ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆಗೋದನ್ನು ತಡೆಯಲಾಗದು,ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯೋದಿಲ್ಲ....ಹೀಗೇ ಪ್ರತಿಯೊಂದು ವಿಷಯದಲ್ಲೂ ಸಕಾರಾತ್ಮಕ ವಾಗಿ ತಿಳಿದು ಬಿಟ್ಟು ಕೊಟ್ಟು ಮುಂದೆ ಮುಂದೆ ಹೋದವರಿಗೆ ಪರಮಾತ್ಮನ ಸತ್ಯದ ಅರಿವಾಗಿದೆ ದರ್ಶನವಾಗಿದೆ.
ಇದನ್ನು ಈಗಲೂ ಪ್ರಚಾರ ಮಾಡಬಹುದು. ಆದರೆ ಪ್ರಚಾರ ಮಾಡುವವರಿಗೆ ಅಧಿಕಾರ ಹಣವಿದ್ದರೆ ಜನಬಲವಿರುತ್ತದೆ.
ಹೀಗಾಗಿ ಜನರ ಹಣವನ್ನು ಬಳಸಿಕೊಂಡು ಅಧಿಕಾರ ಪಡೆದು ಶ್ರೀಮಂತ ರಾದವರಿಗೂ ಚಿಂತೆ ತಪ್ಪಿದ್ದಲ್ಲ. ಯಾವಾಗ ಅಧಿಕಾರ ಹೋಗುವುದೋ ಯಾವಾಗ ಜನರಿಗೆ ಸತ್ಯ ಅರ್ಥ ಆಗಿ ವಿರುದ್ದ ನಿಲ್ಲುವರೋ ಯಾರಿಗೂ ಗೊತ್ತಾಗೋದಿಲ್ಲ. ಒಟ್ಟಿನಲ್ಲಿ ಆ ಪರಮಾತ್ಮ ಯಾರ ಮೂಲಕವಾದರೂ ಸತ್ಯ ಹೊರಹಾಕಬಹುದು .ಆದರೆ ಸತ್ಯ ಅರ್ಥ ಮಾಡಿಕೊಳ್ಳಲು ನಮ್ಮಲ್ಲಿ ಸತ್ಯಜ್ಞಾನವಿರಬೇಕಷ್ಟೆ. ಹೊರಗಿನ ಸತ್ಯ ಒಳಗಿನ ಸತ್ಯಕ್ಕೆ ದೂರವಾಗಿದ್ದು ವಿರುದ್ದವಿದ್ದರೆ ಚಿಂತೆಯೇ ಹೆಚ್ಚು.
ಇದರಲ್ಲಿ ಯಾರು ಸತ್ಯವಂತರು ಎನ್ನುವ ಬದಲಾಗಿ ನಾನೆಷ್ಟು ಸತ್ಯದಲ್ಲಿದ್ದೇನೆಂದು ತಿಳಿದು ನಡೆದಾಗಲೇ ನಮ್ಮ ಸಮಸ್ಯೆಗೆ ಕಾರಣವೇ ಅಸತ್ಯ ಅಧರ್ಮದ ವ್ಯವಹಾರವಾಗಿರುತ್ತದೆ.
ವ್ಯವಹಾರಕ್ಕೆ ಇಳಿದಾಗ ಸತ್ಯ ಹಿಂದುಳಿಯುವುದು ಸಹಜ.ಆದರೂ ವ್ಯವಹಾರದಲ್ಲಿ ಧರ್ಮ ವಿದ್ದರೆ ನಾವೂ ಬದುಕಿ ಇತರರನ್ನೂ ಬದುಕಲು ಬಿಡುವರು. ಇಲ್ಲವಾದರೆ ತನ್ನ ಬದುಕಿಕಾಗಿ ಇತರರನ್ನು ದಾರಿತಪ್ಪಿಸಿ ಆಳುವರು. ಆಳಿದವರೂ ಆಳಾಗಿ ದುಡಿದು ಋಣ ತೀರಿಸಲೇಬೇಕೆನ್ನುವುದು ಸನಾತನಧರ್ಮದ ಸಿದ್ದಾಂತ.
ಸಿದ್ದಾಂತ ಗಳು ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನೆಡೆಗೆ ನಡೆಸುತ್ತವೆ.ಆದರೆ ನಮ್ಮ ಚಿಂತನೆಯೇ ಪರಕೀಯರೆಡೆಗೆ ಹೊರಟಾಗ ಪರಮಸತ್ಯ ಧರ್ಮ ಕಾಣದೆ ಚಿಂತೆ ಹೆಚ್ಚುವುದು.
ಒಟ್ಟಿನಲ್ಲಿ ದೇವರನ್ನು ಬೇಡೋದು,ಪೂಜಿಸೋದು ಆರಾಧಿಸೋದು ಎಲ್ಲಾ ಮಾಡಬಹುದು. ಯಾವುದನ್ನು ಬೇಡಬೇಕು,ಯಾರನ್ನು ದೇವರೆನ್ನಬೇಕು,ಯಾವುದನ್ನು ಪೂಜಿಸಬೇಕು ಆರಾದಿಸಬೇಕೆನ್ನುವ ಜ್ಞಾನ ಅಗತ್ಯವಿದೆ.ಇದಕ್ಕಾಗಿ ಸದ್ಗುರುಗಳ ಆಶೀರ್ವಾದ ಸಹಕಾರ ಸಲಹೆ ಸೂಚನೆಗಳನ್ನು ಅನುಸರಿಸಿದರೆ ಅದೇ ದೈವತ್ವದೆಡೆಗೆ ನಡೆಸುತ್ತಾ ಚಿಂತೆಯಿಲ್ಲದೆ ಜೀವನ ನಡೆಸಬಹುದೆನ್ನುವರು ಅಧ್ಯಾತ್ಮ ಚಿಂತಕರು.
ತಾಯಿಯೇ ಮೊದಲ ಗುರು ಇವಳ ಅಧ್ಯಾತ್ಮ ಶಕ್ತಿಯಿಂದ ಜಗತ್ತು ನಡೆದಿದೆ.ಜಗದೀಶ್ವರನ ಜೊತೆಗೆ ಜಗದೀಶ್ವರಿಯ ಕೃಪೆ ಇದ್ದರೆ ಚಿಂತೆ ಇದ್ದರೂ ನಿಶ್ಚಿಂತೆಯೆಡೆಗೆ ನಡೆಯುತ್ತದೆ ಜೀವನ.
No comments:
Post a Comment