಂದರೆ ಸತ್ಯವೇ ದೇವರಾಗೋದಿಲ್ಲ. ದೈವತ್ವದೆಡೆಗೆ ಮಾನವ ನಡೆಯದೆ ಮಹಾತ್ಮರಾಗೋದಿಲ್ಲ.ಮಹಾತ್ಮರಾಗದೆ ಯೋಗಿಯಾಗೋದಿಲ್ಲ. ಯೋಗಿಯಾಗದೆ ಮುಕ್ತಿ ಸಿಗೋದಿಲ್ಲ
ಇಲ್ಲಿ ಪರಮಾತ್ಮನಜೀವಾತ್ಮ ಸೇರೋದು ಮಹಾಯೋಗ. ಇದಕ್ಕೆ ಯೋಗ್ಯ ಗುರು ಶಿಕ್ಷಣ ಜ್ಞಾನ ಬೇಕಷ್ಟೆ.ಇದು ಒಳಗೇ ಇರುವ ಆತ್ಮಜ್ಞಾನದಿಂದ ಸೇರಿಕೊಂಡು ಬೆಳೆದಾಗಲೇ ಪರಮಾತ್ಮನಿಗೆ ನಮ್ಮ ಜೀವ‌ಮೀಸಲಾಗಿರುತ್ತದೆ.ಮೀಸಲಾತಿ ಹೊರಗಿನಿಂದ ಬೆಳಸಿದಷ್ಟೂ ಪರಕೀಯರ ವಶಕ್ಕೆ ಜೀವ ಹೋಗಿ ಸೇರುತ್ತದೆ. ಇದರಿಂದಾಗಿ ಸಾಲದ ಜೊತೆಗೆ ಅಜ್ಞಾನ ಬೆರೆಸಿಕೊಂಡು ಅಸುರಶಕ್ತಿ ಭೂಮಿ ಆಳುತ್ತದೆ. ಅಸುರರಿಗೆ ಶಾಂತಿ ಸತ್ಯ ಧರ್ಮದ ಅರಿವಿರದ ಕಾರಣ ಭೂಮಿಯಲ್ಲಿ ಅಶಾಂತಿ ಅತೃಪ್ತಿ ಹೆಚ್ಚುವುದು. ಅತೃಪ್ತ ಆತ್ಮಗಳು  ಮಾನವನೊಳಗೇ ಇರೋವಾಗ ಸ್ವತಂತ್ರ ರು ಯಾರು?
ಈ ಲೇಖನ ಅಧ್ಯಾತ್ಮ ಚಿಂತಕರಿಗೆ ಅರ್ಥ ವಾದರೆ  ಉತ್ತಮ.
ಕಾರಣ ನಮ್ಮ ದೇಶದ ಈ ಸ್ಥಿತಿಗೆ ಕಾರಣವೇ ಅರ್ಧ ಸತ್ಯದ ಅಧ್ಯಾತ್ಮ ಪ್ರಚಾರವಾಗಿದೆ. ಪ್ರತಿಯೊಂದು ವಿಚಾರದಲ್ಲೂ ವ್ಯವಹಾರ ನಡೆಸಿಕೊಂಡು ಹಣ ಅಧಿಕಾರ ಸ್ಥಾನ ಪಡೆಯಬಹುದು ಆದರೆ ಮುಕ್ತಿ ಮೋಕ್ಷಕ್ಕೆ ಇದೇ ಅಡೆತಡೆ ಎನ್ನುವ ಸತ್ಯವರಿತವರು  ಧರ್ಮ ಜಾತಿ ಪಕ್ಷಗಳ‌ನಡುವೆ ದ್ವೇಷ ಅಂತರ ಬೆಳೆಸದೆ  ಸ್ವತಂತ್ರ ವಾಗಿರುವ ಸತ್ಯದೆಡೆಗೆ ನಡೆಯುವರು. ಇಷ್ಟಕ್ಕೂ ನಾವ್ಯಾರು? ಮಾನವರು ಭಾರತೀಯರು ಎಂದರೆ ನಮ್ಮಲ್ಲಿ ಮನುಷ್ಯತ್ವದ ಗುಣಜ್ಞಾನದ ಶಿಕ್ಷಣವಿದೆಯೆ? ಭಾರತೀಯತೆ ಇದೆಯೆ? ಶಿಕ್ಷಣವೇ ಪರಕೀಯರ ವಶಕ್ಕೆ ಬಿಟ್ಟು ದೇವಾಲಯ ದೇವತೆಗಳನ್ನು ಆಳುತ್ತಿರುವುದರಲ್ಲಿ ಅರ್ಥ ವಿದೆಯೆ?
ಈ ಪ್ರಶ್ನೆಗೆ ಈವರೆಗೆ ಯಾರೂ ಉತ್ತರ ನೀಡಿಲ್ಲ ಬದಲಾಗಿ ಪ್ರಶ್ನೆ ಮಾಡಲು ನಿಮಗೇನು ಅಧಿಕಾರವಿದೆ? ನಿಮ್ಮಲ್ಲಿ ‌ಹಣವಿದೆಯೆ? ಎನ್ನುವ ವರಿದ್ದಾರೆಂದರೆ ಎತ್ತ ಸಾಗಿದೆ ಭಾರತ?  
