ವೇದ ವಿಜ್ಞಾನದಿಂದ ವೈದೀಕ ವಿಜ್ಞಾನದವರೆಗೂ ನಮ್ಮ ಸನಾತನಧರ್ಮ ಬೆಳೆದಿದೆ. ವೈದೀಕ ಪರಂಪರೆಯಲ್ಲಿ ಪಿತೃಋಣವನ್ನು ಎತ್ತಿ ಹಿಡಿದರೆ ವೇದವಿಜ್ಞಾನದಲ್ಲಿ ಋಷಿಋಣವಿದೆ. ಋಷಿಪರಂಪರೆಯಿಂದ ಬೆಳೆದಿರುವ ಮನುಕುಲವೀಗ ಯಾವ ಋಣವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರೋದಕ್ಕೆ ಕಾರಣವೇ ಶಿಕ್ಷಣಪದ್ದತಿ ಎಂದಾಗ ನಾವು ಮೊದಲು ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕಲಿಸಬೇಕೆನ್ನುವುದನ್ನು ತಿಳಿದು ಕಲಿತು ಕಲಿಸುವುದೇ ಧರ್ಮ.
ಸರ್ಕಾರ ದ ಋಣ ಮಿತಿಮೀರಿದೆ. ಅದನ್ನು ತೀರಿಸಲು ಕಷ್ಟಪಟ್ಟು ಕೆಲಸ ಮಾಡಬೇಕಿದೆ.ಕೆಲಸ ಮಾಡುವ ಶಕ್ತಿಯಿಲ್ಲದೆ ಬೇಡೋರಿಗೆ ಸರಿಯಾದ ಯೋಗಶಿಕ್ಷಣ ಉಚಿತ ನೀಡಲು ಧಾರ್ಮಿಕ ವರ್ಗ ಮುಂದಾದರೆ ಅದರಲ್ಲಿ ರಾಜಕೀಯ ಬೆರೆತರೆ ಮಕ್ಕಳ ಜ್ಞಾನ ಗುರುತಿಸೋದೆ ಕಷ್ಟ.
ಜಾತಿ ರಾಜಕೀಯತೆಯಿಂದಾಗಿ ಅಜ್ಞಾನದಿಂದ ಮಾನವ ಬಡವ ಶ್ರೀಮಂತ ಎನ್ನುವ ಅಂತರಬೆಳೆಸಿಕೊಂಡರೆ ಒಳಗಿನ ಆತ್ಮಜ್ಞಾನ ಕಾಣಿಸದು. ಎಲ್ಲೋಕೆಲವರಷ್ಟೆ ಉತ್ತಮ ಮಾರ್ಗ ಹಿಡಿಯಲು ಸಾಧ್ಯವಾಗಿದ್ದರೆ ಅದನ್ನು ವಿರೋಧಿಸುವವರೆ ಹೆಚ್ಚಾಗಿರೋದು ಕಲಿಕೆಯ ಪ್ರಭಾವ.
ನಮ್ಮ ಋಣ ತೀರಿಸಲುಬಂದ ಜೀವಕ್ಕೆ ಇನ್ನಷ್ಟು ಋಣ ಏರಿಸಿ ಆತ್ಮಹತ್ಯೆಯಾದರೆ ಅತೃಪ್ತ ಆತ್ಮಗಳ ಸಾಮ್ರಾಜ್ಯ ಸಹಜವಾಗಿರುತ್ತದೆ.ಒಟ್ಟಿನಲ್ಲಿ ಹಣದಿಂದ ತೃಪ್ತಿ ಸಿಗದು ಜ್ಞಾನದಿಂದ ತೃಪ್ತಿ ಸಿಗುತ್ತದೆ.ಅದು ಸತ್ಯಧರ್ಮ ದಲ್ಲಿರಬೇಕೆನ್ನುವುದು ಸನಾತನಧರ್ಮ.
ಏನೇ ಇರಲಿ ಎಷ್ಟು ಮೇಲೇರಿದರೂ ಭೂ ಋಣ ತೀರಿಸದೆ ಜೀವನ್ಮುಕ್ತಿಯಿಲ್ಲವೆನ್ನುವುದೇ ಮಹರ್ಷಿಗಳು ತಿಳಿದು ತಿಳಿಸಿರುವಾಗ ಸೇವೆಯಿಂದ ಸಾಧ್ಯ.
ಪರಮಾತ್ಮನ ಸೇವೆಗೆ ಸತ್ಯಜ್ಞಾನ ಬೇಕು. ಪಿತೃಗಳ ಋಣ ತೀರಿಸಲು ಅವರ ಆಸ್ತಿ ಧರ್ಮ ಕರ್ಮ ವನ್ನು ಸರಿಯಾಗಿ ತಿಳಿದು ಸದ್ಬಳಕೆ ಆಗೋದಕ್ಕೂ ಶಿಕ್ಷಣವೇ ಸರಿಯಿಲ್ಲದೆ ಭೌತಿಕ ವಿಜ್ಞಾನ ಅಧ್ಯಾತ್ಮ ವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನವೇ ಜನರಲ್ಲಿ ಇಲ್ಲವಾದರೆ ವಿಶೇಷಜ್ಞಾನದಿಂದ ಉಒಯೋಗವಿಲ್ಲ. ಯಾರನ್ನು ಯಾರೋ ಆಳಿದರೆ ಋಣ ತೀರುವುದೆ?
ಮಾತಾಪಿತರಿಲ್ಲದೆ ಋಷಿಗಳ ಜ್ಞಾನ ಬರುವುದೆ?
No comments:
Post a Comment