ಸಣ್ಣ ವಯಸ್ಸಿರುವಾಗ ನನಗೆ ಎಲ್ಲೋ ಮೂಲೆಯಲ್ಲಿರುವ ಒಂದು ಕೂಗು ಕೇಳುತ್ತಿತ್ತು. ಅದರೊಂದಿಗೆ ಮೌನವಾಗಿ ಮಾತನಾಡಿದರೂ ಹೊರಗಿನಮಾತು ಕಥೆ ಬಗ್ಗೆ ಹೆಚ್ಚಿನ ಗಮನ ಕೊಡುವಾಗ ಒಳಗಿನ ದ್ವನಿ ಅಡಗಿ ಹೋಗಿತ್ತು.
ಹೀಗೇ ಬೆಳೆದಂತೆ ಒಮ್ಮೊಮ್ಮೆ ಎಲ್ಲೋ ಸರಿಯಿಲ್ಲ.ಸತ್ಯಕ್ಕೆ ಬೆಲೆಯಿಲ್ಲ.ಅಸತ್ಯ ಹೇಳಿದರೆ ನಂಬುವರು ಎಂದಾಗ ಅಸತ್ಯ ಹೇಳೋದರಿಂದ ಯಾರಿಗೂ ಬೇಸರವಾಗದು ಎನ್ನುವುದರ ಅರಿವಾಯಿತು.ಪ್ರತಿಯೊಂದು ಅಸತ್ಯದ ನುಡಿಗೆ ತಕ್ಷಣದ ಪ್ರತಿಕ್ರಿಯೆ ಬರಲು ಪ್ರಾರಂಭವಾದಾಗ ಸತ್ಯವೇ ಉತ್ತಮ ಬೈಸಿಕೊಂಡರೂ ಸರಿ ಎನ್ನುವ ಹಾಗಾಯಿತು. ಆದರೆ ನಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಸತ್ಯದ ಪರ ನಿಲ್ಲುವುದು ಸುಲಭ ವಿಲ್ಲ. ಕೊನೆಪಕ್ಷ ಬೇರೆಯವರ ಆಸೆಗಾಗಿ ಅಸತ್ಯ ನುಡಿದರೂ ಸಂತೋಷವೆನಿಸುತ್ತಾ ಬೇರೆಯವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯ? ವಿದ್ಯೆಯಲ್ಲಿ ಅಂತಹ ವಿಚಾರವಿದ್ದರೆಅಳವಡಿಸಿಕೊಳ್ಳಬಹುದು. ಆಗಲೇ ಪುಸ್ತಕದವಿಷಯದಬಗ್ಗೆ ಗಮನಿಸುವ ಅಭ್ಯಾಸ. ಅದರಲ್ಲಿ ಅಂತಹ ವಿಷಯ ಕಾಣದಾದಾಗ ಇದನ್ನು ಓದಿ ಯಾವಕೆಲಸ ಸಿಗಬಹುದು ಎನ್ನುವ ಪ್ರಶ್ನೆಗೆ ಉತ್ತರ ಕೊನೆಗೂ ಸಿಗಲಿಲ್ಲ.
ಡಿಗ್ರಿ ಮಾಡೋವರೆಗೂ ಒಳಗಿನಕೂಗು ಹೊರಗಿನನೋವು ಯಾರಿಗೂ ಅರ್ಥ ವಾಗದೆ ತನ್ನದೇ ಜಗತ್ತಿನಲ್ಲಿ ನಾನು ಒಬ್ಬಂಟಿ. ಕೊನೆಯಲ್ಲಿ ಹೊಸಜಗತ್ತಿನ ಪರಿಚಯ ಒಳಗೇ ಆದಾಗಂತೂ ಹೊರಗಿನ ಜಗತ್ತಿನಲ್ಲಿ ಸಿಲುಕಿಕೊಂಡಿರುವ ಸತ್ಯ ತಿಳಿದುನಿದಾನವಾಗಿ ಹಿಂದಿರುಗಲು ಸತ್ಯದ ಕಡೆಗೆ ನಡಿಗೆ.
ಈಗಲೂ ಎಷ್ಟೋ ವಿಚಾರಗಳಲ್ಲಿ ರುವ ಗೊಂದಲಕ್ಕೆ ಗುರುಗಳಿಂದ ಸಿಗುವುದೆನ್ನುವ ಕಾರಣದಿಂದ ಓಡಾಟನಡೆದರೂ ಸರಿಯಾದ ಉತ್ತರ ಹೊರಗಿನಿಂದ ಸಿಗದೆ ಒಳಗೇ ಸಿಕ್ಕಿದೆ. ಆದರೂ ಆತ್ಮ ತೃಪ್ತಿ ಗೆ ಸ್ವತಂತ್ರ ವಿರಬೇಕು.ನಾವೇ ಬಂಧನದಲ್ಲಿರುವಾಗ ಬೇರೆಯವರಿಗೆ ಸ್ವತಂತ್ರ ಗೊಳಿಸಲಾಗದು. ಅದಕ್ಕೆ ಹೇಳೋದು ನಿನ್ನೊಳಗೆ ಎಲ್ಲಾ ಸತ್ಯ ಅಡಗಿದೆ.ದೇವರಿದ್ದಾರೆ ಧರ್ಮವಿದೆ ಹುಡುಕಬೇಕು ಎಂದು.ಇದನ್ನು ಹೊರಜಗತ್ತಿನಲ್ಲಿ ಹುಡುಕಿದರೂ ಸಿಗದು.ಇಲ್ಲಿ ಯಾರೋ ಹೊರಗಿನಿಂದ ಬಂದು ಸತ್ಯ ತುಂಬಲಾಗದು.ಶಿಕ್ಷಣ ನೀಡಿದರೂ ಮೂಲದಲ್ಲಿ ಉತ್ತಮ ಸಂಸ್ಕಾರವಿದ್ದರೆ ಸುಲಭವಾಗಿ ಸ್ವಚ್ಚವಾಗುತ್ತದೆ. ಮುದಿತನದಲ್ಲಿ ಎಲ್ಲಾ ತುಂಬಿಕೊಂಡ ಮೇಲೆ ಸಂಸ್ಕಾರ ಮಾಡೋದು ಕಷ್ಟವಾದರೂ ಅನುಭವ ದಿಂದ ಶುದ್ದವಾಗುತ್ತದೆ.
No comments:
Post a Comment