ಒಬ್ಬಳು ಸ್ತ್ರೀ ಅಧ್ಯಾತ್ಮ ಚಿಂತನೆಯ ವಿಚಾರ ಮಂಡನೆ ಮಾಡೋದಕ್ಕೆ ಭಾರತೀಯರು ತಡೆಯುತ್ತಾರೆ ಅದಕ್ಕೆ ಭಾರತ ಈ ಸ್ಥಿತಿಗೆ ತಲುಪಿದೆ. ಜ್ಞಾನದೇವತೆಯನ್ನು ವಿಗ್ರಹದ ರೂಪದಲ್ಲಿಟ್ಟು ಪೂಜಿಸಿ ಬೇಡಿದರೆ ವಿದ್ಯೆ ಬರಬಹುದು.ಜ್ಞಾನಕ್ಕೆ ಆ ವಿದ್ಯೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕಷ್ಟೆ.ಎಷ್ಟೋ ಅವಿದ್ಯಾವಂತರು ಜ್ಞಾನಿಗಳಾಗಿರುವಾಗ ತಾಯಿ ಒಲಿಯೋದು ವಿದ್ಯೆಗೋ ಜ್ಞಾನಕ್ಕೋ?
ವಿದ್ಯೆಗಿಂತ ಜ್ಞಾನವೇ ಮೇಲೆಂದರು ಗುರುಹಿರಿಯರು. ಇಂದು ವಿದ್ಯೆ ಇದೆ ಜ್ಞಾನವಿಲ್ಲದೆ ಸತ್ಯವನ್ನು ಅಪಾರ್ಥ ಮಾಡಿಕೊಂಡು ವ್ಯವಹಾರಕ್ಕಿಳಿದು ಹಣ ಮಾಡುವವರಿಗೆ ಹೆಚ್ಚಿನ ಸಹಕಾರ.ಇದು ಪುರುಷರಲ್ಲಿ ಹೆಚ್ಚು .ಮಿತಿಮೀರಿದ ವಿದ್ಯೆಯೂ ಅಪಾಯವೆ. ಪ್ರತಿಯೊಬ್ಬರೊಳಗೂ ಅಡಗಿರುವ ವಿಶೇಷವಾದ ಜ್ಞಾನ ಗುರುತಿಸುವ ಶಿಕ್ಷಣ ಕೊಡದೆ ಜನರನ್ನು ಆಳುವ ರಾಜಕೀಯದಿಂದ ಭಾರತ ಇಂದು ಈ ಸ್ಥಿತಿಗೆ ತಲುಪಿದೆ.ವೇದ ಶಾಸ್ತ್ರ ಪುರಾಣಗಳೇನೋ ಅಲ್ಲಲ್ಲಿ ಪ್ರಚಾರ ಆಗಿದ್ದರೂ ಅದರ ಬಳಕೆಯಿಂದ ಏನಾದರೂ ಜನಸಾಮಾನ್ಯರಲ್ಲಿ ಬದಲಾವಣೆ ಮಾಡಲಾಗಿದೆಯೆ? ಎಂದರೆ ಒಂದು ಚೌಕಟ್ಟನ್ನು ಭದ್ರಪಡಿಸಲೇ ಸಾಧ್ಯವಾಗಿಲ್ಲ.ಅದರಲ್ಲೂ ಲಿಂಗಬೇಧ ಜಾತಿ ಬೇದ ಪಕ್ಷಬೇದವಿದ್ದಾಗ ತತ್ವ ವಿರದು. ಒಟ್ಟಿನಲ್ಲಿ ಭಾರತ ಮಾತೆಯ ಒಳಗಿದ್ದು ಅವಳ ಶಕ್ತಿಯನ್ನು ಗುರುತಿಸದವರು ಭಾರತವನ್ನು ಆಳಲು ಹೊರಟರೆ ದೇವರು ಕಾಣೋದಿಲ್ಲ.ಅತೃಪ್ತ ಆತ್ಮಗಳು ಎಲ್ಲೆಂದರಲ್ಲಿ ಹರಿದಾಡುತ್ತಿರೋದಕ್ಕೆ ಕಾರಣವೇ ಆತ್ಮತೃಪ್ತಿ ಹೊಂದುವ ವ ಜ್ಞಾನದ ವಿದ್ಯೆ ಕೊಡದಿರೋದು.
