ಧರ್ಮ ರಕ್ಷಿಸಿ ಎನ್ನುವುದು ಸುಲಭ ಯಾವುದು ಧರ್ಮ ಅಧರ್ಮ ಎನ್ನುವ ಪ್ರಶ್ನೆ ಬಂದಾಗ ಬಡವ ಬಲ್ಲಿದ ಶ್ರೀಮಂತ ಮೇಲು ಕೀಳಿನ ರಾಜಕೀಯವೇ ಎದ್ದು ನಿಲ್ಲುವುದು..ಮಾನವೀಯಮೌಲ್ಯಗಳನ್ನು ಮರೆತು ಮುಂದೆ ಅಧಿಕಾರ ಪಡೆದವರಿಗೆ ಧರ್ಮದಬಗ್ಗೆ ತಿಳಿಸುವುದೇ ಅಧರ್ಮ ಎನ್ನುವ ಮಟ್ಟಿಗೆ ಹೊರಗೆ ತಮ್ಮದೇ ಆದ ಧರ್ಮ ಬೆಳೆಸಿದ್ದರೂ ಒಳಗಿದ್ದ ಸತ್ಯಕ್ಕೆ ಬೆಲೆಯಿಲ್ಲ ಮೂಲದ ಧರ್ಮ ಕರ್ಮಕ್ಕೆ ನೆಲೆಯೇ ಇಲ್ಲವಾದರೆ ಧರ್ಮ ಕುಂಟುತ್ತದೆ. ಸತ್ಯ ಕುರುಡು ಜಗತ್ತನ್ನು ಸೃಷ್ಟಿಸಿ ಆಳುತ್ತದೆ. ಒಟ್ಟಾರೆ ಇಲ್ಲಿ ಧರ್ಮದ ಚೌಕಟ್ಟನ್ನು ಭದ್ರಗೊಳಿಸಲು ಸಾಕಷ್ಟು ಪ್ರಯತ್ನ ಆಗಿದ್ದರೂ ಧಾರ್ಮಿಕ ಶಿಕ್ಷಣ ಮಾತ್ರ ಕೊಡದೆ ಆಳಿದವರೆ ಹೆಚ್ಚಾಗಿರೋದರಿಂದ ಈಗಲೂ ಕಾಲಮಿಂಚಿಲ್ಲ ನಿಮ್ಮ ನಿಮ್ಮ ಮನೆಯ ಮನವ ಸಂತೈಸಿಕೊಳ್ಳುವಷ್ಟು ಆತ್ಮವಿಶ್ವಾಸದಿಂದ ನಮ್ಮವರನ್ನು ಒಗ್ಗೂಡಿಸಿ ಸಂಪತ್ತನ್ನು ಸದ್ವಿನಿಯೋಗಿಸಿ ಪರಮಾತ್ಮನ ಕಡೆಗೆ ನಡೆಯಬಹುದು.ಆದರೆ, ಪರಮಾತ್ಮನ ಕಡೆಗೆ ಜೀವಾತ್ಮ ನಡೆಯಬೇಕಾದರೆ ಯೋಗದಿಂದ ಮಾತ್ರ ಸಾಧ್ಯ. ಇದು ಯೋಗಾಸನಕ್ಕೆ ಸೀಮಿತವಾಗದೆ ಎಲ್ಲರನ್ನೂ ಸೇರಿಸಿ ಕೂಡಿಸಿ ಬಾಳುವಕಡೆಗೆ ನಮ್ಮ ಸಂಪತ್ತನ್ನು ಪರಮಾತ್ಮನ ಸೇವೆಗೆ ಬಳಸುವಾಗ ನಿಸ್ವಾರ್ಥ ನಿರಹಂಕಾರದ ಜೊತೆಗೆ ಪ್ರತಿಫಲಾಪೇಕ್ಷೆ ಇಲ್ಲದ ಮನಸ್ಸಿರಬೇಕು.
ಅಷ್ಟೊಂದು ಆಸ್ತಿ ಪಾಸ್ತಿ ಅಂತಸ್ತು ಅಧಿಕಾರ ಹೆಸರು ಹಣದ ಮೂಲವೇ ಭ್ರಷ್ಟಾಚಾರ ವಾಗಿದ್ದರೆ ನೀರಿನಲ್ಲಿ ಹೋಮಮಾಡಿದಂತೆ. ಕೆರೆಯ ನೀರನುಕೆರೆಗೆಚೆಲ್ಲಿ....ಎಂದರೆ ಸರಿಕೊಳಚೆಗೆಚೆಲ್ಲಿ ಅಸುರರನ್ನು ಒಂದುಗೂಡಿಸಹೋದರೆ ಒಳಗೆ ಸ್ವಚ್ಚವಿರುವುದೆ?
ಅಮಾಯಕರ ಜೀವನ ಜೀವತೆಗೆದು ಎಷ್ಟು ವರ್ಷ ಬದುಕಿದರೂ ಸಾವು ನಿಶ್ಚಿತ ಜೊತೆಗೆ ಪಾಪದ ಫಲವೂ ಖಚಿತವಾಗಿ ಹಿಂದೇ ಬರುತ್ತದೆ. ಆದ್ದರಿಂದ ಧರ್ಮದ ವಿಚಾರದಲ್ಲಿ ಸಾಕಷ್ಟು ರಾಜಕೀಯತೆ ಬೆಳೆಸಿಕೊಂಡು ಜನರ ಹಣ ದಿಂದಲೇ ದೇವರನ್ನೂ ಖರೀದಿಸುವಷ್ಟು ಅಧರ್ಮ ಅನ್ಯಾಯ ಅಸತ್ಯದ ಭ್ರಷ್ಟರಿಗೆ ಜನಸಹಕಾರವಿದ್ದರೆ ಪ್ರಗತಿಯಲ್ಲ ಅಧೋಗತಿ. ಎಲ್ಲಿರುವರು ಮಹಾತ್ಮರು?
ಆತ್ಮ ವೇ ದೇವರು, ಸತ್ಯವೇ ದೇವರು,ಧರ್ಮ ವೇ ದೇವರು,ತಾಯಿಯೇ ದೇವರು,ಗುರುವೇ ದೇವರು.....ಇವರು ಮನೆಮನೆಯಲ್ಲಿಲ್ಲವೆ? ಒಳಗೇ ಇರುವ ದೇವರನ್ನು ಬಿಟ್ಟು ಹೊರಬಂದರೆ ಧರ್ಮ ವೆ?
No comments:
Post a Comment