ಮಹಾತ್ಮರನ್ನಾಗಲಿ ದೇವರನ್ನಾಗಲಿ ಸ್ತ್ರೀ ಯರನ್ನಾಗಲಿ ಧರ್ಮದಿಂದ  ಆಳಲು ಕಷ್ಟವಿದೆ.ಅದಕ್ಕಾಗಿ ವಾಮಮಾರ್ಗ ಹಿಡಿದು ಅಸತ್ಯ ಅನ್ಯಾಯ ಅಧರ್ಮ ಬೆಳೆಸಿ ರಾಜಕೀಯದಿಂದ ಭ್ರಷ್ಟಾಚಾರದ ಹಣದಿಂದ  ದುಷ್ಟರ ಸಹವಾಸದಿಂದ ಹೆದರಿಸಿ ಬೆದರಿಸಿದರೆ  ಸಿಗೋದು ಮುಕ್ತಿಯಲ್ಲ  .ಅತಂತ್ರ ಸ್ಥಿತಿ.ಅತೃಪ್ತ ಆತ್ಮದಿಂದ ಆತ್ಮದುರ್ಭಲ ಭಾರತವಾಗುತ್ತದೆ. ವಿಶ್ವ ಗುರು ಸ್ಥಾನಪಡೆದ ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿಕೊಂಡು  ಆತ್ಮನಿರ್ಭರ ಎಂದರೆ ಇದು ಭೌತಿಕ ಸತ್ಯವಷ್ಟೆ.ಅಧ್ಯಾತ್ಮ ಸತ್ಯ ವಾಗದಲ್ಲವೆ?
ಇನ್ನೆಷ್ಟು  ವರ್ಷ ಈ ಅಜ್ಞಾನದ ಜೀವನ. ನಿಜ ಜ್ಞಾನ ಬಂದ ಮೇಲೆ ಭೌತಿಕದ ಅಸತ್ಯ ಕಣ್ಣಿಗೆ ಕಾಣುತ್ತದೆ ಆದರೆ ಅದನ್ನು ಸಾಭೀತುಪಡಿಸಲಾಗದು ಅನುಭವಿಸಿಯೇ ತೀರಬೇಕು.ಅದಕ್ಕೆ ಸತ್ಯ ತೆಪ್ಪಗಿರುತ್ತದೆ ಅಸತ್ಯ ಹರಿದಾಡುತ್ತಿರುತ್ತದೆ.  ಸತ್ಯದಿಂದ  ಜ್ಞಾನ ಬೆಳೆದರೆ ಅಸತ್ಯದಿಂದ ಅಜ್ಞಾನ ಬೆಳೆಯುತ್ತದೆ.ಸತ್ಯ ಸುರರಾದರೆ ಅಸತ್ಯ ಅಸುರರಾಗುತ್ತಾರೆ. ಕೊನೆಯಲ್ಲಿ ಅಸುರರೊಳಗೇ ಸುರರು ಬಂಧಿಗಳಾಗಿ ಒದ್ದಾಡುವಾಗ ಭಗವಂತ ತನ್ನ ಕೆಲಸಕ್ಕೆ ಅವಧೂತರನ್ನು ಕಳಿಸುವನು. ಅವಧೂತರಿಗೆ ಇಬ್ಬರನ್ನೂ ಸರಿದಾರಿಗೆ ತರುವ ಶಕ್ತಿಯಿದ್ದರೂ  ನೇರವಾಗಿ ಮಾಡಲಾರರು. ಕಾರಣ ಅವರಿಗೆ ಅಧಿಕಾರ ಸ್ಥಾನ ಹಣದ  ಬಯಕೆಯಿರದು. ಹಾಗಂತ ಅದಿಲ್ಲದೆ ಜನ ಬದಲಾಗದ ಕಾರಣ ಅದು ಬರೋವರೆಗೂ  ಕಾಯಲೇಬೇಕು. ಬಂದಾಗ ಸತ್ಯಾಸತ್ಯತೆಯನ್ನು  ಹೊರಹಾಕಲು ಸಾಧ್ಯ.ಒಟ್ಟಿನಲ್ಲಿ ಇಲ್ಲಿ ಯಾರೂ  ಸಂಪೂರ್ಣ ರಲ್ಲ ಸರ್ವಜ್ಞ ರಲ್ಲ. ಭೂಮಿಯನ್ನು ಆಳುತ್ತಿಲ್ಲವಾದರೂ ಭೂಮಿಯ ಮೇಲೇ ನಿಂತು ನನ್ನದು ಭೂಮಿ ಎನ್ನುವ ಅಜ್ಞಾನದ ಅಹಂಕಾರ ಸ್ವಾರ್ಥ ಕ್ಕೆ ಬಲಪಶುವಾಗುತ್ತಾ ಪಶುಗಳಿಗಿಂತ ಕೀಳಾದ ಜೀವನ ನಡೆಸುವ ನರರಷ್ಟೆ. ಕೆಲವರು ಉತ್ತಮ ಜೀವನ ನಡೆಸಿದ್ದರೂ ಕಣ್ಣಿಗೆ ಕಾಣೋದಿಲ್ಲ.ಪ್ರಾಣ ಪಶು ಪಕ್ಷಿ ಜೀವ ಜಂತುಗಳ ಒಳಗೆ ಇರುವ ಜೀವ ಪ್ರಾಣದಿಂದ  ಭೂಮಿ ನಡೆದಿದೆಯೇ ಹೊರತು ಮನುಷ್ಯನಿಂದಲ್ಲ ಎಂದರೆ ಮಾನವನಿಗೆ ಅವಮಾನವೆ? ಇದೇ ಸತ್ಯ. ತನಗೆ ತಾನೇ ಮೋಸಹೋದರೆ ಇದು  ಮಿತಿಮೀರಿದ ಅಸತ್ಯ ಅಧರ್ಮದ ಅಹಂಕಾರ ಸ್ವಾರ್ಥ ಅಜ್ಞಾನದಿಂದಷ್ಟೆ.ಇದು ಒಳಗೇ ಅಡಗಿರುವಾಗ ಹೊರಗಿನವರು ಬಂದು ಆಳೋದು ಸಹಜ.

No comments:

Post a Comment