ಕೆಲವು ಸತ್ಯ ಎಲ್ಲರಿಗೂ ಅರ್ಥ ವಾದರೂ ಒಪ್ಪಿಕೊಳ್ಳುವುದು ಕಷ್ಟವಿದೆ.ಕಾರಣ ಅಸತ್ಯ ದ ವಿಚಾರಗಳು ಮನಸ್ಸಿನಲ್ಲಿ ಮನೆ ಮಾಡಿಕೊಂಡು ಮುಂದೆ ನಡೆಸಿರುವಾಗ ಆಳವಾಗಿ ಹಿಂದೆ ಉಳಿದ ಸತ್ಯ ರುಚಿಸೋದಿಲ್ಲ. ಎಷ್ಟು ಸತ್ಯವನ್ನು ಸ್ತ್ರೀ ಶಕ್ತಿಯನ್ನು ಹಿಂದೆ ತಳ್ಳಿದರೂ ಅದರ ಪ್ರಭಾವ ಮುಂದೆ ತೋರಿಸುತ್ತದೆ ಎಂದು ತಿಳಿದರೆ ವಾಸ್ತವದಲ್ಲಿ ಸತ್ಯದೆಡೆಗೆ ನಡೆಯಬಹುದು. ಮಿಥ್ಯದ ರಾಜಕೀಯದಿಂದ ಹಣ ಸಿಕ್ಕರೆ ಸತ್ಯದ ರಾಜಕೀಯದಿಂದ ಜ್ಞಾನೋದಯವಾಗುತ್ತದೆ. ಅದಕ್ಕೆ ರಾಜಕೀಯವಿರಲಿ ಅದರಲ್ಲಿ ಸತ್ಯವಿರಲಿ. ಸತ್ಯ ಧರ್ಮ ವು ಜೊತೆಯಾಗಿರಲಿ.ಹಿಂದಿನ ಮಹರ್ಷಿಗಳು ಸ್ವತಃ ಸತ್ಯಸಂಶೋಧನೆ ನಡೆಸಿಕೊಂಡು ಸ್ವತಂತ್ರ ವಾಗಿದ್ದು ರಾಜರಿಗೆ ಉಪದೇಶ ನೀಡಿ ಸಂಸಾರಸ್ಥರಾಗಿದ್ದರು. ಈಗರಾಜಕಾರಣಿಗಳ ಹಿಂದೆ ಜನರ ಹಿಂದೆ ನಡೆದು ಧರ್ಮಸತ್ಯದ ವಿಚಾರಮಾಡಿದರೂ ಹಣವಿಲ್ಲದೆ ಜನಬಲವಿರದು ಹಣಕ್ಕಾಗಿ ರಾಜಕಾರಣ ಮಾಡಬೇಕು ಇಲ್ಲ ರಾಜಕಾರಣಿಗಳ ಹಿಂದೆ ನಡೆಯಲೇಬೇಕಾಗಿದೆ. ಪ್ರಜಾಪ್ರಭುತ್ವ ನಡೆದಿರೋದು ಹೀಗೆ ಇದನ್ನು ತಡೆಯಲಾಗದು ಹಾಗಂತ ಇದಕ್ಕೆ ಸಹಕರಿಸುತ್ತಿರುವ ರಾಜಕಾರಣಿಗಳಿಗೆ ಜನಸಾಮಾನ್ಯರಿಗೆ ಉತ್ತಮ ಜ್ಞಾನದ ಶಿಕ್ಷಣ ನೀಡುವುದು ಧರ್ಮ. ಅದರಲ್ಲೂ ಜ್ಞಾನದೇವತೆಯಾಗಿರುವ ಸ್ತ್ರೀ ಯರಿಗೆ ಧಾರ್ಮಿಕ ಶಿಕ್ಷಣ ನೀಡಿದಾಗಲೇ ಭಾರತ ಆತ್ಮನಿರ್ಭರ ವಾಗಲು ಸಾಧ್ಯವಿದೆ. ಒಳಗಿರುವ ಶಕ್ತಿ ಬಿಟ್ಟು ಹೊರಬಂದವರಿಗೆಮಣೆಹಾಕಿದರೆ ಆತ್ಮದುರ್ಭಲ ವಾಗುತ್ತದೆ. ಮೊದಲು ಆತ್ಮಾವಲೋಕನ.
ವಿಜ್ಞಾನ ಜಗತ್ತಿನಲ್ಲಿ ಇದು ಕಷ್ಟವಿದೆ ಹೀಗಾಗಿ ಪ್ರಾಥಮಿಕ ಹಂತದಲ್ಲಿ ಅಧ್ಯಾತ್ಮ ಶಿಕ್ಷಣಕ್ಕೆ ಒತ್ತುಕೊಟ್ಟು ನಂತರ ಭೌತವಿಜ್ಞಾನದ ಶಿಕ್ಷಣ ನೀಡಿದಾಗಲೇ ಭೂಮಿಯಮೇಲೆ ಹೇಗೆ ಯಾರಿಗೆ ಎಷ್ಟು ಸಹಕಾರ ಸಹಾಯ ಮಾಡಿದರೆ ಉತ್ತಮವೆನ್ನುವ. ಜ್ಞಾನ ಮಾನವನಿಗೆ ಬರುತ್ತದೆ. ತನ್ನ ಜ್ಞಾನವನ್ನು ತಾನೇ ಅರ್ಥ ಮಾಡಿಕೊಳ್ಳಲು ಸೋತಾಗಲೇ ಪರಕೀಯರ ವಶದಲ್ಲಿ ಜೀವನ ಸಿಲುಕುವುದು. .
ಭಾರತೀಯತೆಯನ್ನು ಕಲಿಸಬಹುದು ಆದರೆಬೆಳೆಸುವುದು ಪೋಷಕರ ಧರ್ಮ. ಇದಕ್ಕೆ ಮೊದಲ ಗುರುವೇ ತಾಯಿ .ಇವಳಿಗೇ ಸಹಕಾರ ಸಿಗದಿದ್ದರೆ ಸಂಸಾರ ಹೇಗಿರುವುದು? ಸ್ತ್ರೀ ಯರು ಜಾಗೃತರಾದರೆ ಬದಲಾಗಬಹುದು. ಹೊರಗಿನ ಹೋರಾಟ ಹಾರಾಟ ಮಾರಾಟದಲ್ಲಿ ಪ್ರಗತಿ ಹೊಂದುವಮೊದಲು ಒಳಗಿನಜ್ಞಾನದಿಂದ ಹೋರಾಟ ಮಾಡಿದರೆ ಒಳಗೇ ತುಂಬಿರುವ ಕಲ್ಮಶಗಳನ್ನು ನಾಶಮಾಡುವಷ್ಟು ಶಕ್ತಿ ಸ್ತ್ರೀ ಗಿದೆ.ಇದಕ್ಕೆ ಸ್ತ್ರೀ ಗೆ ಸ್ತ್ರೀ ಸಹಕಾರ ಅಗತ್ಯವಾಗಿದೆ. ಪುರುಷರಾದರೂ ಸಹಕರಿಸುವರು ಆದರೆ ಸ್ತ್ರೀ ಸಹಕಾರ ಇಂದು ಅತಿಮುಖ್ಯವಾಗಿದೆ.ಧಾರ್ಮಿಕ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಾಗಬೇಕಿದೆ. ಹಿಂದಿನ ವಾದ ವಿವಾದಕ್ಕಿಂತ ಇಂದಿನಚರ್ಚೆ ಹೆಚ್ಚು ಬದಲಾವಣೆಗಳಿಗೆ ದಾರಿಯಾಗುತ್ತದೆ.
ಭೌತಿಕದಲ್ಲಿ ರಾಜಕೀಯ ಚರ್ಚೆ/ನಿರಂತರವಾಗಿ ನಡೆದಿದೆ ಆದರೆ ಅದರೊಳಗೆ ಹೊಕ್ಕಿರುವ ಧಾರ್ಮಿಕ ಚರ್ಚೆ ಗೆ ಅವಕಾಶಕೊಡೋದಿಲ್ಲವೆಂದಾಗ ಧರ್ಮ ಕುಸಿದು ಅಧರ್ಮ ಬೆಳೆಯುತ್ತದೆ. ಕಲಿಗಾಲದ ಕಲಿಕೆಯೇ ಇದಕ್ಕೆ ಕಾರಣ.
ಸ್ತ್ರೀ ಯಿಲ್ಲದೆ ಜನ್ಮವಿಲ್ಲ ಭೂಮಿಯಿಲ್ಲದೆ ಮನುಕುಲವಿಲ್ಲ ಆದರೂ ಅಜ್ಞಾನದಲ್ಲಿ ಮಾನವ ಸ್ತ್ರೀ ಯನ್ನು ಭೂಮಿಯನ್ನು ಆಳಲು ಹೋಗಿ ಜನ್ಮಜನ್ಮಗಳ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸುವಂತಾಗಿದೆ. ಇದನ್ನು ತಡೆಯಲು ರಾಜಕೀಯದಿಂದ ಕಷ್ಟ ರಾಜಯೋಗದಿಂದ ಸಾಧ್ಯವಿದೆ ಎಂದಿದ್ದಾರೆ ಮಹಾತ್ಮರುಗಳು. ಯೋಗದಿಂದ ಮಾಡುವಕರ್ಮಕ್ಕೂ ಭೋಗಕ್ಕಾಗಿ ಮಾಡುವ ಧರ್ಮ ಕಾರ್ಯಕ್ಕೂ ವ್ಯತ್ಯಾಸವಿದೆ. ಇದೀಗ ಭಾರತ ಭೋಗದೆಡೆಗೆ ನಡೆದು ಆತ್ಮದುರ್ಭಲ ವಾಗಿದೆ. ಕೆಲವರಲ್ಲಿ ಯೋಗಶಕ್ತಿ ಇದ್ದರೂ ಸ್ತ್ರೀ ವಿಚಾರದಲ್ಲಿ ಹಿಂದುಳಿದಿದೆ. ಇದರಲ್ಲಿ ಕಷ್ಟ ನಷ್ಟ ಮನುಕುಲಕ್ಕೆ. ಕಾರಣ ಒಲಿದರೆ ನಾರಿಮುನಿದರೆಮಾರಿ.ಭೋಗದಲ್ಲಿ ಸೋಮಾರಿತನ ಹೆಚ್ಚು.ಸೋ 'ಮಾರಿ'ಯ ದರ್ಶನ ವಾದರೆ ಅಜ್ಞಾನ ಬೆಳೆದಿದೆ ಎಂದರ್ಥ. ನಾವೆಲ್ಲರೂ ಭೂತಾಯಿಯ ಮಕ್ಕಳಾದಾಗ ಭೂ ತತ್ವವನರಿತು ಆಕಾಶತತ್ವದೆಡೆಗೆ ಹೋಗಲು ಇಬ್ಬರಿಗೂ ಒಂದೇ ಶಿಕ್ಷಣ ಕೊಡದಿದ್ದರೂ ಅವರಲ್ಲಿ ತತ್ವಜ್ಞಾನವಿರಬೇಕು.
ಜ್ಞಾನದಿಂದ ವಿಜ್ಞಾನಜಗತ್ತು ಬೆಳೆದಾಗ ಶಾಂತಿ ತೃಪ್ತಿ ಜೀವನ್ಮುಕ್ತಿ.ಎಲ್ಲಿರುವರು ಮಹಾತ್ಮರುಗಳು? ಪ್ರತಿಮೆಯಲ್ಲೋ ಪ್ರತಿಭೆಯಲ್ಲೋ? ಪ್ರತಿಭೆಗಳು ಹಣದಿಂದ ಬೆಳೆದಿವೆಯೆ? ಜ್ಞಾನದಿಂದ ಬೆಳೆದ ಪ್ರತಿಭೆಗಳಿಗೆ ಆತ್ಮವಿಶ್ವಾಸ ವಿರುತ್ತದೆ ಅಹಂಕಾರ ವಲ್ಲ. ಅತಿಯಾದ ಅಹಂಕಾರ ಸ್ವಾರ್ಥ ವೇ ಅಸುರಿ ಗುಣವಾಗಿದೆ. ಹಾಗಾದರೆ ಮನುಕುಲ ಎಡವಿದ್ದೆಲ್ಲಿ?
ಸಂಸ್ಕಾರ ಎಂದರೆ ಸಂಸ್ಕರಿಸೋದಷ್ಟೆ.ವಾಸ್ತವದಲ್ಲಿ ನಮ್ಮ ಈ ಅಹಂಕಾರ ಸ್ವಾರ್ಥ ದಿಂದ ನಮ್ಮ ಜ್ಞಾನ ನಮಗೆ ಕಾಣಿಸದೆ ದುರ್ಭಳಕೆ ಆಗಿರುವಾಗ ನಮ್ಮನ್ನು ನಾವು ಶುದ್ದಗೊಳಿಸಿಕೊಂಡು ಒಗ್ಗಟ್ಟಿನಿಂದ ಉತ್ತಮ ಶಿಕ್ಷಣ ಮಕ್ಕಳಿಗೆ ಕೊಡುವತ್ತನಡೆದರೆ ಮನಸ್ಸು ಶುದ್ದವಾಗುತ್ತಾ ಬೇಧರಹಿತ ತತ್ವದೆಡೆಗೆ ಮನುಕುಲ ನಡೆಯಲು ಸಾಧ್ಯ.ಮನೆಮನೆಯೊಳಗೆ ಬೇಧತುಂಬಿರುವಾಗ ಹೊರಗಿನ ಬೇಧವನ್ನು ಬೇಧಿಸಲಾಗದು. ಒಟ್ಟಿನಲ್ಲಿ ನಮ್ಮ ಚಿಂತನೆಗಳು ಉತ್ತಮವಿದ್ದರೂ ಸಹಕಾರವಿಲ್ಲದ ಸಮಾಜದಲ್ಲಿ ಇದು ಸದ್ಬಳಕೆ ಆಗದಿರೋದಕ್ಕೆ ಈ ಅಂತರಗಳೇ ಕಾರಣ.
No comments:
Post a Comment